3185

ಕನ್ನಡ ಚಿತ್ರಗಳ ಈ ಹತ್ತು ಮುತ್ತಿನಂಥ ಡೈಲಾಗುಗಳು ನಿಮ್ಮ ದಿನವನ್ನು ಇನ್ನಷ್ಟು ಚೆನ್ನಾಗಿ ಕಳೆಯಲು ಪ್ರೇರೇಪಿಸಬಲ್ಲುದು

  • By Arun Kumar PT
  • Thursday, November 30th, 2017
  • Things You Should Know

1. ಜೋಗಿ
ಹುಟ್ಟು ದಾನ ಕಣೋ, ಸಾವು‌ ಗುಟ್ಟು ಕಣೋ, ನಾನು ಅನ್ನೋನು ನಾಳೆ ಮಣ್ಣೋ

2. ಡ್ರಾಮಾ
ಪರಪಂಚದಲ್ಲಿ‌ ಮನುಷ್ಯ ತುಂಬಾ ಸಣ್ಣ ಆಸಾಮಿ,
ಅವನಿರದೇ ಹೋದರೂನೂ ತಿರುಗುತ್ತಪ್ಪ ಈ ಭೂಮಿ

3. ಗೋಧಿ ಬಣ್ಣ ಸಾಧಾರಣ ಮೈಕಟ್ಟು
ಬದುಕೇ ಹೆಣೆದ ಸಂಸಾರ, ಹರುಷವೇ ಇದರ ಆಧಾರ
ಯಾರಾದರೇನೂ, ಹಿಡಿ‌ ಪ್ರೀತಿಯನ್ನು, ಕೊಡುವಂಥ ಮನೆಯೇ ಮಂದಿರ

4. ಎ
ದುಕ್ ಇಲ್ಲ ದಾಲ್ ಇಲ್ಲ
ನಮಗದ್ರಾಗ್ ಪಾಲಿಲ್ಲ
ನಾವ್ ಕಂಡಿದ್ದ್ ನಾಲ್ಕ್ಅಂಚವಂಚ
ನಮ್ಮಷ್ಟಕ್ ನಾವಾಗಿ ಇದ್ದಿದ್ದ್ರಲ್ ಹಾಯಾಗಿ
ಬಾಳೋದು ರತ್ನನ್ ಪರ್ಪಂಚ

5. ಕೆಂಡಸಂಪಿಗೆ
ಎರಡೂ ಗೆರೆಗಳ ನಡುವೆ ಗೆರೆಯನಳೆದರೆ ದಾರಿ
ನೂರು ಗುರಿಗಳ ನಡುವೆ ಅಡಗಿ ಕೂತಿದೆ ಗೋರಿ;
ಮುಗಿಯುತೆನ್ನುವ ಪಯಣ ಇಲ್ಲ ಎಲ್ಲೂ,
ಆದಿ ಅಂತ್ಯಗಳೆರಡು ಸುಳ್ಳೇ ಸುಳ್ಳು

6. ಪರಮಾತ್ಮ
ನಮ್ ಎಲ್ಲರ ಒಳಗೂ ಒಬ್ಬ ಪರಮಾತ್ಮ ಇರ್ತಾನೆ; ಅವನು ಹೇಳ್ತಾನೆ, ಇದು ಸರಿ, ಇದು ತಪ್ಪು, ಅದು ಮಾಡು, ಇದು ಮಾಡಬೇಡ, ಆ ಪರಮಾತ್ಮನ ಮಾತು ಕೇಳಿದವನು ಏನಾದರೂ ಕಡಿದು ಕಟ್ಟೆ ಹಾಕ್ತಾನೆ.

7. ನೋಡಿ ಸ್ವಾಮಿ ನಾವಿರೋದು ಹೀಗೆ
ಎಲ್ಲಿ ಜೀವನ ನೆಡೆವುದೋ, ಅದೇ ನಮ್ಮೂರು;
ಯಾರು ಸ್ನೇಹದಿ ಬರುವರೋ, ಅವರೇ ನಮ್ಮೋರು

8. ಚೌಕ
ಎಲ್ಲರೊಳಗ ದೇವ್ರವನಲ್ಲಾ,
ಪ್ರೀತಿಸಿ‌ ನೋಡೋ ಕಾಣ್ತಾನಲ್ಲ

9. ಹೊಸ ಬೆಳಕು
ವಿಧಿಯಾಟವೇನು, ಬಲ್ಲವರು ಯಾರು
ಮುಂದೇನು‌ ಎಂದು ಹೇಳುವರು ಯಾರು;
ಬರುವುದು ಬರಲೆಂದು, ನಗು ನಗುತಾ ಬಾಳದೇ,
ನಿರಾಸೆ, ವಿಷಾದ, ಇದೇಕೆ? ಇದೇಕೆ?

10. ಜಿಮ್ಮೀ ಗಲ್ಲು
ಹರಿಯೋ ನದಿಯು ಒಂದೇ ಕಡೆ ನಿಲ್ಲೋಕ್ ಆಗಲ್ಲ;
ಹುಟ್ಟಿದ ಮನುಷ್ಯ ಒಂದೇ ಊರಲ್ಲಿ ಬಾಳಕಾಗಲ್ಲ
ದೇವರು ತಾನೆ ನನಗೆ ಅಪ್ಪ ಅಮ್ಮ ಎಲ್ಲಾ,
ಸಾಯೋಗಂಟ ನಂಬಿದವರ ಕೈ ಬಿಡಲ್ಲಾ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..