- By Praveena Acharya
- Tuesday, September 27th, 2016
ಕ್ರೀಡೆಯ ಹಲವು ಆಯಾಮಗಳಲ್ಲಿ ಕ್ರಿಕೆಟ್ ಸಹವು ಒಂದು ಅಧ್ಬುತ ಅವಿಭಾಜ್ಯ . ಈ ಕ್ರೀಡೆಯಲ್ಲಿ ಹಲವು ಅಂಶಗಳು ಸ್ವತಃ ಆಟಗಾರನಿಗೆ ಕಲವೊಮ್ಮೆ ತಿಳಿಯುವುದಿಲ್ಲ. ನಿರ್ದಿಷ್ಟ ಸಂಧರ್ಭ ಎದುರಾದಾಗ ಮಾತ್ರ ವಿಭಿನ್ನ ರೀತಿಯ ತಾಂತ್ರಿಕತೆಯ ಪ್ರಯೋಗ ನಡೆಯುತ್ತದೆ ಅದೇ ರೀತಿ ಒಂದೊಂದು ಭಂಗಿಯು ಅಥವಾ ಹೊಡೆತಗಳು ಆಯಾ ಸಂದರ್ಭದಲ್ಲೇ ಸೃಷ್ಟಿಯಾದೀತೇ ಹೊರತಾಗಿ ಬೇರಾವ ಸಮಯದ್ಲಲಿಯೂ ಅಲ್ಲ. ಪೂರ್ವ ನಿರ್ಧರಿತ ಹೊಡೆತಗಳು ಕೆಲವೊಮ್ಮೆ ಕೈ ಹಿಡಿಯಲಾರವು ಅಂತಹದೇ ಕೆಲವು ವಿಭಿನ್ನ ಶೈಲಿಯ ಹಾಗೂ ಅತ್ಯಂತ ಜನಪ್ರಿಯ ಹೊಡೆತಗಳಲ್ಲೊಂದಾದ ಹೆಲಿಕ್ಯಾಪ್ಟರ್ ಶಾಟ್ ಒಂದರ ವಿಶ್ಲೇಷಣೆ ಈ ಕೆಳಗಿನಂತಿದೆ.
ಇದರ ಅನ್ವೇಷಕ ಧೋನಿಯೆಂದು ಹಲವು ಮಂದಿ ಅಭಿಪ್ರಾಯ ಪಡುತ್ತಾರೆ ಆದರೆ ನೈಜತೆ ಏನೆಂದರೆ ಈ ಹೊಡೆತದ ಪ್ರಪ್ರಥಮ ಪ್ರಯೋಗವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ತೋರಿಸದವರು ಹಲವಾರು ಮಂದಿ ಉದಾಹರಣೆಗೆ ಸಚಿನ್ ತೆಂಡೂಲ್ಕರ್, ಅಜರುದ್ದೀನ್ ಮುಂತಾದವರು ಕೆಲವು ದಶಕಗಳ ಹಿಂದೆಯೇ ಜಗತ್ತಿಗೆ ಪರಿಚಯಿಸಿದ್ದರು ಅಂತೆಯೇ ಮಾಧ್ಯಮ ಮಿತ್ರರ ವೈಭವೀಕರಣ ಈವಾಗಿನ ಹಾಗೆ ಕ್ರಿಕೆಟಿನಲ್ಲಿ ವಿಶಿಷ್ಟ ಶಾಟ್ ನ ಪ್ರಚಾರ ಅಷ್ಟಾಗಿ ಇರಲಿಲ್ಲ ಹಾಗಾಗಿ ಕೆಲವು ವಿಭಿನ್ನ ಹೊಡೆತಗಳು ಆ ಸಂದರ್ಭಕ್ಕೆ ಸೀಮಿತವಾಯಿತು . ಮತ್ತು ಆ ಸಮಯದಲ್ಲಿ ಅಷ್ಟೊಂದು ಆಕರ್ಷಕವಾಗಿ ಬಂದಿರಲಿಲ್ಲ ಹಾಗಾಗಿ ಈ ಹೊಡೆತದ ಪರಿಚಯ ಜನರಿಗೆ ಅಷ್ಟಾಗಿ ಮನದಟ್ಟಾಗಿಲ್ಲ .ನಂತರದ ದಿನಗಳಲ್ಲಿ ಧೋನಿಯು ಅತ್ಯಂತ ಸ್ಟೈಲಿಶ್ ಆಗಿ ಹೊಡೆಯಲು ಪ್ರಾರಂಭಿಸಿಧಾಗ ಹೆಲಿಕ್ಯಾಪ್ಟರ್ ಶಾಟ್ ಜನಪ್ರಿಯತೆಯನ್ನು ಗಳಿಸಿತು.ಇತೀಚಿನ ದಿನಗಳಲ್ಲಿ ಅದರಲ್ಲೂ ಐಪಿಎಲ್ ಶುರುವಾಗಿದಾಗಿನಿಂದಲೂ ಕೆಲವು ಯುವ ಪ್ರತಿಭೆಗಳು ಈ ಹೊಡೆತವನ್ನು ಹೊಡೆಯಲು ಪ್ರಯತ್ನಿಸುತ್ತಲೇ ಇರುತ್ತಾರೆ.