4460

ಅಮರ ಮಧುರ ಪ್ರೇಮ ನೀ ಬಾ ಬೇಗ ಚಂದಮಾಮ

  • By Pavan Shetty
  • Monday, March 7th, 2016
  • Things You Should Know

ಕೆಲವರ ಜೀವನದಲ್ಲಿ ಚಂದಮಾಮ ತೂಗುಯ್ಯಾಲೆ ಆಡಿದರೆ  ಇನ್ನು ಕೆಲವರ ಬಾಳಲ್ಲಿ ಜೂಟಾಟವನ್ನೇ ಆಡುತ್ತಾನೆ. ಇಷ್ಟವಾದ ಹುಡುಗಿಯ ಮೇಲೆ ತುಂಬ ಪ್ರೀತಿಯಾಗಿ ಅದನ್ನು  ಅವಳಿಗೆ ನಿವೇದನೆ ಮಾಡಿದಾಗ ಅವಳು “ಇಲ್ಲಾ ಕಣೋ ನಾವು ಒಳ್ಳೆಯ friends ಆಗಿ  ಇರೋಣ / ನೀನು ನನ್ನ ಅಣ್ಣನ ಹಾಗೆ ” ಅಂತ. ಏನಾದರು ಉತ್ತರ ಬಂದರೆ ಮುಗೀತು ಜಗತ್ತಿಗೆ ಹೊಸ “ದೇವದಾಸನ” ಪ್ರವೇಶವಾಗುತ್ತೆ.

‘ ಭಗ್ನ ಪ್ರೇಮಿಯಾಗುವ ಮುನ್ನ’  wait  a minute sir /  ಒಂದು  ನಿಮಿಷ ನನ್ನ ಮಾತು ಕೇಳಿ

೧. ಜಗತ್ತು  ಸಖತ್ತಾಗಿದೆ ನಿಮ್ಮ ಹುಡುಗಿಂತಾ…..!!!!

So ಬಟ್ಟೆ  pack ಮಾಡಿ. ಜಗತ್ತು  ಸುತ್ತೋಕೆ  ready ಆಗಿ.  ನಿಮ್ಮ ಮನಸ್ಸು ನಿರಾಳವಾಗುತ್ತೆ. ಯಾರಿಗೊತ್ತು ಹೊಸ ಹುಡುಗಿ ಸಿಗಬಹುದು.

11

 

೨. ನಿಮ್ಮ ಆತ್ಮೀಯ ಗೆಳೆಯರ ಜೊತೆ ಸಮಯ ಕಳೆಯಿರಿ.

ನಿಮ್ಮ close friendಗೆ ನಿಮ್ಮನ್ನು ನಿಭಾಯಿಸುವ ಕಲೆ ತಿಳಿದಿರುತ್ತದೆ.

2

೩. ಮಕ್ಕಳ ಜೊತೆ ಕಾಲ ಕಳೆಯಿರಿ.

ಮಕ್ಕಳ ಜೊತೆ ನೀವು ಮಗುವಾಗಿ ಕಳೆದು ಹೋದ ಆ ದಿನಗಳನ್ನು ಮತ್ತೆ ಪಡೆಯಿರಿ

4

೪. ಪುಸ್ತಕಗಳನ್ನು ಓದಿ.

ನಿಮ್ಮ ಮನಸ್ಸು ಬೇರೆ ಕಡೆ  ಹೋಗದಂತೆ ತಡೆಯಲು ಸಹಾಯ ಮಾಡುತ್ತದೆ.

3

೫. ಒಳ್ಳೆಯ ಹಾಡುಗಳನ್ನು ಕೇಳಿ.

ಹಾಡುಗಳನ್ನು ಕೇಳುವುದರಿಂದ ಮನಸ್ಸು ಹಗುರವಾತ್ತದೆ. ಆದರೆ ಯಾವುದೇ ದುಃಖ ತರುವ ಹಾಡುಗಳಿದ್ದರೆ  play list ಇಂದ ತೆಗೆದು ಹಾಕಿ.

12

 

೬. ನಿಮ್ಮ ಗೆಳೆಯರ ಗುಂಪಿನೊಂದಿಗೆ ಕಳೆದು ಹೋದ ದಿನಗಳನ್ನು ಮೆಲಕು ಹಾಕಿ.

ನಿಮ್ಮ ಆದಿನಗಳು ಎಷ್ಟು ಸೂಪರ್ ಅಲ್ವಾ.

6

೭. ನಿಮ್ಮ ಕುಟುಂಬದವರಿಗೆ ಸಹಾಯ ಮಾಡಿ.

ನಿಮ್ಮ ಮನೆಯವರು ನಿಮಗಾಗಿ ಏನೆಲ್ಲಾ ಮಾಡಿದ್ದಾರೆ ಅವರಿಗೂ ನಿಮ್ಮ ಸಹಾಯದ ಅಗತ್ಯವಿರುತ್ತದೆ. ಇನ್ನೊಬ್ಬರಿಗೆ ಸಹಾಯ ಮಾಡಿ ಅದಕ್ಕಿಂತ ಒಳ್ಳೆಯ ಕೆಲಸ ಇನ್ನೊಂದಿಲ್ಲ.

7

೮. ನಿಮ್ಮ love storyಯನ್ನು ಎಳೆ ಎಳೆಯಾಗಿ ಬರೆಯಿರಿ.

ನಿಮ್ಮಲ್ಲಿ ಒಬ್ಬ ಅತ್ಯುತ್ತಮ ಲೇಖಕ ಅಡಗಿರಬಹುದು.

13

೯. ನೋಡು ಮಗಾ ಕ್ರಿಕೆಟಲ್ಲಿ ೧೧ ಮಂದಿ  fielding ಮಾಡುತ್ತಿದ್ದರೂ ೪,೬ ಹೊಡೆಯಲ್ವಾ…..!!!!!!!!!

ಮರಳಿ ಯತ್ನವ ಮಾಡು ಮನುಜ, ಮರಳಿ ಯತ್ನವ ಮಾಡು ಗುರಿ ಮುಟ್ಟುವ ತನಕ. 🙂

8

೧೦. ನಿಮಗೆ ನಿಮ್ಮ “true love” ತಪ್ಪಿತಂತಾ ತುಂಬಾ feeling ಇದ್ದರೆ ಒಂದು ನಾಯಿ ಮರಿ ತಂದು ಸಾಕಿ. ನೀವು ಜೀವನದಲ್ಲಿ ಯಾವತ್ತೂ depressionಗೆ ಹೋಗುವುದಿಲ್ಲ.

9

೧೧.ನಿಮಗೆ ಇಷ್ಟವಾಗುವ ಕೆಲಸದಲ್ಲಿ  ನಿಮ್ಮನ್ನು ನೀವು ತೊಡಗಿಸಿಕೊಳ್ಳಿ.

ನಿಮ್ಮ ಜೀವನದಲ್ಲಿ ಏನಾದರು ಸಾಧಿಸಲು ಇದೇ  ಒಳ್ಳೆಯ ಸಮಯ. ನಿಮ್ಮ ದುಃಖವನ್ನು ಸಾಧಿಸುವ ಛಲವಾಗಿ ಬದಲಿಸಿ ಗುರಿಯತ್ತ ಮುನ್ನುಗ್ಗಿ.

10

ನಿಮ್ಮಲ್ಲಿ ಯಾವುದಾದರೂ ಒಳ್ಳೆಯ ವಿಷಯವಿದ್ದರೆ ನಮ್ಮಂದಿಗೆ  share ಮಾಡಿ localkebal@gmail.com

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..