746

ಲವ್ ಎಟ್ ಫಸ್ಟ್ ಸೈಟ್ ಅನ್ನೋ ಅಟ್ರಾಕ್ಷನ್………..

ಪ್ರೀತಿ ಎಂದರೆ ಹಾಗೇ ಅದು ಹುಟ್ಟೋದು ಗೊತ್ತಾಗುವುದಿಲ್ಲ,ಕೊನೆ ಆಗೋದು ಗೊತ್ತಾಗುವುದಿಲ್ಲ. ಈ ಪ್ರೀತಿ ಯಾರ ಮೇಲೆ,ಹೇಗೆ,ಯಾವಾಗ ಹುಟ್ಟುತ್ತೇ ಅಂತಾ ಯಾರಿಗೂ ಹೇಳಲಿಕ್ಕೆ ಆಗುದಿಲ್ಲಾ.ಅವರವರ ದೃಷ್ಟಿಕೋನದಲ್ಲಿ ಪ್ರೀತಿಯನ್ನು ಬೇರೇ ಬೇರೇ ತರಹ ನೋಡ್ತಾರೆ.ಕೆಲವರು ಮನಸ್ಸು ನೋಡಿ ಲವ್ ಮಾಡಿದರೆ,ಇನ್ನೂ ಕೆಲವರು ಮುಖ ನೋಡಿ ಲವ್ ಮಾಡ್ತಾರೆ ,ಕೆಲವರು ಗುಣ ನೋಡಿ ಲವ್ ಮಾಡಿದರೇ,ಪೊಕೆಟ್ ಅಥವಾ ಅಪ್ಪನ ಆಸ್ತಿ ನೋಡಿ ಲವ್ ಮಾಡೋದು ಒಂದು ಕಡೆಯಿಂದ ನಡಿತಾ ಇದೆ.ಸುಮ್ಮನೆ ನಡೆದುಕೊಂಡು ಹೋಗ್ತಾ ಇರ್ತೀವಿ ಒಂದು ಹುಡುಗಿ/ಹುಡುಗ ನನ್ನು ನೋಡ್ತಿವಿ ತುಂಬಾ ಇಷ್ಟ ಆಗ್ತಾರೆ ಲವ್ ಆಗುತ್ತೆ,ಅಥವಾ ಯಾರಾದರು ಒಬ್ಬರು ನಮಗೆ ಹೆಲ್ಪ ಮಾಡ್ತಾರೆ ಅಥವಾ ಅವರು ಮಾಡುವ ಕೆಲಸ ನಮಗಿಷ್ಟ ಆಗುತ್ತೆ ಲವ್ ಆಗುತ್ತೆ,ಉದಾಹರಣೆಗೆ ಯಾರಾದರೂ ಒಳ್ಳೇ ಡ್ಯಾನ್ಸ ಮಾಡಿದಾಗ,ಹಾಡು ಹಾಡಿದಾಗ ಇತ್ಯಾದಿ

ಲವ್‍ನಲ್ಲಿ ಅನೇಕ ವಿಧಗಳಿವೆ,ಲವ್ ಎಟ್ ಫಸ್ಟ್ ಸೈಟ್,ನೋಡದೇ ಲವ್ ಮಾಡೋದು,ಒನ್ ವೇ ಲವ್ ಹೀಗೆ ಅನೇಕ.ಅದರಲ್ಲಿ ಇತ್ತೀಚೆಗೆ ತುಂಬಾ ಕೇಳಿ ಬರ್ತಾ ಇರೋದು ಲವ್ ಎಟ್ ಫಸ್ಟ್ ಸೈಟ್. ಅಂದರೆ ಒಂದು ಹುಡುಗಿ/ಹುಡುಗ ನ ಮೊದಲ ನೋಟದಲ್ಲೇ ಲವ್ ಆಗೋದು.ನನ್ನ ಪ್ರಕಾರ ಈ ಲವ್ ಎಟ್ ಫಸ್ಟ್ ಸೈಟ್‍ಗೂ,ಅಟ್ರಾಕ್ಷನಗೂ ಏನೂ ವ್ಯತ್ಯಾಸ ಇಲ್ಲ.ಒಂದು ಹುಡುಗ/ಹುಡುಗಿ ಯನ್ನು ನೋಡಿ ಅವಳು/ಅವನ ನ್ನು ಎಣಿಸಿಕೊಂಡು ಕನಸುಕಂಡು,ಓನ್ ಫೈನ್ ಢೇ ಫಿಲ್ಮಿಸ್ಟೈಲ್ ನಲ್ಲಿ ಹೋಗಿ ಪ್ರಪೋಸ್ ಮಾಡೋದು ಕಾಮನ್ ಆಗಿ ಬಿಟ್ಟಿದೆ.ಇಂತಹ ಕೆಲಸಗಳಲ್ಲಿ ಹುಡುಗಿಯರಕ್ಕಿಂತ ಹುಡುಗರದ್ದೇ ಮೇಲುಗೈ.ನನಗೆ ಎಣಿಸುವ ಪ್ರಕಾರ ಇಂತಹ ಪ್ರೇಮಕಥೆಗಳಿಗೆ ನಿಜವಾಗಲು ಲೈಫಿಲ್ಲ.ಮುಖದಲ್ಲಿ ಚೆಂದ ಇರುವ ಹುಡುಗ/ಹುಡುಗಿ ಮನಸ್ಸಿನಲ್ಲೂ ಚೆಂದ ಇರಬೇಕು ಅನೋ ರೂಲ್ಸ್ ಏನೂ ಇಲ್ಲ ಅಲ್ವಾ.ಅಲ್ಲೋ ಇಲ್ಲೋ ಒಂದು ಹುಡುಗ/ಹುಡುಗಿ ಮನಸ್ಸಲ್ಲೂ ಮುಖದಲ್ಲೂ ಚೆನ್ನಾಗಿದ್ದರೇ ಆಗ ಲವ್ ಎಟ್ ಫಸ್ಟ್ ಸೈಟ್ ಸಕ್ಸಸ್ ಆಯ್ತು ಅನ್ನಬಹುದು.

ಲವ್ ಎಟ್ ಫಸ್ಟ್ ಸೈಟ್ ಇಲ್ಲ ಅಂತ ಅಲ್ಲ,ಅದು ಒಂದು ರೂಪದಲ್ಲಿ ಇದೆ.ಅದು ಆಗೋದು ತಾಯಿಗೆ ತನ್ನ ಮಗುವನ್ನು ನೋಡಿದಾಗ.

ಹೀಗೆ ಒಂದು ಒಳ್ಳೆ ಕಥೆ ಹೇಳ್ತಿನಿ ಕೇಳಿ.ನಾನು ಹೀಗೆ ಲವ್ ಎಟ್ ಫಸ್ಟ್ ಸೈಟ್ ನಲ್ಲಿ ತುಂಬಾ ಭರವಸೆ ಇಟ್ಟಿದ್ದೆ.ಒಂದು ಹುಡುಗಿಯನ್ನು ಫೇಸ್ಬುಕ್‍ನಲ್ಲಿ ಒಂದು ದಿನಾ ನೋಡಿದೆ. ಅದು ಪರೀಕ್ಷೆ ಸಮಯ ಬೇರೆ ಅವಳ ಮುಖ ನೋಡಿ ತಲೆ ಎಲ್ಲಾ ಕೆಟ್ಟುಹೋಯ್ತು ಕಂಡ್ರಿ.ಎಷ್ಟು ಸುಂದರವಾಗಿದ್ಲೂ ಅಂದ್ರೇ ನನ್ನ ಹಾರ್ಟ ಬೀಟ್ ಒಂದು ಸಾರಿ ಏರುಪೇರಾಯ್ತು. ಮದುವೆ ಆದ್ರೆ ಅವಳನ್ನೇ ಅಂತಾ ಪರೀಕ್ಷೆಯ ಅ ಹಿಂದಿನ ರಾತ್ರಿ ಓದಿ ಆಗದೇ ಇದ್ರೂ ನಿರ್ಧಾರ ಮಾಡ್ದೆ.ಹೇಳೋಣ ಅಂದ್ರೆ ಪರಿಚಯ ಬೇರೆ ಇಲ್ಲ.ಆಗ ನನಗೂ ಅವಳಿಗೂ ಒಬ್ಬ ಗೊತ್ತಿರುವ ಪ್ರೇಂಡ್ ಇದ್ದ,ಅವನ ಹತ್ರಾ ಎಲ್ಲಾ ಹೇಳ್ದೇ.ಅವನು ಒಂದು ದಿನಾ ನನಗೆ ಸಿಕ್ಕಿ ಹೇಳ್ದಾ”ಮಗಾ ನಾನು ನಿನ್ನ ವಿಷಯ ಅವಳ ಹತ್ರಾ ಹೇಳಿದ್ದೀನಿ ಅವಳಿಗೆ ಸ್ವಲ್ಪ ದಿನಾ ಟೈಮ್ ಬೇಕಂತೆ,ಹೇಳ್ತಾಳಂತೆ”ಎಂದ.ಒಂದು ವಾರ ಆಯ್ತು,ತಿಂಗಳಾಯ್ತು,ಒಂದೂವರೆ ತಿಂಗಳು ಕಾದ್ರೂ ಉತ್ತರ ಬರಲಿಲ್ಲ.ಹುಡುಗಿಯರು ಕಾಯಿಸ್ತಾರೆ ಅಂತಾ ಕೇಳಿದ್ದೇ ಆದ್ರೆ ಅನುಭವ ಆಗಿದ್ದು ಅವಾಗಲೇ.ಕಡೆಗೆ ಒಂದು ದಿನಾ ಅವಳು ಫೇಸ್ಬುಕ್‍ನಲ್ಲಿ ಆನ್‍ಲೈನ್‍ನಲ್ಲಿದ್ಲು ನನ್ನ ಮನದ ನಿವೇದನೆಯನ್ನು ಹೇಳಿಕೊಂಡೇ ಬಿಟ್ಟೆ ಕಂಡ್ರಿ.ಆದ್ರೆ ನಾನು ಬಯಸ್ಸಿದ್ದ ಉತ್ತರವೇ ಬೇರೆ ಇತ್ತು,ಅವಳು ಕೊಟ್ಟ ಉತ್ತರವೇ ಬೇರೆ ಆಗಿತ್ತು.ಅಲ್ಲಿಯವರೆಗೆ ನನ್ನಲ್ಲಿ ಲವ್ ಬಗ್ಗೆ ಇದ್ದ ಅಭಿಪ್ರಾಯವನ್ನು ಬದಲಾಯಿಸಿದ್ದು ಅವಳು ಹೇಳಿದ ಒಂದು ಮಾತು ಅದೇನೆಂದರೇ “ನಾನು ನಿನ್ನನ್ನು ನೋಡಲಿಲ್ಲಾ,ಮಾತಾಡಲಿಲ್ಲಾ,ನಿನ್ನ ಬಗ್ಗೆ ಗೊತ್ತಿಲ್ಲ,ನಾನು ಹೇಗೆ ನಿನ್ನನ್ನು ಲವ್ ಮಾಡ್ಲಿ”ಅಂತಾ.ಅವಳು ಹೇಳಿದ್ದನು ಒಂದು ದಿನಾ ಇಡೀ ಯೋಚನೆ ಮಾಡ್ದೆ.ಹೌದು ಮುಖ ಕೇವಲ ಚಂದಕ್ಕೆ ಮಾತ್ರ,ಆದರೆ ಪ್ರೀತಿಗೆ ಬೇಕಾಗಿರೋದು ಇನ್ನೊಂದು ಜೀವವನ್ನು ಅರ್ಥಮಾಡಿಕೊಳ್ಳೊ ಒಂದು ಒಳ್ಳೇ ಮನಸ್ಸು.ಪ್ರೀತಿ ವಿಷಯದಲ್ಲಿ ನನ್ನ ಕಣ್ಣು ತೆರೆಸಿದ ದೇವತೆ ಅವಳು.ಆ ಫ್ರೇಂಡ್ ಮತ್ತೊಂದು ಸಾರಿ ಸಿಕ್ಕಿ “ನಿನ್ನ ಬಗ್ಗೆ ನಾನು ಇನ್ನೊಂದು ಸಾರಿ ಮಾತಾಡ್ತಿನಿ”ಅಂದ.ನಾನೇ “ಬೇಡಾ ಬಿಡೋ” ಅಂದೇ.ಫ್ರೇಂಡ್ಸ್ ಅಂದ್ರೆ ಹಾಗೆ ಯಾರು ಬಿಟ್ರೂ ಅವರು ಬಿಡಲ್ಲಾ.ಆ ವಿಷಯವನ್ನು ನೆನಪಿಸಿಕೊಂಡ್ರೆ ಈಗಲೂ ನಗು ಬರುತ್ತೇ,ಅವಳು ಈಗಲೂ ಆನ್‍ಲೈನ್‍ನಲ್ಲಿ ಸಿಗ್ತಾಳೆ,ಚಾಟ್ ಮಾಡ್ತಾಳೇ ಒಂದು ಒಳ್ಳೇ ಫ್ರೇಂಡ್ ಆಗಿ.

ಜೀವನದಲ್ಲಿ ಸುಖವಾಗಿ ಇರಲ್ಲಿಕ್ಕೆ ಬೇಕಾಗಿರೋದು ಒಂದು ಒಳ್ಳೇ ಮನಸ್ಸು ವಿನಃ ಸುಂದರವಾದ ಮುಖ ಅಲ್ಲಾ.ಮುಖ ನೋಡಿ ಲವ್ ಮಾಡಿ ಕಡೆಗೆ ಕಷ್ಟ ಅನುಭವಿಸುವ ಎಷ್ಟೋ ಜನರನ್ನು ನೋಡಿದ್ದೇವೆ.ಕೊನೆಯಲ್ಲಿ ಒಂದು ಕಿವಿಮಾತು”ಜೇಬು ನೋಡಿ ಬರುವವರು, ಜೇಬು ಖಾಲಿಯಾಗೋ ತನಕ.ಸೌಂದರ್ಯ ನೋಡಿ ಬರುವವರು ಅದು ಕಡಿಮೆಯಾಗೋತನಕ ಆದ್ರೇ ಮನಸ್ಸು ನೋಡಿ ಬರುವವರು ಕೊನೆ ತನಕ”ಅಂತೆ.ಅದಕ್ಕೋಸ್ಕರ ಯಾರಿಗಾದ್ರೂ ಫ್ರೇಮ ನಿವೇದನೆ ಮಾಡುವುದಕ್ಕಿಂತ ಮುಂಚೆ ಅಥವಾ ಯಾರದ್ದಾದರೂ ಒಪ್ಪಿಕೊಳ್ಳುವುದಕ್ಕಿಂತ ಮುಂಚೆ ಒಂದು ಸಾರಿ ಯೋಚನೆ ಮಾಡಿ………….

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..