- By Local Kebal Team
- Sunday, March 11th, 2018
ಸ್ಯಾಂಡಲ್ವುಡ್ನಲ್ಲಿ ಇತ್ತೀಚಿಗೆ ವಿಭಿನ್ನ ಪ್ರಯತ್ನಗಳು ಹೊಸಬರಿಂದ ನಡೆಯುತ್ತಲೇ ಇವೆ ..ಅಂತಹ ಒಂದು ಸಾಲಿಗೆ ದುರ್ಗದ ಹುಡುಗರು ತಯಾರಿಸಿದ ದುರ್ಗದ ಹಾಡು .. ನೀವು ದುರ್ಗದ ಕಡೆಯವರಾಗಿದ್ದರೆ ಅಥವಾ ನಿಮ್ಮ ಸ್ನೇಹಿತರು ದುರ್ಗದ ಕಡೆಯವರಾಗಿದ್ದರೆ ಅಲ್ಲಿಯ ಜನರ ಆಡುಭಾಷೆ ನಿಮ್ಮ ಗಮನವನ್ನು ಸೆಳೆದಿರೋದು ಗ್ಯಾರಂಟೀ .. ದುರ್ಗದ ಭಾಷೆಯ ಸೊಗಡನ್ನು ಬಳಸಿಕೊಂಡು ದುರ್ಗವನ್ನು ಬಣ್ಣಿಸುವ ಉತ್ತಮ ವಿಡಿಯೋ ಆಲ್ಬಮ್ ಅನ್ನು ವಿನಾಯಕ್ ಹಾಗು ಅವರ ಗೆಳೆಯರ ಬಳಗ ಹೊರ ತಂದಿದ್ದಾರೆ .. ಈ ಹಾಡಿನಲ್ಲಿ ಹೈಲೈಟ್ ಆಗುವುದು ಏರಿಯಲ್ ಶಾಟ್ಸ್ .. ದುರ್ಗವನ್ನು ಏರಿಯಲ್ ಶಾಟ್ಸ್ ಅಲ್ಲಿ ನೋಡುವುದೇ ಕಣ್ಣಿಗೆ ಒಂದು ಹಬ್ಬ ಇದ್ದ ಹಾಗೆ .. ಈ ಹಾಡನ್ನು ನೀವು ಮನಸಾರೆ ಎಂಜಾಯ್ ಮಾಡೋದು ಗ್ಯಾರಂಟಿ ..ನಮ್ಮ ವಿನಾಯಕ್ ಹಾಗು ಅವರ ಗೆಳೆಯರಿಗೆ ಲೋಕಲ್ ಕೇಬಲ್ ಕಡೆಯಿಂದ ಅಭಿನಂದನೆಗಳು .. ನಿಮ್ಮ ಎಲ್ಲ ಪ್ರಾಜೆಕ್ಟ್ಸ್ ಗೂ ನಮ್ಮ ಸಹಕಾರ ಖಂಡಿತ ಇರುತ್ತದೆ ..