4672

“23” ನೇ ವಯಸ್ಸು

23 ನೇ ವಯಸ್ಸು ಬಹಳ confusion ಮಾಡಿಸೋ ವಯಸ್ಸು . ಅದೇ ಟೈಂ ಅಲ್ಲಿ ಓದು ಮುಗಿದು ಮುಂದೆ ಕೆಲಸಕ್ಕೆ ಸೇರಿ career ಕಡೆ ಗಮನ ಕೊಟ್ಟು ಫ್ಯಾಮಿಯ್ ಗೆ ನಿಯತ್ತಾಗಿ support ಮಾಡಿಕೊಂಡು ಬದುಕೋದಾ ಇಲ್ಲ passion ಹಿಂದೆ ಹೋಗಿ name , fame , money ಸಂಪಾದನೆ ಮಾಡೋದಾ ? ..ಎಲ್ಲ ಒಂಥರ confusion . ಈ ವಯಸ್ಸಲ್ಲಿ ಏನೇನೋ ಮಾಡಬೇಕು ಅಂತ ಆಸೆ ಚಿಗುರುತ್ತೆ . ಕೆಲವು ಸಲ ಸರಿಯಾದ ಪ್ಲಾನ್ನಿಂಗ್ ಇಲ್ಲದೆ , ಮನಸ್ಸು ಮತ್ತು ಬುದ್ದಿ ಇವೆರಡನ್ನೂ ಒಟ್ಟಿಗೆ ತೆಗೆದುಕೊಂಡು ಹೋಗದೆ ಕೇವಲ ಮನಸ್ಸಿನ ಕರೆಗೆ ಓಗೊಟ್ಟು ಜೀವನದಲ್ಲಿ ಎಡವುದು ಗ್ಯಾರಂಟೀ ..ಅದರ ಜೊತೆ ಜೊತೆಗೆ ಜೀವನದ ಕೆಲವೊಂದು ಒಳ್ಳೆಯ ಕ್ಷಣಗಳು ಇಲ್ಲಿಂದಾನೆ ಸ್ಟಾರ್ಟ್ ಆಗುತ್ತವೆ

1).23 ನೇ ವಯಸ್ಸಿನಲ್ಲಿ ಕೆಲ್ಸ ಹುಡ್ಕಿ settle  ಆಗಬೇಕು ಅನ್ನೋ confusion

giphy6
2).23 ನೇ ವಯಸ್ಸಿನಲ್ಲಿ ಕೆಲ್ಸ ಸಿಕ್ತು ..ಇನ್ ವೀಕೆಂಡ್ ಟೈಂಪಾಸ್ ಆಗೋಕೆ ಒಂದು girlfriend ಇದ್ರೆ ಚೆನ್ನಾಗಿರುತ್ತೆ . girlfriend ಮಾಡ್ಕೊಂಡ್ರೆ ನೆಮ್ಮದಿಯಿಂದ ಇರ್ತೀವಾ ಅಂತ confusion
giphy1
3).23 ನೇ ವಯಸ್ಸಿನಲ್ಲಿ ಕೆಲಸ ಸಿಕ್ಕಿ ಆದ ಮೇಲೆ ವೀಕೆಂಡ್ ಫ್ರೀ ಇರ್ತೀವಿ . ಈ time ಅಲ್ಲೇ ಮನಸ್ಸು ಸಿನೆಮಾ ಕಡೆ ಆಕರ್ಷಿತಗೊಳ್ಳುತ್ತದೆ .ಗೊತ್ತಿಲ್ಲದೆ ನಾವು “ಚಿತ್ರ ವಿಮರ್ಶಕಾಗುತ್ತೇವೆ “..ಆಮೇಲೆ ಒಂದ್ short movie ಮಾಡಿ ಸ್ವಲ್ಪ try  ಮಾಡೋಣ ಅಂತ ಪ್ಲಾನ್ ಮಾಡ್ತೀವಿ

giphy3
4).23 ನೇ ವಯಸ್ಸಿನಲ್ಲಿ ಕೆಲಸಕ್ಕೆ ಸೇರಿದ್ದಾರೆ ಒಂದು ಗಾಡಿ ತಗೋತೀವಿ ..ಗಡ್ಡ , ಮೀಸೆ ಒಂದ್ ಲೆವೆಲ್ ಗೆ ಬಂದಿರುತ್ತೆ .. ಸ್ವಲ್ಪ ಸ್ಟೈಲ್ ಹೊಡಿಯೋಕೆ ಶುರು ಮಾಡಿರ್ತೀವಿ

giphy2
5).23 ನೇ ವಯಸ್ಸಿನಲ್ಲಿ ಇಂಟೆರೆನೆಟ್ ಅಲ್ಲಿ ಓದೋ ಕೆಲವು startup ಗಳ ಕಥೆ ಮೇಲೆ inspire ಆಗಿತೀವಿ . ನಂದೂ ಒಂದ್ startup ಮಾಡಿ ನಂಗೆ ನಾವೇ ಬೋಸ್ ಆಗಿ ಇರಬಹುದಲ್ಲ ಅನ್ನೋ ಯೋಚನೆ ಶುರು

giphy5
6).23 ನೇ ವಯಸ್ಸಿನಲ್ಲಿ ಕೆಲಸ ಸಿಕ್ಕಿದ ಮೇಲೆ ಕೈಯಲ್ಲಿ ದುಡ್ಡು ಓಡಾಡೋಕೆ ಶುರು ಆಗುತ್ತೆ .. ಆವಾಗ ಫ್ರೆಂಡ್ಸ್ ಜೊತೆ ಟ್ರಿಪ್, ಟ್ರೆಕ್ಕಿಂಗ್ ಶುರು

giphy4
7).23 ನೇ ವಯಸ್ಸಿನಲ್ಲಿ ಜೀವನದ ನಿಜವಾದ ಅರ್ಥ ಒಂದೊಂದಾಗಿ ಗೊತ್ತಾಗೋಕೆ ಶುರು ಆಗುತ್ತೆ . in fact ಇಲ್ಲಿಂದಾನೆ ದೇವ್ರು ಟೆಸ್ಟ್ ಕೊಟ್ಟು ಆಮೇಲೆ ಪಾಠ ಕಲಿಸೋಕೆ ಶುರು ಮಾಡ್ತಾನೆ

giphy7
8).23 ನೇ ವಯಸ್ಸಿನಲ್ಲಿ ನಮ್ ಕೆಲವು ಫ್ರೆಂಡ್ಸ್ ಗೆ ಮದ್ವೆ ಬೇರೆ ಆಗುತ್ತೆ . ಆ ಮದುವೆ ಗೆ ಗ್ರೂಪ್ ಅಲ್ಲಿ ಹೋಗೋದೇ ಒಂಥರ ಮಜಾ .ಥರ ಥರ ಫೋಟೋಸ್ , ಡಿಫ್ಫೆರೆಂಟ್ ಆಗಿ ಡ್ರೆಸ್ ಮಾಡ್ಕೊಳ್ಳೋದು

12931262_1291940587499195_6796035873642840811_n
9).23 ನೇ ವಯಸ್ಸಿಂದ ನಾವು ನಿಜವಾದ skill ಪಡೆದುಕೊಳ್ಳೋಕೆ ಸಾಧ್ಯ ಆಗುತ್ತದೆ .ಕಾಲೇಜು ಅಲ್ಲಿ ಎಷ್ಟ್ ಕಿತ್ ದಬ್ಬಾಕಿರ್ತೀವೋ ದೇವರೇ ಬಲ್ಲ

giphy8
10).23 ನೇ ವಯಸ್ಸಿನಲ್ಲಿ ಏನೆಲ್ಲ ಗೊಂದಲಗಳು ಶುರು ಆಗಬಹುದು . 23 ರ ಹರೆಯದ ತರುಣ ಗೊತ್ತೋ ಗೊತ್ತಿಲ್ಲದೆಯೋ ಏನೇನೋ ಮಾಡೋಕೆ ಹೋಗಿ ಏನೇನೋ ಎಡವಟ್ಟು ಮಾಡಿಕೊಳ್ಳಬಹುದು ಅನ್ನುವ ಅಂದು ಅಂಗ್ಲೇ ಇಟ್ಟುಕೊಂಡು ಒಂದು ಚಿಕ್ಕ ಚಿತ್ರ ಮಾಡಿದರೆ ಹೇಗಿರುತ್ತೆ ? ಅಲ್ವಾ … ಇಲ್ಲಿ ಒಂದು ಹೊಸ ತಂಡ ಹೊಸ ಪ್ರಯತ್ನ ಮಾಡೋಕೆ ರೆಡ್ಯ್ ಆಗಿದೆ . ಅದರ trailer ಇಲ್ಲಿ ನೋಡಿ

This video belongs to Manu AnuRam ಇಲ್ಲಿ embed ಮಾಡಿರುವ youtube ವೀಡಿಯೊ link ಅದರ ಮೂಲ ಹಕ್ಕುದಾರರ youtube channel ಯಿಂದ ಎರವಲು ಪಡೆಯಲಾಗಿದೆ ..

 

 

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..