- By Arun Kumar PT
- Saturday, June 24th, 2017
ನಮಸ್ಕಾರ, ನನ್ನ ಹೆಸರು ಅರುಣ್ ಅಂತ. ಈ ಲೈನ್ ಎಲ್ಲೋ ಕೇಳಿದ್ದೀನಿ ಅಂತ ತಲೆ ಕೆರೆದುಕೊಳ್ಳಬೇಡಿ, let’s get started! ಪ್ರಾಯಶಃ ನೀವೆಲ್ಲಾ ಬೆಂಗಳೂರಿನಲ್ಲಿ ಇದ್ದೀರಾ ಎಂದು ಭಾವಿಸುತ್ತೇನೆ. ಪ್ರತಿ ದಿನ ಆಫೀಸ್ ಗೆ ಬೈಕ್ ಅಥವಾ ಕಾರ್ ಅಥವಾ ಕ್ಯಾಬ್ ನಲ್ಲಿ ಹೋಗಬಹುದು. ರಾಜಧಾನಿಯ ರಸ್ತೆಗಳಲ್ಲಿ ಯಜಮಾನ ಫಿಲಂ ವಿಷ್ಣು ದಾದಾ ಥರ ‘ಜವಾಬ್ದಾರಿಯುತವಾಗಿ’ ವಾಹನ ಚಲಾಯಿಸುವವರಿಂದ ಹಿಡಿದು ನಮ್ ಗಂಗಾವತಿ ಪ್ರಾಣೇಶ್ aka ‘ಪ್ರಾಣಿ’ ಹೇಳುವಂತೆ ಚಿಲ್ಲರೆ ಬಿತ್ತು ಅಂತ ಬಗ್ಗಿ ತಕ್ಕೊಳ್ಳೋದ್ರೊಳಗೆ ಕೈ ಸಂದಿಯಲ್ಲಿ ಪಾಸಾಗೋವರೆಗೂ ಎಲ್ಲಾ ಥರದ ಚಾಲಕರು ಸಿಗ್ತಾರೆ. 2014ರ ಒಂದು ಪತ್ರಿಕೆಯಲ್ಲಿ ಪ್ರಕಟವಾದ ಅಂಕಿಅಂಶಗಳ ಪ್ರಕಾರ ಆದ ಒಟ್ಟು ಅಪಘಾತಗಳ ಸಂಖ್ಯೆ 4.5 ಲಕ್ಷ, ಮತ್ತು ಅದರಲ್ಲಿ ಮೃತರಾದವರ ಸಂಖ್ಯೆ 1.4 ಲಕ್ಷ!! ಇಂತಿಪ್ಪ ಸಂದರ್ಭದಲ್ಲಿ ವಾಹನ ಓಡಿಸುವ ಪ್ರತಿಯೊಬ್ಬರಿಗೂ near death escape situation ಆಗಿರುತ್ತದೆ ಎಂಬುದು ಒಂದು ಕಾಲ್ಪನಿಕ ಅಂದಾಜು. ಈ ಟ್ರಾಫಿಕ್ಕು, ಹೊಗೆ, ಧೂಳು, ಮಾಲಿನ್ಯದ ಸಹವಾದ ಬೇಡ ನಮ್ ಹಳ್ಳಿಗೆ ಹೋಗಿ ಬಿಡೋಣ ಅಂತ ನೀವು ಅಂದುಕೊಳ್ಳುವ ಹಳ್ಳಿಯ ವಾತಾವರಣದಲ್ಲಿ ಏನಾಗ್ತಿದೆ ಅಂತ ಗೊತ್ತಾಗುವುದರಲ್ಲಿ approx ನಾಲ್ಕು ಸೆಕೆಂಡುಗಳಲ್ಲಿ ಸಾವು ರಪ್ಪ್ ಅಂತ ಪಾಸ್ ಆದ ಕಥೆಯೇ ಈ ಅಂಕಣ. ಇದಾದ ಮೇಲೆ ಅನಿಸಿದ್ದು: “Arrey Iski, ಎಂತಾ ಸಾವ್ ಮಾರ್ರೇ, ಅಷ್ಟ್ರಲ್ಲೇ ಜಸ್ಟ್ ಮಿಸ್ಸು”
ಕಥೆ:
ಬೆಳಿಗ್ಗೆ ಎಂದಿನಂತೆ ಬೈಕಲ್ಲಿ ಮನೆಯಿಂದ ಆಫೀಸಿಗೆ ಬೈಕಲ್ಲಿ ಹೋಗುತ್ತಿದ್ದೆ. ಸಾಮಾನ್ಯವಾಗಿ ಮೊಬೈಲನ್ನು ಶರ್ಟಿನ ಜೇಬಿನಲ್ಲಿರಿಸಿಕೊಂಡು ಹಂಸಲೇಖ, ಹರಿಕೃಷ್ಣ, ಅರ್ಜುನ್ ಜನ್ಯ ಬೀಟ್ ಹಾಡುಗಳನ್ನು ಕೇಳಿಕೊಂಡು ಹಂಗೇ ತಲೆಯನ್ನು ಆಚೆಯಿಂದ ಈಚೆ, ಈಚೆಯಿಂದ ತೂಗುತ್ತಾ ಹಾಡು ಹಾಡ್ಕೊಂಡು ಹೋಗೋದು ವಾಡಿಕೆ. ಬೈಕ್ ಸ್ಪೀಡ್ ಆದ ಹಾಗೆ ಸುತ್ತಲಿನ ವಾಯು ಮತ್ತು ಬೈಕ್ ಸದ್ದು ಹೆಚ್ಚಾಗಿ ಹಾಡು ಕೇಳಿಸೋದಿಲ್ಲ. ಹಾಗಾಗಿ ಆ ಹಾಡು ಕೇಳುವ ಮಟ್ಟಕ್ಕೆ ಆಗಾಗ ವೇಗ ಕಮ್ಮಿ ಮಾಡುವುದರಿಂದ ನಮ್ ವಾಹನ ವೇಗ 50km/hr ಗೆ ಬಂದು ನಿಲ್ಲುತ್ತದೆ.ಇದು ನಾನೇ ಅಡ್ಜಸ್ಟ್ ಮಾಡಿಕೊಂಡ ನನ್ನದೇ ಆದ ಸ್ಪೀಡ್ ಬ್ರೇಕರ್ ಅಂದುಕೊಳ್ಳಿ. ಆದರೆ ಇವತ್ತು ಸ್ವಲ್ಪ ಲೇಟಾಗಿ ಹೊರಟಿದ್ದರಿಂದ ಸಾಂಗು ಡ್ಯಾನ್ಸು ಎಲ್ಲಾ ಬೇಡ, ಜ಼ುಗ್ ಅಂತ ಹೋಗಿ ಬಿಡೋಣ ಅಂತ ವ್ರೂಮ್ ಎಂದು ಸುಮಾರು 60km/hr ಶರವೇಗದಲ್ಲಿ ಹೊರಟಿದ್ದೆ! ಅಲ್ಲೊಂದು ಹಳ್ಳಿ ಹತ್ತಿರ ಒಂದು ಹೇರ್ ಪಿನ್ ತಿರುವು ಬರುತ್ತದೆ. ನಮ್ ಹುಡುಗಿ ಜೊತೆ ಇದ್ದಿದ್ದರೆ, “woww, this is do beautiful, let’s take a selfie” ಅನ್ನುತ್ತಿದ್ದಳು. Coming back to topic, ಹೇರ್ ಪಿನ್ ತಿರುವು ಅಂತ ಹೇಳಿದ್ನಲ್ಲಾ, ಅಲ್ಲಿ ರಸ್ತೆಯ ಅರ್ಧ ಭಾಗ ಬ್ಲಾಕ್ ಆಗುವಂತೆ ಒಂದು trax ಥರದ ಬಾಡಿಗೆ ಕಾರು ನಿಂತಿತ್ತು. ಅದರ ಮೇಲೆ ಯಾವುದೋ ಒಂದು ಮದುವೆಯ ಅವನು weds ಅವಳು ಎಂಬ ದೊಡ್ಡದೊಂದು ಪೋಸ್ಟರ್ ಕೂಡ ಅಂಟಿಸಿದ್ದರು. So, ಅಲ್ಲಿಗೆ ಉಳಿದದ್ದು ಅರ್ಧ ದಾರಿ ಮಾತ್ರ, ಅದೂ ನಾನು ಹೋಗುತ್ತಿದ್ದ ಎಡ ಭಾಗ. ಆ ಹೇರ್ ಪಿನ್ ತಿರುವಿನ ರಸ್ತೆಯ ಪಕ್ಕದ ನೆಲದ ಮೇಲೆ ಸುಮಾರು ಜನ ಹುಡುಗರು ನಿಂತಿದ್ದರು. Mostly ಮದುವೆ ಕಡೆಯವರು ಇರಬೇಕು ನಮಿಗ್ಯಾಕೆ ಅಂತ ಪಾಸ್ ಆಗುವವನಿದ್ದೆ, ಅಷ್ಟರಲ್ಲಿ ಆ ಹುಡುಗರಲ್ಲಿ ಒಬ್ಬ ನಾನು ಬರುವುದನ್ನು ವಿಡಿಯೋ ಮಾಡುತ್ತಿದ್ದ. “ಏ, ಈ ಕಡೆ ಬರಬೇಡ, ಬರಬೇಡ” ಅನ್ನೋ ಥರ ಸಿಗ್ನಲ್ ಮಾಡುತ್ತಿದ್ದ. ನನ್ನ ಹಿಂದೆ ಮದುವೆ ಗಂಡು ಹೆಣ್ಣು ನಡೆದುಕೊಂಡು ಬರುತ್ತಿದ್ದರೇನೋ, ನಾನು ಗಾಡಿಯಲ್ಲಿ ಹಾದು ಹೋಗಿದ್ದು ಅವರಿಗೆ ತೊಂದರೆ ಆಯ್ತೇನೋ ಅಂತ ಇನ್ನೂ ಬೇಗ ಹೊರಟು ಬಿಡೋಣ ಅಂತ ಸ್ಪೀಡ್ ಏರಿಸಿದೆ. ಆ ಹುಡುಗ ಈಗ “ಏ, ಏ” ಅನ್ನುತ್ತಾ ರಸ್ತೆಯ ಎಡಭಾಗಕ್ಕೆ ಕೈ ತೋರಿಸಿದ, “ಏನಪ್ಪಾ ಏನಾದರೂ ಗುಂಡಿ ಏನಾದರೂ ಇತ್ತಾ, ಎಲ್ಲಾ ಸರಿಯಾಗಿತ್ತಲ್ಲಾ” ಅಂತ ನೋಡ್ತೀನಿ….
.
ನಾಗರಹಾವು
.
.
ಹೆಡೆಯಿತ್ತಿ ನಿಂತಿದೆ, ನಾನು ನೋಡಿದ್ದು ಹಾವೇ ಅಂತ ಗೊತ್ತಾಗುವುದರಲ್ಲಿ ಆಗಲೇ ಮುಂದೆ ಹೋಗಿದ್ದೆ. ಶಿವ ಶಿವಾ! ಇದಕ್ಕೆ ಮುಂಚೆ ಹಲವಾರು ಬಾರಿ ದಾರಿಯಲ್ಲಿ ಹಾವು ಎದುರಾಗಿದ್ದು ಇದೆ ಅನ್ನಿ, ಆದರೆ at least ಅದು ದೂರದಲ್ಲಿ ರಸ್ತೆ ದಾಟುವಾಗ ಗೊತ್ತಾಗುತ್ತಿತ್ತು. ಬೈಕ್ ಓಡಿಸುತ್ತಾ ಹಿಂಗೆ ಎಡಬದಯಲ್ಲಿ ಕಾಯಿನ್ ಬಿದ್ದಂಗಾಯಿತು ಅಂತ ನೋಡುವಷ್ಟು ಹತ್ತಿರದಲ್ಲಿ ಹಾವು ನೋಡಿ ಜಿ.ಗಾಬರಿ ಆಗಿದ್ದು ಸುಳ್ಳಲ್ಲ. ರಸ್ತೆಯಲ್ಲಿ ಸಂಚರಿಸುವಾಗ ಎಷ್ಟು ಹುಷಾರಾಗಿದ್ದರೂ ಸಾಲದು ಅಂತ ಅದಕ್ಕೆ ಹೇಳೋದು ನೋಡಿ.
The Ending:
ವಾಹನ ಜಲಾಯಿಸುವಾಗ, ರಸ್ತೆ ದಾಟುವಾಗ, ಅಷ್ಟ್ ಯಾಕೆ, ಬಾಲ್ಕನಿಯಲ್ಲಿ ನಿಂತು ವಾಕಿಂಗ್ ಹೋಗುವವರನ್ನು ನೋಡೋದು ಕೂಡ ಸೇಫ್ ಅಲ್ಲ ಅನ್ನುವ ಮಟ್ಟಿಗೆ ರಸ್ತೆ ಸುರಕ್ಷತೆ ಹದಗೆಟ್ಟಿದೆ. ನಿಮ್ಮ ಹುಷಾರಲ್ಲಿ ನೀವು ಇರಿ ಪಾ, ಯಾವಾನಿಗ್ ಗೊತ್ತು, ಏನೇನು ರಪ್ಪ್ ಅಂತ ಪಾಸ್ ಆಗುತ್ತೋ!!