2127

ಟರ್ನಿಂಗ್ ಪಾಯಿಂಟ್

ಅದಾಗಲೇ ಕಷ್ಟ ಪಟ್ಟು ಎಸ್.ಎಸ್.ಎಲ್.ಸಿ ಮುಗುಸಿ ಬಂದವನಿಗೆ ಅದ್ಯಾರದೋ ಇನ್ಫುಲೆನ್ಸ್ ನಲ್ಲಿ ಪಿ.ಯು.ಸಿ ಸೀಟ್ ಕೊಡಿಸಲಾಯಿತು. ಸೀಟ್ ಅಂತು ಸಿಕ್ಕಿತ್ತು ಆದರೆ ವಿದ್ಯೆ ಪಾತಾಳಕ್ಕೆ ಬಿದ್ದಿತು. ಮೊದಲ ಇಂಟರ್ನಲ್ ನಲ್ಲಿ ಮನೆಯ ಡೋರ್ ನಂಬರ್ ನಂತೆ ನನ್ನ ಮಾರ್ಕ್ಸ್ಗಳು. ಅದಕ್ಕೆ ಸರಿಯಾಗಿ ಸಿಕ್ಕ ಫ್ರೇಂಡ್ ಗಳು.

ಇವೆಲ್ಲವನ್ನು ಒಟ್ಟಾಗಿ ಹೇಳಬೇಕಂದರೆ ಪಕ್ಕಾ ಲೋಕಲ್ ಲೋಫರ್ ಆಗಿದ್ದೆ, ನನಗಿಂತ ಜಾಸ್ತಿಯಾಗಿ ನನ್ನ ತಂದೆ ಕಾಲೇಜ್ ಮೆಟ್ಟಿಲು ಹತ್ತಿದ್ದು ಅಷ್ಟೆ ನಿಜ. ಪ್ರತಿ ವಾರಕೊಮ್ಮೆ ಕಾಲೇಜಿನ್ ಸ್ಟಾಫ್ ರೂಮಿನಲ್ಲಿ ವಾರಾವಧಿ ಪೂಜೆ ನನ್ನ ಪಾಲಿಗಿತ್ತು, ಇಷ್ಟೆಲ್ಲಾ ಕಿತಾಪತಿಯಲ್ಲಿ ತೊಡಗುತ್ತಿದ್ದವನಿಗೆ ಅಂದು  ಏನಾಯಿತು ?ಯಾಕಾಯಿತು? ಗೊತ್ತಾಗಲಿಲ್ಲಾ, ಅಧ್ಯಾಪಕರ ಒಂದೇ ಒಂದು ಮಾತಿನಿಂದ ಸಂಪೂರ್ಣ ಬದಲಾದೆ,ಪಾತಾಳದಲ್ಲಿದ್ದ ವಿದ್ಯೆ ಆಕಾಶದಲ್ಲಿ ಹರಡಿತು. ಬಾಡಿ ಬೀಳಲು ಹೋಗಿದ್ದ ಎಲೆಯು ಹೊಸ ಚಿಗುರು ಪಡೆದು ಹಸಿರ ತನ್ನದಾಗಿಸಿಕೊಂಡತೆ ಆಯಿತು.

ಅಂದು ನಡೆದದ್ದು ಇಷ್ಟೇ,ನನ್ನನ್ನು ಯಾವ ಲೆಕ್ಚರ್ಗಳು ಗಣನೆಗೆ ತೆಗೆದುಕೊಳ್ಳದೆ ಹೋದರು, ನಮ್ಮ ಕಾಲೇಜಿ ನ ಹಿಸ್ಟರಿ ಸರ್ ಮಾತ್ರ ನನ್ನ ಮೇಲೆ ಅಪಾರ ನಂಬಿಕೆ ಇಟ್ಟು ಕೊಂಡಿದ್ದರು, ನನಗೆ ಪ್ರತಿ ಬಾರಿ ಕರೆದು ಒಳ್ಳೆಯ ರೀತಿಯಲ್ಲಿ ಬುದ್ದಿ ಹೇಳುತ್ತಿದ್ದರು, ಆದರೆ ನಾನವರ ಮಾತನ್ನು ಜಾಸ್ತಿಯಾಗಿ ಕಿವಿಗೆ ತೆಗೆದುಕೊಳ್ಳುತ್ತಿರಲಿಲ್ಲಾ.

ಅದೊಂದು ದಿನ 2 ನೆ ಇಂಟ್ ರ್ನಲ್ ಸಮಯ, ಪರೀಕ್ಷೆಗು ಮುನ್ನವೆ ಕೆಲವು ಮುಖ್ಯವಾದ ಪ್ರಶ್ನೆಯನ್ನು ಎಲ್ಲರಿಗೂ ಅಧ್ಯಾಪಕರು ಕೊಟ್ಟಿದ್ದರು, ನನಗೆಷ್ಟು ಆಲಾಸ್ಯ ತಲೆ ಹತ್ತಿತ್ತು ಅಂದರೆ ನಾನು ಯಾವುದನ್ನು ಓದದೆ ,ಟೆಕ್ಟ್ ಬುಕ್ನ್ ಕೆಲ ಪೇಜು ಗಳನ್ನು ತುಂಡರಿಸಿ ಪಾಸ್ ಮಾರ್ಕ್ಸ್ ಬರುವಷ್ಟು ಚೀಟಿ ಮಾಡಿಕೊಂಡು  ಎಕ್ಸಾಮ್ ಹಾಲ್ ನ ಒಳ ಹೊರಟ್ಟಿದ್ದೆ.

ಅದೇ ದಿನ ಇನ್ವಿಜಿಲೇಟರ್ ಆಗಿ ಹಿಸ್ಟರಿ  ಸರ್ ಬಂದಿದ್ದರು, ಪ್ರಶ್ನೆ ಪತ್ರಿಕೆ ಕೈಗೆ ಸಿಕ್ಕ ತಕ್ಷಣವೆ ಒಳಗಿಟ್ಟ ಚೀಟಿಗಳ ಒಂದೋಂದಾಗಿಯೆ ಹೊರ ತೆಗೆಯುತ್ತ ಬಂದೆ, ಒಂದು ಪ್ರಶ್ನೆಯು ಬರೆದು ಸಂಪೂರ್ಣವಾಗಿರಲಿಲ್ಲಾ,ನಾನು ಅವರ ಕೈಯಲ್ಲಿ ಸಿಕ್ಕಿಬಿದ್ದೆ, ಅವರು ಯಾವುದೇ ರಂಪಾಟಕ್ಕೆ ಹೋಗದೆ ನನ್ನ ಕಿಸೆಯಲ್ಲಿದ್ದ ಕಳ್ಳ ಚೀಟಿಯು ಕಸದ ಬುಟ್ಟಿಯ ಪಾಲು ಮಾಡಿದರು. ಎಕ್ಸಾಮ್ ಆದ ಬಳಿಕ ಸ್ಟಾಫ್ ರೂಮ್ ಗೆ ಬರ ಹೇಳಿದರು,

ಮನಸಿಗೆ ಬಂದದನ್ನು ಗೀಚಿ ಕೇವಲ ಒಂದು ಗಂಟೆಯಲ್ಲಿ ಎಕ್ಸಾಮ್ ಮುಗಿಸಿ ಹೊರ ಬಂದೆ, ಅವರ ಮಾತಿಗನುಸಾರವಾಗಿ ಸ್ಟಾಫ್ ರೂಮ್ ಗೆ ಭೇಟಿಯಾಗಲು ಹೋದೆ, ಸ್ಟಾಫ್ ರೂಮ್ ಶಾಂತವಾಗಿತ್ತು,ಅವರೊಬ್ಬರನ್ನು ಬಿಟ್ಟರೆ ಬೇರಾರು ಯಾರು ಅಲ್ಲಿ ಇರಲಿಲ್ಲಾ. ಅವರು ನನ್ನ ಬಳಿ ಆಗಲೂ ನಯವಾಗಿ ಮಾತನಾಡಿದರು,ಅವರೆಂದ ಮಾತುಗಳು ಇಷ್ಟೆ,ನನಗೆ ನಿನ್ನ ಮೇಲೆ ಇದ್ದ ನಂಬಿಕೆ ಸಂಪೂರ್ಣ ಇಳಿದು ಹೋಯಿತು, ಇನ್ನೂ ನಾನು ನಿನಗೆ ಬುದ್ದಿ ಹೇಳುದಿಲ್ಲಾ, ಏನಾದರು ಮಾಡಿಕೊಳ್ಳು ನಿನ್ನ ಬದುಕು,ನಿನ್ನ ದಾರಿ, ನಾನಿಷ್ಟು ದಿನ ನಿನ್ನ ಸರಿ ದಾರಿ ತರಲು ಪ್ರಯತ್ನಿಸುತ್ತಿದೆ. ನನಗೀಗ ಅರಿವಾಯಿತು, ಅದಾವುದು ಪ್ರಯೋಜನವಿಲ್ಲವೆಂದು ಹೋಗು ಇಲ್ಲಿಂದ ಎಂದು ಹೇಳಿದರು.

ಅವರ ಮುಖದಲ್ಲಿ ನನ್ನ ಮೇಲೆ ಬೇಸರ ನೆಲೆಹೂರಿತ್ತು. ಕಣ್ಣಲ್ಲಿ ಕಣ್ಣೀರು ಜಾರಲು ಅದಾಗಲೆ ಕ್ಷಣಗಣನೆ ಲೆಕ್ಕ ಹಾಕುತ್ತಿತ್ತು.
ಅದುವರೆಗು ನನ್ನೊಳಗೆ ಭಾವನೆಗಳು ಅಷ್ಟು ಮಾತನಾಡಿರಲಿಲ್ಲಾ, ಆದರೆ ಆ ಒಂದು ದಿನ ನನ್ನೊಳಗೆ ಶುರುವಾದ ಮಾತುಗಳನ್ನು ಭಾವನೆಯು ನಿಲ್ಲಿಸಲಿಲ್ಲಾ, ಅವರೆದು ಅವರ ಕಾಲಿಗೆ ಬಿದ್ದು ಜೋರಾಗಿ ಅತ್ತೆ, ನನ್ನ ದಾರಿಯ ಸರಿ ಮಾಡಿಕೊಳ್ಳುದರ ಕಡೆಗೆ ಗಮನ ಅರಿಸಿದೆ, ಒಂದಂತು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ.

ಅದಾದ ಬಳಿಕ ನಾನು ಇದುವರೆಗು ಯಾವ ಪರೀಕ್ಷೆಯಲ್ಲಿ ನಕಲು ಮಾಡಲಿಲ್ಲಾ, ಆ ಒಂದು ದಿನ ನನ್ನ ಬಾಳಿನಲ್ಲಿ ನಿಜವಾದ ಟರ್ನಿಂಗ್ ಪಾಯಿಂಟ್ ಎಂದರು ತಪ್ಪಾಗದು..

Contributed by : ಪರಮ್ ಭಾರದ್ವಾಜ್ 

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..