4361

ಕುಡುಬಿಗಳ ಸಂಭ್ರಮ-ಸಡಗರದ ಹೋಳಿ ಆಚರಣೆ!

ಗೋವಾ ಮೂಲದಿಂದ ವಲಸೆ ಬಂದುಕರಾವಳಿ ಕರ್ನಾಟಕದಲ್ಲಿ ಬದುಕನ್ನುಕಟ್ಟಿಕೊಂಡಿರುವ ಪರಿಶಿಷ್ಟ ಬುಡಕಟ್ಟು ಸಮುದಾಯಕ್ಕೆ ಸೇರಿದ ಗೋವಿ ಕುಡುಬಿಗಳ ಆಕರ್ಷಕಧಾರ್ಮಿಕಆಚರಣೆಯೇ‘ಹೋಳಿ ಹಬ್ಬ’. ‘ಹೋಳಿ’ ಎಂಬ ಶಬ್ದ ಕೇಳಿದ ಕೂಡಲೇಮುಖಕ್ಕೆಲ್ಲ ಬಣ್ಣಎರಚುತ್ತಾ ನಾವು ಸಂಭ್ರಮಿಸುವಆಚರಣೆಯಂತೆ ಕುಡುಬಿಗಳ ಈ ಹೋಳಿಯೂಇದ್ದೀತುಎಂದು ನೀವು ಬಾವಿಸಿದರೆ ನಿಮ್ಮ ಊಹೆ ತಪ್ಪು. ವಾರಗಳ ಪರ್ಯಂತಅತ್ಯಂತ ಸಂಭ್ರಮ ಸಡಗರದೊಂದಿಗೆಎಲ್ಲವೂಸಂಪ್ರದಾಯಬದ್ದವಾಗಿನೆಡೆಯುವ ಕುಡುಬಿಗಳ ಹೋಳಿ ಆಚರಣೆಅವರಬಹುನಂಬಿಕೆಯಬಹುಮುಖ್ಯಹಬ್ಬ. ಕುಡುಬಿ ಕೇರಿಗಳ ತುಂಬೆಲ್ಲ ಸಂಭ್ರಮ ಸಡಗರವೇ ಮೈವೆತ್ತು ನರ್ತಿಸುವಹಬ್ಬವೇ..ಹೋಳಿ!

ಸಂಭ್ರಮದ ಪೂರ್ವತಯಾರಿ:
ಹೋಳಿ ಹಬ್ಬಕ್ಕೆ ಮೂರು ತಿಂಗಳು ಇರುವಂತೆಯೇ ಕುಡುಬಿಗಳ ತಯಾರಿ ಆರಂಭಗೊಳ್ಳುತ್ತದೆ. ತಮ್ಮ ಸಮುದಾಯದ ಗುರಿಕಾರ ಅಥವಾ ಮಂಡಕಾರಿ ನಾಯ್ಕರ(ಪಂಗಡದಯಜಮಾನ) ಮನೆಯಲ್ಲಿಒಟ್ಟಾಗುವ‘ಸಮುದಾಯದಹಿರಿ-ಕಿರಿಯ ಸದಸ್ಯರು’ ಹಬ್ಬದಕುರಿತು ಸುದೀರ್ಘವಾಗಿಚರ್ಚಿಸುತ್ತಾರೆ. ನಂತರ ಹಗಲಿಡಿಬಿಸಿಲಿನಲ್ಲಿ ಬೆವರು ಬಸಿದು ಬದುಕಿನ ಕರ್ಮವನ್ನು ಮಾಡಿ ಮನೆ ಸೇರುವ ಕುಡುಬಿಗಳು ರಾತ್ರಿಯ ಸಮಯದಲ್ಲಿ ಪಂಗಡದ ಯಜಮಾನನ ಮನೆಯಲ್ಲಿಒಟ್ಟಾಗುತ್ತಾರೆ. ಅಲ್ಲಿಸಮುದಾಯದ ಕಿರಿಯರಿಗೆ ಹೋಳಿ ಆಚರಣೆಯ ಮುಖ್ಯ ಆಕರ್ಷಣೆ‘ ಗುಮ್ಟೆಕುಣಿತ’(ಗುಮಟೆ), ಕೋಲಾಟದ ಹೆಜ್ಜೆಗಳನ್ನು ಕಲಿಸಿ ಹೋಳಿ ಹಬ್ಬಕ್ಕೆ ಅವರನ್ನು ತಯಾರಿಗೊಳಿಸಲಾಗುತ್ತದೆ. ಹಬ್ಬ ಹತ್ತಿರ ಬಂದಂತೆಯೇ ಕುಡುಬಿ ಪಂಗಡಗಳಲ್ಲಿ ಉಂಟಾಗುವಖುಷಿಯ ಗೌಜು-ಗದ್ದಲಗಳನ್ನು ನೋಡುವುದೇ ಒಂದು ಚಂದ. ಸಂಜೆಯ ಸೂರ್ಯ ಪಡುವಣದಲ್ಲಿ ಕಂತುವಾಗಲೇ ಕುಡುಬಿಗಳ ಕೇರಿಯಿಂದ ಹೊರಡುವ ಢಂ..ಢಂ..ಗುಮ್ಟೆಯ ಸದ್ದು ಊರಿಡೀ ಮೊಳಗುತ್ತದೆ. ‘ಕುಡುಬಿಗಳಿಗೆ ಚೆಂಗು ಬಂದಿದೆ. ಹೋಳಿ ಆರಂಭಗೊಳ್ಳುತ್ತದೆ’ಎಂದುಎಲ್ಲರು ಸಂಬ್ರಮಿಸುತ್ತಾರೆ

ಹೋಳಿ ಆಚರಣೆಯಕುರಿತು:
ಹೋಳಿ ಹುಣ್ಣಿಮೆಗೆ ವಾರಗಳು ಇರುವಂತೆಯೇ ಹಿರಿಯರು ನಿರ್ದರಿಸಿದ ಶುಭ ಮೂಹುರ್ತವೊಂದರಲ್ಲಿ ಗೋವಿ ಕುಡುಬಿಗಳ ಕೂಡುಕಟ್ಟಿನ ಎಲ್ಲ ಸದಸ್ಯರು ಮಂಡಕಾರಿ ನಾಯ್ಕರ ಮನೆಯಲ್ಲಿಒಗ್ಗೂಡುತ್ತಾರೆ. ಪ್ರಾತಃಕಾಲದಲ್ಲೆದ್ದು ಎಣ್ಣೆ ಅಭ್ಯಂಜನ ಸ್ನಾನಗೈದು ಶುಚಿಯಾಗಿ ಹೋಳಿ ವೇಷ ಕಟ್ಟಿಕೊಳ್ಳಲು ತೊಡಗಿದರೆ ಮೂರ್ನಾಲುಗಂಟೆ ಇವರು ಬ್ಯುಸಿ. ಹೋಳಿ ಕುಣಿತಕ್ಕೆ ಬರುವ ಸರ್ವಸದಸ್ಯರನ್ನು ಶೃಂಗರಿಸಿದ ಮೇಲೆಯೇ ಮಂಡಕಾರಿ ನಾಯ್ಕತಾನು ಗೆಜ್ಜೆಕಟ್ಟಿಕೊಳ್ಳಲು ಅಣಿಯಾಗುತ್ತಾನೆ. ಅವನ ವೇಷ ಮುಗಿಯುತ್ತಿದ್ದಂತೆಯೇ ಕುಡುಬಿಗಳ ಕೂಡುಕಟ್ಟಿನಲ್ಲಿ ಹಬ್ಬದ ವಾತವರಣಕಳೆಗಟ್ಟುತ್ತಾ ಹೋಗುತ್ತದೆ.

ವೇಷ ಭೂಷಣ-ಆಚರಣೆಯ ವಿಧಾನ:
ಹೋಳಿ ವೇಷದಾರಿಗಳು ನೆರಿಗೆ ತೆಗೆದ ಸೀರೆಯನ್ನುಟ್ಟು ಕಾಲಿಗೆ ಗೆಜ್ಜೆಕಟ್ಟುತ್ತಾರೆ. ತುಂಬು ತೋಳಿನ ಅಂಗಿ ಧರಿಸಿ ತಲೆಗೆ ಬಿಗಿಯಾದ ಮುಂಡಾಸನ್ನು ಸುತ್ತಿಕೊಳ್ಳುತ್ತಾರೆ. ಅದಕ್ಕೆ ಕೆಂಪು ಬಣ್ಣದ ಕಾಗದದ ಹೂಗಳನ್ನು ಸುತ್ತಿ.(ಹಿಂದೆಅಬ್ಬಲಿಗೆ, ಸುರಿಗೆ ಹೂಗಳನ್ನು ಸುತ್ತಿಕೊಳ್ಳುತಿದ್ದರು) ಬೀಮರಾಜ ಹಕ್ಕಿಯಗರಿಯನ್ನು ಸಿಕ್ಕಿಸಿ ಬಣ್ಣ ಬಣ್ಣದ ಪಟ್ಟೆಗಳನ್ನು ಹೊದ್ದು ಕೈಯಲ್ಲಿ ಗುಮ್ಟೆಗಳನ್ನು ಹಿಡಿದು ಮನೆ ಮನೆಗೆ ಹೋಗಲು ಅಣಿಯಾಗುತ್ತಾರೆ. ಇದು ಕುಡುಬಿಗಳ ಸೂಗಸಾದ ಹೋಳಿ ವೇಷ-ಭೂಷಣ.
‘ಕೃಷ್ಣ ದೇವತೊಕ ಕೇಳು ಕೇಳಾಯ್ತಾ..
ನಾಗದೇವತೊಕ ಕೇಳು ಕೇಳಾಯ್ತಾ..
ಗಂಗಾದೇವಿ ತೊಕ ಕೇಳು ಕೇಳಾಯ್ತಾ.’.
ಇಂತಹ ನೂರಾರು ಅವರ ಮಾತೃಭಾಷೆ ಕೊಂಕಣಿಯ ಸಾಲುಗಳೊಂದಿಗೆ ಸಮಸ್ತ ದೇವರ ಹೊಗಳುವಿಕೆಯೊಂದಿಗೆ ಹೋಳಿ ಕುಣಿತ ಆರಂಭಗೊಳ್ಳುತ್ತದೆ. ಆರತಿ ದೀಪವನ್ನು ಬೆಳಗುತ್ತಾತಮ್ಮ ಕುಲದೇವರು ಮಲ್ಲಿಕಾರ್ಜುನನ್ನು ಮನದಲ್ಲಿ ನೆನವ ಮಂಡಕಾರಿ ನಾಯ್ಕ ಹೋಳಿ ವೇಷ ತೊಟ್ಟ ಗುಂಪಿನ ಸರ್ವಸದಸ್ಯರ ಹಣೆಗೆ ಕುಂಕುಮ ಹಚ್ಚಿ ನಿರ್ವಿಘ್ನವಾಗಿ ಹೋಳಿ ನೆಡೆವಂತೆ ಕೋರಿಕೊಳ್ಳುತ್ತಾನೆ.ಇಲ್ಲಿಂದ ಕುಡುಬಿಗಳ ಹೋಳಿ ಕುಣಿತದ ನಿಜವಾದಗೌಜು ಆರಂಭಗೊಳ್ಳುತ್ತದೆ.

unnamed (5)
ಮಂಡಕಾರಿ ನಾಯ್ಕರ ಮನೆಯಲ್ಲಿ ಹೋಳಿ ಕುಣಿತದ ಮೊದಲ ಪ್ರದರ್ಶನನೆಡೆದ ನಂತರ ಊರಗ್ರಾಮ ದೇವತೆಯ ಗುಡಿ, ಪ್ರಮುಖ ದೇವಸ್ಥಾನ, ಊರಿನ ಪರಂಪರೆಯ ಮನೆತನದ ಮನೆಗಳಿಗೆ ಸಾಗಿ ಬರುವ ಹೋಳಿ ಹಿಂಡುಹೋಳಿ ಕುಣಿತದ ಪ್ರದರ್ಶನವನ್ನುನೀಡುತ್ತದೆ. ಬೆಲ್ಲ ನೀರಿನೊಂದಿಗೆ ಕುಡುಬಿಗಳ ತಂಡವನ್ನು ಸ್ವಾಗತಿಸಿ ಅವರಆಕರ್ಷಕ ಹೋಳಿ ಕುಣಿತಕೋಲಾಟದ ಸೊಬಗನ್ನು ಸವಿದುಅವರಿಗೆಬೆಳ್ತಿಗೆ ಅಕ್ಕಿ, ವೀಳ್ಯದೆಲೆ, ಅಡಿಕೆ, ಕಾಣಿಕೆಗಳನ್ನು ನೀಡಿಗೌರವದಿಂದ ಬೀಳ್ಕೊಡಲಾಗುತ್ತದೆ.
ಪ್ರತಿ ವರ್ಷ ಐದಾರು ದಿನಗಳ ಕಾಲ ನೆಡೆಯುವ ಕುಡುಬಿಗಳ ಹೋಳಿ ಆಚರಣೆ ಮೊದಲೆರಡು ದಿನ ಪಕ್ಕದೂರುಗಳಲ್ಲಿ ವಾಸ್ತವ್ಯ ಹೊಂದಿರುವ ಸ್ವಜಾತಿ ಬಾಂದವರ ಮನೆಯಲ್ಲಿ ಪ್ರದರ್ಶನ ನೀಡುವ ಮೂಲಕ ನೆಡೆಯುತ್ತದೆ. ಅಲ್ಲಿಇಡೀ ತಂಡಕ್ಕೆ ಸೊಗಸಾದ ಭೋಜನದ ವ್ಯವಸ್ಥೆಯನ್ನು ಮಾಡಿ ಗೌರವಾಧರಗಳಿಂದ ನೋಡಿಕೊಳ್ಳಲಾಗುತ್ತದೆ.
ಕೊನೆಗೆರಡು ದಿನ ಇರುವಂತೆಯೇತಮ್ಮೂರಿಗೆ ಆಗಮಿಸುವ ಹೋಳಿ ತಂಡ ಆತ್ಮೀಯರೆನಿಸಿಕೊಂಡ ಎಲ್ಲರ ಮನೆಗಳಿಗೂ ಸಾಗಿ ಬಂದು ತಮ್ಮ ಗುಮ್ಟೆಯನ್ನು ಬಡಿಯುತ್ತಾಆಕರ್ಷಕ ಎನಿಸಿರುವ ಹೋಳಿ ನೃತ್ಯ, ಕೋಲಾಟಗೈದು ಎಲ್ಲರ ಮನವನ್ನುತಣಿಸುತ್ಥಾರೆ. ಎಷ್ಟೂ ಅನ್ಯಜಾತಿ ಮನೆಗಳಲ್ಲೂ ಕುಡುಬಿಗಳ ಹೋಳಿ ಕುಣಿತದ ಪ್ರದರ್ಶನ ಮಾಡುವಂತೆ ಸ್ವತಃ ಹರಕೆಯನ್ನು ಕಟ್ಟಿಕೊಳ್ಳುವುದು ಉಂಟು. ಇದುಊರಿನ ನಡುವಿನ ಒಗ್ಗಟ್ಟಿನ ಸಂಕೇತ.
ಹೋಳಿ ಹುಣ್ಣಿಮೆಯ ದಿನ ಮತ್ತೆ ಪುನಃ ಮಂಡಕಾರಿ ನಾಯ್ಕರ ಮನೆಯಲ್ಲಿಒಗ್ಗೂಡುವತಂಡ ಪ್ರದರ್ಶನಗೈದುಕಾಮದಹನ ನೆಡೆಸಿ ಸಿಹಿ ಭೋಜವನ್ನುಉಂಡು ವೇಷ ಕಳಚಿ ಒಗೆದು ಪೆಟ್ಟಿಗೆಗೆ ಸೇರಿಸಿ ಮಾಳಿಗೇಗೆರಿಸಿದರೆ ಮತ್ತೆಅದನ್ನುತೆಗೆಯುದು ಮುಂದಿನ ವರ್ಷವೇ. ಇಲ್ಲಿಗೆ ಕುಡುಬಿಗಳ ವಾರ್ಷಿಕಹೋಳಿ ಹಬ್ಬಸಮಾಪ್ತಿಕೊಳ್ಳುತ್ತದೆ.

ಗೋವಿ ಕುಡುಬಿಗಳು ಗೋವಾದಿಂದ ಕರಾವಳಿ ಕರ್ನಾಟಕಕ್ಕೆ ವಲಸೆ ಬಂದುಒಂದುವರೆ ಶತಮಾನ ಸಂದಿದೆ. ಆದ್ಯಾಗ್ಯೂತಮ್ಮ ಮೂಲ ಸಂಸ್ಕøತಿ ಹೋಳಿ ಆಚರಣೆಯನ್ನು ಚಾಚು ತಪ್ಪದೇ ಭಯ ಭಕ್ತಿ ಸಂಭ್ರಮದಿಂದಇವತ್ತಿಗೂ ಆಚರಿಸಿಕೊಂಡು ಬರುತಿದ್ದಾರೆ.ಇದಕ್ಕೆಎಲ್ಲರೂತಲೆಬಾಗಬೇಕು.
**********************************************************************

ಬಾಕ್ಸ್‍ಐಟಮ್

ಎನಿದು ಗುಮ್ಟೆ??
ಆವೆ ಮಣ್ಣಿನಿಂದ ತಯಾರಿಸಿದ ವಿಶಿಷ್ಟ ಮಡಿಕೆ. ಒಂದುಕಡೆದೊಡ್ಡದಾದ ಬಾಯಿಯಿದ್ದರೆಇನ್ನೊಂದೆಡೆ ಸಣ್ಣತೂತಿರುತ್ತದೆ. ಉಡ ಇನ್ನಿತರ ಪ್ರಾಣಿಗಳ ಚರ್ಮವನ್ನು ಸುಲಿದು ನಿರ್ದಿಷ್ಟ ಹದ ಬರುವವರೆಗೆ ಬಿಸಿಲಲ್ಲಿ ಒಣಗಿಸಿ ಮಡಕೆಯ ಅಗಲದ ಬಾಯಿ ಇರುವ ಕಡೆ ಬಿಗಿಯಾಗಿ ಎಳೆದು ಕಟ್ಟಲಾಗುತ್ತದೆ. ಇದನ್ನು ನುಡಿಸಿದರೆ ಅದ್ಬುತವಾದ ಶಬ್ದ ಹೊರಡುತ್ತದೆ.ಇದು ಹೋಳಿಯ ವಿಶೇಷ ಸಾಧನ. ಇದುವೆ ಗುಮ್ಟೆ.

ಕುಡುಬಿಗಳ ಸಾಂಪ್ರದಾಯಿಕಉಡುಗೆ‘ಗೇಂಟಿ’!!
ಕುಡುಬಿ ಸಮುದಾಯದ ಹಿರಿಯತಲೆಮಾರಿನ ಮಹಿಳೆಯರು ‘ಗೇಂಟಿ’ ಎಂಬ ಹೆಸರಿಸ ಸಾಂಪ್ರದಯಿಕಉಡುಗೆಯನ್ನುತೊಡುತ್ತಿದ್ದರು. ರವಿಕೆಯನ್ನು ಧರಿಸದೆ ಸೀರೆಯನ್ನು ಮಾತ್ರ ಸುತ್ತಿಕೊಂಡು ಅದರ ಸೆರಗನ್ನು ಕುತ್ತಿಗೆಯ ಹಿಂದಿನಿಂದ ಎಳೆದು ತಂದು ಮುಂದಕ್ಕೆ ಕಟ್ಟಿಕೊಳ್ಳುವ ಸಂಪ್ರದಾಯ. ಕಾಡುಗಳಲ್ಲಿ ಸಿಗುವ ವಿವಿಧ ಕಾಯಿಗಳ ಸರವನ್ನು ಹಾಕಿಕೊಳ್ಳುತ್ತಿದ್ದರು. ಇದೀಗ ವಯಸ್ಸಾದ ಕೆಲವು ಮಹಿಳೆಯರಲ್ಲಿ ಮಾತ್ರ ಈ ಗೇಂಟಿಉಡುಪು ಉಳಿದಿದೆ. ಹೊಸ ತಲೆಮಾರಿನವರು ಬದಲಾಗಿದ್ದಾರೆ.
unnamed (1)

ಗೋವಿ ಕುಡುಬಿಗಳ ಬಗ್ಗೆ ಒಂದಿಷ್ಟು:
ಗೋವಿ ಕುಡುಬಿಗಳು ಕರಾವಳಿ ಕರ್ನಾಟಕದಉಡುಪಿ, ಕುಂದಾಪುರ ಕಾರ್ಕಳ ತಾಲೂಕಿನ ಸುಮಾರು ನಲವತ್ತೆಂಟು ಗ್ರಾಮಗಳಲ್ಲಿ ವಾಸ್ತವ್ಯ ಹೊಂದಿದ್ದಾರೆ. ಕೊಂಕಣಿ ಇವರ ಮಾತೃಭಾಷೆ. ಕೃಷಿ ಕೂಲಿ ಕೆಲಸೆಗಳೆ ಜೀವನಕ್ಕೆಆಧಾರ. ಇವರ ಸಂಖ್ಯೆ ಸುಮಾರು 40 ಸಾವಿರಕ್ಕೂಅಧಿಕವಿದೆ. ಉಡುಪಿ ತಾಲೂಕಿನ ಮಂದಾರ್ತಿ, ಶಿರಿಯಾರ, ಹಿಲಿಯಾಣ ಗ್ರಾಮಗಳಲ್ಲಿ, ಕುಂದಾಪುರ ತಾಲೂಕಿನ ಗೋಳಿಯಂಗಡಿ, ಹಾಲಾಡಿ, ಹುಣ್ಸೆಮಕ್ಕಿ ಭಾಗಗಳಲ್ಲಿ, ಕಾರ್ಕಳ ತಾಲೂಕಿನ ಹೆಬ್ರಿ, ಮುದ್ರಾಡಿ ಪ್ರದೇಶಗಳಲ್ಲಿ ಇವರ ಸಂಖ್ಯಾ ಬಾಹುಳ್ಯ ಇದೆ. ಹೋಳಿ ಆಚರಣೆಯ ಜೊತೆಯಲ್ಲೆಅಷಾಡ, ನಯಚಚ್ಚೆ, ಯುಗಾದಿ, ಜಕ್ಣಿ ಇವರು ಆಚರಿಸುವ ಇನ್ನಿತರ ಪ್ರಮುಖ ಹಬ್ಬ. ಕೊಟ್ಟ ಹೆಣ್ಣುಕುಲದ ಹೊರಗೆ ಎಂಬ ನಂಬುಗೆ ಇವತ್ತಿಗೂಇದೆ. ಪ್ರಸ್ತುತ ಸಂಘಟನೆಯ ಮೂಲಕ ಒಗ್ಗೂಡಿರುವ ಕುಡುಬಿಗಳು ಸಾಮಾಜಿಕವಾಗಿ ಆರ್ಥಿಕವಾಗಿ ಬೆಳೆಯುತ್ತಿರುವುದು ಒಳ್ಳೆಯ ಬೆಳವಣಿಗೆ.

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..