3674

ಮದುವೆ ಮದುವೆ ಮದುವೆ..FINDING MR.RIGHT !!!!!!

“ಮದುವೆ” ಭಯಂಕರ ಪದವೇ..

ಕೆಲವರ ಪಾಲಿಗೆ ಸ್ವರ್ಗದ ಕದವೇ..

ನರಕ ಹಲವರಿಗೆ ಇದುವೆ😉

ಇದ್ಯೆನಪ್ಪ.. ಇವಳು ಇದ್ದಕಿದಂಗೆ ಮದುವೆ ಬಗ್ಗೆ ಮಾತಾಡ್ತಿದಾಳೆ ಅನ್ಕೊತಿದೀರಾ??? matter ಇದೆ .. matter ಅನ್ನೋದಕ್ಕಿಂತ confusion ಇದೆ !!!! may month ಅಂದ್ರೆ ಮದುವೆ season !!! ಆ friend ಮದುವೆ.. ಈ relative ಮದುವೆ ಅಂತ ಫುಲ್ ಮಸ್ತ್ ಮಜಾ ಮಾಡ್ತಿದೀನಿ ನಾನ್ ಅಂತು !!! ಮೊನ್ನೆ ನನ್ನ ಅಣ್ಣ ನ ಮದುವೆ ಆಯಿತು .. ಅವನಿಗಿಂತ ನಮಗೆ ಸಂಭ್ರಮ … ಮಿಂಚಿದ್ದೋ ಮಿಂಚಿದ್ದು ಅವನ್ ಮದುವೆ ಲಿ.. ನೋಡಿದ relatives ಆಂಟಿಗಳು…ಅಜ್ಜಿಗಳು.. ಎಲ್ಲರ ಬಾಯಲ್ಲೂ ಒಂದೇ ಪ್ರಶ್ನೆ.. “ತಾರಿಣಿ ನಿಂದ್ಯವಾಗ ಮದುವೆ ?? ” ” next ನೀನೆ ನ ?” “ಫ್ಯಾಮಿಲಿ ಲಿ ದೊಡ್ಡ ಮೊಮ್ಮಗಳು ನೀನೆ … line ಕ್ಲಿಯರ್ ಆಯಿತು ಈಗ ನಿಂಗೆ ” etc etc …. ಹೀಗೆ ಹೇಳಿದಾಗ ನಾಚ್ಕೊಬೇಕೋ.. ಕೋಪ ಮಾಡ್ಕೋಬೇಕೋ.. ಅಥವ ಸುಮ್ಮನೆ ಒಂದು “BLANK SMILE ” ಪೆದ್ದು ನಗು ಕೊಟ್ಟು ಸುಮ್ಮನಾಗಬೇಕೋ ನಂಗ್ ಗೊತಗ್ತಿರ್ಲಿಲ್ಲ … ಕೆಲವರಂತೂ ಬಿಡೋ ಹಾಗೆ ಇಲ್ಲ.. ಅಂಥವರಿಗೆ ಏನಾದ್ರು ಉತ್ತರ ಕೊಡಲೇ ಬೇಕಾಗತ್ತೆ.. variety variety answers ready ಇಟ್ಕೊಂಡಿದ್ದೆ ನಾನು .. “ಅಯ್ಯೋ.. ಅಜ್ಜಿ… ಈಗಿನ್ನು 22 ತುಂಬಿ 23 … ಇಷ್ಟು ಚಿಕ್ಕ ವಯಸ್ಸಿಗೆ ಮದುವೆ ನೇ??? ” “ಆಂಟಿ..ನಾನ್ ಇನ್ನು student ಉ.. ಈಗಲೇ ಮದುವೆ… NO !!!!! ” “ಏ!! ಕೆಲಸ ಸಿಕ್ದೇ ಈಗಲೇ ಎಂತ ಮದುವೆ ?? ಕಷ್ಟ ಪಟ್ಟು ಓದಿದಕ್ಕದ್ರು ಕೆಲಸ ಸೇರಬೇಕು .. ಕೆಲಸ ಸಿಕ್ಮೇಲೆ ಮದುವೆ !!! “etc..etc.. ಅಂತೂ ಎಲ್ಲರಿಗೂ ಏನೋ ಒಂದು ಸಬೂಬು ಹೇಳಿ ತಪ್ಪಿಸಿಕೊಂಡಿದ್ ಆಯಿತು .. ಆದರು gap ಅಲ್ಲಿ ಮನಸು ಯೋಚನೆ ಮಾಡ್ತಾ ಇತ್ತು ..ಯಾಕೆ ನಾನ್ reasons ಕೊಡ್ತಾ ಇದೇನಿ?? ಏನ್ problem actually ಅಂತ.. “ಮದುವೆ ಅಂದ್ರೆ ನಂಗೆ ಭಯ ನ? ” “ನಾನ್ ಇನ್ನು mentally prepare ಆಗಿಲ್ವಾ ?” “cooking ಬರಲ್ಲ ಅನ್ನೋ feeling ಆ? ” ಅಥವ .. “ಅಷ್ಟು ದೊಡ್ಡ responsibility ತೊಗೊಳೋಕೆ ನಾನ್ ready ಇಲ್ವಾ ” ಅಂತೆಲ್ಲಾ…!! life ಪ್ರಶ್ನೆ ಗುರೂ.. !!! serious ಅಗ್ think ಮಾಡಬೇಕು ಅಂತ ಅನ್ಕೊಂಡೆ!@#$@#% !!!!! ಇವತ್ತು ಆ ಖಾಲಿ ಖಾಲಿ ಯೋಚನೆಗಳಿಗೆ ಅಕ್ಷರ ರೂಪ ಕೊಡ್ತಾ ಇದೇನಿ .. ಮನಸಲ್ಲಿ clarity ಇಲ್ಲ ಅಂದ್ರೆ ಬರೆಯೋಕೆ ಆಗಲ್ಲ ಅಂತ ಅನ್ನೋ ಮಾತು 100 % correct . ಅದಿಕ್ಕೆ ಆ confusion ನೇ ನಿಮ್ ಮುಂದೆ ಇಡ್ತಾ ಇದ್ದೀನಿ.. !! ನಿನ್ನ ಎಕ್ಕ – ಮಕ್ಕ ತಲೆ ಕೆಡೆಸಿಕೊಂಡು think ಮಾಡ್ತಿದ್ದೆ.. ಯಾಕೆ ಈ confusion ಮನಸಲ್ಲಿ ?? something is wrong…!! nothing is RIGHT!!! ಅಂತ .. ಆಗ ನನ್ confusion ಮೂಲ ಗೊತಾಯ್ತು… its..”FINDING MR.RIGHT?? ” ಹೇಗೆ ಗೊತ್ತಾಗತ್ತೆ ?? that he is THE ONE ಅಂತ.. ? ಈ filmy style ಅಲ್ಲಿ ಕೆಲವರು ಬಣ್ಣಿಸ್ತಾರೆ …ಅವರನ್ನ ನೋಡ್ತಿದ್ದ ಹಾಗೆ network catch ಆಗತ್ತೆ.. ತಂಗಾಳಿ ಬೇಸತ್ತೆ.. ಮನಸ್ಸು ಇವನೇ ನನ್ ಹುಡ್ಗ ಅಂತ fix ಆಗತ್ತೆ ಅಂತೆಲ್ಲ… teenage ಅಲ್ಲಿ ಇದ್ನೆಲ್ಲ ನಂಬಿದ್ದೆ ನಾನು!! ಈಗ ಗೊತಗ್ತಿದೆ.. there is so much difference between romance n reality !! ಅಂತ.. ಈ arrange marriage ಲಿ ತುಂಬಾ formalities ಗುರು.. !! ಅದ್ಯಾರೋ ಅಜ್ಜಿನೋ ಅತ್ತೆ ನೋ..”ಅವರಿಗೆ ಪರಿಚಯ..” “ಇವರ ಮನೆ ಕಡೆ ” ಅಂತೆಲ್ಲ ಸಂಬಂಧ ತರೋದು.. 108 ಸಲ 108 ಕಡೆ ಜಾತಕ ತೋರ್ಸೋದು!! ಅದಾದಮೇಲೆ ಅಕಸ್ಮಾತ್ ಜಾತಕ ಕೂಡಲಿಲ್ಲ ಅಂದ್ರೆ.. ಪಾಪ ಹುಡ್ಗ ಸೂಪರ್ ಆಗಿದ್ರು REJECTED !! ಇನ್ನು ಕೆಲವು ಸಲ ಜಾತಕ ok ಆಯಿತು ಅಂದ್ರೆ ಶುರು ಆಗತ್ತೆ ಶೆಕೆ.. ಹೆಣ್ಣು ನೋಡೋ ಶಾಸ್ತ್ರ…!! ಅನಾದಿ ಕಾಲದಿಂದ ಉಪ್ಪಿಟ್ಟು ಕೇಸರಿ ಬಾತು ಈ time ಗೆ fix … ಇತ್ತೆಚ್ಗೆ ಹೆಣ್ಣಿನ ಕಡೆಯವರು budget problem ಅಂತ coffee and chips ಅಲ್ಲೇ ಮುಗಿಸ್ತಾ ಇದಾರೆ !! 😛 (ಸುಮ್ಮನೆ workout ಆಗ್ಲಿಲ್ಲ ಅಂದ್ರೆ ಕೇಸರಿಬಾತ್ ಗೆ ಹಾಕಿದ ಗೋಡಂಬಿ ವೇಸ್ಟ್ ಆಗತಲ್ಲ ಅಂತ ) ಮುಂಚೆ ಎಲ್ಲ ಹುಡ್ಗ ಹುಡುಗಿ ಮುಖ ನೋಡದೆ ಮದುವೆ ಅಗ್ತಿದ್ರಂತೆ..ನಮ್ಮಜಿ ಹೇಳ್ತಿದ್ರು.. ನಂಬಕ್ಕೆ ಆಗಲ್ಲ ಇದ್ನೆಲ್ಲ ನಮ್ generation ಗೆ.. ಇತ್ತೆಚ್ಗೆ love marriage trend ಆದ್ರೂ.. sometimes finding “MR .RIGHT ” is a PROBABILITY.. MIRACLE!! LUCK!!!!!!!!! love marriage workout ಆಗತ್ತಾ ? ಅಥವ arranged ಆ? ಅಂತ ಹೇಳಕ್ಕೆ ಬರಲ್ಲ.. love marriage ಲಿ ನಮ್ ಮನಸಿನ ಮಾತು ಕೇಳಿ ನಮ್ ಹುಡ್ಗನ್ನ select ಮಾಡ್ತಿವಿ… arranged ಲಿ.. ಅಪ್ಪ ಅಮ್ಮ.. totally family ಗೆ ok ಆದ್ರೆ ನಾವ್ JAI ಅಂತಿವಿ ಅಷ್ಟೇ!!! sorry deviate ಆದೆ topic ಇಂದ.. ಎಲ್ಲಿದ್ದೆ.. ಹ್ಹಾ.. ಹೆಣ್ಣು ನೋಡೋ ಶಾಸ್ತ್ರ … ಇದ್ರಲ್ಲಿ ಮುಖ್ಯವಾಗಿ ಗಂಡು ಹೆಣ್ಣು wait ಮಾಡೋ ಅಂತ phase ಅಂದ್ರೆ.. ಅವರಿಬ್ರಿಗೂ ಪರಸ್ಪರ ಮಾತಾಡೋಕೆ ಬಿಡೋ ಟೈಮ್ .. ofcourse ಇಬ್ರಿಗೂ nervousness ಇರತ್ತೆ.. first time ಆದರಂತೂ ಮುಗಿದೇ ಹೋಯ್ತು.. ಏನ್ ಮಾತಾಡೋದು ಅನ್ನೋ tension ಲಿ ಈ ದೊಡ್ಡೋರು ಏನ್ ಮಾತಾಡ್ತಿದ್ರು ಕೇಳಿಸಿಕೊಳ್ಳೋ patience ಎ ಇರಲ್ಲ.. ಮನಸಲ್ಲಿ prepare ಆಗಿರೋ questions ನೇ byheart ಮಾಡ್ಕೊಂಡ್ ಕೂತಿರ್ತಾರೆ.. ಜನ್ಮ ಪೂರ್ತಿ ಜೊತೆಗೆ ಇದ್ರೂ ಒಬ್ರನ್ನ complete ಅಗ್ ಅರ್ಥ ಮಾಡ್ಕೊಳಕ್ ಆಗಲ್ಲ ಅಂತಾರೆ ಜನ.. ಇನ್ನು 15 mins ಮಾತು ಕಥೆ ಅಲ್ಲಿ ಜೀವನ ನಿರ್ಧಾರ ಮಾಡೋದ್ ಸಾಧ್ಯ ನ ?? i dunno !! and not to forget.. aa 15 mins ಅಲ್ಲಿ ..ಯಾವ್ದೋ ಕಂಪನಿ HR ನ interview ಅಲ್ಲಿ impress ಮಾಡೋ ಹಾಗೆ ಅವರನ್ನ impress maadodke try ಮಾಡ್ತಾ ಇರ್ತಿವಿ.. i mean to say we ll b our best at that 15 mins!! Duh!!! ಮೊನ್ನೆ ನನ್ ಫ್ರೆಂಡ್ ಒಬ್ಳು ಹೀಗೆ ಒಂದು ಮದುವೆ interview attend ಮಾಡಿದ್ಲು .. ಏನು ಮಾತಾಡಿರ್ಬೋದು ಅವಳು ಅನ್ನೋ ಕುತೂಹಲ ನಮ್ gang ಗೆ.. ಕೇಳಿದಕ್ಕೆ ಅವಳು… “ಏನಿಲ್ಲ ಕಣ್ರೆ.. ನಮ್ ಮನೆ terrace ಗೆ ಹೋದ್ವಿ ಇಬ್ರಿಗೂ ಏನ್ ಮಾತಾಡಬೇಕೋ ಗೊತಾಗ್ಲಿಲ್ಲ.. ನಾನೇ “ನಿಮ್ ಹೆಸರೇನು ? ” ಅಂತ ಕೇಳಿದೆ tension ಅಲ್ಲಿ .. ಅಂದ್ಲು.. ಹ್ಹಾ ಹ್ಹಾ.. ನಾವೆಲ್ಲಾ ಬಿದ್ದು ಬಿದ್ದು ನಕ್ಕಿದ್ವಿ ಅವತ್ತು .. “ಅಲ್ಲ ಕಣೆ ಮಂಗ.. ಅವನ ಹೆಸರು.. ಕುಲ ಗೋತ್ರ.. ಜಾತಕ .. ಅವನ್ ಮಾಡೋ ಕೆಲಸ.. salary ಎಲ್ಲ ಗೊತ್ಹಿದ್ದೆ deal ok ಅಂದಿದ್ಯ.. ಮತ್ತೆ ಹೋಗಿ ಅವನ್ ಹತ್ರ ಪೆದ್ದು ತರ ನಿಮ್ ಹೆಸರೇನು ಅಂತ ಕೇಳಿದ್ಯಲ್ಲ . ” ಅಂತ.. lol ಸರಿ ಮಾತು ಕಥೆ ಎಲ್ಲ ಆದ್ಮೇಲೆ ಏನು conclusion ಗೆ ಬಂದೆ ಅದನ್ನದ್ರು ಹೇಳಮ್ಮ ತಾಯಿ ಅಂದ್ವಿ.. ಅದಿಕ್ಕೆ.. “ನಂಗೊತ್ತಿಲ್ಲ ಕಣ್ರೆ.. ಅಪ್ಪ ಅಮ್ಮ ಒಳ್ಳೆ ಹುಡ್ಗ ಅಂದಿದಾರೆ.. ಅವರಿಗೆ ಓಕೆ ಆದ್ರೆ ನಂಗು ಓಕೆ ಅಂದ್ಲು ” !!! ಅಯ್ಯೋ ಈ ಮಾತು ಹೇಳಕ್ಕೆ terrace ಮೇಲೆ ಮಾತು ಕಥೆ scene ಗೆ ಯಾಕ 3 reel ವೇಸ್ಟ್ ಮಾಡಿದ್ಲು ಅನ್ಕೊಂದ್ವಿ ನಾವೆಲ್ಲ.. ಒಂಥರಾ ರೋದನೆ ಗುರು ಇದ್ಯೆಲ್ಲ… 15 mins ಅಲ್ಲಿ ಹೇಗೆ ಗೊತಾಗತ್ತೆ ಆ ಹುಡ್ಗ ಒಳ್ಳೆ ಅವನ ? ಕೆಟ್ಟೊನ ? over possesive aa ? ನಮ್ಮನ lifelong ಚೆನ್ನಾಗಿ ನೋಡ್ಕೋತಾನ ?ಇದ್ಯೆಲ್ಲ ಪ್ರಶ್ನೆ ಗೆ clear cut answer ಸಿಗೋಕೆ chance ಏ ಇಲ್ಲ.. ನಮಗೆ finally option ಎ ಇರಲ್ಲ.. ಅಪ್ಪ ಅಮ್ಮನ ಮಾತು ಕೇಳಬೇಕು ಅಷ್ಟೇ.. ಅವರ ಮಾತಿಗೆ OK ಅಂದು.. ನಮ್ life ನ ಅವರ ಕೈ ಲಿ ಇಟ್ಟು .. “ಶಿವಾ… ಕಾಪಾಡಪ್ಪ ! ” ಅನ್ಬೇಕ್ ಅಷ್ಟೇ!! but ಏನೇ ಆಗ್ಲಿ .. ನಮ್ ಲೈಫ್ ನಮ್ ಜವಾಬ್ದಾರಿ.. ಆ imp 15 mins ಅಲ್ಲಿ fake ಮಾಡದೆ .. ಅವರನ್ನ impress ಮಾಡಬೇಕು ಅಂತ try ಮಾಡದೇ .. ನಾವ್ ಇರೋ ಹಾಗೆ ಇರ್ಬೇಕು.. ನನ್ ಇರೋದೇ ಹೀಗೆ.. ನಿಂಗ್ ಓಕೆ ನ ? ಅಂತ ಕೇಳಿದಾಗ… atleast ನಾವ್ ಹೇಗ್ ಇದೀವೋ ಹಾಗ್ accept ಮಾಡ್ತಾರೋ ಇಲ್ವೋ ಅನ್ನೋದು ಗೊತಾಗತ್ತೆ… and ಅವರ expectation idea ಸಿಗತ್ತೆ..!! but ಏನೇ ಆದ್ರೂ.. “FINDING MR.RIGHT ” is purely LUCK!! ಕೆಲವು ಸಲ .. ನಸೀಬು ಚೆನ್ನಾಗ್ ಇದ್ರೆ.. ನಮಗೆ ನಮ್ “MR . RIGHT ” ಸಿಗ್ತಾನೆ.. ಇಲ್ಲಾಂದ್ರೆ.. ಪಾಲಿಗ್ ಬಂದಿದ್ ಪಂಚಾಮೃತ .. ಸಿಕ್ಕಿದೊರ್ನೆ ನಮ್ಮ “MR .RIGHT ” ರಾಜಕುಮಾರ ಅಂತ ಜೀವನ ನಡೆಸಬೇಕು.. ಒಂದಂತೂ ನಿಜ.. love marriage or arranged.. adjustment is a MUST!! ಒಂದೆರಡು ಗಂಟೆ ಒಟ್ಟಿಗೆ ಇರೋದು ಬೇರೆ.. lifelong ಒಟ್ಟಿಗೆ ಇರೋದು ಬೇರೆ.. compromises toh banti hai BOSS !!!!! ಕೊನೆಗೆ ಏನ್ conclude ಮಾಡಬಹುದಪ್ಪ ಅಂದ್ರೆ.. “ಬೊಂಬೆ ಆಡಿಸೋನು … ಮ್ಯಾಲೆ ಕುಂತೋನು.. ನಮಗೆ ನಿಮಗೆ.. ಯಾಕೆ ಟೆನ್ಶನ್ ಉ.. ಲಗಾಮು ದ್ಯಾವರ ಕೈಲಿ ನಾವೇನ್ ಮಾಡೋಣ.. ಎಲ್ಲರು ಮುಖ ಮುಚ್ಕೊಂಡ್ ಡ್ರಾಮಾ ಆಡೋಣ ..!!” LET LIFE UNFOLD !!!

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..