- By Guest Writer
- Friday, November 4th, 2016
ಬ್ರಾಹ್ಮಿ ದುರ್ಗಾಪರಮೇಶ್ವರಿ ಕಮಲಶಿಲೆ. ಹೆಸರಲ್ಲೆ ಇದೆ ಪ್ರಸಿದ್ದಿ. ಈ ದೇವಸ್ಥಾನವು ಬ್ರಹ್ಮಾವರದಿಂದ ೩೦ ಕಿಲೋಮೀಟರ್ ದೂರದ ಸಿದ್ದಾಪುರ ಬಳಿ ಕಮಲಶಿಲೆಯಲ್ಲಿದೆ. ಕುಬ್ಜ ನದಿಯ ತಟದಲ್ಲಿರುವ ಈ ದೇವಸ್ಥಾನವು ಹಲವಾರು ಕಾರ್ನಿಕಗಳಿಗೆ ಪ್ರಸಿದ್ದ. ಈ ನದಿಯ ನೀರು ವರ್ಷಕ್ಕೆ ಒಂದುಸಲ ಉಕ್ಕಿ ದೇವಿಯ ಗರ್ಭ ಗುಡಿಗೆ ಬರುವುದು ಈ ದೇವಸ್ಥಾನದ ಒಂದು ವಿಶೇಷತೆ. ಈ ಸಂದರ್ಭದಲ್ಲಿ ಹಲವಾರು ಭಕ್ತರು ಅದನ್ನು ಕಣ್ತುಂಬಿಕೊಳ್ಳಲು ಬರ್ತಾರೆ. ಈ ದೇವಸ್ಥಾನದ ಒಳಗಡೆ ಪುರುಷ ಭಕ್ತರು ಕಡ್ಡಾಯವಗಿ ಷರ್ಟ್ ಬನಿಯನ್ ತೆಗ್ದೆ ಹೋಗ್ಬೆಕು. ಇದು ದೇವಸ್ಥಾನದ ಪಾವಿತ್ರ್ಯವನ್ನು ಹೆಳುತ್ತದೆ. ಸಚ್ಚಿದಾನಂದ ಚಾತ್ರ ದೇವಸ್ಥಾನದ ಆಡಳಿತ ಧರ್ಮದರ್ಶಿ ಹೆಸ್ರಲ್ಲಿ ಏನು ವಿಶೆಷತೆ ಕಾಣದೆ ಇದ್ರು ಇವ್ರ ಒಡೆತನದ ದುರ್ಗಾಂಬ ಬಸ್ ನ ಹೆಸ್ರು ಕೇಳಿಯಾದ್ರು ಒಂದ್ಸಲ ಹುಬ್ಬೇರ್ಸ್ತೀರಿ. ಇವರ ಈ ಎಳಿಗೆಗೆ ಈ ಕ್ಷೇತ್ರವೆ ಕಾರಣ ಎಂದರೆ ಯಾವ ರೀತಿಯಂದಲು ತಪ್ಪಾಗಲಾರದು.
ಇನ್ನು ಈ ದೇವಸ್ಥಾನದ ಆನ್ನ ಪ್ರಸಾದ ಇಲ್ಲಿಯ ಇನ್ನೊಂದು ವೈಸಿಸ್ಠ್ಯ. ಇದರ ರುಚಿ ನೀವು ಇನ್ನೆಲ್ಲು ನೋಡ್ಲಿಕ್ಕೆ ಸಾದ್ಯ ಇಲ್ಲ. ಯಾವ ಪಂಕ್ತಿ ಭೇದ ಇಲ್ಲದೆ ಎಲ್ಲರು ಒಟ್ಟಿಗೆ ಸಾಲಾಗಿ ಕೂತು ಉಟ ಮಾಡ್ಬೊದು. ಶಿಸ್ತಿನಿಂದ ಬಡಿಸೋ ಬ್ರಾಹ್ಮಣರು. ಸ್ವತಹ ಧರ್ಮದರ್ಶಿಗಳೆ ನಿಂತು ಅನ್ನ ಸಂತರ್ಪಣೆ ಮಾಡ್ತಾರೆ. ಮದುವೆ ಮನೆಯಲ್ಲು ನೊಡಿರದ ಉಪಚಾರ, ವಿಚಾರಣೆ ಇದು ಈ ದೇವಸ್ಥಾನದ ಇನ್ನೊಂದು ವಿಶೇಷತೆ.
ಈ ದೇವಸ್ಥಾನದ ಸ್ವಲ್ಪ ದೂರದಲ್ಲೆ ಒಂದು ಗುಹೆ ಇದೆ ಅದ್ರ ಒಳಗೆ ಹುಲಿ ಇದೆ ಎನ್ನುದು ಇಲ್ಲಿಯವರ ನಂಬಿಕೆ. ದೇವಸ್ಥಾನದ ರಥೋತ್ಸವದ ದಿನ ಆ ಹುಲಿ ಹೊರಗೆ ಬರುತ್ತೆ ಅನ್ನೊದು ಅಲ್ಲಿಯವರ ನಂಬಿಕೆ. ಹಬ್ಬದ ಸಂದರ್ಭದಲ್ಲಿ ಆ ಗುಹೆಯ ಕಡೆ ಯರನ್ನು ಬಿಡೋದಿಲ್ಲ.ಹಿಂದಿನ ಕಾಲದಲ್ಲಿ ಆ ಗುಹೆಯಿಂದ ಕಾಶಿಗೆ ಹೊಗ್ತಿದ್ರು ಅನ್ನೊದು ಅಲ್ಲಿಯವ್ರು ಹೆಳೋ ಮಾತು. ಕೈಯಲ್ಲಿ ಟಾರ್ಚ್ ಇಲ್ಲದೆ ಈ ಗುಹೆ ಒಳಗೆ ಒಂದು ಹೆಜ್ಜೆನು ಇಡ್ಲಿಕ್ಕೆ ಸಾಧ್ಯ ಇಲ್ಲ, ಅಸ್ಟು ಕಗ್ಗತ್ತಲು ಒಳಗಡೆ. ಇದರ ಒಳಗಡೆ ಹೋಗ್ಬೆಕು ಅಂದ್ರೆ ಪಕ್ಕದಲ್ಲೆ ಒಂದು ಮನೆ ಅವ್ರ ಹತ್ರ ಹೆಳಿದ್ರೆ ಅವ್ರೆ ಒಳಗಡೆ ಕರ್ಕೊಂಡು ಹೋಗೋ ವ್ಯವಸ್ತೆ ಮಾಡ್ತಾರೆ. ಒಬ್ರೆ ಹೊಗ್ಬೆಕು ಅಂದ್ರೆ ಆ ಧೈರ್ಯ ನಿಮಗೆ ಬಿಟ್ಟದ್ದು.
ಈ ದೇವಸ್ಥಾನವು ಉಡುಪಿ ಜಿಲ್ಲೆಯ ಹಿರಿಮೆಗೆ ಒಂದು ಗಿರಿ. ಬೇರೆ ಬೇರೆ ಕಡೆಯಿಂದ ಭಕ್ತಾದಿಗಳು ಇಲ್ಲಿಗೆ ದಿನಂಪ್ರತಿ ಆಗಮಿಸ್ತಾ ಇರ್ತಾರೆ. ಭಕ್ತರಿಗೆ ಎಲ್ಲೂ ಕಿಂಚಿತ್ತು ಲೋಪದೋಶಗಳಾಗದಂತೆ ನೋಡ್ಕೋಳ್ತಾರೆ ಇಲ್ಲಿನ ಧರ್ಮದರ್ಶಿಗಳು ಮತ್ತು ಇಲ್ಲಿನ
ಸಿಬ್ಬಂದಿಗಳು. ಯವಾಗಾದ್ರು ಫ್ರೀ ಮಾಡ್ಕೋಂಡು ಹೋಗಿ ಬನ್ನಿ ಕಮಲಶಿಲೆಗೆ ಹೋದವ್ರು ಇಲ್ಲಿನ ಅನ್ನ ಪ್ರಸಾದವನ್ನು ಮಿಸ್ಸ್ ಮಾಡ್ಕೋಳ್ಳೇಬೇಡಿ.