2508

ಹೆಲಿಕ್ಯಾಪ್ಟರ್ ಶಾಟ್ ಬಗ್ಗೆ ನಿಮಗೆ ಗೊತ್ತಿಲ್ಲದ ವಿಷಯ

ಕ್ರೀಡೆಯ  ಹಲವು ಆಯಾಮಗಳಲ್ಲಿ ಕ್ರಿಕೆಟ್  ಸಹವು ಒಂದು ಅಧ್ಬುತ ಅವಿಭಾಜ್ಯ . ಈ ಕ್ರೀಡೆಯಲ್ಲಿ ಹಲವು ಅಂಶಗಳು ಸ್ವತಃ ಆಟಗಾರನಿಗೆ ಕಲವೊಮ್ಮೆ ತಿಳಿಯುವುದಿಲ್ಲ. ನಿರ್ದಿಷ್ಟ   ಸಂಧರ್ಭ ಎದುರಾದಾಗ  ಮಾತ್ರ ವಿಭಿನ್ನ  ರೀತಿಯ ತಾಂತ್ರಿಕತೆಯ ಪ್ರಯೋಗ ನಡೆಯುತ್ತದೆ ಅದೇ ರೀತಿ ಒಂದೊಂದು ಭಂಗಿಯು ಅಥವಾ ಹೊಡೆತಗಳು ಆಯಾ ಸಂದರ್ಭದಲ್ಲೇ ಸೃಷ್ಟಿಯಾದೀತೇ  ಹೊರತಾಗಿ ಬೇರಾವ ಸಮಯದ್ಲಲಿಯೂ ಅಲ್ಲ. ಪೂರ್ವ ನಿರ್ಧರಿತ ಹೊಡೆತಗಳು ಕೆಲವೊಮ್ಮೆ ಕೈ ಹಿಡಿಯಲಾರವು ಅಂತಹದೇ ಕೆಲವು ವಿಭಿನ್ನ ಶೈಲಿಯ ಹಾಗೂ ಅತ್ಯಂತ ಜನಪ್ರಿಯ ಹೊಡೆತಗಳಲ್ಲೊಂದಾದ ಹೆಲಿಕ್ಯಾಪ್ಟರ್ ಶಾಟ್ ಒಂದರ ವಿಶ್ಲೇಷಣೆ ಈ ಕೆಳಗಿನಂತಿದೆ.

 1

ಇದರ ಅನ್ವೇಷಕ ಧೋನಿಯೆಂದು ಹಲವು ಮಂದಿ ಅಭಿಪ್ರಾಯ ಪಡುತ್ತಾರೆ  ಆದರೆ ನೈಜತೆ ಏನೆಂದರೆ ಈ ಹೊಡೆತದ ಪ್ರಪ್ರಥಮ ಪ್ರಯೋಗವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ತೋರಿಸದವರು ಹಲವಾರು ಮಂದಿ ಉದಾಹರಣೆಗೆ ಸಚಿನ್ ತೆಂಡೂಲ್ಕರ್, ಅಜರುದ್ದೀನ್ ಮುಂತಾದವರು ಕೆಲವು ದಶಕಗಳ ಹಿಂದೆಯೇ ಜಗತ್ತಿಗೆ ಪರಿಚಯಿಸಿದ್ದರು  ಅಂತೆಯೇ ಮಾಧ್ಯಮ ಮಿತ್ರರ  ವೈಭವೀಕರಣ  ಈವಾಗಿನ ಹಾಗೆ ಕ್ರಿಕೆಟಿನಲ್ಲಿ ವಿಶಿಷ್ಟ ಶಾಟ್ ನ ಪ್ರಚಾರ  ಅಷ್ಟಾಗಿ ಇರಲಿಲ್ಲ ಹಾಗಾಗಿ ಕೆಲವು ವಿಭಿನ್ನ ಹೊಡೆತಗಳು ಆ ಸಂದರ್ಭಕ್ಕೆ ಸೀಮಿತವಾಯಿತು . ಮತ್ತು  ಆ ಸಮಯದಲ್ಲಿ ಅಷ್ಟೊಂದು ಆಕರ್ಷಕವಾಗಿ ಬಂದಿರಲಿಲ್ಲ ಹಾಗಾಗಿ ಈ ಹೊಡೆತದ ಪರಿಚಯ  ಜನರಿಗೆ ಅಷ್ಟಾಗಿ ಮನದಟ್ಟಾಗಿಲ್ಲ .ನಂತರದ ದಿನಗಳಲ್ಲಿ ಧೋನಿಯು ಅತ್ಯಂತ ಸ್ಟೈಲಿಶ್ ಆಗಿ ಹೊಡೆಯಲು  ಪ್ರಾರಂಭಿಸಿಧಾಗ ಹೆಲಿಕ್ಯಾಪ್ಟರ್ ಶಾಟ್ ಜನಪ್ರಿಯತೆಯನ್ನು ಗಳಿಸಿತು.ಇತೀಚಿನ ದಿನಗಳಲ್ಲಿ ಅದರಲ್ಲೂ ಐಪಿಎಲ್ ಶುರುವಾಗಿದಾಗಿನಿಂದಲೂ ಕೆಲವು ಯುವ ಪ್ರತಿಭೆಗಳು ಈ ಹೊಡೆತವನ್ನು ಹೊಡೆಯಲು ಪ್ರಯತ್ನಿಸುತ್ತಲೇ ಇರುತ್ತಾರೆ.

ಇನ್ನೊಂದು ವಿಚಿತ್ರ ಸಂಗತಿಯೇನೆಂದರೆ ಹೆಲಿಕ್ಯಾಪ್ಟರ್ ಶಾಟ್ ಅನ್ನು ಪ್ರತಿಯೊಬ್ಬ ಕ್ರಿಕೆಟ್ ಆಟಗಾರನು ಪ್ರಯತಿಸಬಹುದು ಅಂದರೆ ಎದುರಾಳಿ  ಬೌಲರ್ ದಂಡುಗನ ವಿಕೆಟ್ ಕಬಳಿಸಲು ಯಾರ್ಕರ್ ಎಸೆಯುತ್ತಾನೆ ಆ ಸಂದರ್ಭದಲ್ಲಿ ಚೆಂಡು ವೇಗದ  ಜೊತೆಗೆ ನೇರವಾಗಿ ಕಾಲಿನ ಪಾದದ ಗುರಿಯಾಗಿ ಬರುತ್ತದೆ ಇಂತಹ ಸಮಯದಲ್ಲಿ ಚೆಂಡು ವಿಕೆಟ್ ಗೆ ತಗಲುವುದನ್ನುತಡೆಯಲು ಅಥವಾ LBW ಆಗುವುದನ್ನು ತಡೆಯಲು ಜೊತೆಗೆ ರನ್ ಗಳಿಸಬೇಕಾಗಿರುವ ಸಮಯದಲ್ಲಿ ಇರುವುದರಿಂದ ಆಕಸ್ಮಿಕವಾಗಿ ಹೆಲಿಕ್ಯಾಪ್ಟರ್ ಶಾಟ್ ಟೇಕ್ ಆಫ್ ಆಗಿಯೇ ಆಗುತ್ತದೆ. ಪ್ರಮುಖವಾಗಿ ಬ್ಯಾಟ್ ಲಿಫ್ಟ್ ಅತ್ಯಂತ ಪ್ರಭಾವಕಾರಿ ಪರಿಣಾಮ ಬೀರುತ್ತದೆ. ಅದೇ ಈ ಶಾಟ್ ನ ಹಿಂದಿರುವ ಪ್ರಮುಖ ಅಂಶ. ಇದರಿಂದ ತಿಳಿಯುತ್ತದೆ ಕ್ರಿಕೆಟ್ ಆಡುವಾಗ  ಸಂದರ್ಭ ಎದುರಾದಾಗ ನಾನಾ ತರಹದ ಶಾಟ್ ಹೊಡೆಯಲು ನಿಮ್ಮೊಳಗಿನಿಂದ  ಧೋನಿ, ಸಚಿನ್, ಏಬಿ ಡಿ ವಿಲಿಯರ್ಸ್ ಬಂದರು ಬರಬಹುದು. ಯಾವುದಕ್ಕೂ ಒಮ್ಮೆ ಪ್ರಯತ್ನ ಮಾಡಿ ನೋಡಿ ಆವಾಗ ಮಾತ್ರ ತಿಳಿಯುತ್ತದೆ No one is the inventor of any special shots in cricket and  which happen only when we face the situation while playing.

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..