4983

ರವಿಮಾಮ ನಿರ್ದೇಶನದ 10 ಅತ್ಯುತ್ತಮ ಚಿತ್ರಗಳು

  • By Arun Kumar PT
  • Sunday, July 30th, 2017
  • Things You Should Know

(ಪ್ರೇಮಲೋಕ ಹೊರತುಪಡಿಸಿ)

ಹಾಸ್ಯ ಹುಡುಕಿದರೆ ಎಲ್ಲೆಡೆಯೂ ಸಿಗುತ್ತದೆ ಅಂತ ನಮ್ ಪ್ರಾಣಿ, ಥೋ ಸಾರಿ ಪ್ರಾಣೇಶ್ ಹೇಳುತ್ತಾರೆ. ಆಗ ಹಬ್ಬ ಬಂತು ಅಂದರೆ ಉದಯ ಟಿವಿಯಲ್ಲಿ ಹರಟೆ, ಮತ್ತು ಆಗೊಮ್ಮೆ ಈಗೊಮ್ಮೆ ಉಷೆ ಟಿವಿ‌ (ಈಗಿನ ಉದಯ ಮೂವೀಸ್) ಅಲ್ಲಿ ಯಾವುದಾದರೂ ಕಾಮಿಡಿ ಚಿತ್ರ ಬರುತ್ತಾ ಅಂತ ಕಾಯುತ್ತಾ ಕುಳಿತಿರಬೇಕಿತ್ತು. ಕಾರ್ಯಕ್ರಮ ಪಟ್ಟಿ ಇರಲಿಲ್ಲ, ದಿನಪತ್ರಿಕೆಯಲ್ಲಿ ಬರುತ್ತಿದ್ದ ಮಾಹಿತಿ ಕೂಡ ಅಷ್ಟಕ್ಕಷ್ಟೇ. ಕಟ್ ಮಾಡಿದ್ರೆ 2017, ಮೊಬೈಲ್ ಎಂಬ ಮಾಯಾಜಾಲದ ದೆಸೆಯಿಂದ ಬೆರಳ ತುದಿಯಲ್ಲೇ ಭರಪೂರ ಮನೋರಂಜನೆ ಸಿಗುವಂತಾಗಿದೆ. A without friend tagging us in memes is a day wasted ಎಂಬುವಂತಾಗಿದೆ ನಮ್ ಲೈಫು. ಶನಿವಾರ ಬಂದಿಲ್ಲ ಅಂತ, ಸಂಬಳ ಆಗಿಲ್ಲ ಅಮನತ ಇನ್ನೂ ಹತ್ತು ಹಲವು ಕಾರಣಗಳಿಂದ ಆಗಾಗ ಮಂಡೆ ಬಿಸಿ‌ ಮಾಡಿಕೊಳ್ಳುವ ನಮ್ಮ ದಿನನಿತ್ಯದ ಬದುಕಿನಲ್ಲಿ ಹಾಸ್ಯದ ಮನೋರಂಜನೆಯನ್ನು ಉಣಬಡಿಸುವುದರಲ್ಲಿ ಫೇಸ್ ಬುಕ್ ಮೀಮ್ಸ್ ಗಳ ಪಾತ್ರ ಬಹುದೊಡ್ಡದು. ಅದರಲ್ಲೂ ಮುಖ್ಯವಾಗಿ ಟ್ರಾಲ್ ಹೈಕ್ಳು, ಟ್ರಾಲ್ ಸಂತೆ, ನಮ್ಮ ಕರ್ನಾಟಕ ಮೀಮ್ಸ್, ಟ್ರಾಲ್ ಗುರು, ಇನ್ನಿತರ ಪುಟಗಳ ಕೊಡುಗೆ ಅಭಿನಂದನಾರ್ಹ. ಆ ರೀತಿ ಫೇಸ್‌ಬುಕ್‌ ಟ್ರಾಲ್ ಪುಟಗಳಲ್ಲಿ ಇತ್ತೀಚೆಗೆ ಹರಿದಾಡಿದ ಇಂಟರೆಸ್ಟಿಂಗ್ ಟಾಪಿಕ್ ಅಂದರೆ ರವಿಮಾಮ ಮತ್ತು ಕಾರ್ಯಕ್ರಮಗಳಲ್ಲಿ ಅವರು ಯಾವಾಗಲೂ ಹೇಳುವ “ನಾನು ಪ್ರೇಮಲೋಕ ಮಾಡಿದಾಗ..” ಮಾತು. ಉಸ್ಸಪ್ಪ, ಕೊಂಕಣ ಸುತ್ತಿ, ಟಾಪಿಕ್ ಗೆ ಬರುವ ಹೊತ್ತಿಗೆ ಸಾಕಾಗೋಯ್ತು. ಇರಲಿ ಬಿಡಿ, coming to topic, ಈ ವಿಷಯವಾಗಿ ಎಷ್ಟೆಷ್ಟೋ ಕ್ರಿಯೇಟಿವ್ ಟ್ರಾಲ್ ಗಳು ಬಂದವು. ಅದನ್ನು ಮೆಚ್ಚಿ ಉಲ್ಡಾಡಿಕೊಂಡು ನಕ್ಕವರಲ್ಲಿ ನಾನೂ ಒಬ್ಬ. ಅದಾಗಿ ಸ್ವಲ್ಪ ದಿನ ಆಯಿತು, ಇವತ್ತು ಅಚಾನಕ್ ಆಗಿ ಚಾನಲ್ ಬದಲಾಯಿಸುವ ಕಿಂದರಿ ಜೋಗಿ ಚಿತ್ರದ ‘ಗಂಗೆ ಬಾರೇ, ತುಂಗೆ ಬಾರೇ’ ಹಾಡು ಬರುತ್ತಿತ್ತು. ನಾನು ಚಿಕ್ಕವನಿದ್ದಾಗ ತುಂಬಾ ಎಂಜಾಯ್ ಮಾಡಿಕೊಂಡು ನೋಡಿದ ಚಿತ್ರಗಳಲ್ಲಿ ಕಿಂದರಿ ಜೋಗಿ ಚಿತ್ರವೂ ಒಂದು. ತಕ್ಷಣ ಒಂದು ಯೋಚನೆ ಬಮನತು, ಅರೇ, ಪ್ರೇಮಲೋಕ ಚಿತ್ರವನ್ನು ಹೊರತು ಪಡಿಸಿ ರವಿಚಂದ್ರನ್ ಅಭಿನಯದ ಅದರಲ್ಲೂ ನಿರ್ದೇಶನದ ಕಲಾತ್ಮಕ, ‘ಅಪೂರ್ವ’ ಚಿತ್ರಗಳು ಇವೆಯಲ್ಲಾ, ಅದರ ಬಗ್ಗೆ ಮೆಲುಕು ಹಾಕುವ ಒಂದು ಅಂಕಣ ಬರೆದರೆ ಸೂಪರ್ ಅಲ್ವಾ ಅನಿಸಿತು. ಅದರ ಫಲವೇ ಈ ಅಂಕಣ. ನಿಮ್ಮ ಇಷ್ಟದ ಚಿತ್ರಗಳು ಈ ಪಟ್ಟಿಯಲ್ಲಿ ಎಷ್ಟಿವೆ ಅಂತ ಲೆಕ್ಕ ಮಾಡಿ ಹೇಳಬೇಕು ಆಯ್ತಾ?!? ಈ ಕೆಳಗಿನ ಚಿತ್ರಗಳು ಟಾಪ್ 10 to 1 ಎಂಬ ಕ್ರಮಾಂಕದಲ್ಲಿ ಇಲ್ಲ, ಲೆಕ್ಕ ತಪ್ಪಿ ಹೋಗದಿರಲಿ‌ ಎಂದು ಕ್ರಮ ಸಂಖ್ಯೆ ನಮೂದಿಸಲಾಗಿದೆ ಅಷ್ಟೇ.

10. ಶಾಂತಿ ಕ್ರಾಂತಿ
ಕಥೆಯೇ ನಾಯಕ ಎಂದು ಎಷ್ಟು ಪ್ರತಿಪಾದಿಸಿದರೂ ಈಗಿನ ಸಿನಿಮಾ ತಯಾರಿಕಾ ವೆಚ್ಚದಲ್ಲಿ ಒಂದು ಒಳ್ಳೆಯ ಚಿತ್ರ ಮಾಡಬೇಕು ಅಂದರೆ ಹತ್ತಿರತ್ತಿರ ಒಂದು ಕೋಟಿ ಬೇಕೇ ಬೇಕು. ಆದರೆ ಈ ವಿಷಯದಲ್ಲಿ, ಅದೂ ಆಗಿನ ಕಾಲದಲ್ಲಿ ರವಿಚಂದ್ರನ್ ಅವರು ದುಡ್ಡಿನ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಂಡವರಲ್ಲ. ಅವರಿಗೆ ಚಿತ್ರ ಹೇಗೆ ಬರಬೇಕು ಎಂದು ‘ಕನಸು’ ಕಂಡಿರುತ್ತಾರೋ, ಅದರ ಹಾಗೆಯೇ ಬರಲಿ ಎಂದು ತುಂಬಾ ಶ್ರಮಿಸುವ ಕಲಾವಿದ. ಶಾಂತಿ ಕ್ರಾಂತಿ ಚಿತ್ರದ ವಿಷಯಕ್ಕೆ ಬಂದರೆ, ಒಂದು ಶಾಲೆಯನ್ನು ನೆಡೆಸುವ ಅತ್ಯುನ್ನತ ವ್ಯಕ್ತಿ ಎಷ್ಟು ಚಾಕಚಕ್ಯತೆಯಿಂದ ಅವ್ಯವಹಾರ ಮಾಡಬಹುದು, ಮತ್ತು ಅದನ್ನು ಹಿಡಿಯಲು ಒಬ್ಬ ನಿಷ್ಠಾವಂತ ಪೊಲೀಸ್ ಅಧಿಕಾರಿ ಎಷ್ಟೆಲ್ಲಾ ಶ್ರಮ ಪಡಬೇಕಾಗುತ್ತದೆ, ಯಾರ್ ಯಾರನ್ನೆಲ್ಲಾ ಕಳೆದುಕೊಳ್ಳಬೇಕಾಗುತ್ತದೆ ಎಂಬ ಕಳ್ಳ ಪೊಲೀಸ್ ಕಥೆ ಇದಾದರೂ, ರವಿಮಾಮ ಮೇಕಿಂಗ್ ಗೆ, ಹಂಸಲೇಖ ಅವರ ಸಂಗೀತಕ್ಕಾಗಿ ಈ ಚಿತ್ರ ನೋಡಲೇ ಬೇಕು. ಅನಂತ್ ನಾಗ್ ಅವರ ಅಭಿನಯ, ಗೊತ್ತಲ್ಲಾ, ಮಾತಿಗೆ ನಿಲುಕದ್ದು.

9. ಚೆಲುವ
ಕವಿರತ್ನ ಕಾಳಿದಾಸ ಚಿತ್ರದಲ್ಲಿ ಅಣ್ಣಾವ್ರು ಕನ್ನಡಿಯಲ್ಲಿ ತಮ್ಮನ್ನು ‘ಟಾಪ್ ಟು ಬಾಟಮ್’ ನೋಡಿಕೊಳ್ಳುತ್ತಾ ಎಲ್ಲೆಲ್ಲೂ ನಾನೇ, ಎಲ್ಲೆಲ್ಲೂ ನಾನೇ ಎಂದು ಹಾಡುವ ಕಾಮಿಡಿ ದೃಶ್ಯ ನಿಮಗೆ ಗೊತ್ತೇ ಇದೆ. ಆ ಹಾಡು ಅನ್ವಯವಾಗುವ ಆಗಿನ ಕಾಲಕ್ಕೆ ಹೊಸದೆಂದು ಹೇಳಬಹುದಾದ ಕಥಾ ನಿರೂಪಣೆಯ ಶೈಲಿ:‌ double acting! ಮೋಜುಗಾರ ಸೊಗಸುಗಾರ, ಉಲ್ಟಾ ಪಲ್ಟಾ, ಬಭ್ರುವಾಹನ ಗಳಿಂದ ಇತ್ತೀಚಿನ ಕೋಟಿಗೊಬ್ಬ 2 ವರೆಗೂ ದ್ವಿಪಾತ್ರ ಅಭಿನಯ ಒಂದು ಬಗೆಯ ಬಾಕ್ಸ್ ಆಫೀಸ್ ಹಿಟ್ ಫಾರ್ಮುಲಾ ಎನ್ನಬಹುದು. ಅಂತಹ ಒಂದು ಸಾಧಾರಣ ರಿಮೇಕ್ ಚಿತ್ರ ಚೆಲುವ. ರವಿಮಾಮ ಕಾಮಿಡಿ ಟೈಮಿಂಗ್ ವರ್ಣಿಸಲು ಚೆಲುವ, ನಾನು‌ ನನ್ನ ಹೆಂಡತಿ, ಗೋಪಿ ಕೃಷ್ಣ ಉತ್ತಮ ಉದಾಹರಣೆಗಳು. ಚೆಲುವ ಚಿತ್ರದ ಬೆಸ್ಟ್ ಪಾರ್ಟ್, ದೊಡ್ಡಣ್ಣ ಮತ್ತು ಉಮಾಶ್ರೀ ಜೋಡಿ. ನೋಡಿ, ನಗದಿರಲು ಸಾಧ್ಯವಿಲ್ಲ!

8. ಪುಟ್ನಂಜ
ಇತ್ ಇತ್ಲಾಗೆ, ಮದುವೆ ತೀರಾ ಕಾಂಪ್ಲಿಕೇಟೆಡ್ ವಿಷಯ ಆಗೋಗಿದೆ. ಜಾತಕ, compatibility, ಅಂತಸ್ತು, ಜೋಡಿ, ಇನ್ನೂ ಹಲವು ವಿಚಾರಗಳನ್ನು consider ಮಾಡಿಕೊಂಡು ಮದುವೆ ಮಾಡಿಸಿದರೂ ಸಂಸಾರ ಮುರಿದು ಹೋದ ಎಷ್ಟು ಉದಾಹರಣೆಗಳು ನಮಗೆ ಗೊತ್ತಿಲ್ಲ. Sadly, it’s no ones fault. ನನಗೆ ನೀನು, ನಿನಗೆ ನಾನು, ನಾವಿರೋಣ ಸದಾ ಜೊತೆಯಾಗಿ ಎಂಬ ಮಂತ್ರವನ್ನು ಅನುಸರಿಸಿಕೊಂಡು ಹೋದರೆ ಸಂಸಾರ ಚೆನ್ನಾಗಿ ಇರುತ್ತದೆ ಎನ್ನಬಹುದು. But practically, ವಿಷಯ ಅಷ್ಟು ಸಿಂಪಲ್ ಅಲ್ಲ ಅಂತ ಗೊತ್ತಿರೋರಿಗೋ ಗೊತ್ತು. Leaving complications aside, ದಾಂಪತ್ಯದಲ್ಲಿ ಚಿಕ್ಕ ಪುಟ್ಟ ತೊಂದರೆಗಳು ಎಲ್ಲರ ಬಾಳಲ್ಲೂ ಬಂದು ಹೋಗುತ್ತದೆ, ಅದನ್ನು ತಿದ್ದಿಕೊಂಡು ಮುಂದೆ ಸಾಗಬೇಕು ಎಂಬ ಸಿಂಪಲ್ ವಿಷಯದ ಸುತ್ತ ಪುಟ್ನಂಜ ಚಿತ್ರ ಮಾಡಲಾಗಿದೆ. And again, ಪುಟ್ಟಮಲ್ಲಿಯಾಗಿ ಉಮಾಶ್ರೀ ಅಭಿನಯ, ಅಪೂರ್ವ!

7. ಮಲ್ಲ
To be brutally honest, ಈ ಚಿತ್ರದಲ್ಲಿ ಏನೂ ಇಲ್ಲ. ಆದರೂ ರವಿಮಾಮರನ್ನು ಅಂದು ಬಾಕ್ಸ್ ಆಫೀಸ್ ಸೋಲಿನ ಸರಮಾಲೆಯಿಂದ ಹೊರತಂದು ಅವರ ಸ್ಥಾನ ಗಟ್ಟಿ ಮಾಡಿದ ಕೀರ್ತಿ ಮಲ್ಲ ಚಿತ್ರದ್ದು. ಹೂವಿನ ಹಂಚುವ ಮೂಲಕ ಊರಿಗೇ ಪ್ರೀತಿಯನ್ನು ಉಣಬಡಿಸುವ ಮಲ್ಲ, ಕಳ್ಳಬಡ್ಡಿ ತಯಾರು ಮಾಡಿ ಊರಿನ ಸ್ವಾಸ್ಥ್ಯ ಹದಗೆಡಿಸುವ 5 ಜನ ಸಹೋದರರು, ಅವರಿಗೆ ಒಬ್ಬಳು ತಂಗಿ, ಮಲ್ಲನಿಗೆ ಒಬ್ಬ ಭಕ್ತನ ಹಾಗೆ ಜೊತೆಗಾರ, ತಂದೆಯ ಸಾವಿನ ಸೇಡು ತೀರಿಸಿಕೊಳ್ಳುವ ಮಗ, ಇಂತಹ ಮಾಮೂಲಿ ವಿಷಯವನ್ನೇ ರವಿಚಂದ್ರನ್ ಕಲಾತ್ಮಕವಾಗಿ ಹೇಳಿರುವ ಪರಿ ಚೆಂದ. ಚಿತ್ರದ ಮೊದಲಲ್ಲಿ ‘ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿ, ಮನಸ್ಸನ್ನು ಸ್ವಿಚ್ ಆನ್ ಮಾಡಿ’ ಎಂದು ತೋರಿಸಿದ್ದ ಅಕ್ಷರಗಳು ಇನ್ನೂ ನನ್ನ ಮನಸ್ಸಲ್ಲಿ ಅಚ್ಚಾಗಿದೆ. With Ravi mama in director seat, there’s always new way of story telling.

6. ರಣಧೀರ
If I’m right, ರವಿಚಂದ್ರನ್ ಅಭಿನಯಿಸಿ ನಿರ್ದೇಶಿಸಿದ ಎರಡನೇ ಚಿತ್ರ, ರಣಧೀರ. ಪ್ರೇಮಲೋಕ ಚಿತ್ರ ಇಂಡಸ್ಟ್ರಿ ಹಿಟ್ ಆದ ಮೇಲೆ ರೀಮೇಕ್ ಚಿತ್ರ ಮಾಡ್ತೀರಾ? ಅಂತ ಆಗ ಬಹಳ ಜನ ಕೊಂಕು‌ ಮಾತಾಡಿದ್ದರು. ಅಷ್ಟು ಯಾಕೆ, ಈಗ 5-10 ವರ್ಷಗಳ ಹಿಂದೆ ಕನ್ನಡ ಚಿತ್ರರಂಗದ ಹೆಸರನ್ನು sandalwood ಬದಲಾಗಿ remakewood ಎಂದು ಬದಲಾಯಿಸಿಕೊಳ್ಳಿ ಎಂದು ಇತರ ಭಾಷೆಯ ಹುಡುಗರು ಟ್ರಾಲ್ ಮಾಡುವಷ್ಟು ರಿಮೇಕ್ ಚಿತ್ರಗಳು ಬಂದು ಬಿಟ್ಟವು. Personally, ನಮ್ ಹುಡುಗರ ಹಾಗೆ, ರೀಮೇಕ್ ಅಥವಾ ‘inspired’ ಚಿತ್ರಗಳನ್ನು ನಾನು ತಿರಸ್ಕರಿಸುವುದಿಲ್ಲ. ರೀಮೇಕ್ ಮಾಡಿ, ಆದರೆ ಅಲ್ಲಿ ಕೆಂಪು ಶರ್ಟ್ , ಇಲ್ಲಿ ಕೆಂಪು ಹಾಕುವ ವೀರ ಮದಕರಿ, ಜಾಲಿ ಡೇಸ್ ಥರದ ಡಿಟ್ಟೋ ಡಿಟ್ಟೋ ರಿಮೇಕ್ ಹೊಡಿಬೇಡಿ ಎಂಬುದು ಚಿಕ್ಕ ಕೋರಿಕೆ.‌ Coming to topic, ರೀಮೇಕ್ ಚಿತ್ರದಲ್ಲೂ ‘ಮಚ್ಚ್ ಕೊಡ್ರೋ’ಶೀಲತೆ I mean, ಸೃಜನಶೀಲತೆಯಿಂದ ಹೇಗೆ ಸಿನಿಮಾ ಮಾಡಬಹುದು ಎಂದು ರವಿಮಾಮ ಚಿತ್ರಗಳನ್ನು ನೋಡಿ ಕಲಿಯಬಹುದು. ರಣಧೀರ ಅದಕ್ಕೊಂದು ಉತ್ತಮ ಉದಾಹರಣೆ.

5. ಕಿಂದರಿ ಜೋಗಿ
Pied Piper ಕಥೆಯನ್ನು ಕನ್ನಡದ ನೇಟಿವಿಟಿಗೆ ತಕ್ಕಂತೆ ಅಡ್ಜಸ್ಟ್ ಮಾಡಿ, ದೇವರ ಹೆಸರಿನಲ್ಲಿ ಜಗಳವಾಡುವ ಎರಡು ಗುಂಪಿನ ಸೂಕ್ಷ್ಮ ಕಥೆಯನ್ನು ಮನೋರಂಜಿಸುತ್ತಾ ಹೇಳುವ ಕಥೆ ಕಿಂದರಿ ಜೋಗಿಯಲ್ಲಿದೆ. ಮಕ್ಕಳು ದೇವರು, ದೇವರೂ ಒಂದು‌ ಮಗು ಎಂಬ ಮೈತ್ರಿ ಚಿತ್ರದ ಸಾರ ರವಿಮಾಮ ಆಗಲೇ ಸ್ವಲ್ಪ ವಿಭಿನ್ನವಾಗಿ ಹೇಳಿರುವುದು ವಿಶೇಷ. ಊರಿನ ಜಗಲಿ ಕಟ್ಟೆಯ ಬಳಿ ಯಾರೂ ಇವರ ಮಾತು ಕೇಳಸ ನಾಲ್ಕು ಜನ ಹಿರಿಯರ ಕಾನ್ಸೆಪ್ಟ್ ಕೂಡ ಅತ್ಯಂತ ಚತುರ ಅಳವಡಿಕೆ ಎನ್ನಬಹುದು. Complete commercial entertainer ಚಿತ್ರ: ಕಿಂದರಿ ಜೋಗಿ

4. ಗೋಪಿ ಕೃಷ್ಣ
Another comedy double acting ಸಿನಿಮಾ. ತನ್ನ ತಾಯಿಯ ಆರೋಗ್ಯ ಚಿಕಿತ್ಸೆಗಾಗಿ ಮಗ ಈಸ್-ಲ್ಯಾಂಡ್ ಎಸ್ಟೇಟ್‌, ಛೇ ಅಲ್ಲ‌ ಅಲ್ಲ, Island Estate ಗೆ ರವಿಮಾಮ ಮುದುಕ ಸಂಗೀತ ಗುರುವಿನ ಹಾಗೆ ಎಂಟ್ರಿ ಹೊಡೆದು ಏನೆಲ್ಲಾ ಅವಾಂತರ ಮಾಡುತ್ತಾನೆ ಎಂಬುದು ಚಿತ್ರದ ಸಾರ. ಇದರಲ್ಲಿ double acting ಎಲ್ಲಿಂದ ಬಂತು? ಮುದುಕ ಗುರು ಆಗಿ ಸಂಗೀತ ಕಲಿಸುವ ಹಾಗೆ ಏನೇನೋ ಮಾಡಿ ಕಾಸು ಮಾಡಿಕೊಂಡ, ಅಮ್ಕನ ಚಿಕಿತ್ಸೆಗೆ ದಾರಿ ಆಯಿತು, ತುತ್ತಿನ ಕಥೆ ಆಯಿತು. And Ravichandran is famous for ಮುತ್ತಿನ ಕಥೆಗಳು, ಅದೇ ಇಲ್ಲ ಅಂದರೆ? ಅಲ್ಲಿ ಬಂತು ಎರಡನೇ ಪಾತ್ರ, ಲೋಕೇಶ್ ಅವರ ಕಿಲಾಡಿ‌ ಕಳ್ಳನ ಪಾತ್ರ ಸಖತ್ ಮಜಾ ಇದೆ. ಮತ್ತು, ವಿಶೇಷವಾಗಿ ಚಿತ್ರದಲ್ಲಿ ಒಂದು ಸಸ್ಪೆನ್ಸ್ ಮರ್ಡರ್ ಸ್ಟೋರಿ ಕೂಡ ಇದೆ!

3. ಸಿಪಾಯಿ
There’s a reason why Mahabharata is called as epic! ಅದರಲ್ಲಿ ಎಷ್ಟೆಷ್ಟು ಕಾಂಪ್ಲೆಕ್ಸ್ ವಿಷಯಗಳು ಇವೆ ಎಂದರೆ ಅದನ್ನು ಓದಿರದವರಿಗೆ explain ಮಾಡೋದು ಕಷ್ಟ. ಪ್ರತಿಯೊಂದು ಪಾತ್ರದಿಂದಲೂ ಒಂದೊಂದು ವಿಷಯವನ್ನು ಕಲಿಯಬಹುದಾದ epic ಗ್ರಂಥ ಮಹಾಭಾರತ. ಅದರ ಒಂದು ಭಾಗದಲ್ಲಿ ಕೌರವರ ವಿರುದ್ಧ ಪಗಡೆ ಆಟದಲ್ಲಿ ಪಾಂಡವರು ಸೋತು ಮುಂದೇನಾಗುತ್ತದೆ ಎಂದು‌ ಗೊತ್ತೇ ಇದೆ. ಅದರ ಒಂದು ಕಿರು ಭಾಗವನ್ನು ಹೆಣ್ಣಿನ ಇಚ್ಛೆಯ ವಿರುದ್ಧ ಮದುವೆ ಮಾಡಿಸಿದರೆ ಆಗುವ ತೊಂದರೆಗಳೇನು, ಜೂಜು ಆಟದ ಚಟ ತರುವ ಇಕ್ಕಟ್ಟುಗಳು, ಸೈನಿಕರ ತ್ಯಾಗ ಮತ್ತು ಬಲಿದಾನ ಇವೆಲ್ಲದರ ಅಪೂರ್ವ ಮಿಲನವೇ ಸಿಪಾಯಿ ಚಿತ್ರ.

2. ಕಲಾವಿದ
ನಮ್ ದೇಶದಲ್ಲಿ ಮೂರು ಕ್ಷೇತ್ರಗಳಲ್ಲಿ ಸಿಕ್ಕಾಪಟ್ಟೆ ಕಾಸು ಮತ್ತು ಹೆಸರು ಮಾಡಬಹುದು: ಕ್ರಿಕೆಟ್, ರಾಜಕೀಯ ಮತ್ತು obviously ಸಿನಿಮಾ. ಈ ಮಾಯಾಲೋಕವೇ ಹಾಗೆ, ದೀಪದ ಬೆಳಕಿನ ಹಾಗೆ ದೂರದಿಂದ ಮಿಣ ಮಿಣ ಮಿನುಗುತ್ತಿರುತ್ತದೆ. ಎಷ್ಟೋ ಜನ ಮಿಂಚುಹುಳದಂತೆ ಅದನ್ನು ಬೆನ್ನಟ್ಟಿ ರೆಕ್ಕೆ ಸುಟ್ಟುಕೊಂಡವರಿದ್ದಾರೆ, ದೀಪದ ಮುಂದೆ ನಿಂತು ರಾರಾಜಿಸಿದವರಿದ್ದಾರೆ. ಆದರೆ ದೂರದಿಂದ ನಿಂತು ನೋಡುವ ನಮಗೆ ಎಲ್ಲವೂ ಒಂದು‌ painting ಅಥವಾ ಕಲಾಕೃತಿಯಂತೆ ಕಾಣುತ್ತದೆ, ಆದರೆ ಆ ದೀಪದ ಅಡಿಯಲ್ಲಿ ಇರುವ ಕತ್ತಲಿನ ಬಗ್ಗೆ ನಮಗೆ ತಿಳಿಯುವುದೇ‌ ಇಲ್ಲ. ಹೀಗೆ ಕಲಾ ಲೋಕದ ವಿಭಿನ್ನ ಡಾರ್ಕ್ ಅಂಶಗಳ ಸುತ್ತ ಹೆಣೆದಿರುವ ಪ್ರೇಮಕಥೆ: ಕಲಾವಿದ. And again, ನಾಯಕಿಯ ಕುರುಡು ತಾಯಿ (ಅಥವಾ ಅಜ್ಜಿ?) ಯ ಪಾತ್ರದಲ್ಲಿ ಉಮಾಶ್ರೀ ಅಭಿನಯ ಅತ್ಯಂತ ಸೊಗಸಾಗಿದೆ.

1. ಏಕಾಂಗಿ
Last but not least, ಏಕಾಂಗಿ. ಪ್ರಾಯಶಃ ರವಿಚಂದ್ರನ್ ಸಿನಿಮಾ ಪಯಣದಲ್ಲೇ ಒಂದು ಚಿತ್ರ ಇಷ್ಟು ಕೆಟ್ಟದಾಗಿ ಸೋಲು‌ ಕಂಡಿರಲಿಲ್ಲ‌ (ಅದನ್ನು ಇತ್ತೀಚಿನ ಅಪೂರ್ವ ಚಿತ್ರ ಬ್ರೇಕ್ ಮಾಡಿತು ಬಿಡಿ). ರವಿಚಂದ್ರನ್ ಸಿನಿಮಾ ಮಾಡೋದನ್ನೇ ಮರೆಯು ಹೋಗಿದ್ದಾರೆ, ಸುಮ್ಮನೆ ಆ ಏಕಾಂಗಿ ಮನೆ ಥರ ಸುಮ್ಮನೆ ಒಬ್ಬರೇ ಇದ್ದು ಬಿಟ್ಟರೆ ಇಂಡಸ್ಟ್ರಿಗೆ ಕ್ಷೇಮ ಅಂತ ಬಹಳ ಜನ ಕೊಂಕು ಮಾತಾಡಿದರು. ನಾನು ಇದ್ದದ್ದು ತಾಲ್ಲೂಕು ಸ್ಥಳದಲ್ಲಿ ಆಗಿದ್ದರಿಂದ ಅಲ್ಲಿಗೆ ಏಕಾಂಗಿ ಚಿತ್ರ ಬರುವ ಹೊತ್ತಿಗೆ ಆಗಲೇ ಉದಯ ಟಿವಿಯವರು ಟಿವಿ ರೈಟ್ಸ್ ತೆಗೆದುಕೊಂಡಿದ್ದರು. ಈಗ ಟಿವಿ ರೈಟ್ಸ್, ರೀಮೇಕ್ ರೈಟ್ಸ್ ಸೇಲ್ ಆದರೆ ಒಂಥರಾ ಹೆಮ್ಮೆ ಮತ್ತು ಲಾಭದ ವಿಷಯ, but ಆಗ ಏಕಾಂಗಿ ಚಿತ್ರ ಉದಯ ಟಿವಿಯಲ್ಲಿ ಪ್ರಸಾರವಾಗಿದ್ದು ಒಂಥರಾ ಲೇವಡಿಯ ವಿಷಯವಾಗಿ ಹೋಯ್ತು. ಈ ಚಿತ್ರದ ಕಾನ್ಸೆಪ್ಟ್ practically almost impossible ಆದರೂ ಸದ್ಯದ ಕಾರ್ಪೊರೇಟ್ ಕೆಲಸ, ದಿನನಿತ್ಯದ ಕೆಲಸದ ಒತ್ತಡ ನಮ್ಮನ್ನು ಒಳಗೊಳಗೆ ಏಕಾಂಗಿಯಾಗಿ ಮಾಡಿವೆ ಎಂಬುದು ಸತ್ಯ. ಪ್ರಾಯಶಃ ಏಕಾಂಗಿ ಚಿತ್ರದ ಮೂಲಕ ಸಾಧಾರಣವಾಗಿ ಉಪ್ಪಿ ಸಿನಿಮಾಗಳಲ್ಲಿ ಸಿಗುವ ವೇದಾಂತಿಕ ತತ್ವಗಳನ್ನು ನಾವು ಅರಗಿಸಿಕೊಳ್ಳುವ ಮಟ್ಟಿಗೆ advanced thinking ಮಾಡಲಿಲ್ಲ ನಾವು ಎಂದರೆ ಅತಿಶಯೋಕ್ತಿ ಅಲ್ಲ. Ekangi was a film which was ahead of it’s times ಎಂದು ಮಾತು ಮುಗಿಸಬಹುದು.

ಪ್ರೇಮಲೋಕವನ್ನು ಹೊರತುಪಡಿಸಿ ರವಿಚಂದ್ರನ್ ನಿರ್ದೇಶನದ ಅತ್ಯುತ್ತಮ ಚಿತ್ರಗಳ ಬಗ್ಗೆ‌ ಬರೆಯಬೇಕು ಎಂಬ ಹಂಬಲದಿ‌ ಈ ಅಂಕಣ ಶುರುವಾಗಿ ಮುಗಿದಿದೆ. ನಿಮಗೆ ಇಷ್ಟವಾದ ಚಿತ್ರ ಯಾವುದು? ಮೆಸೇಜ್ ಮಾಡಿ, let’s discuss over a cup of coffee!

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..