3784

“ಜೋಡಿ ಕುದುರೆ ” ಸವಾರಿಗೆ ಕ್ಷಣಗಣನೆ ಶುರು ಆಗಿದೆ

ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರ ರಂಗದಲ್ಲಿ ಪರ್ಯಾಯ ಮನೋರಂಜನೆಯ ತಾಣವಾಗಿ youtube ಬಹಳ ಉಪಯುಕ್ತವಾದ ಮಾಧ್ಯಮ ಆಗಿದೆ . .. ದೊಡ್ಡ ಚಿತ್ರ ಮಾಡುವ ಮೊದಲು ಪೂರ್ವ ತಯಾರಿ ಎಂಬಂತೆ ಕ್ರೀಯಾಶೀಲ ವ್ಯಕ್ತಿಗಳು ಕಿರು ಚಿತ್ರವನ್ನು ಮಾಡುತ್ತಿದ್ದಾರೆ .. ಹೆಚ್ಚಿನ ಕಿರುಚಿತ್ರಗಳು ಕ್ವಾಲಿಟಿ ಇಲ್ಲದೆ ಕಿರು ಚಿತ್ರದ ಮಹತ್ವವನ್ನೇ ಹಾಳು ಮಾಡುತ್ತವೆ .. ಆದರೆ ತೀರ್ಥಹಳ್ಳಿಯ ಒಬ್ಬ ಚಿಕ್ಕ ಕಿರು ಚಿತ್ರ ನಿರ್ದೇಶಕ ಈಗ ದೊಡ್ಡ ನಿರ್ದೇಶಕನಾಗುವತ್ತ ತನ್ನದೇ ಸ್ನೇಹಿತರ ಬಳಗವನ್ನು ಹಾಗು ಅಣ್ಣನ ಸಹಕಾರದೊಂದಿಗೆ ಕ್ವಾಲಿಟಿ ಇರೋ ಕಿರು ಚಿತ್ರಗಳನ್ನೇ ನಿರ್ದೇಶಿಸಿ “ಇದು ಕಿರು ಚಿತ್ರವಾ ?” ಅನ್ನುವಷ್ಟು ಮಟ್ಟಿಗೆ ಜನರು ಮೂಗಿನ ಮೇಲೆ ಕೈ ಇಟ್ಟು ಆಶ್ಚರ್ಯಚಕಿತರಾಗಿ ನೋಡುವಂತೆ ಮಾಡುತ್ತಿದ್ದಾರೆ .ಈ ಮೊದಲು ನೀವು youtube ಅಲ್ಲಿ ಗೋಣಿಚೀಲ ಅನ್ನುವ ಹೆಸರಿನ ಕಿರುಚಿತ್ರ ನೋಡಿ ಖುಷಿ ಪಟ್ಟಿದ್ದರೇ ಅದನ್ನು ತಯಾರು ಮಾಡಿದ ತಂಡದ ಬಗ್ಗೆ ಇಲ್ಲಿ ಮಾತನಾಡುತ್ತಿದ್ದೇವೆ
17
ಈ ಚಿತ್ರ ಲಕ್ಷಾಂತರ ಹಿಟ್ಸ್ ಅನ್ನು youtube ಅಲ್ಲಿ ಪಡೆದುಕೊಂಡಿದೆ … ಚಿತ್ರದ ನಾಯಕ ವಿಶ್ವ .. ಚಿತ್ರದ ಸಹ ನಿರ್ದೇಶಕ ಸಂತೋಷ್ .. ಅಣ್ಣನ ಸಹಕಾರ ಹಾಗು ಸ್ನೇಹಿತರ ಸಹಕಾರದೊಂದಿಗೆ ನವನ್ ಶ್ರೀನಿವಾಸ್ ಗೋಣಿಚೀಲ ಚಿತ್ರವನ್ನು ನಿರ್ದೇಶಿಸಿದ್ದರು . ಇದು ಕಿರು ಚಿತ್ರವಾಗಿದ್ದರೂ ದೊಡ್ಡ ಚಿತ್ರದಶೆಟ್ ಕ್ವಾಲಿಟಿ maintain ಮಾಡಿ ಕಿರುಚಿತ್ರವನ್ನು ಹೀಗೂ ತಯಾರು ಮಾಡಬಹುದೆಂದು ತೋರಿಸಿ ಕೊಟ್ಟಿದ್ದಾರೆ .. ಅದನ್ನು ಇಲ್ಲಿ ನೋಡಿ

ಈಗ ಅದೇ ತಂಡ ಹೊಸ ಹುರುಪಿನೊಂದಿಗೆ ಮತ್ತೊಂದು ಕಿರುಚಿತ್ರವನ್ನು ಬಿಡುಗಡೆ ಮಾಡಲು ರೆಡಿ ಆಗಿ ನಿಂತಿದೆ . ಅದರ ಹೆಸರೇ ಜೋಡಿ ಕುದುರೆ

ಈ ಚಿತ್ರದಲ್ಲೂ ಒಂದಾನೊಂದು ಕಾಲದಲ್ಲಿ ರವಿಚಂದ್ರನ್ -ಹಂಸಲೇಖ ಹೇಗೆ ಜೋಡಿಯೋ ಅದೇ ರೀತಿಯಲ್ಲಿ ನವನ್-ವಿಶ್ವ ಜೋಡಿಯೇ ಮುಂದುವರೆದಿದೆ
ಈ ಕಿರು ಚಿತ್ರ ಮತ್ತೊಂದು ಮೈಲಿಗಲ್ಲು ಆಗೋದರಲ್ಲಿ ಸಂದೇಹವಿಲ್ಲ . ಯಾಕೆಂದರೆ ಒಂದು ದೊಡ್ಡ ಸಿನಿಮಾಕ್ಕೆ ಮೋಶನ್ ಪೋಸ್ಟರ್ ಮಾಡಿಸೋಲ್ಲ ..ಇವರುಗಳು ಕಿರುಚಿತ್ರಕ್ಕೆ ದೊಡ್ಡ ಚಿತ್ರಕ್ಕೆ ಹೇಗೆ ಪ್ರಚಾರ ಮಾಡುತ್ತಾರೋ ಹಾಗೆಯೇ ಪ್ರಚಾರ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ … ಮೊದಲನೇ ಹೆಜ್ಜೆಯಾಗಿ ಕಿರು ಚಿತ್ರದ ಮೋಶನ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ .. ಇದನ್ನು ಇಲ್ಲಿ ನೋಡಿ

This video belongs to HD STUDIO
ಇಲ್ಲಿ embed ಮಾಡಿರುವ youtube ವೀಡಿಯೊ link ಅದರ ಮೂಲ ಹಕ್ಕುದಾರರ youtube channel ಯಿಂದ ಎರವಲು ಪಡೆಯಲಾಗಿದೆ ..

ಚಿತ್ರದ ಬಗ್ಗೆ ಮತ್ತಷ್ಟು ಅಪ್ಡೇಟ್ ಬೇಕಿದ್ದರೆ ನವನ್ ಶ್ರೀನಿವಾಸ್ ಅವರ ಫೇಸ್ಬುಕ್ ಪ್ರೊಫೈಲ್ ಗೆ ಹೋಗಿ ಒಂದು ಫ್ರೆಂಡ್ ರಿಕ್ವೆಸ್ಟ್ ಹಾಕಿ ಇಲ್ಲ ಅವರನ್ನು ಫಾಲೋ ಮಾಡಿ

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..