1887

SandalWood ,Bollywood, Tollywood, kollywood ಎಲ್ಲ ಕಡೆ ರವಿ ವರ್ಮಾಂದೆ ಹವಾ!!

ನೀವು ಇತ್ತೀಚೆಗೆ ಹಲವಾರು ಮಾಸ್ ಚಿತ್ರಗಳನ್ನು ನೋಡಿದ್ದರೆ ಅದರಲ್ಲಿ ನಿಮಗೆ ಹೀರೋ ಮಾಡುವ ಸ್ಟಂಟ್ಸ್ ಇಷ್ಟ ಆಗಿದ್ದರೆ , ಅದನ್ನು ಕಂಪೋಸ್ ಮಾಡಿದವರು ಯಾರು ಅಂತ ತಲೆಗೆ question ಬಂತು ಅಂದ್ರೆ ಈ ಹಸರನ್ನು ನೆನಪು ಮಾಡಿಕೊಳ್ಳಿ ..ಅದುವೇ …facebook_circle_color-128ರವಿ ವರ್ಮಾ

ಮೊದ ಮೊದಲು ಚಿಕ್ಕ ಚಿಕ್ಕ ಪಾತ್ರಗಳಲ್ಲಿ ನಟಿಸುತ್ತಾ ಸಾಹಸ ದೃಶ್ಯ ಸಂಯೋಜಿಸುತ್ತ ಇದ್ದವರು ಈಗ ಸಂಪೂರ್ಣವಾಗಿ ಸಾಹಸ ದೃಶ್ಯ ಸಂಯೋಜನೆಯಲ್ಲೇ ಬ್ಯುಸಿ ಆಗಿದ್ದಾರೆ . ಈ ಮನುಷ್ಯ ಯಾವುದೇ ಡಿಗ್ರಿ ಪಡೆಯದೇ ಡಾಕ್ಟರೇಟ್ ಗೌರವಕ್ಕೆ ಪಾತ್ರರಾಗಿದ್ದಾರೆ . ಇವರಿಗೆ ಅಷ್ಟೊಂದು ಡೆಡಿಕೇಶನ್ ಇವರ ಕೆಲಸದ ಮೇಲೆ ..ಇವರು ಸಾಹಸ ಸಂಯೋಜಿಸುವುದು ದೊಡ್ಡ ದೊಡ್ಡ ಸ್ಟಾರ್ ಗಳಿಗೆ . ಹಿಂದಿಯ ಸಲ್ಮಾನ್ ಖಾನ್, ಆಮಿರ್ ಖಾನ್ ,ಶಾರುಖ್ ಖಾನ್ , ಅಜಯ್ ದೇವಗನ್ ಚಿತ್ರಗಳಿಗೆ ಇವರೇ ಸಾಹಸ ದೃಶ್ಯಗಳನ್ನು ಸಂಯೋಜಿಸುವುದು …ಕನ್ನಡದ ಸೂಪರ್ ಸ್ಟಾರ್ ದರ್ಶನ್ ಚಿತ್ರಗಳಿಗೆ ಖಾಯಂ ಸಾಹಸ ನಿರ್ದೇಶಕ..ಮೊದಲಿನಿಂದಲೂ ..ತೆಲುಗು ತಮಿಳಿನ ದೊಡ್ಡ ದೊಡ್ಡ ಸ್ಟಾರ್ ಗಳಿಗೆ ಹಾಗು ಅವರ ಮಕ್ಕಳ ಮೊದಲ ಚಿತ್ರಗಳಿಗೆ ಸಾಹಸ ಸಂಯೋಜನೆಯಾ ಅವಕಾಶ ಈ ಕನ್ನಡಿಗನ ಪಾಲಿಗೆ ಬರೆದಿಟ್ಟ ಬುತ್ತಿ .ತೆಲುಗಿನ ಸೂಪರ್ ಸ್ಟಾರ್ ಚಿರಂಜೀವಿಯ 150 ನೇ ಚಿತ್ರಕ್ಕೆ ಇವರೇ ಸಾಹಸ ನಿರ್ದೇಶಕರು .ಕನ್ನಡ ಬಹುನೀರೀಕ್ಷೆಯ ಪುನೀತ್ ರಾಜ್ ಕುಮಾರ್ ಅಭಿನಯದ ದೊಡ್ಡ ಮನೆ ಹುಡುಗ ಚಿತ್ರಕ್ಕೂ ಇವರೇ ಸಾಹಸ ನಿರ್ದೇಶಕರು . ಅಂದ ಹಾಗೆ ಜಾಕಿ ಕನ್ನಡ ಚಿತ್ರದಲ್ಲಿ ಬೆಂಕಿಯ ಸೂಡಿಯನ್ನು ಹಿಡಿದು ಹೊಡೆದಾಡುವ ಸಾಹಸ ನಿರ್ದೇಶನ ಮಾಡಿದವರು ಇವರೇ .

ರವಿ ವರ್ಮಾ ಹೆಸರಿಗೆ ತಕ್ಕಂತೆ ಸಾಧನೆಯ ಬಹುದೂರ ಕ್ರಮಿಸಿ ಹಲವಾರು ಯಶಸ್ವೀ ಚಿತ್ರಗಳಿಗೆ ಸಾಹಸ ನಿರ್ದೇಶನ ಮಾಡಿ ಬಹಳ ಯಶಸ್ಸನ್ನು ಗಳಿಸಿದವರು . ಅವರ ಈ ಸಾಹಸಮಯ ಚೀನಿ ಪಯಣ ಹೀಗೆ ನಡೆಯಲಿ . ಕನ್ನಡದ ಕೀರ್ತಿ ಪತಾಕೆಯನ್ನು ವಿಶ್ವದಾದ್ಯಂತ ತಮ್ಮ ಸಾಹಸ ನಿರ್ದೇಶನದ ಮೂಲಕ ಹಾರಿಸಲಿ ಎಂದು ನಾವು ಬಯಸೋಣ .

ಇವರ ಬಗ್ಗೆ ಎಕ್ಸ್ಕ್ಲೂಸಿವ್ ಆರ್ಟಿಕಲ್ ನಿಮ್ಮ ನೆಚ್ಚಿನ ಲೋಕಲ್ ಕೇಬಲ್ ವೆಬ್ಸೈಟ್ ಅಲ್ಲಿ ಮುಂದೆ ಬರಲಿದೆ . ನಮ್ಮ ಫೇಸ್ಬುಕ್ ಪೇಜ್ Local kebal ಅನ್ನು ಲೈಕ್ ಮಾಡಿ ಹಾಗೆಯೇ ನಮ್ಮ youtube ಚಾನೆಲ್ Local kebal entertainment ಅನ್ನು subscribe ಮಾಡಿ ..support us to create more contents for you. Also make us to be big platform for budding writers and creative people 🙂

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..