8758

10 awkward titles of hindi dubbed kannada movies

ಕನ್ನಡ ಚಿತ್ರಗಳು ಬೇರೆ ಭಾಷೆಗೆ ಡಬ್ ಆಗುವುದು ಸಹಜ . ಹಾಗೆಯೇ ಡಬ್ಬಿಂಗ್ ರೈಟ್ಸ್ ಬೇರೆ ಭಾಷೆಯ ವಿತರಕರಿಗೆ ಕೊಟ್ಟಾಗ ಅದನ್ನು ಕೇವಲ ಬೇರೆ ಭಾಷೆಯ ಟಿವಿ ಯಲ್ಲಿ ಅವರದೇ ಭಾಷೆಯಲ್ಲಿ ಪ್ರದರ್ಶಿಸುವುದಕ್ಕೋಸ್ಕರ ಅಲ್ಲಿ ಇಲ್ಲಿ ನಾಮಕಾವಸ್ಥೆ ಡಬ್ಬಿಂಗ್ ಮಾಡಿ ಅದಕ್ಕೆ ಇಡೋ ಹೆಸರನ್ನು ನೀವು ನೋಡಿದ್ರೆ ಜಾಸ್ತಿ ಇಂಗ್ಲಿಷ್ ಅಲ್ಲೇ ಟಸ್ಸು ಪುಸ್ಸು ಅನ್ನೋವರಾಗಿದ್ದರೆ WT* man ಅಂತೀರಿ ..ಇಲ್ಲಾ ಅಂದ್ರೆ , ಕನ್ನಡ ಭಾಷೆಯನ್ನೂ ಅಚ್ಚು ಕಟ್ಟಾಗಿ ಉಪಯೋಗಿಸುವವರಾಗಿದ್ದರೆ “ಚಿತ್ರವನ್ನು ಬೇರೆ ಭಾಷೆಗೆ ಡಬ್ಬಿಂಗ್ ರೈಟ್ಸ್ ತಗೊಂಡು ಕಿತ್ತೊಗಿರೊ ಟೈಟಲ್ ಕೊಟ್ಟವನ ಮನೆಯವರನ್ನೆಲ್ಲ ನಿಮ್ಮ ಬೈಗುಳಕ್ಕೆ ಬಲಿಕೊಡ್ತೀರಿ “.

ಅಷ್ಟ್ ಒಳ್ಳೆ ಚಿತ್ರವನ್ನು ಕನ್ನಡದಲ್ಲಿ ಮಾಡಿದ್ರು .ಇಲ್ಲಿ ಅದು ಸಕತ್ ಆಗಿತ್ತು ..ಈ ನನ್ ಮಕ್ಳು ಅವರ ಭಾಷೆಗೆ ಎರ್ರಾ ಬಿರ್ರಿ ಡಬ್ಬಿಂಗ್ ಮಾಡಿ ಹಾಳ್ ಮಾಡಿಬಿಟ್ಟಿದ್ದಾರೆ ಅಂತ fans ಬಯ್ಯೋದಂತೂ ಗ್ಯಾರಂಟಿ .. ಅಂತ ಕೆಲವು ಚಿತ್ರಗಳ ಪಟ್ಟಿ ಇಲ್ಲಿದೆ. ಸುಮ್ಮನೆ ಓದಿ ಖುಷಿ ಪಡಿ .. ಮನಸ್ಸಿಗೆ ತಗೋಬೇಡಿ

1.ಪುನೀತ್ ರಾಜಕುಮಾರ್ ಅಭಿನಯದ super duper ಚಿತ್ರ ಅಭಿಯನ್ನು ಹಿಂದಿಗೆ ಡಬ್ ಮಾಡಿದ್ರು .. ಟೈಟಲ್ ಮಾತ್ರ ಖರಾಬ್ ಆಗಿ ಕೊಟ್ಟಿದ್ದಾರೆ .. ದಯವಿಟ್ಟು ನಮ್ಮನ್ನು ಬೈಕೋಬೇಡಿ 😛 😀
kay

YouTube ಅಲ್ಲಿ ಈ ಚಿತ್ರವನ್ನು ಇಲ್ಲಿ ನೋಡಿ : Kayda Kanoon

2.ಇಷ್ಟೇ ಅಲ್ಲ ಸ್ವಾಮಿ .. ಪುನೀತ್ ಅವರ ಇನ್ನೊಂದು ಚಿತ್ರಕ್ಕೆ ಮೇರಿ ಖಾಕಿ ಅಂತ ಹೆಸರಿಟ್ಟ ಬುಟ್ಟವ್ರೆ .. ಮೇರಿ ಖಾಕಿ ..ತೇರಿ ಖಾಕಿ ..ಉಸ್ಕಿ ಖಾಕಿ ..ಇಸ್ಕಿ ಖಾಕಿ .. ಇದನ್ನ ಉತ್ತರ ಕರ್ನಾಟಕದ ಮಂದಿ “ಅಲ್ಲಲೇ ..ಆಕಿ ನನ್ ಕಾಕಿ ಆದಾಳ ..ಅದ್ ಹೆಂಗ್ ನೀನ್ ನಿನ್ ಕಾಕಿ ಅನ್ನಕ್ ಹತ್ತಿಯಲ್ಲೇ *** **(ಹೆವಿ ಬೈಗುಳ ) ” 😀 😛 .. ಅಂದ ಹಾಗೆ ಇದು ವಂಶಿ ಚಿತ್ರದ ಡಬ್ಬಿಂಗ್ ಚಿತ್ರ 

kaki

youtube ಅಲ್ಲಿ ಈ ಚಿತ್ರವನ್ನು ಇಲ್ಲಿ ನೋಡಿ :meri khaaki

3. ದರ್ಶನ ಅಭಿನಯದ ಐರಾವತ ಚಿತ್ರ ಹಿಂದಿ ಗೆ ಡಬ್ ಆಗಿದೆ ..ಟೈಟಲ್ ಮಾತ್ರ ಓದೋಕೆ ಸುಮಾರ್ ಟೈಮ್ ತಗೊಳ್ಳುತ್ತೆ .. ವರ್ಧಿವಾಲ ದಿ ಐರನ್ ಮ್ಯಾನ್ .. ಅಬ್ಬೊ !!!  .. ಎರಡ್ ಫಿಲಂ ಹೆಸರನ್ನ ಒಂದೇ ಫಿಲಂ ಗೆ ಇಟ್ ಬುಟ್ಟವ್ರೆ .ದರ್ಶನ ವಾಯ್ಸ್ ಕೇಳೋಕ್ ಎಷ್ಟ್ ಚೆನ್ನಾಗಿದೆ ಅಲ್ವಾ.. ಇಲ್ಲಿ ಡಬ್ಬಿಂಗ್ ಆರ್ಟಿಸ್ಟ್ ಒಳ್ಳೆ ಡಬ್ಬ ಥರ ವಾಯ್ಸ್ ಕೊಟ್ಟಿದ್ದಾನೆ .. darshan  mannerism  ಅವರ ಡೈಲಾಗ್ ಮೂಲಕನೇ ನೋಡೋಕೆ ನಮ್ಮಂಥಹ ಅಭಿಮಾನಿಗಳು ಕಾಯ್ಕೊಂಡ್ಇರ್ತೀವಿ ..

vardiwala

youtube ಅಲ್ಲಿ ಈ ಚಿತ್ರವನ್ನು ಇಲ್ಲಿ ನೋಡಿ :Vardi Wala the Iron Man

4.ಇನ್ನು ಅಭಿನಯ ಚಕ್ರವರ್ತಿಯ ಚಿತ್ರಕ್ಕೂ ಸಹ ಏನೇನೋ ಟೈಟಲ್ ಕೊಡೋಕೂ ಹಿಂದೆ ಮುಂದೆ ನೋಡಿಲ್ಲ ,  ಸುದೀಪ್ ಅವರ ಫ್ಯಾನ್ಸ್ ಇಷ್ಟ ಪಡೋದೇ ಅವರ ಖಡಕ್ ವಾಯ್ಸ್ ಹಾಗು ಡೈಲಾಗ್ ಡೆಲಿವರಿ ..ಇಲ್ಲಿ ಯಾವನೋ ಚಿಲ್ಟಾರಿ ಪಾಪು ಈ ನಮ್ಮ  ಸುದೀಪ್ ಅಂತಹ ಟಾಪ್ ನಾಯಕನಿಗೆ ವಾಯ್ಸ್ ಕೊಟ್ಟಿದ್ದಾನೆ .. ಡಬ್ಬಿಂಗ್ ಆರ್ಟಿಸ್ಟ್ ನ ಬೈತಿಲ್ಲ ..ಆದರೆ  ….ಚಿತ್ರವನ್ನು ಡಬ್ಬಿಂಗ್ ಮಾಡೋದಿಕ್ಕೆ ರೈಟ್ಸ್ ತಗೊಂಡವರಿಗೆ ಸಿನಿಮಾ ಪ್ರೀತಿ ಸಹ ಇರಬೇಕು . ಇಲ್ಲ ಅಂದ್ರೆ ಕ್ವಾಲಿಟಿ ಹೋಗ್ ಬಿಡುತ್ತೆ .

ek

youtube link: Ek ladaakoo

5.ಪ್ರಜ್ವಲ್ ದೇವರಾಜ್ ಫಿಲಂ ನ ನೀವು ನೋಡಿರ್ತೀರೋ ಬಿಡ್ತೀರೋ ..ಹಿಂದಿ ಗೆ ಕೆಟ್ಟ ಟೈಟಲ್ ಇಟ್ಟುಕೊಂಡು ಅಲ್ಲಿ ಟಿವಿ ಲಿ ಬಿಡುಗಡೆ ಆಗೋದು ಗ್ಯಾರಂಟಿ .. ಇವರ ಫಿಲಂ ಒಂಥರಾ ಟಿವಿ ಗೋಸ್ಕರಾನೇ ಮಾಡಿದ ಹಾಗಿರುತ್ತೆ .. .:P 😀 ಈ ಟೈಟಲ್ ಡಿಸೈನ್ ಮಾಡಿದ ಮಹಾನುಭಾವ ಯಾರಪ್ಪ ..ಫೋಟೋಶಾಪ್ ಟೂಲ್ ನ ಇನ್ನೂ ಕಲಿತ ಇರ್ಬೇಕು ಅನ್ಸುತ್ತೆ  😛 😀

sultanYoutube link : The dangerous sultaan

6.ಕರ್ಮಾ ಕಾಂಡ .. ಡೇರಿಂಗ್ ಪಂಡಿತ್ ಅಂತ ಟೈಟಲ್ ಕೊಟ್ಕೊಂಡು ಬೇರೆ ಚಿತ್ರದ ಫೋಟೋ ತಗೊಂಡು ಮತ್ತೆ ಖಾರಬ್ ಆಗಿ ಫೋಟೋಶಾಪ್ ಮಾಡಿದ್ದಾರೆ .. ಮೇಲಿನ ಪಾಯಿಂಟ್ ಅಲ್ಲಿ ಪ್ರಜ್ವಲ್ ದೇವರಾಜ್ ಅವರ ಚಿತ್ರ ನೋಡಿ ..ಈ ಕೆಳಗಿನ ಚಿತ್ರ ನೋಡಿ 

daring

YouTube link :daring pandit

7.ಈ ಚಿತ್ರದ ಡಬ್ಬಿಂಗ್ ರೈಟ್ಸ್ ತಗೊಂಡಿರೋ ಮಹಾಶಯನಿಗೆ ಏನ್ ಟೈಟಲ್ ಕೊಡೋದು ಅಂತ ತಲೆ ಕೇಟ್ ಹೋಗಿ ಸುದೀಪ್ ಅಂತಾನೆ ಇತ್ತು ಟೈಗರ್ , sunfeast , ಪಾರ್ಲೆ ಜಿ ಅಂತ ಹೆಸರಿಡೋಕ್  ಟ್ರೈ ಮಾಡಿದ್ದಾರೆ ..ಮುಂದೆ ಇವರ ಚಿತ್ರಗಳು ಸುದೀಪ್ ಪಾರ್ಲೆ ಜಿ , ಸುದೀಪ್ 50:50 ,ಸುದೀಪ್ ಕ್ರೀಮ್ ಬಿಸ್ಕೆಟ್ ಅಂತ ಇಟ್ರೂ ಇಡಬಹುದು .ಇದು ಮಾಣಿಕ್ಯ ಚಿತ್ರದ ಹಿಂದಿ ದುಬ್ಬ್ದ್ ಮೂವಿ ..ಆದರೆ ಪೋಸ್ಟರ್ ಅಲ್ಲಿರೋದು ಬಚ್ಚನ್ ಮೂವಿ ದು ಅನ್ನಿಸ್ತಿದೆ 😛 😀

tiger

Youtube link: Sudeep the tiger

8.ದರ್ಶನ ಅಭಿನಯದ ಸುರ್ ಹಿಟ್ ಚಿತ್ರ ಗಜ ಹಿಂದಿಗೆ ಡಬ್ ಆಗಿ ಈ ಥರ ಟೈಟಲ್ ಇಟ್ಕೊಂಡ್ ಬಿಟ್ಟಿದೆ .. ಗಜ್ಜ ಅಂತೆ.. 😀  .. ಓ ದೇವರೇ .. 

gajja

youtube link :Gajja thakur

9.ಓಕೆ ಓಕೆ ಓಕೆ .. ವಾಂಟೆಡ್ ಅನ್ನೋ ಶಬ್ದವನ್ನು  ಯಾವಾಗಪ್ಪ use  ಮಾಡ್ತಾರೆ ? ಬೇರೆಯವರನ್ನು ಹುಡುಕುವಾಗ ಆ ವ್ಯಕ್ತಿ ” ವಾಂಟೆಡ್ ” ಅಂತ ಹಾಕ್ತಾರೆ .. ಇಲ್ಲಿ ನೋಡ್ರಪ್ಪಾ .. ಮೈ ಹೂ ವಾಂಟೆಡ್ ಅಂತೆ  😀 |:P .. ಅಂದ್ರೆ ಏನರ್ಥ ? ..I mean ವಾಟ್ ದ **** 

wanted

youtube link :main hoon wanted

10.ಅದ್ ಹೆಂಗ್ ಗುರು .. ವಜ್ರಕ್ಕೂ , ಬುಲ್ ಗೂ ಏನ್ ಸಂಬಂಧ .. ತಲೆ ಇಲ್ಲ ಬುಡ ಇಲ್ಲ ..ಡಬ್ಬಿಂಗ್ ರೈಟ್ಸ್ ತಗೊಂಡ್ ಒಳ್ಳೊಳ್ಳೆ ಮೂವಿ ನ ತುಕಾಲಿ ಮೂವಿ ಅನ್ನೋ ಥರ ತೋರ್ಸಿ ಸೌತ್ ಇಂಡಿಯನ್ ಸಿನಿಮಾ ಇಂಡಸ್ಟ್ರಿ ನ ಈ ರೀತಿಯಲ್ಲಿ ಟ್ರೊಲ್ ಮಾಡ್ತೀರಲ್ಲೋ ..

vajra

Youtube Link:Vajra the bull

Youtube ಅಲ್ಲಿ  ಸರ್ಚ್ ಮಾಡಿ .. ಇನ್ನೂ ಸಾವಿರಾರು ಕನ್ನಡ ಚಿತ್ರಗಳು ಹಿಂದಿಗೆ ಡಬ್ ಆಗಿ ಕೆಟ್ಟ ಟೈಟಲ್ ಇಟ್ಕೊಂಡು ಸೆಟ್ ಮ್ಯಾಕ್ಸ್ , ಸ್ಟಾರ್ ಗೋಲ್ಡ್ ಅಲ್ಲಿ ಅವಾಗಾವಾಗ ಬರ್ತಾನೆ ಇರ್ತಾವೆ ..

ಡಬ್ಬಿಂಗ್ ರೈಟ್ಸ್ ಕೊಡೋವಾಗ ಕ್ವಾಲಿಟಿ ಹಾಳಾಗದೆ ಇರೋ ರೀತಿ ಮ್ಯಾನೇಜ್ ಮಾಡೋಕೆ ಚಿತ್ರದ ಮೂಲ ನಿರ್ಮಾಪಕರು ಅಗ್ರಿಮೆಂಟ್ ಮಾಡಿಸ್ಕೊಳ್ಳಬೇಕು .. ನೀವು ಪ್ರೊಡ್ಯೂಸ್ ಮಾಡೋ ಚಿತ್ರ ನಿಮ್ಮ ಮಗು ಇದ್ದ ಹಾಗೆ ..ನಿಮ್ಮ ಮಗುವಿಗೆ ಕೋಯಾ , ಗಿರಿಗಿಟ್ಲೆ , ಮೊಟ್ಟೆ , ಕರಿ ಹಂದಿ ಅಂತ ಬೇರೆಯವರು ಕರೆದ್ರೆ ಹೆಂಗ್ ಉರಿಯಲ್ಲ ..ಅಲ್ವಾ.. ಇದನ್ನೂ ಅದೇ ಥರ ನೋಡ್ಕೊಳ್ಳಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..