6156

ಮದುವೆ ವಯಸ್ಸಿಗೆ ಬಂದಾಗ ಹುಡುಗನ ಮನಸ್ಸಿನ ತಲ್ಲಣಗಳು

ಮದುವೆ ವಯಸ್ಸಿಗೆ ಬಂದ ಮೇಲೆ ಮನೆಯವರು ನಮ್ಮನ್ನು ಒಪ್ಪಿಸುವಾಗ ನ್ಯಾಚುರಲ್ ಆಗಿ ಬರೋ ಕೆಲವೊಂದು feeling ಗಳು ವಿಚಿತ್ರ ಆಗಿರುತ್ತವೆ . ಹುಡುಗರಿಗೆ 30  ವರ್ಷ ದಾಟೋದರ ಒಳಗೆ ಮದುವೆ ಮಾಡಿಸಬೇಕು ಅಂತ ಮನೆಯವರು heavy  sketch ಹಾಕೊಂಡಿರ್ತಾರೆ. ನಮ್ ಕಥೆ ನಮಗೆ ಗೊತ್ತು . ಬರೋ ಹುಡುಗಿ ಹೇಗಿರುತ್ತಾಳೋ ಏನೋ ಅಂತ ಏನೇನೋ ವಿಷಯದ ಬಗ್ಗೆ ತಲೆ ಕೆಡಿಸ್ಕೊಂಡ್ ಇರ್ತೀವಿ.

೧ . ಅಪ್ಪ ಅಮ್ಮ ಒಂದ್ ಹುಡುಗಿ ಫೋಟೋ ತೋರ್ಸಿ ಇವಳು ಸೀತೆ ತರ   ಇದಾಳೆ ಅಂತ buildup  ಕೊಟ್ಟು “ನಿನ್ ಅಭಿಪ್ರಾಯ ಬೇಗ ಹೇಳು” ಅಂತ ಹೇಳಿ ಹೋದಾಗ ..

ಆ ಹುಡುಗಿ ಇಷ್ಟ ಆಗದೆ ಇದ್ದಾಗ , ಈ ಹುಡುಗಿ ಯಾವ್ angle  ಅಲ್ಲಿ ಸೀತೆ ತರ ಕಾಣಿಸ್ತಾ ಇದಾಳೆ ಇವರಿಗೆ ಅಂತ ಫೋಟೋ ಹಿಡ್ಕೊಂಡು ತಿರುಗಾ ಮುರುಗಾ ನೋಡ್ತೀವಿ

11

೨ . ಮದುವೆ ಮಾತುಕತೆ ಮನೆಯಲ್ಲಿ ನಡೆಯುವಾಗ ನಮ್ ಬಗ್ಗೆ ನಮಗೆ ಹೀರೋ ಫೀಲಿಂಗ್ ಬರುತ್ತೆ .

ಅದರಲ್ಲೂ ಮೀಸೆ ಗಡ್ಡ ಬಿಡೋದು ಗಂಡ್ ಮಕ್ಳಿಗೆ    ಒಂಥರಾ craze . ನಮ್ಮನ್ನು ನಾವು ಮೊಬೈಲ್ ಫ್ರಂಟ್ ಕ್ಯಾಮರದಲ್ಲಿ ಎಷ್ಟ್ ಸಲ ನೋಡ್ಕೊತೀವೋ ದೇವರೇ ಬಲ್ಲ . ಮೀಸೆ ತಿರುವೋದು , ಗಡ್ಡ ನ ನೀಟ್ ಆಗಿ ತಿಕ್ಕಿ ಕೊಳ್ಳುವುದು , ಹಾಗೆ ಕನ್ನಡಿಯಲ್ಲಿ ಮುಖ ನ ಹಾಗೆ ಹೀಗೆ ನೋಡಿಕೊಳ್ಳುವುದು common

12

೩ . ಮದುವೆಗೆ ಮುಂಚೆ ಹೇಗೇಗೋ ಇದ್ದವರು ಮದುವೆ ಫಿಕ್ಸ್ ಆಗೋ ಟೈಮ್ ಅಲ್ಲಿ ಸಾಚ ತರ ಪೋಸ್ ಕೊಡ್ತೀವಿ . 

ನಾವು ಬ್ಯಾಚುಲರ್ ಲೈಫ್ ಅಲ್ಲಿ ಹೇಗೇಗೋ ಆಟ ಅಡಿರ್ತೀವಿ . ಆದ್ರೆ ಮದುವೆ ಟೈಮ್ ಅಲ್ಲಿ ಸ್ವಲ್ಪ ತಗ್ಗಿ ಬಗ್ಗಿ ನಡಿಬೇಕಾಗುತ್ತೆ . ಒಳಗಡೆ ಎಷ್ಟೇ ರವಿಶಂಕರ್ , ಸುದೀಪ್ ಥರ manly  mannerism  ಇದ್ರೂ ಮದುವೆ ಟೈಮ್ ಅಲ್ಲಿ ಸಿಂಪಲ್ ಆಗ್ ಇನ್ನೊಂದ್ ಲವ್ ಸ್ಟೋರಿ ಅಲ್ಲಿ  ಪ್ರವೀಣ್ ಆಕ್ಟ್ ಮಾಡಿದ  ಪಾತ್ರದ ಥರ ಇರಬೇಕಾಗುತ್ತೆ

9

೪ .arranged  ಮ್ಯಾರೇಜ್ ಆದ್ರೆ ಅಪ್ಪ ಅಮ್ಮ ಹತ್ರ ನಂ ಹುಡುಗಿ ಹೀಗೆ ಇರ್ಬೇಕು ..ಹಾಗೆ ಇರ್ಬೇಕು ಅನ್ನೋ ಡಿಮ್ಯಾಂಡ್ 

ಹುಡುಗಿ ನೋಡೋಕೆ ಚೆನ್ನಾಗಷ್ಟೇ  ಇದ್ರೆ ಸಾಲದು . ನನ್ನನ್ನು ಹಾಗು ನಿಮ್ಮನ್ನು ಅನುಸರಿಸಿಕೊಂಡು ಹೋಗೋ ಹಾಗೆ ಇರಬೇಕು . ನಾಳೆ ನೀವು ನೋಡಿದ ಹುಡುಗಿ ನಿಮ್ಮನ್ನು ಸರಿಯಾಗಿ ನೋಡಿಕೊಂಡಿಲ್ಲ ಅಂತ ನೀವು ಕಂಪ್ಲೇಂಟ್ ಮಾಡೋ ಹಾಗಿಲ್ಲ

3

೫ ಫಸ್ಟ್ ಮೀಟ್ ಅಪ್ ಅಲ್ಲಿ ಹುಡುಗಿ ಎದುರು ಸ್ವಲ್ಪ ಸೀರಿಯಸ್ ಆಗಿ behave  ಮಾಡಲೇ ಬೇಕಾಗುತ್ತೆ 

ಎಷ್ಟೇ ಆದರೂ ಜೀವನ ಅಲ್ವಾ ಬಾಸ್ .!!. ಅವಳಿಗೆ ನಮ್ ಬಗ್ಗೆ ಗೌರವ ಹುಟ್ಟದೆ ಇದ್ದಾರೆ ಜೀವನ ನರಕ ಆಗುತ್ತೆ ಅನ್ನೋ ಭಯ .ಯಾಕೆ ಅಂದರೆ ಅವಳೇ ಜೀವ ಹಾಗು ಜೀವನ ಆಗಿರುತ್ತಾಳೆ .

8

೬ ಹೆಣ್ಣು ಮಕ್ಕಳ ಮನಸ್ಸು ತುಂಬಾ ಚಂಚಲ ಅಂತ ಹಿರಿಯವರು ಹೇಳಿರ್ತಾರೆ .

ಅದು ನಮಗೆ ಹಿರಿಯವರು ಹೇಳಿ ಕೊತ್ತಿದ್ದೋ ಅಥವಾ ಹೆಣ್ಣು ಮಕ್ಕಳೇ ಹಾಗೆ ಇರೋದೋ ಗೊತ್ತಿಲ್ಲ . ಒಟ್ಟಾರೆ ಇದು ಮಾತ್ರ ನಿಜ

13

೭ ಅಂತೂ ಇಂತೂ ಹುಡುಗಿ ಫಿಕ್ಸ್ ಆದ ಮೇಲೆ ಮೈ ಮೇಲೆ ರವಿಚಂದ್ರನ್ , ಪ್ರವೀಣ್ , ಗಣೇಶ್ , ಯಶ್ ಬರೋದು ಗ್ಯಾರಂಟಿ 

ಆ ಮೊಮೆಂಟ್ ಒಂಥರಾ ಚೆನ್ನಾಗಿರುತ್ತೆ . ಮದುವೆ ಆಗೋ ವರೆಗೆ ನಮ್ಮ ಕನಸಲ್ಲೇ ೧೦೦ ರೋಮ್ಯಾಂಟಿಕ್ ಫಿಲಂ ಹೀರೋ ಆಗಿರ್ತೀವಿ

5

೮ ಹುಡುಗಿ ಎದುರು ಸ್ವಲ್ಪ ಬಿಲ್ಡ್ ಅಪ್ ಕೊಟ್ಟು ಕೊಳ್ಳದೆ ಇದ್ರೆ ಹೇಗೆ 

ಸ್ವಲ್ಪ ಬಿಲ್ಡ್ ಅಪ್ ಮನೆಯವರು ಕೊಟ್ಟಿರ್ತಾರೆ . ಹುಡುಗಿ ಬಂದು ನಮ್ ಹತ್ರ ನೀವು ಅದ್ ಮಾಡಿದ ನಿಜಾ ನಾ? ಹಾಗೆ ಹೀಗೆ ಅಂದ್ರೆ ಆವಾಗ ಸ್ವಲ್ಪ ಕವರ್ ಅಪ್ ಮಾಡಿಕೊಳ್ಳ ಬೇಕಾಗುತ್ತೆ

4

೯  ಸ್ವಲ್ಪನಾದ್ರೂ flirt  ಮಾಡದೆ ಇದ್ರೆ ಹೇಗೆ ಅಲ್ವಾ 

ವಯಸ್ಸಿಗೆ ಬಂದ ಹುಡ್ಗ ಅಂಡ್ ಮೇಲೆ ವಯಸ್ಸಿಗ್ ಬಂದ್ ಹುಡುಗಿ , ಅದರಲ್ಲೂ ನಮ್ಮನ್ ಮದುವೆ ಆಗೋ ಹುಡುಗಿ ಜೊತೆ ಸ್ವಲ್ಪ ತುಂಟತನ ತೋರಿಸದೆ ಇದ್ರೆ ಹೇಗೆ ಅಲ್ವಾ..

6

೧೦  ಹುಡುಗಿ ಇಷ್ಟ ಆಗಿ ಅಪ್ಪಿ ತಪ್ಪಿ ಜಾತಕ ಹೊಂದಾಣಿಕೆ  ಆಗದೆ ಮನೆಯವರು ಆ ಸಂಬಂಧ ವನ್ನು ಬಿಟ್ ಬಿಡೋಕೆ ಹೇಳಿದ್ರೆ ತುಂಬಾ ನೆ ನೋವು ಆಗುತ್ತೆ 

ಈ arranged  ಮ್ಯಾರೇಜ್ ಅಲ್ಲಿ ಜಾತಕಕ್ಕೆ ಪ್ರಾಶಸ್ತ್ಯ  ಕೊಡುವುದು ಜಾಸ್ತಿ . ಹುಡುಗಿ ಇಷ್ಟ ಆದ್ರೆ ಜಾತಕ ಆಗಿ ಬರಲ್ಲ . ಇಲ್ಲ ಜಾತಕ ಸರಿ ಇದ್ರೆ ಹುಡುಗಿ ಇಷ್ಟ ಆಗಿರಲ್ಲ . ಎರಡೂ ಮ್ಯಾಚ್ ಆದವರು ಅದ್ರಷ್ಟವಂತರು

10

ಒಟ್ಟಾರೆ ಇದೆಲ್ಲ ಮುಗಿದು ಮದುವೆ ಆಗಿ ಒಂದೆರಡು ವರ್ಷ ಸೂಪರ್ ಆಗಿ ಲೈಫ್ ಅಂತೂ ಇರುತ್ತೆ . ಆಮೇಲೆ ದೇವರಿಗೆ ಬಿಟ್ಟಿದ್ದು , ಇಲ್ಲಿಗೆ ನಮ್ಮ ಕಥೆ ಮುಗಿಯಿತು ಅಂತ ಕೈ ಮುಗಿದು ನಮಸ್ಕಾರ ಹೊಡೆಯುವುದು

If you wish to contribute , please send us your articles to localkebal@gmail.com

 

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..