701

10 ನಗುವುದೋ ಅಳುವುದೋ moments of Life

  • By Arun Kumar PT
  • Saturday, April 21st, 2018
  • Things You Should Know

1. ಕಂಡಕ್ಟರ್ ಚಿಲ್ಲರೆ ಏನೋ‌ ಕೊಟ್ಟರು, ಆದರೆ ಇನ್ನೊಬ್ಬರಿಗೆ ಸೇರಿಸಿ ₹2 ಕೊಟ್ಟರು!

2. ಬ್ರೇಕಪ್ ಆದ‌ ಮೇಲೆ ಬಹಳ ದಿನಕ್ಕೆ ಇವತ್ತು ಅವಳು unblock ಮಾಡಿದಳು. DP ನೋಡಿ ಮೈ ಮರೆಯುವ ಹೊತ್ತಿಗೆ ಮದುವೆ ಕಾರ್ಡು ಫೋಟೋ ಬರೋದಾ?!?

3. Most Expected Movie ಅಂತ ಜನ First Day First Show ನೇ ಥಿಯೇಟರ್ ಗೆ ನುಗ್ಗಿದರು, ಮಧ್ಯಾಹ್ನದೊಳಗೆ ಡಬ್ಬಾ ಫಿಲಂ ಅಂತ ಸಾಲು ಸಾಲು ರಿವ್ಯೂ ಕೊಡೋಡಾ?!?

4. ಹೊಸದಾಗಿ ಮದುವೆ ಆಯ್ತು, ಅವಳಿಗೆ ತುಂಬಾ ಚೆನ್ನಾಗಿ ಅಡುಗೆ ಕೂಡ ಮಾಡ್ತಾಳೆ, ಬ್ರೆಡ್ ಜ್ಯಾಮ್ ಮತ್ತು ಮ್ಯಾಗಿ ಮಾತ್ರ!! ಹೇ ದೇವಾ!!

5. ಕೊನೆಗೂ ಅಪ್ಪ ಅಮ್ಮ ಪೇಟೆ ಕಡೆ ಹೋದರು, f TV ನೋಡೋಣ ಅಂತ ಕುಳಿತರೆ ಕರೆಂಟ್ ಹೋಗಬೇಕಾ, ಸಾವು ಮಾರ್ರೇ! #90sKidsKashtagalu

6. ಹೊಸ ಕಂಪನಿ, ಜಾಸ್ತಿ ಸಂಬಳ!
4ನೇ ಮಹಡಿ, ಲಿಫ್ಟ್ ಇಲ್ಲ!

7. ಹೆಂಡತಿ ಸೀರೆ ಶಾಪಿಂಗ್ ಏನೋ ಬೇಗ ಮುಗಿಸಿದಳು, ಬಜೆಟ್ ಮೇಲೆ ₹6,000/- ಜಾಸ್ತಿ ಹೋಯ್ತು!

8. ಆಫೀಸ್ ಗೆ ಬೇಗ ಬಂದು ಬಾಸ್ ಭೇಷ್ ಅಂತಾರೆ ಅಂದ್ಕೊಂಡ್ರೆ, ಇವತ್ತೇ ಅವರು ಲೇಟಾಗಿ ಬರಬೇಕಾ?! Too much ಅನ್ಯಾಯ, ನಾನು‌ ಇದನ್ನು ಖಂಡಿಸ್ತೀನಿ.

9. ಹೃದಯ ಗೆದ್ದ ಗೆಳೆಯ, ಕುಚಿಕ್ಕು ಮದುವೆ ಆಯ್ತು! ಇನ್ನು ಮೇಲೆ ಮೊದಲಿನಷ್ಟು ಜಾಸ್ತಿ ಭೇಟಿ‌ ಆಗೋಕೆ ಆಗಲ್ಲ.

10. ಹೇಳಿದ ಜಾಗಕ್ಕೆ ಆಟೋ ಗುಂಡ ಮೊದಲ ಮಾತಲ್ಲೇ ಒಪ್ಪಿಕೊಂಡರು, ಆದರೆ ಮೀಟರ್ ಮೇಲೆ wonandaaff!

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..