5922

“u turn” ಚಿತ್ರವನ್ನು ನೀವು ಯಾಕೆ ನೋಡಬೇಕು ?

  1. lucia ಚಿತ್ರದ ನಂತರ ಪವನ್ ಕುಮಾರ್ ನಿರ್ದೇಶನ ಮಾಡಿದ ಬಹು ನಿರೀಕ್ಷೆಯ ಚಿತ್ರ

ಲೂಸಿಯ ಕನ್ನಡ ಚಿತ್ರ ಭಾರತೀಯ ಚಿತ್ರ ರಂಗದಲ್ಲೇ ಒಂದು ವಿಶಿಷ್ಟ ಸ್ಥಾನಮಾನ ಪಡೆದಿದೆ . ಅನುರಾಗ್ ಕಶ್ಯಪ್ ರಂಥಹ ದೊಡ್ಡ ನಿರ್ದೇಶಕರು , ಇರ್ಫಾನ್ ಖಾನ್ ಅಂತಹ ದೊಡ್ಡ ನಟರು ಅತೀ ಹೆಚ್ಚಾಗಿ ಮೆಚ್ಚಿದಂತಹ ಚಿತ್ರ . ಎಲ್ಲಕ್ಕಿಂತ ಮುಖ್ಯವಾಗಿ ಜನರೇ ಸೇರಿ ನಿರ್ಮಿಸಿದ ಚಲನಚಿತ್ರ . ಅಂತಹ ಚಿತ್ರ ಮಾಡಿದ ನಿರ್ದೇಶಕ ನಿಮ್ಮನ್ನು ಅಷ್ಟೊಂದು ನಿರಾಸೆಗೊಳಿಸಲಾರ.

fesh0d

2.ಈ ಚಿತ್ರ ಅತೀ ಕಡಿಮೆ ವೆಚ್ಚದಲ್ಲಿ ನಿರ್ಮಾಣವಾಗಿದ್ದು , ತಾಂತ್ರಿಕವಾಗಿ ದೊಡ್ಡ ಬಜೆಟ್ ಚಿತ್ರವನ್ನೂ ನಾಚಿಸುವ ಹಾಗಿದೆ

ಯಾವುದೇ ದೊಡ್ಡ ಬಜೆಟ್ ನ ಗುಂಗಿಲ್ಲದೆ ಅತೀ ಕಡಿಮೆ ವೆಚ್ಚದಲ್ಲಿ ತಾಂತ್ರಿಕವಾಗಿ ಹಾಲಿವುಡ್ ಚಿತ್ರಗಳಿಗೆ ಸಾಟಿಯಾಗಬಲ್ಲ ಚಿತ್ರಣ ಇಲ್ಲಿದೆ .ಚಿತ್ರಕ್ಕೆ dolby  ಎಫೆಕ್ಟ್ ಆಗಿರಲೂಬಹುದು ಹಾಗೆಯೇ helicam  ಶಾಟ್ಸ್ ಇರಲೂಬಹುದು .ಎಲ್ಲವೋಒ ಅಚ್ಛು ಕಟ್ಟಾಗಿ ಬಂದಿವೆ

2

3.No buildup…no punching dialogues

ಸಮಯ ಕಳೆದಂತೆಲ್ಲ ಪ್ರೇಕ್ಷಕರೂ ಕೂಡ ಹೊಸತನ್ನು ಬಯಸುವುದರಿಂದ ಹೆಚ್ಚಿನ ಪ್ರೇಕ್ಷಕರು ದುಡ್ಡು ಕೊಟ್ಟು ಬೇರೆಯವರ buildup  ನೋಡಲು ಇಷ್ಟ  ಪಡುವುದಿಲ್ಲ . ಇಲ್ಲಿ ಹೆಚ್ಚಿನ ನಟ ನಟಿಯರು ಹೊಸಬರೇ ಆಗಿರುವುದರಿಂದ ಒಂದು ಸೃಜನಾತ್ಮಕವಾದ ಚಿತ್ರವಾಗಿ ಹೊರ ಹೊಮ್ಮಿದೆ

9

4.ಹಾಲಿವುಡ್ ನಟನ ಅತ್ಯಮೊಘವಾದ ನಟನೆ

ರೋಜರ್ ನಾರಾಯಣ್ ಅನ್ನುವ ಹಾಲಿವುಡ್ ನಟ ಕನ್ನಡದಲ್ಲಿ ಇದೆ ಮೊದಲ ಭಾರಿಗೆ ಈ ಚಿತ್ರದಲ್ಲಿ ನಟಿಸಿದ್ದಾರೆ . ಅವರ ನಟನೆ ಈ ಚಿತ್ರದಲ್ಲಿ ಪ್ಲಸ್ ಪಾಯಿಂಟ್ .inspector  ನಾಯಕ್ ಪಾತ್ರದಲ್ಲಿ ಅಪಾರವಾಗಿ ಕಾಡುತ್ತಾರೆ .ಅವರ ಮಾತಿನ ಶೈಲಿ , ಮುಖಭಾವ ಎಲ್ಲವೂ 100  % ಪರ್ಫೆಕ್ಟ್

10

 

 

5.ಈ ಚಿತ್ರ ನೋಡಿದ ಮೇಲೆ ನೀವು ಟ್ರಾಫಿಕ್ ರೂಲ್ಸ್ ನ ಫಾಲೋ ಮಾಡೋ ಕಡೆ ಗಮನ ಕೊಡ್ತೀರಿ 

ಹೆಚ್ಚಿನ ಚಿತ್ರಗಳು ಮೆಸೇಜ್ oriented  ಅಂತ ಹೇಳಿಕೊಂಡರೂ ಅವುಗಳು ಪ್ರೇಕ್ಷಕರ ಮನಸ್ಸಿಗೆ ಅಷ್ಟೊಂದು ಎಟಕುವುದಿಲ್ಲ. ಆದರೆ ಯು ಟರ್ನ್ ಚಿತ್ರ ನೋಡಿದ ಮೇಲೆ ನಿಮ್ಮನ್ನು ಪಾಪಕರ್ಮವಾಗಿ  ಬಹುವಾಗಿ ಕಾಡುವುದು ನೀವು ಹಿಂದೆ ಮಾಡಿರುವ ಟ್ರಾಫಿಕ್ ಸಿಗ್ನಲ್ ಜಂಪ್ , ಯು ಟರ್ನ್  ತಗೋಬಾರದ ಕಡೆ ತೆಗೆದುಕೊಂಡಿರೋ ಯು ಟರ್ನ್ , ಇತ್ಯಾದಿ . ಈ ಚಿತ್ರ ನೋಡಿದ ಮೇಲೆ ಟ್ರಾಫಿಕ್ ಸಿಗ್ನಲ್ ನೋಡಿದ ತಕ್ಷಣ ಈ ಚಿತ್ರ ನಿಮಗೆ ನೆನಪಾಗುವುದು ಖಂಡಿತ . ಹಾಗೆಯೇ ನೀವು ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಲು ಮನಸ್ಸು ಮಾಡದೇ ಇರಬಹುದು

8

6.ಹದಿನೈದು   ನಿಮಿಷ ನಿಮ್ಮ brain  ಅನ್ನು ಪವನ್ ಕುಮಾರ ಅವರ ಚಿತ್ರದ ಮೂಲಕ ಹ್ಯಾಕ್ ಮಾಡಿ ಇಟ್ಟುಕೊಳ್ಳುತ್ತಾರೆ

ಒಂಥರಾ ಕನ್ಫ್ಯೂಷನ್ ಆಗ್ತಾ ಇದೆ ಅಲ್ವಾ. ? ಹೌದು . ಇಂಟರ್ವಲ್ ಗೆ ಹದಿನೈದು ನಿಮಿಷ ಇರುವಾಗ ನೀವು almost  ಸೀಟಿನ ಅಂಚಿನಲ್ಲಿ ಕೂತಿರುತ್ತೀರಿ .ಆ ಕಡೆ ಈ ಕಡೆ ಮನಸ್ಸು ಹೋಗೋಲ್ಲ .ಅಷ್ಟು curiosity  create  ಮಾಡುತ್ತದೆ ಈ ಚಿತ್ರದ ಚಿತ್ರಕತೆ

6

7.ಅಧ್ಬುತ ಹಿನ್ನೆಲೆ ಸಂಗೀತ 

ಪೂರ್ಣಚಂದ್ರ ಅವರು ಈ ಚಿತ್ರಕ್ಕೆ ಹಿನ್ನೆಲೆ  ಸಂಗೀತ ನಿರ್ದೇಶನ ಮಾಡಿದ್ದಾರೆ . ಇಂತಹ ಥ್ರಿಲ್ಲರ್ ಚಿತ್ರಕ್ಕೆ ಬೇಕಾದ ಪರ್ಫೆಕ್ಟ್ ಹಿನ್ನೆಲೆ ಸಂಗೀತವನ್ನು ಇವರು ನೀಡಿದ್ದಾರೆ . dolby  ಎಫೆಕ್ಟ್ ಅಲ್ಲಿ ಚಿತ್ರವನ್ನು ನೋಡಿದರೆ ನೀವು ಕಳೆದು ಹೋಗಿ ಬಿಡ್ತೀರಿ

7

8.ಶೃದ್ದಾ ಶ್ರೀನಾಥ್ ಅವರ ಬ್ಯೂಟಿ ಹಾಗು ಆಕ್ಟಿಂಗ್ 

ಕನ್ನಡಕ್ಕೆ ಒಂದು ಒಳ್ಳೆಯ ಸುಂದರ ಹಾಗು ಟಾಲೆಂಟೆಡ್ ನಟಿ ಸಿಕ್ಕಿದ್ದಾರೆ . ಇದೇ ಚಿತ್ರವನ್ನು ಅವರ ಹೆಗಲ ಮೇಲೆ ತೆಗೆದುಕೊಂಡು ಹೋಗಿದ್ದಾರೆ . ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದ್ದರಿಂದ ಇವರ ನಟನೆಗೆ ಹೆಚ್ಚು ಸ್ಕೋಪ್ ಸಿಕ್ಕಿದೆ

4

9.Based on true story

ಹೌದು . ಈ ಚಿತ್ರಕ್ಕೆ ಸ್ಪೂರ್ತಿಯಾಗಿದ್ದು ಬೆಂಗಳೂರಿನಲ್ಲಿ ನಡೆದ ಒಂದು ಘಟನೆ. ಒಂದು ಚಿಕ್ಕ ಘಟನೆಯನ್ನು ಇಟ್ಟುಕೊಂಡು ಪವನ್ ಒಂದು ಒಳ್ಳೆಯ ಸಿನಿಮಾ ಮಾಡಿದ್ದಾರೆ

11

10.”ಪವನ್ ಕುಮಾರ್ ಸ್ಟುಡಿಯೊಸ್” ಅನ್ನುವ ಹೆಸರಿನ ಮೂಲಕ 60  ಕ್ಕೂ ಹೆಚ್ಚು ಜನರು ಬಂಡವಾಳ ಹೂಡಿ ಸ್ಥಾಪನೆ ಮಾಡಿದ ಕನ್ನಡದ ಮೊದಲ ಪ್ರೊಡಕ್ಷನ್ ಹೌಸ್ 

ಹೆಚ್ಚಿನವರಲ್ಲಿ ಟ್ಯಾಲೆಂಟ್ ಇರುತ್ತದೆ ಆದರೆ ಅದಕ್ಕೆ ತಕ್ಕ producer  ಸಿಗುವುದಿಲ್ಲ . ಈ ಪ್ರೊಡಕ್ಷನ್ ಹೌಸ್ ಮೂಲಕ ಪವನ್ ಮುಂದೆ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುವ ಆಲೋಚನೆ ಇಟ್ಟುಕೊಂಡಿದ್ದಾರೆ . ಈ ಪ್ರೊಡಕ್ಷನ್ ಹೌಸ್ ಬೆಳೆದು ಮುಂದೆ ಹೊಸ ಪ್ರತಿಭೆಗಳಿಗೆ ಅವಕಾಶ ಸಿಗುವಂತಾಗಬೇಕಾದರೆ ಜನರು ಥೀಯೇಟರ್ ಗೆ ಹೋಗಿ ಸಿನಿಮಾ ನೋಡಬೇಕು

5

 

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..