- By Arun Kumar PT
- Sunday, October 8th, 2017
What do you need most in life?
Love!
Oh f*** love, you need purpose!
Predestination ಹೆಸರಿನ ಕುತೂಹಲಕಾರಿ, ಸಸ್ಪೆನ್ಸ್, ಟೈಮ್ ಟ್ರಾವೆಲ್ ಚಿತ್ರದ ನನ್ನ ಮೆಚ್ಚಿನ ಸಂಭಾಷಣೆ ಇದು. ಏನಪ್ಪಾ ಇದು, ಶುರುವಿನಲ್ಲೇ f*Ck, love, purpose ಎಂದೆಲ್ಲಾ ಇದೆ, A certified ಅಂಕಣ ಇದು ಇರಬಹುದಾ ಎಂದು ಚಿಂತಿಸಬೇಡಿ, ಆ ಥರ ಇಲ್ಲಿ ಏನಿಲ್ಲ. ಮುಗುಳುನಗೆ ಚಿತ್ರದ ಹಿನ್ನಲೆಯಲ್ಲಿ ಪ್ರೀತಿ, ಕನಸು, ವೇದಾಂತ, ವಿರಹ, ಬ್ರೇಕಪ್, ವ್ಯವಸ್ಥೆ, stereotype, ಪ್ರಣಯ ಹಾಗೂ ಇನ್ನೂ ಹಲವು ವಿಷಯಗಳನ್ನು explore ಮಾಡುವ ಅಂಕಣ ಇದಷ್ಟೇ. ಇನ್ನೂ ಹೆಚ್ಚಿನ ಸಮಯ ವ್ಯಯಿಸದೆ ಮುನ್ನಡೆಯೋಣ, “ರಮಣಪ್ಪ, ಗಾಡಿ ಸ್ಟಾರ್ಟ್ ಮಾಡಿ”.
ಸಿನಿಮಾಗಳನ್ನು action, ಲವ್, ಕಾಮಿಡಿ, ಡ್ರಾಮಾ, ಸಸ್ಪೆನ್ಸ್ ಎಂದು ಹಲವು genre ಗಳಲ್ಲಿ ಹೇಗೆ ವಿಂಗಡಿಸಬಹುದೋ, ಹಾಗೇ
ಟೈಮ್ ಪಾಸ್ ಸಿನಿಮಾ
ಟೈಮ್ ವೇಸ್ಟ್ ಸಿನಿಮಾ
ಮತ್ತು timeless ಸಿನಿಮಾ ಎಂದು ಕೂಡ ವಿಂಗಡಿಸಬಹುದು. ಟೈಮ್ ಪಾಸ್ ಸಿನಿಮಾ ಗೊತ್ತಲ್ಲಾ, ಆ ಸಿನಿಮಾಗೆ ಹೋಗಿ ಬಂದಿದ್ದಕ್ಕೆ ಲಾಸ್ ಇಲ್ಲ, ಮತ್ತೆ ಲಾಭ ಕೂಡ ಇಲ್ಲ, ಒಂದು general entertainment ಸಿನಿಮಾ. ಥಿಯೇಟರ್ ನಲ್ಲಿ ನೋಡಿದ ಟೈಮ್ ವೇಸ್ಟ್ ಸಿನಿಮಾ ಟಿವಿಯಲ್ಲಿ ಪ್ರಸಾರವಾಗುವ ಜಾಹೀರಾತು ಅಪ್ಪಿ ತಪ್ಪಿ ಚಾನಲ್ ಬದಲಾಯಿಸುವಾಗ ಕಂಡರೂ Tommen Baratheon ಥರ ಟೆರೇಸ್ ಮೇಲೆ ಹೋಗಿ ಧುಪ್ ಅಂತ ಬಿದ್ದು ಬಿಡೋಣ ಎನಿಸುವಷ್ಟು ದುಃಖವಾಗುತ್ತದೆ. ಇನ್ನೂ timeless classic ಚಿತ್ರಗಳಿವೆ. ಅವು ಅಮ್ಮ ಮಾಡಿದ ಒಬ್ಬಟ್ಟು, ಮುದ್ದೆ – ಕೋಳಿ ಸಾರು, ಇಲ್ಲಾ ಗೆಳೆಯರೊಂದಿಗೆ ಭರ್ಜರಿ ಬ್ಯಾಟಿಂಗ್ ಮಾಡಿದ ಮದುವೆ ಊಟದಂತೆ. ದಿನವೂ ತಿಂದರೆ ಅದರ flavor ರುಚಿಸುವುದಿಲ್ಲ. ತುಂಬಾ ಗ್ಯಾಪ್ ಕೊಟ್ಟು ತಿಂದಾಗ ಅದರ ಸವಿಯೇ ಬೇರೆ. ಈ timeless ಚಿತ್ರಗಳೂ ಹಾಗೆಯೇ, ಯಾವತ್ತೋ ತುಂಬಾ ಬೇಜಾರಾದಾಗ, ಏನೂ ಮಾಡಲು ಮನಸ್ಸಾಗದಿದ್ದಾಗ, ಈ ಚಿತ್ರಗಳನ್ನು ನೋಡಿದಾಗ ಮನಸ್ಸು ಮತ್ತೆ ಪುಟಿಯುವ ಕಾರಂಜಿಯಂತಾಗುತ್ತದೆ. The Shawshank Redemption, ಬಂಗಾರದ ಮನುಷ್ಯ, ಕಸ್ತೂರಿ ನಿವಾಸ, ಉಪೇಂದ್ರ, The Dark Knight, ಕಡ್ಡಿಪುಡಿ, Kick, Athadu, ಪರಮಾತ್ಮ, ಹೀಗೆ ಹಲವಾರು genre ಗಳಲ್ಲಿ ಬೇಕಾದಷ್ಟು ಸಿನಿಮಾಗಳು ನಮ್ಮ ಪಟ್ಟಿಯಲ್ಲಿವೆ. Coming back to topic, ಮುಗುಳುನಗೆ ಚಿತ್ರ ಬಿಡುಗಡೆಯಾಗಿ ಈಗಾಗಲೇ ಒಂದು ತಿಂಗಳಾಗುತ್ತಾ ಬಂತು. ಇಷ್ಟೊತ್ತಿಗೆ ಎರಡು – ಮೂರು ಸಲ ನೋಡಿದವರೂ ಇದ್ದಾರೆ, ಏ ಚೆನ್ನಾಗಿಲ್ಲ ಬಿಡು ಮಗಾ ಅಂದ ಯಾರೋ ಒಬ್ಬರ ಮಾತು ಕೇಳಿ ನೋಡದೇ ಇದ್ದವರೂ ಇದ್ದಾರೆ. ನನ್ನ ಕೇಳೋದಾದರೆ, ಈ ಕ್ಷಣಕ್ಕೆ ಮುಗುಳುನಗೆ ಟೈಮ್ ಪಾಸ್ ಅಥವಾ ಟೈಮ್ ವೇಸ್ಟ್ ಸಿನಿಮಾ ಅನಿಸಿದರೂ, over some time, timeless ಚಿತ್ರ ಅನಿಸದಿದ್ದರೂ ಯೋಗರಾಜ್ ಭಟ್ ಮತ್ತು ಗಣಿ career ಅಲ್ಲಿ one of the best ಎಂದು ಅನಿಸದೇ ಇರದು. ಯಾಕೆ? ಅಂಥದ್ದು ನಾನೇನು ನೋಡಿದೆ ಈ ಚಿತ್ರದಲ್ಲಿ, ಉತ್ತರ ಮುಂದೆ ಇದೆ.
Honestly, ಮುಗುಳುನಗೆ ಚಿತ್ರದಲ್ಲಿ ಹೆಚ್ಚು ಕಮ್ಮಿ ಏನೂ ಇಲ್ಲ! ಮೈ ಆಟೋಗ್ರಾಫ್, ಲೈಫು ಇಷ್ಟೇನೇ ಮತ್ತು ಇತರ ಕಾಲೇಜ್ ಚಿತ್ರಗಳನ್ನು ಮಾಡಿ ಭಟ್ಟರ ಶೈಲಿಯ ಮಾತಿನ ಒಗ್ಗರಣೆ ಸೇರಿಸಿ ಆದ ಅಡುಗೆ ಮುಗುಳುನಗೆ. ಆದರೆ ಲೈಫು ಇಷ್ಟೇನೇ ಚಿತ್ರದ dark humor, ಮೈ ಆಟೋಗ್ರಾಫ್ ಚಿತ್ರದ past ನ ಮೆಲುಕು ಯಾವುದೂ ಇಲ್ಲಿಲ್ಲ. ಮುಗುಳುನಗೆ ಚಿತ್ರವು ಪುಲಕೇಶಿ ಎಂಬ ಕವಿ ಹೃದಯದ ಮಾಮೂಲಿ techie ಒಬ್ಬನ ಜನವರಿ, ಸೆಪ್ಟೆಂಬರ್, ಏಪ್ರಿಲ್, ನವೆಂಬರ್ ನಂತಹ ಕೆಲವು ಪ್ರೇಮ ಕಥೆಗಳ ಸುಂದರ ಹೂಗುಚ್ಚ.
Jamie Lannister: There are many lessons in failure.
Olenna: You must be quite wise by now!
Game of Thrones ನ ಮೇಲಿನ ಸಂಭಾಷಣೆಯಂತೆ ಪುಲಕೇಶಿ ಪ್ರತಿ ಕಥೆಯ ಕೊನೆಯಲ್ಲಿ ಏನೋ ಒಂದನ್ನು ರೂಢಿಸಿಕೊಳ್ಳುತ್ತಾನೆ, ಕೆಲವು ಬದಲಾವಣೆ ಮಾಡಿಕೊಳ್ಳುತ್ತಾನೆ, but most importantly, ಮಾನಸಿಕವಾಗಿ ಇನ್ನಷ್ಟು ಪಕ್ವ ಅಥವಾ evolve ಆಗುತ್ತಾ ಹೋಗುತ್ತಾನೆ. ಆಗಲೇ ಹೇಳಿದೆನಾ? ಮುಗುಳುನಗೆ ಚಿತ್ರ ಪುಲಕೇಶಿಯ ಹಲವು ಪ್ರೇಮ ಕಥೆಗಳ ಕಾವ್ಯಾತ್ಮಕ ಸಂಕಲನ ಇದ್ದ ಹಾಗೆ. ಎಲ್ಲರ ಯೋಚನಾ ಲಹರಿಗೆ ಕಥೆ, ಕಾವ್ಯವಲ್ಲ! ಚಿತ್ರದ ಶುರುವಿನಲ್ಲಿ ನಾಉಕನ ಬಾಲ್ಯದ ಚಿತ್ರಣ. ಮಗುವಿಗೆ ಒಂದು hypothetical ಖಾಯಿಲೆ ಇದೆ. ಮಗು ಅಳುತ್ತಿಲ್ಲ ಎಂಬುದಷ್ಟೇ ಖಾಯಿಲೆಯ ಲಕ್ಷಣ. Cerelac ತಿನ್ನಲ್ಲ ಅಂತ ರಚ್ಚೆ ಹಿಡಿಯಲ್ಲ, ಅಮ್ಮನೇ ಬೇಕು ಅಂತ ಗೊಳೋ ಅನ್ನಲ್ಲ etc etc.ಆ ಮಗು ಯಾವಾಗಲೂ ನಗುತ್ತಲೇ ಇರುತ್ತೆ. ನಮ್ಮ ಮಕ್ಕಳು ಮತ್ತು ಬೇರೆಯವರ ಹೆಂಡತಿ ಅತ್ತರೆ ನೋಡೋಕಾಗಲ್ಲ ಎಂಬ ಒಂದು ಜೋಕ್ ಇದೆ. To be honest, I’m not very good with chikka makklu. ಆದರೆ ಅವಕ್ಕೂ ಒಮ್ಮೊಮ್ಮೆ ಅಪ್ಪ ಅಮ್ಮ ಜೊತೆ ಇದ್ದೂ ಇದ್ದೂ ಬೋರ್ ಆಗಿರುತ್ತೆ ಅನಿಸುತ್ತೆ, “ಬಾ ಪುಟ್ಟ, ಬಾ, ಅಂಕಲ್ ಹತ್ತಿರ ಬಾ” ಅಂತ ಕರೆದಾಗ ಒಮ್ಮೊಮ್ಮೆ ಹತ್ತಿರ ಬರುತ್ತವೆ. ಅಲ್ನೋಡು ಮಾರುತಿ ಕಾರು ಬಂತು, ಇಲ್ಲಿ ನೋಡು Hachiko ಬಂತು ಅಂತ ಒಂದ್ 10-20 ನಿಮಿಷ ಟೈಮ್ ಪಾಸ್ ಮಾಡಬಹುದೂ ಅನ್ನಿ. ಆದರೆ ಅಮ್ಮ ಬೇಕು ಅಂತ ಅತ್ತ ತಕ್ಷಣ ಟಾಟಾ ಬೈ ಬೈ. ಸುಮ್ಮನೆ ಯೋಚನೆ ಮಾಡಿದರೆ ಚಿಕ್ಕ ಮಕ್ಕಳು ಅತ್ತರೆ ಸಮಸ್ಯೆ, ಅಳದಿದ್ದರೆ ಎಲ್ಲಾ ಸೂಪರ್ ಅಲಾ ಅನಿಸುತ್ತದಾದರೂ ಅದಕ್ಕೆ ಉತ್ತರ ನಿಧಾನಕ್ಕೆ ಸಿಗುತ್ತಾ ಹೋಗುತ್ತದೆ.
ಕಟ್ ಮಾಡಿದ್ರೆ, ಪ್ರಸ್ತುತ ಟೈಮ್ ಲೈನ್ ನಲ್ಲಿ ನಾಯಕ ಇಂಜಿನಿಯರಿಂಗ್ ಮಾಡಿ ಆಗಲೇ 7 ವರ್ಷ ಆಗಿದೆ. ಹಳೇ ವಿದ್ಯಾರ್ಥಿಗಳ Get Together ಕಾರ್ಯಕ್ರಮಕ್ಕೆ ಅಂತ ಬಂದಾಗ ಸ್ಟೇಜ್ ಮೇಲೆ ‘ಚಿಕ್ಕ ಪುಟ್ಟ’ ಅವಾಂತರ ಕೂಡ ಆಗುತ್ತದೆ. One thing leads to another and Pulakeshi falls in love with Vaishali. Casually, ಮೆಸೇಜ್, ಚಾಟ್ ಇಂದ ಶುರುವಾಗುವ ಅದೇ ಹಳೇ ಕಥೆ ಇದಾದರೂ ಪುಲಕೇಶಿ – ವೈಶಾಲಿ ಒಬ್ಬರ ಮನದೊಳಗೆ ಇನ್ನೊಬ್ಬರು ಸ್ಥಾಪನೆಯಾಗುವಷ್ಟು emotionally connect ಆಗಿ, ಮಾನಸಿಕವಾಗಿ ಆಪ್ತವಾಗುತ್ತಾರೆ.
ಅವಳು ಇಬ್ಬರೂ ಹೊರ ದೇಶಕ್ಕೆ ಹೋಗಿ ಉನ್ನತ ವ್ಯಾಸಂಗ ಮಾಡುವ ಕನಸು ಮುಂದಿಡುತ್ತಾಳೆ. ಅಲ್ಲಿ ಇಲ್ಲಿ ಸಾಲ ಮಾಡಿ, ಉಳಿತಾಯದ ಹಣ ಎಲ್ಲಾ ಒಂದು ಕಡೆ ಹೊಂದಿಸಿ ಹೆಂಗೋ USA ಪಯಣದ ಕನಸು ಸಾಕಾರವಾಗುತ್ತದೆ. ಅಲ್ಲಿಯವರೆಗೂ ತನ್ನ ಮನೆಯಲ್ಲಿ ತಾನೂ ಒಬ್ಬ ಸುಮ್ಮನೆ ಇದ್ದೀನಷ್ಟೇ ಅಂದುಕೊಳ್ಳುತ್ತಿದ್ದ ಪುಲಕೇಶಿ, ತನ್ನ ಕುಟುಂಬದವರೊಂದಿಗೆ ತಾನು ಎಷ್ಟು ಆಳವಾಗಿ ಅನುಬಂಧ ಹೊಂದಿದ್ದಾನೆ ಎಂದು ಅವನಿಗೆ realize ಆಗುತ್ತದೆ. ಆ ಏರ್ಪೋರ್ಟ್ ನಲ್ಲಿ ಈ ಕಥೆ ಕೊನೆಯಾಗುವ ದೃಶ್ಯವನ್ನು ಸ್ವಲ್ಪ detail ಆಗಿ ಮಾತನಾಡಬೇಕು. ಪುಲಕೇಶಿ ತಂಗಿ ಮಾಮೂಲಾಗಿ ನಿಂತಿದ್ದಾಳೆ. ಅಮ್ಮ ಬೇಜಾರಾಗಿದ್ದಾರೆ, ಸ್ವಲ್ಪ ಅಳುತ್ತಾರೆ ಕೂಡ. ಆದರೆ ಪುಲಕೇಶಿ ಅಪ್ಪ ಅವನ ಕಡೆ ನೋಡದೆ ಸ್ವಲ್ಪ ದೂರ ಬಂದು ಈ ಕಡೆ ನಿಂತಿರುತ್ತಾರೆ. ಅಪ್ಪನಿಗೆ bye ಹೇಳಿ, ಈ ಕಡೆ ಬಂದು, ಇನ್ನೇನು ಗೇಟ್ ಇಂದ ಒಳಗೆ ಹೋಗಬೇಕು ಎನ್ನುವಷ್ಟರಲ್ಲಿ ಅವನಿಗೆ ಹಿಂಜರಿಕೆ ಉಂಟಾಗುತ್ತದೆ. Winners finish, losers quit ಎಂದು ಹೇಳುತ್ತಾರೆ. ಆದರೆ ಕೆಲವು ಸಂದರ್ಭಗಳಲ್ಲಿ quit ಮಾಡುವುದೇ ಅತ್ಯಂತ ಸೂಕ್ತ ನಿರ್ಧಾರ ಅನಿಸುತ್ತದೆ. ಅದು ಅಷ್ಟು ಸುಲಭ ಕೂಡ ಅಲ್ಲ ಅಂತ ಆ ರೀತಿಯ decision ಮಾಡಿದವರಿಗೆ ಮಾತ್ರ ಗೊತ್ತಿರುತ್ತದೆ. “ಕೆಲವೊಂದು ಗೆರೆಗಳನ್ನು ನಾವು ಯಾವತ್ತೂ ದಾಟಬಾರದು; ದಾಟಿದರೆ ಮತ್ತೆ ವಾಪಸ್ ಬರೋಕೆ ಆಗಲ್ಲ” ಅಂತ ಪುಲಕೇಶಿ ಆ ಕ್ಷಣದಲ್ಲಿ ವೈಶಾಲಿಗೆ ಹೇಳುವ ಮಾತು ಬರೀ ಅಮೆರಿಕಗೆ ಉನ್ನತ ವ್ಯಾಸಂಗಕ್ಕೆ ಹೋಗುತ್ತಿರುವ ಬಗ್ಗೆ ಹೇಳುತ್ತಿಲ್ಲ ಎಂದು ಅನಿಸಿದರೆ, you are right! ಹಾಗಾದರೆ, ತಪ್ಪು ಎಲ್ಲಿ ಆಯಿತು? ಪುಲಕೇಶಿ ಮತ್ತು ವೈಶಾಲಿ ನಡುವೆ ಇದ್ದದ್ದು wrong number connection ಅಥವಾ infatuation ಎಂದು ಹೇಳಲಾಗದು. ಅವರಿಬ್ಬರೂ ಭೇಟಿಯಾಗುವ ಸಂದರ್ಭ ತುಸು odd ಎನಿಸಿದರೂ, ನಂತರದ ಹಲವು ಭೇಟಿ, ಮಾತುಕತೆಗಳ ತರುವಾಯ ಅವನು – ಅವಳು ಇಬ್ಬರೂ ಅವರಾದರು ಎನ್ನುವ ಹಾಗೆ ಒಬ್ಬರಲ್ಲೊಬ್ಬರು ಭಾವನಾತ್ಮಕವಾಗಿ ಸೆರೆಯಾಗುತ್ತಾರೆ. ನಿನ್ನ ಸ್ನೇಹದಿಂದ ಹಾಡಿನಲ್ಲಿ ಬರುವ
ಕುಂತ ಜಾಗದಲಿ, ಕುಂಟು ನೆಪ ಹೇಳಿ,
ಕಿರುಬೆರಳ ನೇವರಿಸು, ಒಂದಿನಿತು ಆವರಿಸು
ಸಾಲುಗಳು ಮೇಲಿನ ಕಥೆಯನ್ನು ಸಾಕ್ಷೀಕರಿಸುತ್ತವೆ. All I need is you needing me ಎನ್ನುವ ಹಲವು ಚಿಕ್ಕ ಚಿಕ್ಕ ಮನಸ್ಸಿನ ಬಯಕೆಗಳು ಈ ಹಾಡಿನಲ್ಲಿ ವ್ಯಕ್ತವಾಗಿವೆ. Trivia ಏನೆಂದರೆ, ಪುಲಕೇಶಿ ಮತ್ತು ವೈಶಾಲಿ, ಜೊತೆಯಲ್ಲಿ ಓಡಾಡುವಾಗ Geet Guitar ನಲ್ಲಿ ಮುಂದಿನ ನಾಯಕಿ ಸಿರಿಯನ್ನು (ನಿಖಿತಾ ನಾರಾಯಣ್) ನೋಡಿರುತ್ತಾನೆ. ಅಲ್ಲೇ ಒಂದು ಗಿಟಾರ್ ಪಕ್ಕದ ಟೇಬಲ್ ಓಕೆ ನಾ ಪುಲಕೇಶಿ suggest ಮಾಡಿದಾಗ “ನನಗೆ ಗಿಟಾರ್ ಕಂಡ್ರೇನೇ ಆಗಲ್ಲ, ಇನ್ನೂ ಇಲ್ಲಿ ಬೇರೆ ಕುಳಿತುಕೊಳ್ಳಬೇಕಾ” ಎಂದು ವೈಶಾಲಿ ಹೇಳುತ್ತಾಳೆ. ಅದೇ ಸಮಯಕ್ಕೆ restroom ಹೋಗಿ ಬರುತ್ತೇನರ ಎಂದು ಹೋಗುವ ಪುಲಕೇಶಿಗೆ ಅವನ USA ಓದಿನ ಖರ್ಚಿಗಾಗಿ, ಮತ್ತು ತನ್ನ heart operation ಗೂ ಸೇರಿಸಿ 30 ಲಕ್ಷ ಸಾಲ ಮಾಡುತ್ತಿರುವ ಅಪ್ಪನನ್ನು ನೋಡುತ್ತಾನೆ. ಪುಲಕೇಶಿಗೆ ತನ್ನ ಪ್ರೀತಿಗಿಂತ ತನ್ನ ಕುಟುಂಬವೇ ಹೆಚ್ಚು ಮುಖ್ಯ ಎಂಬ ನಿರ್ಧಾರಕ್ಕೆ ಬರುವ ಯೋಚನೆ ಅಲ್ಲಿಂದಲೇ ಶುರುವಾಗುತ್ತದೆ ಅನಿಸುತ್ತೆ. Airport ನಲ್ಲಿ ತನ್ನ ಕುಟುಂಬಕ್ಕೆ ವಿದಾಯ ಹೇಳಲಾಗದೆ ಒಂದು tough decision ತೆಗೆದುಕೊಂಡು ವಾಪಸ್ ಬಂದು ಬಿಡುತ್ತಾನೆ. ಹಾಲಿ ಹುಡುಗಿ ಹಳೇ ಹುಡುಗಿ ಆಗಾಯ್ತು, ಅಪ್ಪನ ಜೊತೆ ಚಿಕ್ಕ ಪುಟ್ಟ ಕಿರಿಕ್ ಇದ್ದೇ ಇದೆ, ಯಾಕೆ ಹೀಗೆ ಮಾಡಿದೆ ಎಂದು ತನ್ನ ನಿರ್ಧಾರಗಳನ್ನು ಪ್ರಶ್ನಿಸುತ್ತಾ ಕುಳಿತಿದ್ದ ಪುಲಕೇಶಿ ಮೈಸೂರು ಬಂದೊಡನೆ ಇಳಿದು ನದಿಯ ಮೇಲಣ ಸೇತುವೆಯ ಮೇಲೆ ನೆಡೆದು ಬರುತ್ತಾ ಗಾಢವಾಗಿ ಯೋಚಿಸುತ್ತಾನೆ. ಅಲ್ಲಿಯವರೆಗೂ ತನ್ನ ಜೊತೆಗಿದ್ದ ಮೊಬೈಲ್ ಫೋನ್ ಅನ್ನು ನದಿಗೆ ಎಸೆದು ಮುಂದೆ ಸಾಗುವ ಪುಲಕೇಶಿಯ ಮನಸ್ಸಿಗೆ ಆದ ನೋವನ್ನು ಅಂದಾಜಿಸಬಹುದಷ್ಟೇ. ಹೀರೋ – ಹೀರೋಯಿನ್ ಪ್ರೀತಿ ಮಾಡಿ, ಜಗಳ ಆಗಿ, ಏರ್ಪೋರ್ಟ್ ನಲ್ಲಿ ‘ಮಿಲನ’ ಆಗುವ ಎಷ್ಟೋ ಲವ್ ಸ್ಟೋರಿಗಳು ನಮ್ಮ ಕಣ್ಣ ಮುಂದಿವೆ. ಅಂತಹ ಏರ್ಪೋರ್ಟ್ ನಲ್ಲಿ ಪುಲಕೇಶಿ ಮೊದಲ ಪ್ರೇಮ ವಿಮಾನ take off ಆಗಿ ಹೊರಟಿದ್ದು ದುಃಖದ ವಿಷಯ.
“ಕೊಲೆ ಮಾಡೋದು ತಣ್ಣೀರು ಸ್ನಾನ ಮಾಡಿದ ಹಾಗೆ, ಮೊದಲಿಗೆ ಸ್ವಲ್ಪ ಕಷ್ಟ ಆಗುತ್ತೆ, ಆಮೇಲೆ ಅದೇ ಅಭ್ಯಾಸ ಆಗೋಗುತ್ತೆ” ಅನ್ನೋ ಉಗ್ರಂ ಚಿತ್ರದ ಡೈಲಾಗ್ ನಿಮಗೆ ನೆನಪಿರಬಹುದು. ಈ ಮೇಲಿನ ಡೈಲಾಗ್ ಹೇಳಿರುವುದು ಕೊಲೆ ಬಗ್ಗೆಯೇ ಆದರೂ, ಯಾವಾಗಲೂ ಫೇಲ್ ಆಗುವ ನಮ್ಮಂಥವರಿಗೆ ಹೇಳಿ ಬರೆಸಿದಂತಿದೆ. ಆ ಫೇಲ್ ಆಗುವುದು ಪರೀಕ್ಷೆ ಇರಬಹುದು, ಜೀವನ ಅಥವಾ ಪ್ರೀತಿಯೇ ಇರಬಹುದು. ಮೊದಲನೇ ಸಲ ತುಂಬಾ ಅಳು ಬರುತ್ತೆ, why life is so unfair ಎಂಬ ಪ್ರಶ್ನೆ ಕಾಡುತ್ತಿರುತ್ತದೆ, ಸ್ವಲ್ಪ ದಿನ ಆದ ಮೇಲೆ ಅದೇ ಸರಿ ಹೋಗುತ್ತೆ. Work is the best antidote to sorrow ಎಂಬ Sherlock ಡೈಲಾಗ್ ಅನ್ನು ಈ ವಿಷಯದಲ್ಲಿ ನಮ್ ಹುಡುಗ ಚೆನ್ನಾಗಿ ಅಳವಡಿಸಿಕೊಂಡ. ತೀರಾ ಗೂಗ್ಲಿ ಯಶ್ ರೇಂಜಿಗೆ ಸಕ್ಸಸ್ ಆಗಿಲ್ಲವಾದರೂ, he survived, ಇನ್ನೇನು ಬೇಕು? In fact,
ಫೇಲಾದವನೇ ಪಾಸ್ ಆಗೋದು, ಹೊಡಿ ಒಂಭತ್ತ್;
ಇದನ್ನ ತಿಳ್ಕೊಂಡವನೇ ಮೇಷ್ಟ್ರಾಗೋದು, ಹೊಡಿ ಒಂಭತ್ತ್
ಸಾಲುಗಳು ಕೂಡ ಮೇಲಿನ ಮಾತಿನ ಇನ್ನೊಂದು ರೂಪ ಅಷ್ಟೇ. Please welcome, ಪುಲಕೇಶಿ 2.0, ಅದೇ ಹೃದಯದಾಳದಿಂದ ಮನಸಾರೆ ಪ್ರೇಮಿಸುವ honest ಪ್ರೇಮಿ, ಆದರೆ ಸ್ವಲ್ಪ ಪಕ್ವನಾಗಿದ್ದಾನೆ. ಇಂತಹ ಪುಲಕೇಶಿಗೆ ಆ ಗೀತ್ ಗಿಟಾರ್ ಅಲ್ಲಿ ಗಿಟಾರ್ ನುಡಿಸುತ್ತಿದ್ದ ಸಿರಿ ಇಷ್ಟ ಆಗುತ್ತಾಳೆ. ಅಲ್ಲಿನ ಕಾಂಟ್ರಾಕ್ಟ್ ಮುಗಿಸಿಕೊಂಡು ಸಿರಿ ತನ್ನ ಮನೆ ಪಾಂಡಿಚೇರಿಗೆ ಮರಳುತ್ತಾಳೆ. ಅವಳ ಸಹವರ್ತಿಗಳಿಂದ ವಿಳಾಸ ಪಡೆದು ನಮ್ ಹುಡುಗ ಒಂದು ಟೋಪಿ, ಬ್ಯಾಗು ಎತ್ಕೊಂಡು ನಮ್ ಹುಡುಗ ಸೀದಾ ಪಾಂಡಿಚೇರಿ ಹೋಗಿ ಬಿಡ್ತಾನೆ. ಅಲ್ಲೊಂದಿಷ್ಟು hi – hello, ನೀವು ಗಿಟಾರ್ ತುಂಬಾ ಚೆನ್ನಾಗಿ ನುಡಿಸ್ತೀರಾ, ನನಗೂ ಕಲಿಸಿ ಕೊಡ್ತೀರಾ etc etc ಗಳ ನಂತರ ಸಿರಿಯ ಪ್ರೇಮ ರಾಗದಲ್ಲಿ ಸ್ವರವಾಗಿ ಪುಲಕೇಶಿ ಬೆರೆತು ಹೋಗುತ್ತಾನೆ. ಸಾಧಾರಣವಾಗಿ ನಮ್ಮಲ್ಲಿ arrange marriage ಆಗುವಾಗ ಕಾಲೇಜಿನ ಲವ್ ಸ್ಟೋರಿ, ಮನೆ ಅಕ್ಕಪಕ್ಕದ friends with benefits ಅಂಥದ್ದೇನಾದರೂ ಇದ್ದರೆ ಎಲ್ಲವನ್ನೂ ಮಣ್ಣು ಮಾಡಿ “ಲವ್ವಾ? ಆ ಥರ ಏನೂ ಇಲ್ಲಪ್ಪ” ಎಂದು ಹೇಳಿವವರೇ ಜಾಸ್ತಿ. Practically, ಅದು ತಪ್ಪೇನಲ್ಲ, ಮದುವೆ ನಂತರ ಒಬ್ಬರಿಗೊಬ್ಬರು ಅನುಸರಿಸಿಕೊಂಡು ಹೋದರೆ ಸ್ವರ್ಗ ಅದೇ ಅಲ್ಲವೆ?! ಹೀಗಿದ್ದಾಗ ಪುಲಕೇಶಿ ಕೆಲವು ಸಮಯದ ನಂತರ ಅವನ ಮತ್ತು ವೈಶಾಲಿಯ ಸಂಪೂರ್ಣ ಕಥೆಯನ್ನು ಸಿರಿ ಎದುರು ತೆರೆದಿಡುತ್ತಾನೆ. Sadly, ಪುಲಕೇಶಿಗೆ ಹಲವು ಸಲ ಸಿರಿ ಜೊತೆ ಮಾತನಾಡುವಾಗ ವೈಶಾಲಿ ಬಂದು ಇನ್ನೇನೋ ಮಾತನಾಡಿ ಹೋದ ಹಾಗೆ hallucination ಕೂಡ ಆಗುತ್ತಿರುತ್ತದೆ. ಅದನ್ನು ಮೀರಿ, ಅವರಿಬ್ಬರ ಪ್ರೇಮ ಕೆಲವು ದಿನಗಳಲ್ಲಿ ಗಾಢವಾಗಿ ಆವರಿಸಿಕೊಳ್ಳುತ್ತದೆ. ಒಂದು ರಾತ್ರಿ, ಪುಲಕೇಶಿ ‘ಹುಡುಗಿಯನ್ನು ನೋಡಲು ಬನ್ನಿ’ ಅಂತ ಮನೆಯವರಿಗೆ ಫೋನ್ ಮಾಡೇ ಬಿಡುತ್ತಾನೆ. ಸ್ವಲ್ಪ ಸಿಲ್ಲಿಯಾಗಿ ಹೇಳುವುದಾದರೆ, “ಪ್ರೀತಿ ಓಕೆ, ಆದರೆ ಮದುವೆ ಯಾಕೆ” ಎನ್ನುವಂಥ ಸಿಂಪಲ್ ಹುಡುಗಿ ಸಿರಿ. ಅವಳು ಪುಲಕೇಶಿಯನ್ನು ಪ್ರೀತಿಸಿಲ್ಲ ಅಂದರೆ ತಪ್ಪಾಗುತ್ತೆ, ಆದರೆ ಅವನ ಮದುವೆ ಆಲೋಚನೆಗಳು ಅವಳಿಗೆ ಸೂಕ್ತ ಎನಿಸುವುದಿಲ್ಲ ಅಷ್ಟೇ. Things happened very swiftly and she fell in love with him. ಪುಲಕೇಶಿಗೆ ಮದುವೆಯ ನಂತರವೂ ಇದೇ ಭಾವನಾತ್ಮಕ ಸಂಬಂಧ ಮುಂದುವರೆಯುವ ನಂಬಿಕೆ ಇದೆ, ಸಿರಿಗೆ ಅದೆಲ್ಲಾ ಸುಳ್ಳು ಅನಿಸುತ್ತೆ. ಕೊನೆಗೆ, ಇಬ್ಬರ ನಡುವಿನ ಅಭಿಪ್ರಾಯ ವ್ಯತ್ಯಾಸದಿಂದ ಆ ಪ್ರೀತಿ ಮದುವೆಯ ಹೆದ್ದಾರಿಯನ್ನು ಸೇರುವ ತಿರುವಿನಲ್ಲಿ ಜಾರಿ ಕಡಲು ಸೇರುತ್ತದೆ. ಪಾಂಡಿಚೇರಿ ಕಡಲ ತೀರದಲ್ಲಿ ಕುಳಿತು ಅವಳು ಕಟ್ಟಿದ್ದ ಲಾಕೆಟ್ ನೀರಿಗೆಸೆಯುತ್ತಾನೆ. ಅವನ ಮನಸ್ಸಿಗೆ ಇನ್ನಿಲ್ಲದಷ್ಟು ಬೇಜಾರಾಗುತ್ತದೆ. ಆದರೆ ಪುಲಕೇಶಿಗೆ ಬಾಲ್ಯದಿಂದ ಇದ್ದ ಆ ಆರೋಗ್ಯ ಸಮಸ್ಯೆ’ಯಿಂದ ಗಂಟಲು ಉಬ್ಬಿ ಬರುತ್ತದದಾದರೂ ಅಳು ಬರುವುದಿಲ್ಲ. Titanic ಸಿನಿಮಾ ನೋಡುವಾಗ ಅಳುವನ್ನು ಎಷ್ಟು control ಮಾಡಿಕೊಂಡರೂ ಕಣ್ಣೀರು ಜಾರಿ ನೆಲ ತಾಕುವ ಹಾಗೆ ವಿರುಧ್ಧವೆನ್ನುವ ಹಾಗೆ, ಇಲ್ಲಿ ಪುಲಕೇಶಿ ಕಣ್ಣೀರು ಹಾಕಿ ಆ ಪ್ರೀತಿಯನ್ನು ಅಲ್ಲೇ ಬಿಟ್ಟು ಬಿಡಲು ಪ್ರಯತ್ನಿಸುತ್ತಾನೆ; ಆದರೆ ಕಣ್ಣೀರು ಬರುವುದೇ ಇಲ್ಲ. ನಾವು ಯಾರಿಗೇ ಆದರೂ ಜೀವನದಲ್ಲಿ ಯಾವಾಗಲೂ ನಗು ನಗುತ್ತಾ ಇರಿ ಎಂದು ಹಾರೈಸುತ್ತೇವೆ, ಅಳುವನ್ನು ಎಲ್ಲೂ mention ಮಾಡುವುದೇ ಇಲ್ಲ. ಯಾಕೆಂದರೆ ಯಾವುದಾದರೂ ಒಂದು ವಿಷಯಕ್ಕೆ ನಾವು ಇಂದಲ್ಲ ನಿನ್ನೆ ಅತ್ತೇ ಇರುತ್ತೇವೆ. Don’t want to brag, but “Mard ko Dard nahi hota” ಅನ್ನೋದು ದೊಡ್ಡ ಸುಳ್ಳು. In fact, ಭಂಡ ಧೈರ್ಯ ಅವನಿಗೆ ಎಂಬ character ನ ನಮ್ಮ ಹುಡುಗರೂ ಕೂಡ ಕೆಲವು ಭಾವನಾತ್ಮಕ ಸನ್ನಿವೇಶಗಳಲ್ಲಿ ಅತ್ತಿರೋದು ನಾವೆಲ್ಲಾ ನೋಡಿರುತ್ತೇವೆ. ಜೀವನದಲ್ಲಿ ಅಳು ಕೂಡ ಒಂದು ಅತಿ ಮುಖ್ಯ ಭಾವನಾತ್ಮಕ ಕ್ಷಣ. ಯಾರಾದರೂ ತೀರಿ ಹೋದಾಗ, ಅಪಘಾತ ಆದಾಗ, ಸಿನಿಮಾ – ಧಾರವಾಹಿ ಇತ್ಯಾದಿ, ಹೀಗೆ ಹಲವಾರು ಬಾರಿ ಅಳುವುದು ಸಾಮಾನ್ಯ. ಅಳುವನ್ನು ಮರೆಮಾಚಿ ನಗುತ್ತಾ ಬಾಳುವ legends ನಾವಾಗಬೇಕು. ಸ್ವಲ್ಪ ಕಷ್ಟ, ಆದರೆ ಅಸಾಧ್ಯವೇನಲ್ಲ. Most importantly, ಅಳುವಿನ ನಂತರ ಕೆಲವೊಮ್ಮೆ ಅತಿ ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಅವು ತಪ್ಪಾಗುವುದು, ತೀರಾ ಕಮ್ಮಿ. ಮುಗುಳುನಗೆ ಚಿತ್ರದಲ್ಲಿ ವಿರಾಮ ಬಂತು, ಚಿಕ್ಕದಾಗಿ ನೀವೂ ಒಂದು ಬ್ರೇಕ್ ತಗೊಂಡು ಬಿಡಿ. Have a break, have a kurkure!
ವಿತಾಮ, ಸಾರಿ, ವಿರಾಮದ ನಂತರ ಪುಲಕೇಶಿ ಅಪ್ಪ, ತಮ್ಮ ಗೆಳೆಯನ ಮಗಳನ್ನು ಮದುವೆಯಾಗುವಂತೆ ಒತ್ತಾಯಿಸಿ ಹುಡುಗಿಯನ್ನು ಮಾತನಾಡಿಸಿ ಬರುವಂತೆ ಒತ್ತಾಯ ಮಾಡುತ್ತಾರೆ. ನೋಡಿದರೆ ಅಲ್ಲಿ ಕಾಫಿ ಡೇ ಅಲ್ಲಿ ಕೂತಿರೋದು ಅಮೂಲ್ಯ! ಮಗಾ, ಇದೂ ಹೊಗೇನೇ ಅಂತ ಮನಸ್ಸಿನ ಪಕ್ಷಿ ಹೇಳುವಷ್ಟರಲ್ಲಿ ಆ ಕಥೆ ‘ಮಠ’ ಸೇರುತ್ತದೆ, Thank God. ಕಟ್ ಮಾಡಿದರೆ, ಎರಡು ವರ್ಷಗಳ ನಂತರ ಪುಲಕೇಶಿ career wise ಉನ್ನತ ಸ್ಥಾನಕ್ಕೆ ಏರಿರುತ್ತಾನೆ. ಗೂಗ್ಲಿ ಫಿಲಂ ಹಂಗೆ ಒಂದೆರಡು ಸೆಕೆಂಡ್ ರಪ್ಪ್ ಅಂತ ಪಾಸ್ ಆದ ಹಾಗಾಯ್ತು. ಕೆಲಸ ಮುಗಿಸಿಕೊಂಡು ಪುಲಕೇಶಿ ಮನೆಗೆ ಬಂದಾಗ ಇವನಿಗೆ ಇವತ್ತು ಮದುವೆ ಮಾಡಿಲ್ಲ ಅಂದರೆ ನಾಳೆಯಿಂದ ಇವನಿಗೆ ಮದುವೆಯೇ ಆಗಲ್ಲ ಅನ್ನೋ ಮಟ್ಟಿಗೆ ಅಪ್ಪ ಅಮ್ಮ ಟೆನ್ಶನ್ ಆಗಿರುತ್ತಾರೆ. ನೋಡಿದರೆ ಅಲ್ಲಿ ಪುಲಕೇಶಿ ಗೆಳೆಯರ ಬಳಗ ಕೂಡ ಹಾಜರ್. ಕರಾವಳಿಯ ಹಳ್ಳಿ ಹುಡುಗಿಯನ್ನು ನೋಡಿಕೊಂಡು, ಒಪ್ಪಿಸಿ, ಮದುವೆ ಮಾಡಿಸಿಕೊಂಡೇ ವಾಪಸ್ ಬರೋಣ ಅನ್ನೋ ರೇಂಜಿಗೆ ಅರ್ಜೆಂಟಲ್ಲಿರುವ ಫ್ರೆಂಡ್ಸು ಪುಲಕೇಶಿಯನ್ನು ಎತ್ತಾಕ್ಕೊಂಡು ಹೋಗೇ ಬಿಡ್ತಾರೆ. ದಾರಿಯಲ್ಲಿ ‘ಹೊಡಿ ಒಂಭತ್ತ್’ ಹೆಸರಿನ ವಿಚಿತ್ರ ಹೋಟೆಲ್, ಅಲ್ಲೊಂದು ಎಣ್ಣೆ ಹಾಡು. ಆ ಹಾಡಿನ ಬಗ್ಗೆ ಆಮೇಲೆ ಮಾತಾಡೋಣ, ಸದ್ಯಕ್ಕೆ let’s skip ahead a bit. ಪುಲಕೇಶಿ ಎಣ್ಣಿ ಏಟಲ್ಲಿ ಆ ಹಳೇ ಟೆಂಪೋ ಗಾಡಿಯನ್ನು ತಂಉ ಸೀಧಾ ಚಾರು ಮನೆಯ ಮೇಲೆ ಪಾರ್ಕ್ ಮಾಡಿರುತ್ತಾನೆ, ಹೋಗ್ ಅತ್ಲಾಗೆ. For a change, ಇದನ್ನು ಪುಲಕೇಶಿಯ ಮೂರನೇ ಪ್ರೇಮ ಕಥೆ ಅನ್ನುವುದಕ್ಕಿಂತ, ಮೊದಲನೆಯ ಮದುವೆ ಕಥೆ ಅನ್ನಬಹುದು. In fact, ಕೆರೆ ಆಚೆ ಬದಿ ದೇವಸ್ಥಾನದ ಬಳಿ “ನೀವು ನನ್ನ ಮದುವೆಯಾಗ್ತೀರಾ?” ಅಂತ ಕೇಳೋದು ಸುಲಭ, ಆದರೆ “I love you, do you love me?” ಅಂತ ಕೇಳೋದು ತುಂಬಾ ಕಷ್ಟ ಅಂತಾನೆ. In fact, ಅದು ನಿಜ ಕೂಡ. ಇಬ್ಬರೂ ಪ್ರೀತಿಯಲ್ಲಿ ಇದ್ದಾರೆ ಅಂತ ಅವರಿಬ್ಬರಿಗೂ ಗೊತ್ತಿದ್ದರೂ ನಮ್ ಹುಡುಗ, ನಮ್ ಅತ್ತಿಗೆ, I mean, ಅವನ ಹುಡುಗಿಗೆ I love you ಅಂತ ಪ್ರಪೋಸ್ ಮಾಡೋಕೆ ಎರಡು ವರ್ಷ ಟೈಮ್ ತಗೊಂಡ. ಯಾರಿಗ್ ಹೇಳೋಣ ಹುಡುಗರ ಪ್ರಾಬ್ಲಮ್ಮು! Coming back to ಪುಲಕೇಶಿ, ಈ ಸಲ ಅವನು ಬಹಳ ಹುಷಾರಿ. ಪ್ರೀತಿ ಪ್ರೇಮ ಯಾವುದೂ ಬೇಡ, ಡೈರೆಕ್ಟ್ ಮದುವೆ ಆಗೋಣ, ಹ್ಞೂಂ ಅಂತೀರಾ? ಊಹ್ಞೂಂ ಅಂತೀರಾ? ಎನ್ನುವ ಹಾಗೆ. ಸರಿ, ಹೀಗೆ ಅವರಿಬ್ಬರ ನಡುವೆ ಮಾತುಕತೆಯಲ್ಲಿ, as usual, ಅವನು ತನ್ನ ಎರಡು ಪ್ರೇಮ ಕಥೆಗಳನ್ನು ತೆರೆದಿಡುತ್ತಾನೆ. Over few days, ಚಾರುಗೆ ಪುಲಕೇಶಿ ಕೂಡ ಇಷ್ಟ ಆಗುತ್ತಾನೆ. ಹಲವು ಟ್ವಿಸ್ಟು ಟರ್ನುಗಳ ನಂತರ, ಚಾರು ಮದುವೆ ಕೂಡ ಪುಲಕೇಶಿ ಜೊತೆ ಆಗೋದಿಲ್ಲ. ಯಾಕೆ ಹೀಗಾಯ್ತು, ಎಂಬ ಅತಿ ಮುಖ್ಯವಾದ detailed second half ಅನ್ನು ಎಗರಿಸಿ Conclusion ಗೆ ಹೋಗುತ್ತಿದ್ದೇನೆ. ಅದು ಯಾಕೆ ಹೇಗೆ ಅಂತ ನೀವು ನೋಡಿದರೆ ಒಳಿತು. ನಾನು ಆಗಲೇ ಸೋಲು ಅನ್ನೋದು ತಣ್ಣೀರು ಸ್ನಾನ ಮಾಡಿದ ಹಾಗೆ, ಒಂದೆರಡು ಸಲಕ್ಕೆ ಅಭ್ಯಾಸ ಆಗೋಗುತ್ತೆ ಅಂದೆ, but the fact is, ತಣ್ಣೀರು ಸ್ನಾನ ಒಂದು ಸಲ ಚಮನದ, ಎರಡು ಸಲ ಓಕೆ, ಪದೇ ಪದೇ ಅದೇ ಆದರೆ ನಾವು ಇನ್ನೂ ಪ್ರಪಂಚದಲ್ಲಿ ಬದುಕಿರಬೇಕಾ? ಎಂಬ ಸವಾಲುಗಳು ಕಾಡಲು ಶುರುವಾಗುತ್ತೆ. Am I wrong? Or my planning is imperfect? ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಕೆಲವೊಮ್ಮೆ depression ಉಂಟಾಗಿ ಅನಾಹುತ ಆಗುವ ಸಂಭವವೂ ಇದೆ. ಇಂತಹ ಟೈಮಲ್ಲಿ ‘ಪ್ರಾಣ ಸ್ನೇಹಿತರು’ ಅಂತ 4-5 ಜನ ಇರ್ತಾರಲ್ಲಾ, ಅವರೇ ನಮ್ಮನ್ನು ಎದ್ದು ನಿಂತು ಇನ್ನೊಂದು ಪೆಗ್ ಬರಲಿ ಎಂದು ಹೇಳುವಂತೆ ಮಾಡುವುದು. “ಮನುಷ್ಯ ಅಂದ ಮೇಲೆ ಜೀವನದಲ್ಲಿ ಒಂದ್ ಸಲ ಆದರೂ ಫೇಲಾಗ್ ಬೇಕು, ಏನಂತೀಯಾ?” ಎಂಬ ಪರಮಾತ್ಮ ಚಿತ್ರದ ಡೈಲಾಗ್ ಫೇಲ್ ಆಗುವುದನ್ನು ಪ್ರಮೋಟ್ ಮಾಡದೇ, ಅದರಾಚೆಗಿನ ಜಗತ್ತು ಇದೆ ಎಂದು ತನ್ನದೇ ಶೈಲಿಯಲ್ಲಿ ಆತ್ಮವಿಶ್ವಾಸ ತುಂಬುತ್ತದೆ. ಚಾರು ಮದುವೆ ಮಾಡಿಸಿ ಹೊರ ಬಂದ ಪುಲಕೇಶಿ ಕಣ್ಣಲ್ಲಿ ಅವನಿಗೇ ಅರಿವಿಲ್ಲದಂತೆ ಕಣ್ಣೀರು ಹೊರಬರಲು ಶುರುವಾಗುತ್ತದೆ. ಹಿನ್ನಲೆಯಲ್ಲಿ ಸೋನು ನಿಗಮ್ ಗಾಯನ ಪುಲಕೇಶಿಗೆ ಸಂಬಂಧವೇ ಇಲ್ಲದ ಪ್ರೇಕ್ಷಕನು ಮುಗುಳುನಗೆಗೆ ಒಂದೆರಡು ನಿಮಿಷ ವಿರಾಮ ಕೊಡುವಂತೆ ಮಾಡುತ್ತದೆ. ವೈಶಾಲಿ, ಸಿರಿ, ಚಾರು ಎಲ್ಲರ ನೆನಪಾಗಿ ಪುಲಕೇಶಿ ಮಳೆಯನ್ನೂ ಮರೆತು ಅಳತೊಡಗುತ್ತಾನೆ. ಕಷ್ಟ ಪಟ್ಟು ಹಿಂದಿನ ರಾತ್ರಿ ಓದಿದ ಸಬ್ಜೆಕ್ಟ್ ಗಳೂ ಕೂಡ ಒಮ್ಮೊಮ್ಮೆ ದಬ್ಬಾಕ್ಕೊಳ್ಳುವಾಗ ಪ್ರೀತಿ ಮಿಸ್ ಆಗೋದು ದೊಡ್ಡದೇನಲ್ಲ. After all, ಪ್ರೇಮ ಜೀವನದ ಒಂದು ಅತಿಮುಖ್ಯ ಭಾವನೆ. ಅದು ಜೀವನದ ಒಂದು ಭಾಗ ಅಷ್ಟೇ, ಅದೇ ಜೀವನವಲ್ಲ (ಶಂಕರ್ ದಾದಾ MBBS). I don’t wanna take sides here, ಹೌದು, ಪ್ರೇಮ is more like, “ನೀನಿಲ್ಲದೇ, ನನಗೇನಿದೆ” ಹಾಡಿನ ಹಾಗೆ. ಪ್ರೀತಿ ಪ್ರೇಮ ಎಲ್ಲಾ ಪುಸ್ತಕದ ಬದನೆಕಾಯಿ ಅನ್ನೋದು ನಿಜ. ಪ್ರೇಮ ದೇವರ ಹಾಗೆ, ನಂಬುವವರು ಆರಾಧಿಸುತ್ತಾರೆ, ನಂಬದವರು ಕಲ್ಲು ಎಂದೆಣಿಸಿ ಮುಂದೆ ಸಾಗುತ್ತಾರೆ ಎಂಬುದೂ ನಿಜ. Actually, ಮುಗುಳುನಗೆ ಚಿತ್ರದ ಒಂದು ಭಾಗದಲ್ಲಿ, ಪ್ರೀತಿ ದೇವರು ಥರ ಅಂತಾರೆ. ಆ ದೇವರು ನನಗೆ ಒಂದೆರಡು ಸಲ ಕೈ ಕೊಟ್ಟು ಬಿಟ್ಟ, ಆಗಿಂದ ನಂಬಿಕೆ ಬಿಟ್ಟೆ ಎಂದು ಹೇಳುವ ಮಾತು ಮನಸ್ಸು ಖಾಲಿ ಮಾಡಿಕೊಂಡು ಯೋಚಿಸಿದಾಗ ಮನಸ್ಸು ಭಾರ ಮಾಡುವ ಸಾಲುಗಳು. ಪ್ರೀತಿ ಒಂಥರಾ ಹಳೇ ಕಾಲದಲ್ಲಿ ಟಾಕೀಸಲ್ಲಿ ಪಿಚ್ಚರ್ ನೋಡ್ತಿದ್ವಲ್ಲಾ ಹಂಗೆ, ಅದೃಷ್ಟ ಇದ್ರೆ ಸೀಟು, ಇಲ್ಲದಿದ್ದರೆ ಬೆಂಚು. The show must go on ಎನ್ನುವ ಹಾಗೆ, ಹಳೇ ಪೇಪರ್ ನಂತ ಜೀವನ ಶುರು ಮಾಡಿ ಆಗಿದೆ, ಪ್ರೀತಿ ಎಂಬ ಹಲವು ದಿನಗಳ ಗೆಳೆಯ ಸಿಕ್ಕರೆ ಒಳ್ಳೆಯದು, ಇಲ್ಲದಿದ್ರೆ ಜಸ್ಟ್ move on sucker!