13389

The artist behind angry ಹನುಮಾನ್ sticker

ನೀವು ಬೆಂಗಳೂರಿನಲ್ಲಿ ಇದ್ದರೆ, ಅಲ್ಲಿ ಇಲ್ಲಿ ಓಡಾಡೋ ಕ್ಯಾಬ್ ಗಳ ಹಿಂಬಾಗದಲ್ಲಿ ಹಾಗೆ ಸ್ಕೂಟರ್ಗಳಲ್ಲಿ ಮುಂದುಗಡೆ “angry ಹನುಮಾನ್ ” ಸ್ಟಿಕರ್ ಕಟಿಂಗ್ ನೋಡಿರ್ತೀರಿ . ಯಾವತ್ತಾದ್ರೂ ಆ ಡಿಸೈನ್ ಮಾಡಿದ ಕಲಾವಿದ ಯಾರು ಅಂತ ನಿಮ್ಮ ಮನಸ್ಸಿನಲ್ಲಿ ಬಂದಿದ್ಯಾ? ನಿಜ.. ಬಂದಿರಲೂಬಹುದು ..ಆದರೆ ಯಾರು ಅಂತ ಮಾತ್ರ ಗೊತ್ತಿರಲಿಕ್ಕಿಲ್ಲ ಆಲ್ವಾ ? ಹೌದು ..ಆ ಕಲಾವಿದನ ಹೆಸರೇ ಕರಣ್ ಆಚಾರ್ಯ .. ಕಾಸರಗೋಡಿನ ಮೂಲದವರಾದ ಇವರ ಕಾರ್ಯಕ್ಷೇತ್ರ ಇರುವುದು ಮಂಗಳೂರಿನಲ್ಲಿ
13754521_1159739667397605_5193048021347852482_n

ಈ ಸ್ಟಿಕರ್ ಎಷ್ಟು ಜನಪ್ರೀಯ ಎಂದರೆ ಕರಾವಳಿ ಮಾತ್ರ ಅಲ್ಲದೆ ಬೆಂಗಳೂರು ಹಾಗು ದೇಶದ ಇತರೆ ಭಾಗಗಳಲ್ಲಿಯೂ ಬಹಳ ಫೇಮಸ್ ಆಗಿದೆ . ಈಗ ಅವರು ಮತ್ತಷ್ಟು ಸ್ಟಿಕರ್ಗಳೊಂದಿಗೆ ಮತೊಮ್ಮೆ ಜನರ ಮನಸ್ಸನ್ನು ಕದಿಯಲು ಹೊರಟಿದ್ದಾರೆ .ಇನ್ನು ಮುಂದೆ ಹರ ಹರ ಮಹದೇವ್ ಎಲ್ಲರ ನೆಚ್ಚಿನ ಸ್ಟಿಕರ್ ಆಗಲಿದ್ದಾನೆ
14224963_10209719364557558_2042829296607246617_n
ಆಂಜನೇಯನ ಇನ್ನೊಂದು ಸ್ಟಿಕರ್ ಸದ್ಯದಲ್ಲೇ ಲಗ್ಗೆ ಇಡಲು ರೆಡಿ ಆಗಿದೆ . ಇಲ್ಲಿ ನೋಡಿ . ಆಂಜನೇಯ ದುಷ್ಟರನ್ನು ಸಂಹಾರ ಮಾಡಲು ಗದೆ ಬೀಸುವ ಭಂಗಿಯ ಸ್ಟಿಕರ್ ಜನರ ಕಣ್ಣನ್ನು ಕುಕ್ಕದೆ ಇರಲಾರದು
13710475_915286185265186_3771638826706123039_o
ಇದಲ್ಲದೆ ಇವರೊಬ್ಬ ಕಲಾವಿದ. ನಿಮ್ಮ ಮದುವೆಯ ಆಮಂತ್ರಣ ಪತ್ರಿಕೆಯ ಮೇಲೆ ನಿಮ್ಮ ಜೋಡಿಯ caricature ಸಹ ಕ್ರಿಯೇಟಿವ್ ಆಗಿ ಬಿಡಿಸಿ ಕೊಡುತ್ತಾರೆ . ಹಾಗೆಯೇ ನಿಮ್ಮದೇ ಭಾವಚಿತ್ರವನ್ನು ಕಲಾವಿದ ನಿಮಗೆ ಬೇಕಾದ ರೀತಿಯಲ್ಲಿ ಸ್ಟಿಕರ್ ರೂಪದಲ್ಲಿ ಮಾಡಿ ಟಿ ಶರ್ಟ್ , mug,ಮೊಬೈಲ್ ಬ್ಯಾಕ್ ಪ್ಯಾನೆಲ್ ಮೇಲೆ ಪ್ರಿಂಟ್ ಮಾಡಿ ಕೊಡುತ್ತಾರೆ . ಹೆಚ್ಚಿನ ಮಾಹಿತಿಗಾಗಿ ಅವರ ಫೇಸ್ಬುಕ್ ಅಕೌಂಟ್ ಲಿಂಕ್ ಇಲ್ಲಿದೆ . ಅವರನ್ನು ಕಾಂಟಾಕ್ಟ್ ಮಾಡಿ

contact : Karan acharya

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..