4946

ನಮ್ ಡವ್ ನ ನಾವ್ ನೋಡೋ ರೀತಿಗಳು

  • By Pradeepa Achar
  • Thursday, February 18th, 2016
  • Things You Should Know

೧ .crush ಇಟ್ಕೊಂಡಿರೋ  ಕ್ಲಾಸ್ mate  ಹುಡುಗೀರನ್ನು ಕಾಲೇಜ್ ಕ್ಯಾಂಪಸ್  ಅಲ್ಲಿ ದಿನ ನೋಡಿದಾಗ

ಕಾಲೇಜ್ ಅಲ್ಲಿ ಅವರನ್ನು ನೋಡಿದ ತಕ್ಷಣ ಹೊಟ್ಟೆ ಒಳಗೆ ಚಿಟ್ಟೆ ಬಿಟ್ ಹಾಗ್ ಆಗುತ್ತೆ

22

 

೨.crush ಇಟ್ಕೊಂಡಿರೋ ಕ್ಲಾಸ್ mate  ಹುಡುಗಿಯನ್ನು ethnic ಡೇ ದಿನ ನೋಡಿದಾಗ

ಹುಡ್ಗೀರು ಯಾವ್ ಸೀಸನ್ ಅಲ್ಲಿ ಚೆನ್ನಾಗ್ ಕಾಣ್ತಾರೋ ಬಿಡ್ತಾರೋ ಗೊತ್ತಿಲ್ಲ ..ಆದ್ರೆ ಕಾಲೇಜ್ ethnic  ಡೇ ದಿನ ಅಂತೂ ಅವರನ್ನು ನೋಡೋದೇ ಒಂದು ಚೆಂದ . ಬಾಯಿಯಿಂದ ಎಷ್ಟ್ ಲೀಟರ್ ನೀರ್ ಹೋಗುತ್ತೋ ಗೊತ್ತಿಲ್ಲ ..

3

೩ crush ಇಟ್ಕೊಂಡಿರೋ  classmate ಹುಡುಗಿ ಬೇರೆ ಹುಡುಗನ ಜೊತೆ ಕಾಲೇಜ್ function  ಅಲ್ಲಿ ಡಾನ್ಸ್ ಮಾಡಿದಾಗ 

ನಾವ್ ಲೈನ್ ಹೊಡಿತ ಇರೋ ಹುಡುಗಿ ಬೇರೆ ಒಬ್ಬನ ಜೊತೆ ಸ್ಟೇಜ್ ಮೇಲೆ ಡಾನ್ಸ್ ಮಾಡೋದನ್ನ ನೋಡೋಕ್ ಆಗೋಲ್ಲ . ಅವನು ಎಷ್ಟೇ ಚೆನ್ನಾಗ್ ಇದ್ರೂ ನಮ್ ಕಣ್ಣಿಗೆ ಅವನು ಗೊಗ್ಗಯ್ಯ ನೇ

4

 ೪. classmate  ಹುಡುಗಿ ಮೇಲೆ crush  ಇದ್ದಾಗ ನಾವ್ impress  ಮಾಡೋ ರೀತಿ 

ನಮ್ ಡವ್ ನ impress  ಮಾಡೋಕೆ ಪಡೋ ಕಷ್ಟ ಅಷ್ಟಾ ಇಷ್ಟಾ ?..

5

೫.crush ಇಟ್ಕೊಂಡಿರೋ classmate  ಹುಡುಗಿಯನ್ನು exam ದಿನ ನೋಡಿದಾಗ

exam ಟೈಮ್ ಅಲ್ಲಿ ಓದಿ ಓದಿ ಖರಾಬ್ ಆಗಿರ್ತಾರೆ ..ನೋಡೋಕೆ ಆಗೋಲ್ಲ . ಏನ್ ಮಾಡೋದು..ಉಳಿದ ದಿನ ಮಾತ್ರ ನಮ್ ಹೊಟ್ಟೆಯಲ್ಲಿ ಚಿಟ್ಟೆ ಬಿಡ್ತಾನೆ ಇರ್ತಾರೆ

fin

 

೬.crush ಇಟ್ಕೊಂಡಿರೋ classmate  ಹುಡುಗಿ  ಅವಳ boyfriend ಜೊತೆ ತಿರುಗಾಡುವಾಗ ನೋಡಿದಾಗ 

7

೭.crush ಇಟ್ಕೊಂಡಿರೋ.ಕ್ಲಾಸ್ mate  ಹುಡುಗಿ  ಕೆಲ್ಸಕ್ಕೆ ಸೇರಿ ಎರಡು ವರ್ಷ ಆದ ಮೇಲೆ ನೋಡಿದಾಗ

ಹಾಂಗೋ ಹೀಂಗೋ ಕಾಲೇಜ್ ಮುಗಿದು ಕೆಲಸಕ್ ಸೇರ್ತೀವಿ ..ಒಂದ್ ಎರಡ್ ವರ್ಷದಲ್ಲಿ ನಮ್ ಹಳೆ ಡವ್ ಗೆ onsite  ಸಿಕ್ಕಿರುತ್ತೆ . ಕಾಲೇಜ್ ಟೈಮ್ ಅಲ್ಲಿ ತುಕಾಲಿ ತಾರಾ ಇದ್ದೋಳು ಒಂದೇ ಸಲ ಸೂಪರ್ ಮಾಡೆಲ್ ಅಗ್ ಬಿಟ್ಟಿರ್ತಾಳೆ .ಅವಾಗ ನಮ್ ಮನಸ್ಸಲ್ಲಿ ಉಹುಹುಹುಹು ಅನ್ನೋ ಫೀಲಿಂಗ್ ಬರುತ್ತ್ತೆ

8

೮.crush ಇಟ್ಕೊಂಡಿರೋ  classmate  ಹುಡುಗಿಯನ್ನು ಅವರ ಮದುವೆ ದಿನ ನೋಡಿದಾಗ

ನಮ್ ಹಳೆ ಡವ್ ಮದುವೆಗೆ ಹೋಗಿ ಗಿಫ್ಟ್ ಕೊಟ್ಟು , ವಿಶ್ ಮಾಡಿ ಊಟ ಮಾಡ್ಕೊಂಡ್ ಬರೋದು ಯಾವ್ ಗಂಡ್ ಜಾತಿಗೂ ಬೇಡ ..ಅದರ ಜೊತೆ ಒಂದ್ ಫೋಟೋ ಬೇರೆ ..

9

೯.crush ಇಟ್ಕೊಂಡಿರೋ classmate  ಹುಡುಗಿ  ಮದುವೆ ಆಗಿ ಅವಳ  ಗಂಡನ ಜೊತೆ ತೆಗೆದುಕೊಂಡ ರೋಮ್ಯಾಂಟಿಕ್ ಫೋಟೋಸ್ ನೋಡಿದಾಗ 

ಮದುವೆ ಆಯಿತು . ಗಂಡನ ಮನೆಗೆ ಹೋದಳು ..ಅದೂ ಓಕೆ ..ಆದರೆ ಅದೇ  ದಿನ ಫೇಸ್ಬುಕ್ ಅಲ್ಲಿ ಸ್ಟೇಟಸ್ ಚೇಂಜ್ ಮಾಡ್ತಾಳೆ . Married ಅಂತ ..ಆಮೇಲೆ ಹನಿ ಮೂನ್ ಗೆ ಹೋಗ್ತಾರೆ ..ಡಿಫರೆಂಟ್ ಡಿಫರೆಂಟ್ selfie , ಫೋಟೋಸ್ ತೆಗೆದು ಫೇಸ್ಬುಕ್ ಅಲ್ಲಿ ಹಾಕಿ ಮತ್ತೆ ಹೊಟ್ಟೆ ಉರ್ಸ್ತಾರೆ

10

೧೦.crush ಇಟ್ಕೊಂಡಿರೋ classmate  ಹುಡುಗೀರು ತಮ್ಮ ಮಗು ಜೊತೆ ಬಂದಾಗ

ನಿಜವಾದ ಫೀಲಿಂಗ್ ಆಗೋದು ಅವರ ಮಗು ನ ನೋಡಿದಾಗ .ಯಾಕೆ ಅಂತ ಗೊತ್ತಿಲ್ಲ ..but  ಏನೋ ಒಂಥರಾ ಫೀಲ್ ಆಗುತ್ತೆ

11

 

ಲೈಫ್ ಅಲ್ಲಿ ಇದೆಲ್ಲ ಒಂಥರಾ ಮರೆಯಲಾರದ ಘಟನೆಗಳು .. ಇಂಥವೆಲ್ಲ ನಡೀಬೇಕು . ವಯಸ್ ಆದ ಮೇಲೆ ಹಳೆಯದನ್ನೆಲ್ಲ ನೆನಪು ಮಾಡ್ಕೊಂಡು ಮೊಮ್ಮಕ್ಕಳಿಗೆ ಕತೆ ಹೇಳಬಹುದು . ಲೈಫ್ ಅಲ್ಲಿ ಸ್ವಲ್ಪ colourful  stories  ಇರ್ಬೇಕು .. ಇಲ್ಲ ಅಂದ್ರೆ ಬರೀ ಬಿಳಿ ಹಾಳೆಯಂತೆ ಜೀವನ

 

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..