1246

10 “ಇದೇನ್ ಕರ್ಮಾ ಗುರು” moments in our lives

1.ಮದ್ವೆ ಮನೇಲಿ ಊಟಕ್ಕೆ ಕುಳಿತಾಗ , ಊಟ ಬಡಿಸುವವವರು ನಾವು ಊಟ ಮಾಡ್ತಾ ಇರೋವಾಗ್ಲೇ ಪಾಯಸ ಬಡಿಸೋಕೆ ಬಂದಾಗ

1

2.ಬೇಸಿಗೆ ಕಾಲದಲ್ಲಿ ರಶ್ ಇರೋ ಬಸ್ ಹತ್ತಿದಾಗ ಅಕ್ಕ ಪಕ್ಕ ಇರೋರ್ ಬೆವರಿನ ವಾಸನೆ ಹೆವಿ ಆಗಿ ಬರ್ತಾ ಇರೋವಾಗ

2

3.ಒಂದು ಹುಡುಗಿಗೆ ಜಯಂತ್ ಕಾಯ್ಕಿಣಿ ರೇಂಜ್ ಗೆ ಕವನ ಬರೆದು ಮೆಸೇಜ್ ಟೈಪ್ ಮಾಡಿ ವಾಟ್ಸಪ್ಪ್ ಅಲ್ಲಿ ಕಳಿಸಿದಾಗ ಅವಳು ಓದದೇ ಇದ್ದದ್ದು ನೋಡಿ ಡೌಟ್ ಬಂದು ಸರಿಯಾಗಿ ನೋಡಿದಾಗ ಅವಳು ವಾಟ್ಸಪ್ಪ್ ಇಂದಾನೆ ನಮ್ಮನ್ನು ಬ್ಲಾಕ್ ಮಾಡಿದ್ದಾಳೆ ಅಂತ ಗೊತ್ತಾದಾಗ

3

4.ATM ಮಷೀನ್ ಇಂದ ಬರೀ 2000 ರುಪಾಯೀ ನೋಟು ಬಂದಾಗ “ಈ ನೋಟನ್ನ ಎಲ್ ಹಾಗ್ ಚಿಲ್ರೆ ಮಾಡಿಸ್ಲಿ ? ”

11

5.ಇಂಜಿನಿಯರಿಂಗ್ ಸೆಮಿಸ್ಟರ್ ಎಕ್ಸಾಮ್ IPL ಟೈಮ್ ಅಲ್ಲೇ ಇಟ್ಟಾಗ

10

6.ಭಾನುವಾರ ಬೆಳಿಗ್ಗೆ ಎದ್ದು ಒಗ್ಗರಣೆ smell ಮೂಗಿಗೆ ಬಿದ್ದ ತಕ್ಷಣ ಅಮ್ಮ ಏನೋ ಸ್ಪೆಷಲ್ ತಿಂಡಿ ಮಾಡಿರಬಹುದು ಅಂತ ಗಡಿ ಬೀದಿಲಿ ಸ್ನಾನ ಮಾಡ್ಕೊಂಡು ರೆಡಿ ಆಗಿ ತಿಂಡಿ ತಿನ್ನೋಕೆ ಬಂದು ನೋಡಿದ್ರೆ ಆ ದಿನ “ಉಪ್ಪಿಟ್ಟು ”

7

7.ಚೆನ್ನಾಗಿರೋ ಹುಡುಗಿ ನಾ ನೋಡ್ತಾ ನೋಡ್ತಾ ಇವಳೇ ನನ್ ಹೆಂಡ್ತಿ ಆಗಿ ಬಂದ್ರೆ ಚೆನ್ನಾಗಿರುತ್ತಲ್ಲ ಅಂತ ಫೀಲ್ ಮಾಡ್ಕೊಳ್ಳೋ ಟೈಮ್ ಅಲ್ಲಿ ಅವಳಿಗೆ ಬಾಯ್ ಫ್ರೆಂಡ್ ಇದಾನೆ ಅಂತ ಗೊತ್ತಾಗ ಹೆವಿ ಫೀಲ್ ಆಗಿ ಅವಳ boyfriend ಗೆ ಮನಸ್ಸಲ್ಲೇ ” ಏನ್ ಕರ್ಮಾ ಗುರು !!! ಅವನು ಒಳ್ಳೆ ಷಡೇ ನನ್ ಮಗ ಥರ ಇದಾನೆ ..ಇವಳಿಗೆ ಒಂಚೂರೂ ಟೇಸ್ಟ್ ಇಲ್ವಾ ” ಅಂತ ಕೆಟ್ಟಾದಾಗಿ ಬೈಕೋತೀವಿ

8

8.ಎಕ್ಸಾಮ್ ಅಲ್ಲಿ question ಪೇಪರ್ ಅಲ್ಲಿ ಇರೋ questions ಎಲ್ಲ ” ಈ ಟಾಪಿಕ್ ಇಂಪಾರ್ಟೆಂಟ್ ಅಲ್ಲ” ಅಂತ ಬಿಟ್ಟಿರೋ topics ಇಂದಾನೆ ಬಂದಾಗ

4

9.ಹೆವಿ ಹೈಪ್ ಕೊಟ್ಟು ಪ್ರಮೋಷನ್ ಮಾಡಿರೋ ಮೂವಿ ನ ಎಕ್ಸ್ಟ್ರಾ ದುಡ್ಡು ಕೊಟ್ಟು ಬ್ಲಾಕ್ ಟಿಕೆಟ್ ತಗೊಂಡು ಮೂವಿ ನೋಡೋವಾಗ ” ನಕ್ಕನ್ .. ಏನ್ *** ಥರ ಮೂವಿ ಮಾಡಿದ್ದಾರೆ ..ಇದಕ್ಕೆ ಇಷ್ಟೊಂದು buildup ಆ ? ”

5

10.ಕುಕ್ಕರ್ ಸಿಟಿ 3 ಸಲ ಹೊಡೆದ ನಂತರ ಗ್ಯಾಸ್ ಆಫ್ ಮಾಡು ಅಂತ ಅಮ್ಮ ಹೇಳಿರ್ತಾಳೆ .. ಮೂರ್ ಸೀಟಿ ಹೊಡೆದ ತಕ್ಷಣ ಗಡಿಬಿಡಿಲಿ ಹಾಲ್ ಇಂದ ಅಡುಗೆ ಮನೆಗೆ ಓಡೋವಾಗ ಗೋಡೆಗೆ ಮೊಣಕೈ ತಾಗಿದಾಗ ಕರೆಂಟ್ ಶಾಕ್ ಕೊಟ್ ಫೀಲ್ ಬಂದಾಗ “ಬಾಯಿಯಿಂದ ಏನೇನೋ ಸಂಸ್ಕೃತ ” ಬಂದು ಬೈಕೊಳ್ಳೋವಾಗ

6

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..