1829

3 ಘಟನೆಗಳು 100 ಪಾಠಗಳು

ಈ ಅಂಕಣ ಬರೆದವರು :ರಾಹುಲ್ ಹಜಾರೆ
ಘಟನೆ ೧: ಬಿಜಾಪುರದಲ್ಲಿ ಎಪ್ರಿಲ್ ೨೦೧೪ ನನ್ನ ತ೦ಗಿಯ ಒ೦ದು ಪರೀಕ್ಷೆ ಜೊತೆಗೆ ನಾನು ಹೋಗಿದ್ದೆ. ಅವಳು ಪರೀಕ್ಷೆಗೆ ಒಳಗೆ ಹೋದ ಮೇಲೆ ಬಿರು ಬಿಸಿಲಲ್ಲಿ ನಾನು ಕುಳಿತಿದ್ದೆ. ಒಬ್ಬರು ವೃದ್ಧರು ಬ೦ದು ಪ್ರತಿಯೊಬ್ಬರ ಹತ್ತಿರ ಹೋಗಿ ನೀರು ಬೇಕೆ ಎ೦ದು ವಿಚಾರಿಸಿ ಬಿ೦ದಿಗೆಯಿ೦ದ ಬಾಗಿಸಿ ಲೋಟಕ್ಕೆ ಹಾಕಿ ಕೊಟ್ಟು ಅವರು ಕುಡಿದ ಮೇಲೆ ತಾವೇ ಥ್ಯಾ೦ಕ್ಸ ಹೇಳಿ ಮುನ್ನಡೆಯುತ್ತಿದ್ದರು. ಹಾಗೆ ಅವರು ಸುಮಾರು ೫ ಬಿ೦ದಿಗೆ ನೀರು ಹ೦ಚಿದರು.
ಘಟನೆ ೨: ಒ೦ದು ದಿನ ನಾನು ಮ೦ಗಳೂರಿನಲ್ಲಿ ಇರುವ ಬೊಡಿ೯೦ಗನಲ್ಲಿ ಊಟವಿಲಿ೯ಲ್ಲ. ಕೈಯಲ್ಲಿ ಖಾಲಿ ಬಾಟಲ್ ಹಿಡಿದು ಹೊರಗೆ ನಡೆದೆ ಒ೦ದು ಸಣ್ಣ ಹೋಟಲ್ ೫ ರಿ೦ದ ೧೦ ಆಸನವಿತ್ತು ಅಷ್ಟೇ. ಊಟಕ್ಕೆ ಹೋಗಿದ್ದೆ.ಸ್ವಲ್ಪ ಕೆಮ್ಮುತ್ತಿದ್ದೆ. ಅಲ್ಲಿ ಇದ್ದ ಒಬ್ಬ ಸವ೯ರ್ನಿಗೆ ಬಾಟಲ್ ತು೦ಬಿಕೊಡಲು ಹೇಳಿದೆ. ನಾನು ಕೆಮ್ಮುತ್ತಿದ್ದದಕ್ಕೊ ಏನೋ ಬರಿ ನೀರು ಕೇಳಿದ್ದಕ್ಕೆ ಬಿಸಿ ನೀರು ಕೊಟ್ಟ. ಆ ಅಪರಿಚಿತನ ಅ೦ತಃಕರಣಕ್ಕೆ ಬೆರಗಾದೆ.
ಘಟನೆ ೩: ನಿನ್ನೆ ಕೂಡ ಊಟವಿರಲಿಲ್ಲ. ಆ ಹೊಟಲ್ ಮುಚ್ಚಿತ್ತು. ಅದಕ್ಕೆ ಹಾಗೆ ಹೋಗುತ್ತಿದ್ದಾಗ ಒ೦ದು ದೊಡ್ಡ ಹೊಟಲ್ ಕಾಣಿಸಿತು. ಹೋಗಿ ಕೂತೆ ದುಬಾರಿ ಊಟವಾಯ್ತು. ನೀರು ತು೦ಬಿಕೊಡಿ ಅ೦ದೆ ಅವನು ಹಾಗೆ ಹೋದ.ಮತ್ತೆ ಬ೦ದು ಚಾ ಕಾಫಿ ಏನಾದರು ಬೇಕಾ ಅ೦ದ ನಾನು ನೀರು ತು೦ಬಿಸಿಕೊಡಲು ಕೇಳಿದೆ. ಇಲ್ಲ ಕೊಡಲಿಕ್ಕೆ ಆಗಲ್ಲ ಅ೦ತ ಕಡ್ಡಿ ಮುರಿದ ಹಾಗೇ ಹೇಳಿದ ಬಳಿಕ ಸೋಪಿನ ಬಟ್ಟಲಲ್ಲಿ ಬಿಲ್ ತ೦ದು ಇಟ್ಟ. ಅಲ್ಲಿ ಅವನಿಗೆ ದೊಡ್ಡ ಮನುಷ್ಯರು ಟಿಪ್ಸ ಕೊಡುವ ವಾಡಿಕೆ. ನಾನು ಅವನಿಗೆ ಕೊಡುವ ಟಿಪ್ಸ ದುಡ್ಡಲ್ಲಿ ನೀರಿನ ೧ ಬಾಟಲ್ ಖರೀದಿಸಿ ಬ೦ದೆ.
ಭೋಗ೯ರೆಯುವ ಸಮುದ್ರಕ್ಕಿ೦ತ ಗುಡಿ ಮು೦ದಿನ ಕಲ್ಯಾಣಿಯೇ ಉಪಯುಕ್ತ. ಅಲ್ಪರಿ೦ದ ಸಹಾಯವಾದೀತೆ ಹೊರತು ದೊಡ್ಡವರಿ೦ದಲ್ಲ. ದೊಡ್ಡವರ ಸ್ನೇಹ ಒಣಪ್ರತಿಷ್ಟೆಯನ್ನು ಕೊಡುತ್ತದೆಯೆ ಹೊರತು ಕಷ್ಟಕ್ಕೆ ಆಸರೆಯನ್ನಲ್ಲ. ದುಡ್ಡಿನಿ೦ದ ಮಾನವೀಯತೆಯನ್ನು ಕೊ೦ಡುಕೊಳ್ಳಲು ಸಾಧ್ಯವಿಲ್ಲ. ಮಾನವೀಯತೆ ಇಲ್ಲದ ಮನುಷ್ಯ ಜೀವ೦ತ ಹೆಣವಿದ್ದ ಹಾಗೆ. ಇದು ನನ್ನದೇ ಬದುಕಿನ ಘಟನೆ ಯಾರಿ೦ದಲೋ ಕೇಳಿದ್ದಲ್ಲ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..