5385

“ಕೆಂ. ಬ. ನಿ” ಕಂಬನಿ ತರಿಸಿದಾಗ

profile ಪೆದ್ದ ಗುಂಡ

ಸುಮಾರು 10 ವರ್ಷದ ಹಿಂದೆ ಇಂಜಿನಿಯರಿಂಗ್ ಓದೋಕೆ ಊರಿನಿಂದ ಒಬ್ಬ ಪಾಪದ ಹುಡುಗ ಬೆಂಗಳೂರಿಗೆ ಬರ್ತಾನೆ . ದೊಡ್ಡ ಕಾಲೇಜು…. ಅಲ್ಲಿ ಇಂಜಿನಿಯರಿಂಗ್ ಸೀಟು .. ಒಂಥರಾ “ಫಸ್ಟ್ ರಾಂಕ್ ರಾಜು ” ಕ್ಯಾಂಡಿಡೇಟ್ .ಯಾರ್ ಜೊತೆಗೂ ಅಷ್ಟೊಂದ್ ಮಾತಾಡೋಲ್ಲ ..

ಬೆಂಗಳೂರಿನಲ್ಲಿ ಎಂಜಿನೀರಿಂಗ್ ಓದೋ ವಿದ್ಯಾರ್ಥಿಗಳಿಗೆ ಮೆಜೆಸ್ಟಿಕ್ ಪಕ್ಕ ಇರೋ avenue ರೋಡ್ ಗೊತ್ತಿಲ್ಲದೇ ಇರೋಕೆ ಸಾಧ್ಯಾನೇ ಇಲ್ಲ . ಇವನಿಗೆ ಪುಸ್ತಕ ತೆಗೆದುಕೊಳ್ಳಬೇಕಾಗುತ್ತದೆ . ಕಾಲೇಜಿನಲ್ಲಿ ಪರಿಚಯವಾದ ಹೊಸ ಸ್ನೇಹಿತರಿಂದ ಪುಸ್ತಕ ಎಲ್ಲಿ ಸಿಗುತ್ತದೆ ಅಂತ ತಿಳಿದುಕೊಳ್ಳುತ್ತಾನೆ . ಒಬ್ಬ ಸ್ನೇಹಿತ ಹೇಳಿದ-” ಲೋ ಮಚ್ಚಾ ..ನೀನು avenue ರೋಡ್ ಗೆ ಹೋಗು . ಅಲ್ಲಿ ಎಲ್ಲ ಬುಕ್ಸ್ ಸಿಗುತ್ತೆ .”.. ಈ ಪೆದ್ ಗುಂಡನಿಗೆ ಬೆಂಗ್ಳೂರೇ ನೆಟ್ಟಗ್ ಗೊತ್ತಿಲ್ಲ . ಇನ್ avenue ರೋಡ್ ಗೊತ್ತಾಯ್ತದಾ ? ಮತ್ತೆ ಅವನ ಸ್ನೇಹಿತನಲ್ಲಿ ಕೇಳಿದ-“ಅದು ಎಲ್ಲಿ ಬರುತ್ತೆ ? ” .. ಸ್ನೇಹಿತ -“ಒಂದ್ ಕೆಲಸ ಮಾಡು ” ಅಂತ ಟಿಪಿಕಲ್ ಬೆಂಗಳೂರಿಗ ಹೊಸಬರಿಗೆ ದಾರಿ ತೋರಿಸೋ ಹಾಗೆ ಶುರು ಹಚ್ಚಿಕೊಂಡ -” ಸೀದಾ ಮೆಜೆಸ್ಟಿಕ್ ಗೆ ಹೋಗೋ ಬಸ್ ಹಿಡಿ ..ಅಲ್ಲಿಂದ ಹತ್ರ .”.. ಈ ಪೆದ್ದ ಗುಂಡ ಫುಲ್ ಫಿಕ್ಸ್ ಆದ .. ಹೇಗೂ ಬಸ್ ಅಲ್ಲಿ ನೇಮ್ ಬೋರ್ಡ್ ಇರುತ್ತೆ . ಡೆಸ್ಟಿನೇಷನ್ ಹಾಕಿರ್ತಾರೆ ಅಂತ ಡಿಸೈಡ್ ಆಗಿಬಿಟ್ಟು ಒಂದು ಆದಿತ್ಯವಾರದ ಶುಭ ಬೆಳಿಗ್ಗೆಯ 10 ಘಂಟೆ ಗೆ ಕತ್ರಿಗುಪ್ಪೆ ಬಸ್ ಸ್ಟಾಪ್ ಅಲ್ಲಿ “mejestic” ಅಂತ ಬೋರ್ಡ್ ತಗಳಕ್ಕೊಂಡಿರೋ ಬಸ್ ಗೆ ಕಾಯೋಕೆ ಶುರು ಮಾಡಿದ .. ಕಾದ ..ಕಾದ ..ಕಾಯ್ತಾನೆ ಇದ್ದ …

ಬಸ್ ಸ್ಟಾಪ್ ಗೆ ಜನ ಬರ್ತಾನೆ ಇದ್ದಾರೆ ..ಎಲ್ರೂ ಅವರವರ ಬಸ್ ಹತ್ಕೊಂಡ್ ಹೋಗ್ತಾನೆ ಇದಾರೆ .. but ಇವನ ಬಸ್ ಮಾತ್ರ ಬರ್ತಾನೆ ಇಲ್ವೇ .. ಕಾದು ಕಾದು ಘಂಟೆ 12.30 ಆದರೂ ಇವನಿಗೆ ಮಾತ್ರ “majestic” ಗೆ ಹೋಗೋ ಬಸ್ ಮಾತ್ರ ಸಿಗ್ಲಿಲ್ಲ…. so.. ಏನ್ಮಾಡೋದು ..ಹೊಟ್ಟೆಯಲ್ಲಿ ಹೆಗ್ಗಣ ಓಡಾಡೋಕೆ ಶುರು ಆಯಿತು ..ಅಲ್ಲೇ ಪಕ್ಕದಲ್ಲಿ ಇದ್ದ ಉಡುಪಿ ಉಪಹಾರ ಅನ್ನೋ ಹೋಟೆಲ್ ಗೆ ಹೋಗಿ ಮದ್ಯಾನ್ಹದ ಭೋಜನ ಕೂಡ ಮುಗಿಸ್ಕೊಂಡ್ ಬಂದ.. ಮತ್ತೆ ಅದೇ ರಾಗ..ಅದೇ ಹಾಡು .. “majestic” ಅಂತ ಬೋರ್ಡ್ ಹಾಕ್ಕೊಂಡ್ ಬರೋ ಬಸ್ ಗೋಸ್ಕರ ಕಾಯೋದು ..ಮದ್ಯಾನ್ಹ 3 ಘಂಟೆ ಆಯ್ತು ..ಸರಿ ಅಂತ ಮತ್ತೆ ಅದೇ ಹೋಟೆಲ್ ಗೆ ಹೋಗಿ ಒಂದ್ ಟೀ ಸಹ ಕುಡ್ಕೊಂಡು ಬಂದ್ ಆಯಿತು .. but “majestic” ಬೋರ್ಡ್ ಹಾಕ್ಕೊಂಡಿರೋ ಬಸ್ ಮಾತ್ರ ಪತ್ತೆ ಇಲ್ಲ. ಇಷ್ಟ್ ಹೊತ್ತಿಂದಾ ಕಾಯ್ತಾ ಇದ್ರೂ ಬೇರೆಯವರ ಹತ್ತಿರ ಬಸ್ ಬಗ್ಗೆ ವಿಚಾರುವ ಗೊಡವೆಗೆ ಹೋಗಲಿಲ್ಲ ..ಎಲ್ಲೋ ಒಂದು ಕಡೆ ಮುಗ್ಧ ಮನಸ್ಸು ..ಹೇಗೆ ಮಾತಾಡ್ಸೋದು ಅಂತ ….

ಅಂತೂ ಇಂತೂ ಸಂಜೆ 4.15 … ಯಾರೋ ಒಬ್ರು ವಯಸ್ಸಾದವರು ಈ ಪೆದ್ದ ಗುಂಡನನ್ನು ಬೆಳಿಗ್ಗೆಯಿಂದ observe ಮಾಡಿದ್ರಂತೆ … ಅವರು ಬಂದು -“ಏನಪ್ಪಾ ..ಬೆಳಿಗ್ಗೆಯಿಂದ ಇಲ್ಲೇ ಇದೀಯಲ್ಲ ..ಯಾರಿಗೋಸ್ಕರ ಕಾಯ್ತಾ ಇದ್ದೀಯ ?”..ಈ ಪೆದ್ದ ಗುಂಡ ಅಳುಮುಂಜಿ ಮೊಗದಲ್ಲೇ -“ಸಾರ್ ..ಬುಕ್ಸ್ ತಗೋಬೇಕಿತ್ತು ..aavenue ರೋಡ್ ಅಂತ ಇದೆಯಂತೆ ..ಮೆಜೆಸ್ಟಿಕ್ ಗೆ ಹೋದ್ರೆ ಹತ್ರ ಅಂತ ಫ್ರೆಂಡ್ ಹೇಳಿದ್ದ ..ಆದ್ರೆ ಬೆಳಿಗ್ಗೆಯಿಂದ ಕಾಯ್ತಾ ಇದ್ದೀನಿ .. MAJESTIC ಅಂತ ಬೋರ್ಡ್ ಹಾಕ್ಕೊಂಡು ಯಾವ್ ಬಸ್ ಸಹ ಬಂದಿಲ್ಲ ”

ಆ ವಯಸ್ಸಾದ ಪಾರ್ಟಿ ಗೆ ಫುಲ್ tension .. “ಅಲ್ಲಪ್ಪ ..ಅಲ್ನೋಡು .. 45 ನಂಬರ್ ಬಸ್ ಎಲ್ಲ ಮೆಜೆಸ್ಟಿಕ್ ಗೆ ಹೋಗೋದು ..ಇಲ್ಲಿಂದಾನೆ ಅತೀ ಹೆಚ್ಚು ಬಸ್ ಮೆಜೆಸ್ಟಿಕ್ ಗೆ ಹೋಗುತ್ತೆ “.. ಬಟ್ ಈಗ ಈ ಪೆದ್ದ ಗುಂಡನಿಗೆ ದೊಡ್ಡ confusion ಶುರು ಆಯಿತು ..ಅವನು ಕೇಳಿದ -“ಸಾರ್ ..ಆ ಬಸ್ ಅಲ್ಲಿ ಹಾಕಿರೋ ಬೋರ್ಡ್ ಅಲ್ಲಿ ಮೆಜೆಸ್ಟಿಕ್ ಅಂತ ಇಲ್ವಲ್ಲ.. ಕೆಂ . ಬ . ನಿ ಅಂತಿದೆಯಲ್ಲ .. ”

ಕೊನೆಗೆ ಆ ವಯಸ್ಸಾದವರಿಗೂ ಸಹ ಪರಿಸ್ಥಿತಿಯ ಸೂಕ್ಷ್ಮ ಅರ್ಥವಾಯಿತು . ಅವರು ಹೇಳಿದ್ರು -” ನಮ್ ಜನ ಒಂದ್ ಏರಿಯಾಗೆ ಸುಮಾರ್ ಹೆಸರ್ ಇಟ್ ಬಿಟ್ಟು ಎಕ್ಕುಡ್ಸ್ ಬಿಟ್ಟಿದ್ದಾರೆ .. ಜನ ಮೆಜೆಸ್ಟಿಕ್ ಅಂತ ಕರೀತಾರೆ ಆದರೆ ಬೋರ್ಡ್ ಮಾತ್ರ ಬೇರೆ ಹಾಕಿರ್ತಾರೆ .ಹೊಸಬರ ಕಥೆ ಬಿಡು .. ಇಲ್ಲೇ ಇರೋವ್ರಿಗೂ ಅದರ ಅಫೀಷಿಯಲ್ ಹೆಸರು ಗೊತ್ತಿರೋಲ್ಲ “.. ಆಮೇಲೆ ಈ ಪೆದ್ದ ಗುಂಡ ಅದೇ ಕೆಂ . ಬ . ನಿ ಬಸ್ ಹತ್ಕೊಂಡು ಹೋಗಿ ಬುಕ್ಸ್ ಅಂತೂ ತಂದ

ಅಂದ ಹಾಗೆ ನೀವು ಬಸ್ ನ ಬೋರ್ಡ್ ಅಲ್ಲಿ ಕೆಂ ಬ ನಿ or K.B.S  ಅಂತ ನೋಡಿದ್ರೆ confuse ಆಗ್ಬೇಡಿ .. ಕೆಂಪೇಗೌಡ ಬಸ್ ನಿಲ್ದಾಣ ಅಂತ ಫುಲ್ form ..It will take you to MAJESTIC 😀 😛

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..