2715

ಈ ಹತ್ತು ಸೂಪರ್ ಹಿಟ್ ಹಾಲಿವುಡ್ ಚಿತ್ರಗಳು ಕನ್ನಡಕ್ಕೆ ಡಬ್ ಆದರೆ ?

  • By Guest Writer
  • Tuesday, April 4th, 2017
  • Things You Should Know

ಇತ್ತೀಚಿಗೆ ಕನ್ನಡ ಸಿನಿಮಾ ಲೋಖದಲ್ಲಿ ಡಬ್ಬಿಂಗ್ ವಿಷಯದ ಬಗ್ಗೆ ಚರ್ಚೆ . ಡಬ್ಬಿಂಗ್ ಇಂದ ಅನುಕೂಲ ಅನಾನುಕೂಲ ಎರಡೂ ಇದೆ .. ಎಲ್ಲಕ್ಕಿಂತ ಮುಖ್ಯವಾಗಿ ಸ್ವತಂತ್ರ ದೇಶದಲ್ಲಿ ಎಲ್ಲರಿಗೂ ತಮಗೆ ಏನು ಬೇಕೋ ಅದನ್ನು ಕಾನೂನಾತ್ಮಕ ಪರಿಧಿಯಲ್ಲಿ ಪಡೆದುಕೊಳ್ಳುವ ಅವಕಾಶವಿದೆ ..ಇತ್ತೀಚಿಗೆ ತಮಿಳಿನ ಎನ್ನೈ ಅರಿಂದಾಲ್ ಎನ್ನುವ ಚಿತ್ರ ಕನ್ನಡಕ್ಕೆ ಡಬ್ ಆಗಿ ಬಿಡುಗಡೆ ಆಗಿತ್ತು .. ಡಬ್ಬಿಂಗ್ ಮಾತ್ರ ಕೆಟ್ಟದಾಗಿತ್ತು ..ಜನ ಸಾರ ಸಗಟಾಗಿ ತಿರಸ್ಕರಿಸಿದ್ದಾರೆ ..ಇದು ಸಾಮಾನ್ಯ ವಿಷಯ ಅಲ್ಲವೇ? ಒಳ್ಳೆಯ ಕನ್ನಡ ಚಿತ್ರಗಳನ್ನು ಹೊಸ ಮುಖವಾದರೂ ಗೆಲ್ಲಿಸಿದ ಬುದ್ದಿವಂತ ಕನ್ನಡಿಗರು ನಾವು .. ಅದೇ ರೀತಿ ಡಬ್ ಆದ ಸಿನಿಮಾ ಕೆಟ್ಟದಾಗಿದ್ರೆ TV ಲಿ ಬಿಟ್ಟಿ ಬಂದ್ರೂ ನೋಡೋಲ್ಲ ..ಸ್ಪೈಡರ್ ಮ್ಯಾನ್ ಹೋಂ ಕಮಿಂಗ್ ಎನ್ನುವ ಚಿತ್ರದ ಕನ್ನಡ ಅವತರಣಿಕೆಯಾ ಟ್ರೈಲರ್ ಬಿಡುಗಡೆ ಆಗಿದೆ .. ಖುಷಿಯ ವಿಚಾರ ಏನೇನಂದರೆ sony  pictures  ಅಂತಹ ಧೈತ್ಯ ನಿರ್ಮಾಣ ಸಂಸ್ಥೆ ಕನ್ನಡ ಪ್ರಾದೇಶಿಕ ಭಾಷೆಯಲ್ಲೂ ಇನ್ವೆಸ್ಟ್ ಈ ರೀತಿಯಲ್ಲಿ ಮಾಡಲು ಹೊರಟಿರುವುದು ..ಇಲ್ಲಿ ಡಬ್ಬಿಂಗ್ ಮುಖ್ಯ ಅಲ್ಲ.. ಮುಂದೊಂದು ದಿನ ಇಂತಹ ದೊಡ್ಡ ನಿರ್ಮಾಣ ಸಂಸ್ಥೆಗಳು ಕನ್ನಡದಲ್ಲೇ ವರ್ಲ್ಡ್ ಕ್ಲಾಸ್ ಚಿತ್ರಗಳನ್ನು ನಿರ್ಮಾಣ ಮಾಡಲು ಹೂಡಿಕೆ ಮಾಡಲು ಬರುತ್ತವೆ ..ನಮ್ಮ ಭಾಷೆಯಲ್ಲೇ , ನಮ್ಮ ದುಡ್ಡಿನಲ್ಲಿ ಮನೋರಂಜನೆ ..ಆದರೆ ಸ್ಪೈಡರ್ಮ್ಯಾನ್ homecoming  ಚಿತ್ರದ ಟ್ರೈಲರ್ ಡಬ್ಬ ಥರ ಇದೆ .. ಡಬ್ಬಿಂಗ್ ಮಾಡಿದವರು ಟಿವಿ ಲಿ ಬರುವ advertisement  ಗೆ ವಾಯ್ಸ್ ಕೊಡುವವವರು .. ಇಲ್ಲಿ ಡಬ್ಬಿಂಗ್ ಎಂದರೆ ಗೂಗಲ್ translator  ಥರ ಸಂಪೂರ್ಣವಾಗಿ ಕನ್ನಡೀಕರಣಗೊಳಿಸುವುದಲ್ಲ .. ಭಾಷೆ , ಪ್ರದೇಶಕ್ಕೆ ತಕ್ಕ ಹಾಗೆ ಭಾವನಾತ್ಮಕವಾಗಿ ಡಬ್ ಮಾಡಿದರೆ ಜನ ನೋಡಬಹುದು ..ಇಲ್ಲ ಅಂದ್ರೆ ಫುಲ್ ಹೊಗೆ .. ನಾವು ಇಲ್ಲಿ 10  ಅದ್ಭುತ ಹಾಲಿವುಡ್ ಚಿತ್ರಗಳು ಕನ್ನಡಕ್ಕೆ ಡಬ್ ಆದರೆ ಅವುಗಳಲ್ಲಿರುವ ಫೇಮಸ್ ಡೈಲಾಗ್ ಹೀಗೆ ಪ್ರಾದೇಶಿಕರಣಗೊಳಿಸಬಹುದು ಎಂಬುದನ್ನು ತೋರಿಸಿದ್ದೇವೆ .. ಶುರು ಮಾಡೋಣ್ವಾ ?

1. Taken:
I don’t know who you are. I don’t know what you want. If you are looking for ransom, I can tell you I don’t have money. But what I do have are a very particular set of skills, skills I have acquired over a very long career. Skills that make me a nightmare for people like you. If you let my daughter go now, that’ll be the end of it. I will not look for you, I will not pursue you. But if you don’t, I will look for you, I will find you, and I will kill you.

ನನಗೆ ಗೊತ್ತಿಲ್ಲ ನೀನು ಯಾರು ಅಂತ! ಯಾವ ಊರು ಅಂತ ಕೂಡ ಗೊತ್ತಿಲ್ಲ. ನಿನಗೆ ದುಡ್ಡು ಏನಾದರೂ ಬೇಕಿದ್ರೆ, ಅದಕ್ಕೆ ಸೂಕ್ತ ವ್ಯಕ್ತಿ ನಾನಲ್ಲ. ಗೊತ್ತಿದ್ದೋ ಗೊತ್ತಿಲ್ಲದೆಯೋ ನನ್ನ ಮುದ್ದು‌ ಮಗಳನ್ನು ನೀನು ಕಿಡ್ನಾಪ್ ಮಾಡಿದ್ದೀಯಾ. ನೀನು ಯಾರೇ ಆಗಿರು, ಎಲ್ಲೇ ಅಡಗಿರು, ಹುಡುಕ್ಕಂಡ್ ಬಂದು ಹುಟ್ಟಲಿಲ್ಲ ಅನಿಸಿಬಿಡ್ತೀನಿ, ಹುಷಾರ್!

1

2.The Dark Knight .
You see, madness, as you know, is like gravity. All it takes is a little push!
ಒಂದು‌ ವಿಷಯ ಹೇಳಲಾ ನಿನಗೆ, ಪುಟ್ಟ, ಈ ಹುಚ್ಚು ಅಂತ ಏನ್ ಹೇಳ್ತೀರಾ, ಅದು ತಲೆಗೆ ಹಿಡಿಯೋದಷ್ಟೇ ಲೇಟು,
ಒಂದು ಸಲ ಹಿಡಿದ ಮೇಲೆ, ಶುರುವಾಗುತ್ತೆ ಪುಟ್ಟ, ಅಸಲಿ ಆಟ!

2
3.God father:
I’m gonna make him an offer he can’t refuse

ಅವನು ಎಷ್ಟೇ ಯೋಚನೆ ಮಾಡಿದರೂ ಊಹ್ಞೂಂ ಅನ್ನಬಾರದು, ಅಂತ ಆಫರ್ ಕೊಡ್ತೀನಿ ನಾನು, ನೋಡ್ತಾ ಇರು!

3
4.Titanic

ಚಿನ್ನು, ಒಂದು ವಿಷಯ ಹೇಳಲಾ ನಿನಗೆ, ನಾನು ತುಂಬಾ ಅಂದರೆ ತುಂಬಾ ಅದೃಷ್ಟವಂತ. ನೀವು ನಂಬೋದಿಲ್ಲ, ಇಂತಹ ದೊಡ್ಡ ಟೈಟಾನಿಕ್ ಹಡಗು ಹತ್ತೋದು ನಮ್ಮಂಥ ಬಡವರಿಗೆ ಕನಸಲ್ಲೂ ಸಾಧ್ಯ ಇಲ್ಲ. ಅಂಥ ಟೈಟಾನಿಕ್ ಟಿಕೆಟ್ ನಾನು ಗೆದ್ದಾಗ ನನಗೋ‌ ಸಿಕ್ಕಾಪಟ್ಟೆ ಖುಷಿ ಆಗಿತ್ತು. ಆದರೆ ಈಗ ಅನಿಸ್ತಿದೆ, ಆ ಟಿಕೆಟ್ ಗಿಂದ ನಿಮ್ಮ ಹೃದಯ ಗೆದ್ನಲ್ಲಾ, ಅದೇ ನನಗೆ ದೊಡ್ಡದು

5

5.Pirates of the Caribbean
ಬೆಲೆ ಬಾಳುವ ಸಂಪತ್ತು ಅಂದರೆ ಬಂಗಾರ ಮುತ್ತು ವಜ್ರಗಳೇ ಆಗಬೇಕಿಲ್ಲ ಗೆಳೆಯಾ

7

6 Deadpool
You don’t need to be a superhero, to be get a girl
The right girl will bring out the superhero in you

ಸೂಪರ್ ಹೀರೋ ಆದರೆ ಹುಡುಗಿ ಸಿಕ್ತಾಳೋ‌ ಇಲ್ವೋ ಹೇಳೋಕಾಗಲ್ಲ, ಆದರೆ ಸರಿಯಾದ ಹುಡುಗಿ ಜೊತೆ ಇದ್ದರೆ ಕಾಣದ ಸೂಪರ್ ಪವರ್ ಸದಾ ನಿನ್ನೊಂದಿರುತ್ತದೆ

10

7 Gone Girl
When two people love each other, and can’t make that work, that’s the real tragedy

ಇಬ್ಬರು ಪ್ರೀತಿಸಿ ಒಂದಾಗಿ ಬಾಳೋಕೆ ಆಗದೇ ಇರೋದಕ್ಕಿಂತ ದೊಡ್ಡ ದುರಂತ ಇನ್ನೊಂದಿಲ್ಲ ಚಿನ್ನು

4
8. The Shawshank Redemption
All men die, not everyone truly lives

ಮನುಷ್ಯ ಅಂದ ಮೇಲೆ ಇವತ್ತಲ್ಲ ನಾಳೆ ಸಾಯೋರೆ ಎಲ್ಲಾರೂ, ಆದರೆ ಸಾಯುವ ಮುನ್ನ ಜೀವಿಸೋರೆ ಕಮ್ಮಿ ನಮ್ಮಲ್ಲಿ

6
9. Forrest Gump
Genny, I may not be a smart man, but I know what love is

ಜ್ಯೋತಿ, ನಾನು ಬುದ್ಧಿವಂತ ಅಲ್ಲ, ಆ ವಿಷಯ ನನಗೂ ಗೊತ್ತು. ಆದರೆ ನನಗೆ ಪ್ರೀತಿ‌ ಅಂದರೇನು ಅಂತ ಇನ್ನೂ ಚೆನ್ನಾಗಿ ಗೊತ್ತು.

8

10. Fight Club

It’s only after we’ve lost everything, we’re free to do anything

ಎಲ್ಲವನ್ನೂ ಕಳೆದುಕೊಂಡ ನಂತರ ಮಾತ್ರ ಏನು ಬೇಕಾದರೂ ಮಾಡಿ ಬಿಸಾಕುವ ಕೆಟ್ಟ ಧೈರ್ಯ ಬರೋದು.

9

ಕೊನೆಯದಾಗಿ , ಸ್ಪೈಡರ್ ಮ್ಯಾನ್ homecoming  ಚಿತ್ರದ ಕನ್ನಡ ಟ್ರೈಲರ್ ಇಲ್ಲಿದೆ ನೋಡಿ ..

This video belongs to Sony Pictures India
This video belongs to Sony Pictures India.We have just Shared their link on our website.All rights reserved by Sony Pictures India

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..