- By Local Kebal Team
- Thursday, July 6th, 2017
1.ಪೂರ್ವಾಗ್ರಹಪೀಡಿತ ಪ್ರೇಕ್ಷಕರು
ಕೆಲವರಿಗೆ ಕೆಲವು ಡೈರೆಕ್ಟರ್ ನ ಅಥವಾ ಹೀರೋ ನ ನೋಡಿದ್ರೆ ಆಗೋಲ್ಲ .. ಯಾಕೆ ಅಂತ ಅವರಿಗೂ ಗೊತ್ತಿರೋಲ್ಲ . ಈ ನನ್ ಮಗ ಆಕ್ಟ್ ಮಾಡಿರೋ / ಡೈರೆಕ್ಷನ್ ಮಾಡಿರೋ ಫಿಲಂ ಚೆನ್ನಾಗಿರೊಲ್ಲ ಅಥವಾ ರಿಮೇಕ್ ಮಾಡಿದಾನೆ ಅಂತ ಗೊಣಗಿಕೊಂಡೆ ಫಿಲಂ ನೋಡಿ ಫೇಸ್ಬುಕ್ ಅಲ್ಲಿ ಫಿಲಂ ಎಷ್ಟೇ ಚೆನ್ನಾಗಿದ್ರೂ ನೆಗೆಟಿವ್ ಸ್ಟೇಟಸ್ ಹಾಕೋರು
2.ಚಟಕ್ಕೆ ಸಿನೆಮಾ ನೋಡುವವವರು
ಕೆಲವರಿಗೆ ಇಂತಹ ಚಿತ್ರಗಳೇ ಆಗಬೇಕೆಂದಿಲ್ಲ ..ಯಾವ್ದಾದ್ರೂ ನಡೆಯುತ್ತೆ .. ಒಟ್ಟಾರೆ ಇವ್ರು ಚಟಕ್ಕೆ ಚಿತ್ರ ನೋಡ್ತಾರೆ .ಫೇಸ್ಬುಕ್ ಅಲ್ಲಿ *Watching **** at Cinepolis * ಅಂತ ಸ್ಟೇಟಸ್ ಹಾಕ್ತಾರೆ
3.ಬಕೆಟ್ ಆಡಿಯನ್ಸ್
ಫಿಲಂ ಎಷ್ಟೇ ತುಕಾಲಿ ಆಗಿದ್ರೂ ,ಸಿನಿಮಾ ಇಷ್ಟ ಆಗದೆ ಇದ್ರೂ Facebook ಅಲ್ಲಿ ಚಿತ್ರಕ್ಕೆ ಸಂಬಂಧಿಸಿರುವವರನ್ನು ಟ್ಯಾಗ್ ಮಾಡಿ “ಈ ಫಿಲಂ ತುಂಬಾ ಚೆನ್ನಾಗಿದೆ .. ಮಿಸ್ ಮಾಡಬೇಡಿ … especially *ಟ್ಯಾಗ್ ಆದೋರ್ ಹೆಸರು * ಆಕ್ಟಿಂಗ್ , ಡೈರೆಕ್ಷನ್ ನೋಡೋದೇ ಚೆಂದ ”
4.ಸಿನೆಮಾ ವಿಮರ್ಶಕರು
ಇವ್ರು ಫಿಲಂ ನೋಡೋದೇ ರಿವ್ಯೂ ಬರೆಯೋಕೆ .. ಪ್ರೊಫೆಶನ್ ಬೇರೆನೇ ಆಗಿದ್ರೂ ಯಾವುದೇ ಪ್ರೊಫೆಷನಲ್ ಪತ್ರಕರ್ತರಿಗೂ ಸೆಡ್ಡು ಹೊಡೆಯಬಲ್ಲ ರಿವ್ಯೂ ಬರೆಯುವುದರಲ್ಲಿ ಎಕ್ಸ್ಪರ್ಟ್ ..ಇವರ ರಿವ್ಯೂ ಆ ಚಿತ್ರಕ್ಕೆ ಸಂಬಂಧಿಸಿರುವವರು ಹಾಗು ಇತರರು ಶೇರ್ ಮಾಡಿದರೆ ವಾರಕ್ಕೆರಡು ಮೂವಿ ರೇವಿವಸ್ ಇವರ ಫೇಸ್ಬುಕ್ ವಾಲ್ ಅಲ್ಲಿ ಪಕ್ಕಾ ಬರುತ್ತೆ
5.ಪೇಪರ್ ಅಲ್ಲಿ ರಿವ್ಯೂ ನೋಡ್ಕೊಂಡು ಸಿನಿಮಾ ನೋಡೋರು
ಇವ್ರು ಪೇಪರ್ ಅಲ್ಲಿ ಅಥವಾ ಫೇಸ್ಬುಕ್ ಅಲ್ಲಿ ಇವರು ನಂಬುವ ಫೇಸ್ಬುಕ್ ವಿಮರ್ಶಕರ ರಿವ್ಯೂ ನೋಡ್ಕೊಂಡೆ ಫಿಲಂ ನೋಡ್ತಾರೆ
6.Selfie audience
ಇವರು ಯಾವ ಥೀಯೇಟರ್ ಅಲ್ಲಿ ಆ ಚಿತ್ರಕ್ಕೆ ಸಂಬಂಧ ಪಟ್ಟೋರ್ ಬರ್ತಾರೋ ಅಲ್ಲಿಗೆ ಫಿಲಂ ನೋಡೋಕೆ ಹೋಗಿ ಆ ಗುಂಪಲ್ಲಿ ಹಾಂಗೋ ಹೀಂಗೋ ಸೆಲ್ಫಿ ಫೋಟೋ ಹೊಡೆಸ್ಕೊಂಡು ಫೇಸ್ಬುಕ್ ಅಲ್ಲಿ ಪೋಸ್ಟ್ ಮಾಡುವವವರು
7.torrents ಕನ್ನಡ ಸಿನಿಪ್ರೀಯ
torrents ಅಲ್ಲಿ ಫಿಲಂ ಬಂದಿದೆ ಅಂತ ಟ್ರೊಲ್ pages ಪೋಸ್ಟ್ ಅಲ್ಲಿರೋ ಕಾಮೆಂಟ್ಸ್ ನೋಡಿ ಅಥವಾ ಫಿಲಂ ಗೆ ಸಂಬಂಧಿಸಿರೋರು ಫೇಸ್ಬುಕ್ ಅಲ್ಲಿ build up ಗೆ ವಾರ್ನಿಂಗ್ ಸ್ಟೇಟಸ್ ಹಾಕಿದಾಗ ಖುಷಿ ಖುಷಿಯಾಗಿ ಸರ್ಚ್ ಮಾಡಿ ಡೌನ್ಲೋಡ್ ಮಾಡಿ ಫಿಲಂ ನೋಡೋರು
8.C.I.D ರಾಜಣ್ಣ
ಇವ್ರು ಒಂದು ಚಿತ್ರದ ಪೋಸ್ಟರ್ ರಿಲೀಸ್ ಆದ ದಿವಸದಿಂದ ಇದು ಯಾವ ಫಿಲಂ ಇಂದ ಕದ್ದಿರ್ಬೋದು, ಯಾವ ಫಿಲಂ ಇಂದ ಹಾಡ್ ಕದ್ದಿರ್ಬೋದು , ಯಾವ ಹಾಡು ಯಾವ ಆಲ್ಬಮ್ ಗೆ ಸೇರಿದ್ದು , ಇದು ಕೋರಿಯನ್ ಮೂವಿ ಇನ್ಸ್ಪಿರೇಷನ್ ಹಾ ? ಮಲಯಾಳಂ ಮೂವಿ ಇನ್ಸ್ಪಿರೇಷನ್ ಹಾ ? ಇಂಗ್ಲಿಷ್ ಮೂವಿ ಇನ್ಸ್ಪಿರೇಷನ್ ಹಾ ? ಅಂತ ಹುಡ್ಕಿ ರೆಡಿ ಆಗಿರ್ತಾರೆ … ಫಿಲಂ ರಿಲೀಸ್ ಆಡ್ ಮೇಲೆ ಮೂವಿ ನೋಡ್ತಾರೋ ಬಿಡ್ತಾರೋ ಗೊತ್ತಿಲ್ಲ .. ಇವ್ರು ಮಾಡಿರೋ CID ಕೆಲಸ ನ ಫೇಸ್ಬುಕ್ ಅಲ್ಲಿ ಪೋಸ್ಟ್ ಮಾಡೋ ಮೂಲಕ reveal ಮಾಡೋಕ್ ಶುರು ಮಾಡ್ತಾರೆ ..ಇನ್ನೂ ಕೆಲವರು ಒಂದ್ ಸ್ಟೆಪ್ ಮುಂದಕ್ಕೆ ಹೋಗಿ youtube ಅಲ್ಲಿ comarision ವೀಡಿಯೋಸ್ ಮಾಡಿ ಶೇರ್ ಮಾಡ್ತಾರೆ
9.ಕನ್ನಡದ ಜೊತೆ ಜೊತೆಗೆ ಬೇರೆ ಭಾಷೆಯ ಒಳ್ಳೆಯ ಸಿನಿಮಾ ಬಗ್ಗೆ ಪೋಸ್ಟ್ ಮಾಡೋರು
ಇವರ ಸಿನಿಮಾ ಜ್ಞಾನಕ್ಕೆ ಕೊನೆಯೇ ಇಲ್ಲ ..ಸಿನಿಮಾದಲ್ಲಿ ಕೆಲಸ ಮಾಡೋರಿಗಿಂತ ಜಾಸ್ತಿ ತಿಳ್ಕೊಂಡಿರ್ತಾರೆ .. ಒಂದು ಚಿತ್ರ ಹೇಗಿದೆ ಅಂತ ಯಾವುದೇ ಮುಲಾಜಿಲ್ಲದೆ ಫೇಸ್ಬುಕ್ ಅಲ್ಲಿ ಸ್ಟೇಟಸ್ ಹಾಕ್ತಾರೆ
10.ಟ್ಯಾಗ ರಾಜರ ಟ್ಯಾಗಿಗೆ ಬಲಿಯಾಗೋ ತ್ಯಾಗಿಗಳು
ಫ್ರೆಂಡ್ಸ್ ಇವರನ್ನ ಕನ್ನಡ ಫಿಲಂ ನೋಡೋಕ್ ಎಳ್ಕೊಂಡ್ ಹೋಗಿರ್ತಾರೆ .. ಅದರಲ್ಲೊಬ್ಬ ಟ್ಯಾಗರಾಜ .. ಇವರನ್ನ ಎಲ್ಲೇ ಹೋದ್ರೂ ಟ್ಯಾಗ್ ಮಾಡ್ತಾನೆ ..ಇವ್ರು ನಿಜವಾಗಿಯೂ ಚಿತ್ರವನ್ನು ಎಂಜಾಯ್ ಮಾಡ್ತಾರೋ ಇಲ್ವೋ ಗೊತ್ತಿಲ್ಲ ..ಬಟ್ ಫೇಸ್ಬುಕ್ ಅಲ್ಲಿ ಇವರ ಗೆಳೆಯರಿಂದಾಗಿ ಎಲ್ಲ ಕಡೆ ಕಾಣಸಿಗುತ್ತಾರೆ