1842

ಪ್ರೀತಿಯ ಆಳ ತಿಳಿಯದೆ ಹೋದರೆ…

ವಿದ್ಯಾ final year degree ಓದ್ತಾ ಇದ್ದ ಹುಡುಗಿ, ಫೇಸ್ಬುಕ್ ನಲ್ಲಿ ಪರಿಚಯವಾದ ಹುಡುಗನೊಬ್ಬನ ಪ್ರೀತಿಯಲ್ಲಿ ಬೀಳ್ತಾಳೆ. ಇಬ್ಬರು ಪ್ರಾಣಕ್ಕಿಂತ ಹೆಚ್ಚು ಒಬ್ಬರೊನ್ನೊಬ್ಬರು ಪ್ರೀತಿಸುತ್ತಾ ಇರುತ್ತಾರೆ. ಆದರೆ ಇದ್ದಕ್ಕಿದ್ದ ಹಾಗೆ ಹುಗುಡಿ ಮನೆಯಲ್ಲಿ ಒಪ್ಪುತ್ತಾ ಇಲ್ಲ. ಯಾವ ವಿಷಯದಲ್ಲೂ ನಾವಿಬ್ಬರು ಸರಿ ಸಮಾನರಲ್ಲ, ಈಗಲೇ ಬೇರೆಯಾಗುವುದು ಒಳ್ಳೆಯದು ಅಂತಾಳೆ. ಹುದುದ್ಗ ಪ್ರೀತಿಯನ್ನ ಕಳೆದುಕೊಂಡು ಹುಚ್ಚನಂತಾಗಿ, ಓದನ್ನು ಅರ್ಧಕ್ಕೆ ನಿಲ್ಲಿಸುತ್ತಾನೆ. ಮುಂದೆ…?

ಇಲ್ಲೊಬ್ಬ ಹುಡುಗ ಗೌತಮ್, ತನ್ನ ಓದು, ಪಠ್ಯೇತರ ಚಟುವಟಿಕೆ, ಎಲ್ಲದರಲ್ಲೂ ನಂಬರ್ 1 . ಯಾವುದೋ ಕಾರ್ಯಕ್ರಮದಲ್ಲಿ ಹತ್ತಿರದಿಂದ ನೋಡಿದ ನಂದಿತಾಗೆ, ಮದುವೆಯಾದರೆ ಈ ತರದ ಹುಡುಗನನ್ನೇ ಆಗಬೇಕು ಎನ್ನುವ ಯೋಚನೆ ಮನದಲ್ಲಿ. ಪರಿಚಯ ಕೊನೆಗೆ ಪ್ರೀತಿಯಾಯಿತು. ಎಲ್ಲರ ನೆಚ್ಚಿನ ಗೌತಂ ತನ್ನವನಾದರೆ ತಾನು ಪರಮಸುಖಿ ಅಂದುಕೊಂದಿದ್ದವಳಿಗೆ, ಅವನು ತನ್ನ ಪ್ರೀತಿಯನ್ನು ಬರೀ time pass ಅಂದುಕೊಂಡಿದ್ದ ಎನ್ನುವ ವಿಷಯ ಅರಿವಾಗುವ ಹೊತ್ತಿಗೆ ತಡವಾಗಿತ್ತು. ಇವರ ಪ್ರೀತಿಯ ವಿಷಯ ಎಲ್ಲರಿಗು ತಿಳಿದು, ತಲೆತಗ್ಗಿಸುವಂತಾಗಿತ್ತು. ಜೊತೆಗೆ ಹೃದಯಕ್ಕಾದ ವೇದನೆ ಅಪಾರ.

ಮೇಲಿನ ಎರಡು ಘಟನೆಗಳಲ್ಲಿ ತಪ್ಪು ಯಾರದ್ದು ಅಂತ ವಿಮರ್ಶೆ ಮಾಡಿದರೆ, ಕೆಲವರು ಹುಡುಗನದ್ದು, ಕೆಲವರು ಹುಡುಗಿಯದ್ದು ಎನ್ನಬಹುದು. ಆದರೆ ಇಂದಿನ ದಿನಗಳಲ್ಲಿ ಪ್ರತಿ ಹುಡುಗ, ಹುಡುಗಿಯ ಜೀವನದಲ್ಲಿ ನಡೆಯುವ ವಿಷಯ ಇದು ಅನ್ನೋದಂತು ಸತ್ಯ.

ಪ್ರೀತಿ ಬಹಳ ಸುಂದರವಾದದ್ದು. ಪ್ರೀತಿಯಲ್ಲಿರುವಾಗ ಮನಸ್ಸಿಗೆ ಸುತ್ತಮುತ್ತಲಿನ ಪ್ರಪಂಚದ ಅರಿವೇ ಇರುವುದಿಲ್ಲ. ಪ್ರಥಮ ಪರಿಚಯದ ನೋಟ, ಜನುಮಗಳ ಪ್ರೀತಿ ಹುಟ್ಟಿಬಿಡುತ್ತದೆ ಅನ್ನೋದಾದರೆ ಎಲ್ಲರ ಪ್ರೀತಿಯು ಯಶಸ್ಸನ್ನು ಕಾಣಬೇಕಿತ್ತಲ್ಲವೇ ?

ಪ್ರೀತಿಯಲ್ಲಿ ಬೀಳೋದಕ್ಕಿಂತ ಮೊದಲು ಒಂದು ಕ್ಷಣ ನಿಂತು ಯೋಚಿಸಿದರೆ, ಮನಸ್ಸು ಎಚ್ಚರಿಕೆಯೆ ಹೆಜ್ಜೆಯನ್ನಿಡುವಂತೆ ಹೇಳುತ್ತದೆ, ಮಾತು ಕೇಳಿಸುತ್ತೆ. ಇಷ್ಟವಾದ ಹುಡುಗ, ಹುಡುಗಿ ಪ್ರೀತಿಯ ಭ್ರಮೆಯಲ್ಲಿ positive ವಿಷಯಗಳನ್ನು ನೋಡಿ ಖುಷಿಪಡೋದರ ಜೊತೆಗೆ, ನಿಮ್ಮ ಹುಡುಗ, ಹುಡುಗಿಯ ನೆಗೆಟಿವ್ ವಿಷಯಗಳನ್ನು ನೋಡೋದನ್ನ ಖಂಡಿತಾ ಮರೆಯಬಾರದು. ಯಾಕಂದ್ರೆ ಪ್ರೀತಿಯಲ್ಲಿದ್ದಾಗ ಕಾಣಿಸದ ಋಣಾತ್ಮಕ ಅಂಶಗಳು ಮದುವೆಯ ನಂತರ ಕಾಣಿಸತೊಡಗಿದರೆ ಜೀವನವಿಡೀ ಪಶ್ಚತ್ತಾಪ ತಪ್ಪಿದ್ದಲ್ಲ.

ನಿಮ್ಮ ಪ್ರೀತಿ ಎಷ್ಟು ಗಟ್ಟಿಯಾಗಿದೆ? ಭವಿಷ್ಯದಲ್ಲಿ ಎಂತಹ ಪರಿಸ್ಥಿತಿಯಲ್ಲೂ ಅದು ನಿಮ್ಮನ್ನ ಕಾಪಾಡುತ್ತಾ? ಅನ್ನುವ ಅರಿವು ನಿಮಗಿರಬೇಕು. ಪ್ರೀತಿಯ ಅಡಿಪಾಯ ನಂಬಿಕೆ ವಿಶ್ವಾಸದಿಂದ ಕಟ್ಟಿದಾಗಿದ್ದರೆ ಮಾತ್ರ ಅದು ಮುಂದೆ ಸಧ್ರಢವಾಗಿ ನಿಲ್ಲಬಹುದು. ಪ್ರೀತಿ ಮಾಡುವಾಗ ವಾಸ್ತವದಲ್ಲಿ ಇದ್ದರೆ ಖಂಡಿತಾ ಅಪಾಯವಿಲ್ಲ. ತಪ್ಪನ್ನು ತಪ್ಪೆಂದು ಹೇಳಿಬಿಡುವುದು, ಮುಚ್ಚಿಟ್ಟು ಸಂಬಂಧ ಮುಂದುವರೆಸುವುದಕ್ಕಿಂತ ಒಳ್ಳೆಯದು. ನೀವು ನೀವಾಗಿರಬೇಕು ವಿನಃ ಪ್ರೀತಿಯ ಭ್ರಮೆಯಲ್ಲಿ ನಿಮ್ಮದಲ್ಲದ ವ್ಯಕ್ತಿತ್ವ ತೋರಹೊರಟರೆ ಅದು ಕೆಲ ದಿನಗಳ ಸುಂದರ ಪ್ರಪಂಚವಾಗಿರುವುದೇ ವಿನಃ ವಾಸ್ತವ ಪ್ರಪಂಚವಾಗಿರುವುದಿಲ್ಲ.

ನನಗೆ ಮೋಸ ಆಗೋದಿಲ್ಲ ಅನ್ನುವ ನಂಬಿಕೆ ಪ್ರೀತಿಯಲ್ಲಿ ಇರುತ್ತೆ ನಿಜ. ಆದರೆ ಅದು ಎಸ್ಟೋ ಪ್ರೀತಿಯಲ್ಲಿ ಸುಳ್ಳಾಗಿದೆ. ಅದರ ಬಗ್ಗೆ ಅರ್ಥಮಾಡಿಕೊಳ್ಳುವ ಪ್ರೌಢಿಮೆ ಬೆಳೆಸಿಕೊಳ್ಳದಿದ್ದರೆ, ಪ್ರೀತಿಯಲ್ಲಿ ಸೋಲು ಕಟ್ಟಿಟ್ಟ ಬುತ್ತಿ. ಪ್ರೀತಿಯ ಆಳ ತಿಳಿಯದೆ ಮುಳುಗಿದರೆ, ಏಳುವುದು ಬಹಳ ಕಷ್ಟ. ಈ ಜೀವನದಲ್ಲಿ ಪ್ರೀತಿ ಒಂದು ಭಾಗ. ಆದರೆ ಪ್ರೀತಿಯೇ ಜೀವನ ಎಂದುಕೊಂಡು ಮುಂದಿನ ಪರಿಣಾಮಗಳನ್ನು ಯೋಚಿಸದೆ ಪ್ರೀತಿಯಲ್ಲಿ ಬಿದ್ದರೆ, ಕೊನೆಗೆ ಜೀವನವಿಡೀ ಕೊರಗಬೇಕಾಗಬಹುದು. ಹೆಜ್ಜೆ ಇಡುವ ಮುನ್ನ ಒಮ್ಮೆ ಯೋಚಿಸಿ.

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..