680

10 ಕನಸಲ್ಲಿ ಅರೆರೆರೆರೇ, ಬಳಿ ಬಂದು ಅಲೆಲೆಲೆಲೇ moments of life

  • By Arun Kumar PT
  • Monday, June 12th, 2017
  • Things You Should Know

Life’s a beach, enjoy the waves ಎಂದು ಹೇಳುತ್ತಾರೆ. Forbes ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವವರಿಂದ ಹಿಡಿದು ಬೆಳಿಗ್ಗೆ ತಿಂದರೆ ಮಧ್ಯಾಹ್ನ ಊಟಕ್ಕೆ ಇಲ್ಲದವರವರೆಗೆ ಸಮಸ್ಯೆ ಯಾರಿಗೂ ತಪ್ಪಿದ್ದಲ್ಲ. ಆ ಸಮಸ್ಯೆಗಳ ತೀವ್ರತೆ, ಪರಿಹಾರ ಬೇರೆ ಬೇರೆ ಅಷ್ಟೇ. As you know, ಸಂತೋಷ ದುಃಖಗಳ ಅಲೆಗಳ‌ ಏರಿಳಿತ ಇದ್ದದ್ದೇ. ಖುಷಿಯಾದಾಗ ಅಲೆಲೆಲೆಲೇ ಎಂದು ಹಾಡುತ್ತಾ ಬೇಜಾರಾದಾಗ ಅಯ್ಯಯ್ಯಯ್ಯಯ್ಯೋ ಎಂದು ಗೊಣಗಬೇಕಷ್ಟೇ. ಆರಾಮಾಗಿ ಇರೋಣ ಅಂತ ಡಿಸೈಡ್ ಆಗಿರೋ ನಿಮಗೆ ಅಯ್ಯಯ್ಯಯ್ಯಯ್ಯೋ ಪಾರ್ಟನ್ನು ಬದಿಗಿರಿಸಿ ನಮ್ಮ ಜೀವನದ 10 ಅಲೆಲೆಲೆಲೇ ಕ್ಷಣಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ. ಓದಿ, ನೀವು ಮುಗುಳು ನಗೆ ಚೆಲ್ಲಿದರೆ ಅದೇ ನಮಗೆ ಅಲೆಲೆಲೆಲೇ moment (ಈ ಮಾತು ಚೆನ್ನಾಗಿರುವ ಹೆಣ್ಣ್ ಮಕ್ಕಳಿಗೆ ಮಾತ್ರ ಅನ್ವಯ!)

1. ತಾನೇ ನೆನಪಿಸಿಕೊಂಡು BMTC ಬಸ್ ಕಂಡಕ್ಟರ್ ₹1 ಚಿಲ್ಲರೆ ಹಿಂದಿರುಗಿಸಿದರೆ…1

2. ಅಯ್ಯಯ್ಯೋ, ಈ ಭಾನುವಾರ ಕೂಡ ತಿಂಡಿಗೆ ಉಪ್ಪಿಟ್ಟಾ ಎಂದು ಕಣ್ಣೀರಿಡುವ ಟೈಮಲ್ಲಿ ಮಧ್ಯಾಹ್ನ non veg / ಒಬ್ಬಟ್ಟು ತಯಾರಿ ನೆಡೆಯುತ್ತಿದೆ ಅಂತ ಗೊತ್ತಾದರೆ…

2

3. ಅಪರೂಪಕ್ಕೆ ಒಂದು ದಿನ ಲೇಟಾಗಿ ಆಫೀಸಿಗೆ ಹೋದಾಗ, ಬಾಸ್ ಇನ್ನೂ ಬಂದಿಲ್ಲದಿದ್ದರೆ..

3

4. ಅಮ್ಮ ಮಾಡಿದ ಚಿತ್ರಾನ್ನದಲ್ಲಿ ಎಕಸ್ಟ್ರಾ ಕಡಲೆ ಬೀಜ ಸಿಕ್ಕರೆ…

4

5. ಆಫೀಸಲ್ಲಿ ಕೆಲಸದ ಒತ್ತಡದಲ್ಲಿ ತಲೆ ಇನ್ನೇನು ಸಿಡಿಯುತ್ತೆ ಅನ್ನೋ ಟೈಮಿಗೆ ಸರಿಯಾಗಿ ಟೀ ಕೃಷ್ಣಣ್ಣ ಬಂದರೆ…

5

6. ಅಪರೂಪಕ್ಕೊಮ್ಮೆ ನಾವೇ ಮನೆಯಲ್ಲಿ ಮಾಡಿಕೊಂಡ ಅಡುಗೆ ಆಕಸ್ಮಿಕವಾಗಿ ರುಚಿಯಾಗಿದ್ದರೆ…

6

7. ಈ ಕಂಪನಿಯಲ್ಲಿ future ಇಲ್ಲ, ಕೆಲಸ ಬಿಟ್ಟು ಬೇರೆ ಕಡೆ ಹೋಗೋಣ ಅಂದುಕೊಳ್ಳುವಾಗ future wife ಆಗಬಹುದಾದವಳು ಹೊಸದಾಗಿ appoint ಆಗಿ‌ ನಮ್ಮ ಟೀಮ್-ಗೇ ಬಂದರೆ…

Untitled-2

8. ಹೋಮ್ ವರ್ಕ್ ಮಾಡಿಕೊಂಡು ಬಂದಿಲ್ಲದ ದಿನ, ಮೇಷ್ಟ್ರು ಹೋಮ್ ವರ್ಕ್ ನೋಡುವುದನ್ನು ಮರೆತು ಹೋದರೆ.. (flashback)…

8

9. ಆಫೀಸ್ ಗೆ ಹೋಗುವ ದಾರಿಯಲ್ಲಿ ಎಲ್ಲೂ ರೆಡ್ ಸಿಗ್ನಲ್ ಗೆ ಸಿಕ್ಕಿಕೊಳ್ಳದಿದ್ದರೆ…

9

10. She’s out of my league ಎನ್ನುವ ಮಟ್ಟಿಗಿನ ಹುಡುಗಿಯನ್ನು propose ಮಾಡಿ, ಮನೆಯವರಿಗೆಲ್ಲಾ ಒಪ್ಪಿಸಿ ಮದುವೆಯಾದರೆ…

10

ಸುಮ್ಮನೆ random ಆಗಿ 10 ಅಲೆಲೆಲೆಲೇ moments ಗಳನ್ನು ಇಲ್ಲಿ ಹೇಳಿದ್ದೇವೆ,‌ ನಿಮ್ಮ ಸ್ಕೋರ್ ಎಷ್ಟು ಅಂತ ಕಾಮೆಂಟ್ ಮಾಡಿ!

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..