841

ಅಂದು,’ನಂದು ಮತ್ತು ಚಂದು ಕಥೆ’

ಹೌದು ಸ್ವಾಮಿ ,ತಾತನ ಮಾತನು ನಂಬಿ ಪ್ರೀತಿಯ ಪಾತಾಳಕ್ಕೆ ಬಿದ್ದಿದ್ದೆ. ಮೇಲೆ ಬರಲು ಹಲವಾರು ದಾರಿಗಳಿದ್ದರೂ ಮನಸು ಮಾತ್ರ ಪಾತಾಳದಲ್ಲಿ ಒಲವಿನ ಪತಾಕೆಯ ಕೈಯಲ್ಲೇ ಹಿಡಿದು ಧ್ವಜಾರೋಹಣ ಮಾಡಿ ಮುಗಿಸಿತ್ತು. ಅದಕ್ಕೂ ಮುಖ್ಯ ಕಾರಣಗಳಿತ್ತು. ತಾತನ ಅರಳು ಮರಳು ಮಾತನ್ನು ಅಲ್ಲೇ ಪಕ್ಕದಲ್ಲೇ ಬಿಟ್ಟಿದ್ದ ಮನಸಿಗೆ . ತಾತನ ಮೊಮ್ಮಗಳೇ ಗ್ರೀನ್ ಸಿಗ್ನಲ್ ಕೊಟ್ಟ ಪರಿಯಂತು ಅಮೋಘ.

ಅಂದು ಸಪ್ಟೆಂಬರ್ ನ 3 ನೇ ವಾರ 2 nd ಇಂಟರ್ ನಲ್ ಸಮಯ. ನಾನು ಸ್ವರಾಜ್ ಮೈದಾನದಲ್ಲಿ ಓದಲೆಂದು
ಡೇರೆ ಹೂಡಿದ್ದೆ. ನಿಮಗೆ ಇವನೇನು ಕುಡಿದು ಮಾತಾಡ್ತ ಇದ್ದಾನೆಯೇನೋ ಅಂದು ಅನಿಸಬಹುದು.  ಆದರು ಅದು ಹೌದು, ಹೇ ಕುಡಿದದ್ದು ಅಲ್ಲಾ ಮಾರೆ, ನಾನು ಕಳೆದ  6 ವರುಷದಿಂದ ಓದಲು ಅಲ್ಲೇ ಕೂರುವುದು, ಅಲ್ಲಿ ತಂಗಾಳಿ ತಂಪಾಗಿ ಬೀಸುದರಿಂದ  ಓದಿದನ್ನೂ ಮನನ ಮಾಡಿಕೊಳ್ಳಲು ಸುಲಭವಾಗುತ್ತಿತ್ತು.

ಅದೆಲ್ಲಾ ಬಿಡಿ ನೇರ ವಿಶಯಕ್ಕೆ ಬರ್ತೀನಿ. ಚಂದು ಅಲ್ಲೇ ಗ್ರೌಂಡ್ ಪಕ್ಕದಲ್ಲಿ ಇರುವ ಶಾಲೆಯಲ್ಲಿ ‘ಎಸ್.ಎಸ್.ಎಲ್.ಸಿ’ ಓದುತ್ತಿದ್ಲು. ಅವಳಿಗೆ ಅದಾಗಲೇ ಮಧ್ಯಾವಧಿ ಪರೀಕ್ಷೆ ಮುಗಿದ್ದಿತ್ತು, ಬಹುಶ ತರಗತಿಗಳು ಇಲ್ಲದಿರುವ ಕಾರಣದಿಂದ
ಆಕೆ ಮತ್ತು ಆಕೆಯ ಗೆಳತಿಯರು ಗ್ರೌಂಡ್ ನ ಒಂದು ಬದಿಯಲಿ ಕೂತು ಏನೇನನ್ನೋ ಗೊಣಗುತ್ತ ಕೇಕೆ ಹಾಕಿ ನಗುತ್ತಿದ್ದರು,ನಾನು ಮಾತ್ರ ಗಮನಿಸಿದರು ಗಮನಿಸದ ಹಾಗೇ ನಟಿಸುತ್ತಿದ್ದೆ.

ಅಲ್ಲಿಂದ ಅವರ ಪಯಣ ನಾ ಕುಳಿತಲ್ಲಿ ಆಗಮಿಸಿದ್ದೇ ತಡ,ಆಕೆಯ ಗೆಳತಿಯರು ಅವಳ ಹೆಸರನ್ನು ಬಿಡುವಿಲ್ಲದೇ ಒತ್ತಿ ಒತ್ತಿ ಕೂಗುತ್ತಿದ್ದರು,ಆಕೆಯ ಮುಖದಲ್ಲಿ ಎಲ್ಲೋ ಕೊಂಚ ನಾಚಿಕೆ ಅದರೊಂದಿಗೆ ಮುಗುಳ್ನಗೆಯ ಮಿಶ್ರಣದಿಂದ ತುಂಬಾ ಮುದ್ದಾಗಿ ಕಾಣುತ್ತಿದ್ದಳು. ಅದು ಒಲವೆಂದು ತೀರ್ಮಾನಿಸುವಂತೆ ಏನೂ ಇರಲಿಲ್ಲ, ಹಾಗೆಯೇ ಒಲ್ಲವಲ್ಲವೆಂದು ಸುಮ್ಮನಿರುವಂತೆಯೂ ಇರಲಿಲ್ಲ. ಅದಕ್ಕನುಸಾರವಾಗಿ

ಅದೇ ದಿನ ಸಂಜೆ ನಾ ಎಫ್.ಬಿ ಯಲ್ಲಿ ಕಳುಹಿಸಿದ request ಎಸೆಪ್ಟ್ ಆಗಿತ್ತು. ಅದರೊಂದಿಗೆ ‘ಹಾಯ್’ ಎಂಬ message  ಇನ್ ಬಾಕ್ಸ್ ನಲ್ಲಿ ಬೆಚ್ಚಗೆ ಕೂತಿತ್ತು. ಅಂದು ಆ ಸಂದೇಶವನ್ನು ಸೀರಿಯಸ್ ಆಗಿ ತೆಗೆದುಕೊಳ್ಳದೇ ಹೋಗಿದ್ದರೆ ಇಂದು ನನ್ನೊಳಗಿನ ಒಬ್ಬ ಕಲ್ಪನಾ ಜೀವಿ,ಮನಸೊಳಗೆ ಕಸ ಗುಡಿಸುತ್ತಿದ್ದ. ಅದು ಏನೇ ಇರಲಿ ಇದೀಗ ಇಬ್ಬರಲ್ಲೂ ಒಲವು ಮೊದಲ ಹಂತದಲ್ಲಿ ಪಾಸಗಿತ್ತು. ಆದರೆ ಎರಡನೇ ಹಂತ ದಾಟಲು ಮಾತ್ರ ನಡುವಲ್ಲಿ ಏನಾಯಿತು?
ಎಂಬುದು ಕೊನೆಗೊಂದು ಪ್ರಶ್ನೆಯಾಗಿಯೇ ಉಳಿಯಿತು.

Contributed by : ಪರಮ್ ಭಾರದ್ವಾಜ್ 

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..