2051

ಕನ್ನಡಿಗರು ಎಂಬ ಸಹನ ಶಕ್ತಿ

“ಎಲ್ಲಾದರೂ ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು” ಎಂದು ರಾಷ್ಟ್ರಕವಿ ಕುವೆಂಪು ಅವರು ಹೇಳಿದ ಮಾತು, ಯಾವಗಲೂ ಸತ್ಯವಾದುದು. ಇತ್ತೀಚಿನ ದಿನಗಳಲ್ಲಿ ದೇಶದ ನಾನಾ ಭಾಗಗಳಲ್ಲಿ ನಡೆಯುತ್ತಿರುವ ಘಟನೆ, ಪ್ರತಿಭಟನೆ, ಹಿಂಸಾಚಾರಗಳನ್ನು ನೋಡಿದ ಮೇಲಂತೂ, ಈ ಮಾತಿಗೆ ಇನ್ನಷ್ಟು ತೂಕ ಬಂದಿದೆ. ಒಂದು ಕಡೆ ಮೀಸಲಾತಿಯ ಬಗ್ಗೆ ಪ್ರತಿಭಟನೆ ನಡೆಯುತ್ತಿದ್ದರೆ, ಇನ್ನೊಂದು ಕಡೆ ವಾಕ್ ಸ್ವಾತಂತ್ರ್ಯದ ಕುರಿತು ಚರ್ಚೆ. ಮತ್ತೊಂದು ಕಡೆ ಕೋಮು ಗಲಭೆಯಂತ ಘಟನೆಗಳು.

ಇವೆಲ್ಲವುಗಳ ನಡುವೆ ನೀವು ಒಂದು ರಾಜ್ಯ ಹಾಗು ಅಲ್ಲಿಯ ಜನರ ಕುರಿತು ಮಾತನಾಡಲೇಬೇಕು. ಅವರ ಸಹನ ಶಕ್ತಿಗೆ ತಲೆದೂಗಲೇಬೇಕು. ಹೌದು. ಅವರೇ ಕನ್ನಡಿಗರು. ದೇಶದಲ್ಲಿ ಯಾವ ರೀತಿಯ ಘಟನೆಗಳು ನಡೆದು, ದೇಶದ ಅಭದ್ರತೆಗೆ ಕಾರಣವಾದರೂ, ನಾವು ಅಂತ ರೀತಿಯ ಕೆಲಸಕ್ಕೆ ಕೈ ಹಾಕುವುದಿಲ್ಲ. ಯಾವ ರೀತಿಯಿಂದಲೂ ಅಂತಹ ಘಟನೆಗಳಲ್ಲಿ ಭಾಗಿಯಾಗುವುದಿಲ್ಲ. ನಮ್ಮಿಂದ ತೊಂದರೆ ಅನುಭವಿಸಿದವರು ಯಾರು ಇಲ್ಲ. ಎಷ್ಟೋ ಸಮಯದಲ್ಲಿ ನೆರೆ ರಾಜ್ಯಗಳಿಗೆ ಅಭಯ ಹಸ್ತ ನೀಡಿದವರು. ಸಹನಾ ಶಕ್ತಿಯ ಪ್ರತಿರೂಪವೇ ಕನ್ನಡಿಗರು.

ಇನ್ನೂ ಮಾತಾಡಿದರೆ, ನಮ್ಮಲ್ಲಿರುವ ತಾಳ್ಮೆ ಅಥವಾ ಸಹನೆ ಬೇರಾರಲ್ಲೂ ಇಲ್ಲ. ಉದಾಹರಣೆಗೆ ನಮ್ಮನ್ನಾಳುವ ಸರ್ಕಾರವನ್ನು ಪರಿಗಣಿಸಿ. ಇಲ್ಲಿ ಅಭಿವ್ರದ್ದಿಯ ಮಂತ್ರ ಜಪಿಸಿ ಬಂದ ಸರ್ಕಾರಗಳು ಅದೆಷ್ಟೋ, ಆದರೆ ವಾಸ್ತವದಲ್ಲಿ ಅವೆಲ್ಲವೂ ಸುಳ್ಳು. ಇಲ್ಲಿಯ ಸರ್ಕಾರ ಒಂದೇ ಅವಧಿಯಲ್ಲಿ ಮೂರ್ನಾಲ್ಕು ಮುಖ್ಯ ಮಂತ್ರಿಗಳನ್ನು ಬದಲಾಯಿಸಿತು. ಉನ್ನತ ಸ್ತಾನದಲ್ಲಿರುವ ಮಂತ್ರಿಗಳು ಜೈಲು ಪಾಲಾದರು. ಸಮ್ಮಿಶ್ರ ಸರ್ಕಾರ ಜನರ ಸರ್ಕಾರ ಎಂದು ಬಂದ ಸರ್ಕಾರ, ಜನರ ಪರವಾಗಿ ಕೆಲಸ ಮಾಡುವ ಬದಲು ತಾವೇ ಜಗಳವಾಡತೊಡಗಿದರು. ಬಡವರ ಪರ ಎಂದ ಸರ್ಕಾರ, ಅಭಿವ್ರದ್ದಿಯ ಕಡೆಯೇ ಮುಖ ಮಾಡಲಿಲ್ಲ. ಉಚಿತ ಸೌಲಭ್ಯಗಳ ಹೆಸರಲ್ಲಿ, ರಾಜ್ಯವನ್ನು ಸಾಲದ ಸುಳಿಯಲ್ಲಿ ಸಿಲುಕಿಸಿತು.

ಒಟ್ಟಿನಲ್ಲಿ ನಾವು ಎಲ್ಲ ರೀತಿಯ ಸರ್ಕಾರಗಳನ್ನು ನೋಡಿದೆವು. ಆದರೆ ಬೇರೆ ರಾಜ್ಯಗಳಿಗೆ ಹೋಲಿಸಿದರೆ, ನಮ್ಮ ಸ್ಥಿತಿ ಅಷ್ಟೊಂದು ದಯನೀಯವಾಗಿಲ್ಲ. ಯಾವುದೇ ರಾಜ್ಯದ, ಯಾವುದೇ ವ್ಯಕ್ತಿ ಬಂದರೂ, ಅವರಿಗೆ ನಾವು, “ಅತಿಥಿ ದೇವೋ ಭವ” ಎಂಬ ವ್ಯಾಕ್ಯಾನದಂತೆ ಆದರಿಸುತ್ತೇವೆ. ಬಂದವರು ನಮ್ಮ ಸಹನಾ ಶಕ್ತಿಯ ಕಂಡು ನಿಬ್ಬೆರಗಾದರು. ಇನ್ನೂ ಕೆಲವರು ಅದನ್ನು ನಮ್ಮ ದೌರ್ಬಲ್ಯ ಎಂದು ಭಾವಿಸಿದರು. ಯಾರೇ ಬರಲಿ, ಹೋಗಲಿ, ಅಥವಾ ಯಾವ ಪಕ್ಷದ ಸರ್ಕಾರವೇ ಬರಲಿ, ಹೋಗಲಿ ಅಥವಾ ಯಾರೇ ನಮ್ಮನ್ನು ಆಳಲಿ, ಬಿಡಲಿ, ನಮ್ಮ ಜೀವನ ಮಾತ್ರ ನೆಮ್ಮದಿಯಿಂದ ಸಾಗುತ್ತಿದೆ . ಅದಕ್ಕೆ ಮೂಲ ಕಾರಣ ನಮ್ಮ ಸಹನ ಶಕ್ತಿ. ಇಂಥ ನಾಡಲ್ಲಿ ಹುಟ್ಟಿದ ನಾವೇ ಧನ್ಯರಲ್ಲವೇ??

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..