1731

ಹನಿಗವನಗಳು

pramod-authorPramod ಮರವಂತೆ
BUR ಗಾಲ
ಬರಗಾಲ ನಿರ್ಮೂಲನೆಗೆ
ಸರ್ಕಾರದ ಹೊಸ ಯೋಜನೆ
ಎಲ್ಲಾ ರಸ್ತೆಯ ಹೊಂಡಗಳಲ್ಲೂ
ನೀರಿನ ಶೇಖರಣೆ

ಪರಿಶ್ರಮ
ಬೆವರು ಸುರಿಸದೆ
ಏನೂ ಸಾಧ್ಯವಿಲ್ಲ
ಹಗಲಿರುಳು
ಬೆವರ ಹರಿಸಿದ ಮೇಲಲ್ಲವೇ
ಬೆಳೆದದ್ದು ಮನುಷ್ಯನ
ಕಂಕುಳಲ್ಲೂ ಕೂದಲು

ಪ್ರ”ದಾನಿ”
ಅಂದು ಪ್ರಧಾನಿಯಾಗಿದ್ದರು
ಚಾ ಚಾ ನೆಹರು
ಇಂದು ಪ್ರಧಾನಿಯಾಗಿರುವರು
ಅಂದು ಚಾಯ್..ಚಾಯ್ ಎಂದವರು

ಎಣ್ಣೆ
ಎಣ್ಣೆಯಿಂದ
ಮನೆ ಬೆಳಗಿಸಲೂಬಹುದು
ಸುಡಲೂಬಹುದು

ವಿದಾಯ
ವಿದಾಯ ಹೊಸತೇನಲ್ಲ ನನಗೆ
ಆದರೆ ಪ್ರತಿಬಾರಿ ಬರುವ
ಕಣ್ಣೀರು ಮಾತ್ರ ಹೊಸದು

DEEP ಆ..ಆ..ಆ..
ಹಳೆಯ ಹುಡುಗಿಯ
ನೆನಪು ದೀಪದಂತೆ
ಎಣ್ಣೆ ಒಳಗಿರುವಾಗ ಮಾತ್ರ
ಉರಿಯುತ್ತದೆ

ನೀವೂ ಕೂಡ ಬರೆಯಬಹುದು .. ನಿಮ್ಮ ಬರಹಗಳನ್ನು localkebal@gmail.com ಗೆ ಕಳಿಸಿ .

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..