- By Guest Writer
- Thursday, January 31st, 2019
ನಾನು ಜೇನು..
ನೀವ್ guess ಮಾಡಿರೋ ಹಾಗೆ ಇದು ನನ್ನ real name ಅಲ್ಲ.. ನಮ್ಮ golden star ಗಣೇಶ್ ಹೇಳಿದಂಗೆ..”ಹೆಸರಲ್ಲಿ ಏನ್ ಇದೆ ಬಿಡ್ರಿ..” !! ಸದ್ಯಕ್ಕೆ ನನ್ ಹೆಸರು ಜೇನು ಅಂತ ಇಟ್ಕೋಳೋಣ .. ವಯಸ್ಸು ೨೫.. ಮದುವೆ age ಉ.. ಒಳ್ಳೆ ಕೆಲಸ ಇದೆ ಸ್ವರ್ಗದಂಥಾ ಶಿವಮೊಗ್ಗ ಅಲ್ಲಿ.. ಅಪ್ಪ ಅಮ್ಮ ಬೆಂದಕಾಳೂರಿನಲ್ಲಿ settle ಆಗಿ ಅವರ ಕಾಳು ಬೇಯ್ಸ್ಕೊತಾ ಇದಾರೆ .. soooo ಸದ್ಯಕ್ಕೆ ನಾನು care of ” HI- TECH GIRLS PG” !!
ನನ್ ಮಾತೃಶ್ರೀ ಮತ್ತು ಪಿತಾಶ್ರೀ ಅವರು ನನಗೆ ತಕ್ಕ ವರನನ್ನು ಹುಡುಕೋ ಸಂಭ್ರಮದಲ್ಲಿ ತೊಡಗಿದ್ದಾರೆ .. !! ನಾನೂ ಕೂಡ arrange marriage ಗೆ mentally prepare ಆಗ್ತಿದೀನಿ .. ! family ಎಲ್ಲ ಸೇರಿ ಈಗ ” ಯಾವ ಪ್ರೀತಿ ಹೂವು.. ಯಾರ ಹೃದಯದಲ್ಲಿ ಅರಳುವುದೋ.. ಯಾರ ಪ್ರೇಮ ಪೂಜೆಗೆ ಮುಡಿಪೋ ಯಾರು ಬಲ್ಲರು” group song ಹಾಡಿಕೊಂಡು .. ಒಬ್ಬ ಒಳ್ಳೆ ಹುಡುಗನ್ನ ಹುಡುಕೋ ಪ್ರಯತ್ನದಲ್ಲಿ ಇದ್ದೀವಿ…
Weekend ಬಂತು ಅಂದ್ರೆ ಸಾಕು .. ಶಿವಮೊಗ್ಗ ಇಂದ ಬೆಂಗಳೂರಿಗೆ ಬರಬೇಕು ಹುಡುಗರನ್ನ ನೋಡೋಕೆ.. ಯಾಕ್ ಕೇಳ್ತಿರಾ ನನ್ನ ಪಾಡು.. ! ಇವತ್ತು ಒಬ್ಬ ಹುಡುಗನ ಮನೆಗೆ ಹೋಗಬೇಕು.. ಹುಡುಗ ಫೋಟೋ ಅಲ್ಲಿ ನೋಡೋಕೆ ಚೆನ್ನಾಗ್ ಇದಾನೆ.. facebook ಅಲ್ಲಿ ಅಷ್ಟಾಗಿ photos ಇಲ್ಲ.. insta account ಸಿಗಲೇ ಇಲ್ಲ.. ಏನಾದ್ರೂ ಆಗ್ಲಿ ಹೋಗಿ ನೋಡ್ಕೊಂಡೇ ಬಂದ್ಬಿಡೋಣ ಅಂತ fix ಆದ್ವಿ ಎಲ್ಲ.. ಸರಿ ರಾಹುಕಾಲ ಮುಗಿದಮೇಲೆ ಹೊರಟ್ವಿ ಅವರ ಮನೆಗೆ.. ನಾನು ಸ್ವಲ್ಪ ಜುಗ್ಗಿ.. ಅಂದ್ರೆ ಜಿಪುಣಿ.. (ಚೂರು ಅಷ್ಟೇ… ತುಂಬಾ ಅಲ್ಲ..! ) ನಾವು ಇದ್ದಿದ್ದು 4 ಜನ.. ನಾನು ನನ್ ತಮ್ಮ ಪಾ ಮತ್ತೆ ಮಾ .cab ಅಲ್ಲಿ ಯಾಕ್ ಹೋಗೋದು.. ಆಟೋ ಅಲ್ಲೇ ಹೋಗಣ ಅಂದೆ.. ಆಟೋ ಅವನ ಹತ್ರ one and half ಗೆ ಮಾತಾಡಿ .. ನಾನು ಆಟೋ ಹತ್ತೋ ಅಷ್ಟರಲ್ಲಿ.. ಅಪ್ಪ ಅಮ್ಮ ತಮ್ಮ ಆಟೋ ಅಲ್ಲಿ ಕೂತು settle ಆಗ್ಬಿಟ್ಟಿದ್ರು.. !! ಮುಂಚೆ ಇಂದ ನೂ ನಾವು ನಾಲ್ಕೂ ಜನ ಆಟೋ ಅಲ್ಲಿ ಹೊರಟರೆ, ನನ್ನ ಜಾಗ ನನ್ನ ತಮ್ಮನ ತೊಡೆ ಮೇಲೆ.. ಇವತ್ತ್ತು by default ಅದೇ ಕಥೆ.. ಸೀರೆ ಉಟ್ಕೊಂಡ್ ರೆಡಿ ಆಗಿದೀನಿ… ಛೀ … ಮುಂಚೆ ನೇ ಯೋಚನೆ ಮಾಡಲಿಲ್ವಲ್ಲ ಅನ್ಸ್ತು.. ಹೋಗ್ಅತ್ಲಗೇ ಅಂತ ಹತ್ತಿ ಕೂತ್ಕೊಂಡೆ..
ಹುಡುಗನ ಮನೆ ಹುಡುಕೋದು ಅಷ್ಟೇನೂ ಕಷ್ಟ ಆಗಲಿಲ್ಲ.. ಹುಡುಗನ ಮನೆ ಮುಂದೆ ನಾನ್ circus ಮಾಡ್ಕೊಂಡು ಇಳಿಯೋದು ಬೇಡ ಅಂತ.. ಸ್ವಲ್ಪ ಹಿಂದೆ ನೇ ಆಟೋ ನಿಲ್ಲಿಸಿ.. ವಾಪಾಸ್ ಪುಟ್ಟಗೌರಿ ಥರ get up ಸರಿ ಇದ್ದೀಯ ಅಂತ ನೋಡ್ಕೊಂಡು ಹುಡುಗನ ಮನೆಗೆ entry ಕೊಟ್ವಿ..
ನಂದು first time ಈ experience ಎಲ್ಲ.. ಇಷ್ಟು ದಿನ ಬರಿ film ಅಲ್ಲಿ ನೋಡಿದ್ ಅಷ್ಟೇ.. but ಫಿಲಂ ಅಲ್ಲಿ ಯಾವಾಗ್ಲೂ ಹುಡುಗಿ ಜ್ಯೂಸು.. ಕಾಫಿ.. ತೊಗೊಂಡ್ ಬಂದು ಕೊಡ್ತಾಳೆ.. ಇದ್ಯೇನು ನಮ್ ಕಡೆ ನಾವೇ ಹುಡುಗನ ಮನೆಗೆ ಹೋಗೋ ಸಂಪ್ರದಾಯ ಅಂತ ನಾನ್ ಕೇಳಿದಾಗ.. ” ನಮ್ ಕಡೆ ಎಲ್ಲ ಹಾಗೆ ” ಸುಮ್ನಿರು ಅಂದ್ರು ಅಪ್ಪ.. ಇರ್ಲಿ.. ಇದೂ ಒಂದು experience ಅನ್ಕೊಂಡು ಸುಮ್ಮನಾದೆ..
ಸರಿ.. ಎಲ್ಲಿದ್ದೆ ನಾನು? ಹುಡುಗನ ಮನೇಲಿ… !! ಓಕೆ .. ಹುಡುಗನ ಮನೆಗೆ entry ಕೊಟ್ಟಾಯಿತು .. ಅವರಮ್ಮ ಅಪ್ಪ ಮತ್ತೆ ತಮ್ಮ welcome ಮಾಡಿದ್ರು.. ನಾವು ಹೋಗಿ ಕೂತುಕೊಂಡ್ವಿ .. ಮಾತು ಕಥೆ ಶುರು ಆಯಿತು.. ಕೆಲಸದ ಬಗ್ಗೆ.. ಮನೆ ಬಗ್ಗೆ.. ಕೊನೆ ಕೊನೆಗೆ ನಮ್ ಅಪ್ಪ ಅವರ ಅಪ್ಪ ರಾಜಕೀಯದ ಬಗ್ಗೆ ನೂ ಮಾತಾಡೋಕೆ ಶುರು ಮಾಡಿದರು..
ನನ್ ತಮ್ಮ ನನಗೆ low voice ಅಲ್ಲಿ ಕೇಳ್ದ.. ” ಇದ್ಯೇನೆ .. ಬರೀ ದೊಡ್ಡೋರು ಮಾತಾಡಿಕೊಂಡು ಕೂತಿದಾರೆ..ಎಲ್ಲಿ ಹುಡುಗ.. ಕಾಣಿಸ್ತಾ ಇಲ್ವಲ್ಲ.. ಹುಡುಗ ಬರಲ್ವಾ ?” ಅಂತ.. ಅವನಿಗೆ ಒಂದು ಲೈಟ್ ಆಗಿ ಹೊಡೆದು.. ” ಸುಮ್ನಿರೋ ನನಗೇನು ಗೊತ್ತು ” ಅಂದೆ.. ಅಷ್ಟರಲ್ಲಿ ಅವರಮ್ಮ ನಾವು ಪಿಸು ಪಿಸು ಮಾತಾಡ್ತಾ ಇದ್ದಿದ್ ನೋಡಿ. ” ಹುಡುಗ ಹುಡುಗಿ ಟೆರೇಸ್ ಗೆ ಹೋಗಿ ಮಾತಾಡಿ, ನಾವೆಲ್ಲಾ ಇಲ್ಲೇ ಇರ್ತೀವಿ” ಅಂದ್ರು ..ನಾನು ನನ್ ತಮ್ಮ full on confusion .. ಹುಡುಗ ಎಲ್ಲಿ ಗುರೂ.. ಅಂತ.. ಅವರಮ್ಮ ಹಾಗೆ ಅಂದಿದ್ದೇ ತಡ .. ನಾವು ಹುಡುಗನ ತಮ್ಮ ಅಂತ “assume ” ಮಾಡಿಕೊಂಡಿದ್ದೋನು, ಎದ್ದು ನಿಂತ.. ” ಬನ್ನಿ.. ಟೆರೇಸ್ ಮೇಲೆ ಹೋಗಣ ” ಅಂದ..ನನ್ ತಮ್ಮ full ನಗು control ಮಾಡ್ಕೋತಾ ಇದ್ದ.. ನಾನು ಅಮ್ಮ ತಮ್ಮ ಮುಖ ಮುಖ ನೋಡ್ಕೊಂಡ್ವಿ.. ಆ ನೋಟದಲ್ಲೇ silent ಆಗಿ ಒಂದು dialogue exchange ಆಯಿತು.. ” ಅಯ್ಯಯ್ಯೋ .. ನಾವೆಲ್ಲಾ ಹುಡುಗನ ತಮ್ಮ ಅಂತ ಅನ್ಕೊಂಡೊನೇ ಹುಡುಗ ನಾ? ಫೋಟೋ ಅಲ್ಲಿ different ಆಗಿ ಇದ್ನಲ್ಲ.. ” ಅಂತ..
ಫೋಟೋ ಅಲ್ಲಿ ನೋಡಿದ್ ಹುಡುಗ ಕನ್ನಡಕ ಹಾಕಿರಲಿಲ್ಲ.. low angle ಅಲ್ಲಿ .. ಎಲ್ಲೋ ಬೆಟ್ಟದ ಮೇಲೆ .. ಕಲ್ಲಿನ ಕೆಳಗೆ ಫೋಟೋ ತೆಗೆಸಿದ್ರಿಂದ , ಆ background ಗೆ, ಹುಡುಗನಿಗೆ ಒಳ್ಳೆ body ಇದೆ ಅನ್ಕೊಂಡಿದ್ವಿ .. ಇಲ್ಲಿ ನೋಡಿದ್ರೆ.. ಹುಡುಗ ಸೋಡಾ.. ಸಿಕ್ಕಾಪಟ್ಟೆ ಸಣ್ಣ.. ನನಗಿಂತಾ ಸಣ್ಣ.. ನಾನೇ ಚೋಟು ಅಂದ್ರೆ.. ಇವನು ಚೋಟು + 1 / 4th of ಚೋಟು ಅಷ್ಟೇ.. ಅಲಲೇ .. ಆ ಫೋಟೋ ತೆಗೆದೊನು ನನ್ನ ಕೈ ಗೆ ಸಿಗಲಿ ಅನ್ಕೊಂಡು ನಮ್ ಅಪ್ಪ ನ ಕಡೆ ನೋಡಿದೆ.. ಅವರಿಗೆ ಇನ್ನೂ ಯಾರ ಸರ್ಕಾರ ಬರ್ಬೋದು ಮುಂದೆ ಅನ್ನೋದೇ ದೊಡ್ಡ ಚರ್ಚಾ ವಿಷಯವಾಗಿತ್ತು.. ಸರಿ.. ನಾನ್ ಗಾಬ್ರಿ ಆದರೂ ತೋರಿಸಿಕೊಳ್ಳದೆ, ಎದ್ದು ಅವನ ಹಿಂದೆ ಹೊರಟೆ.. ಟೆರೇಸ್ ಗೆ.. ಓರೆ ಕಣ್ಣಿನಲ್ಲಿ ನನ್ನ ತಮ್ಮನ್ನ ನೋಡಿದ್ರೆ.. ಇನ್ನೂ ನಗ್ತಾನೇ ಇದ್ದ..!
ಮೇಲೆ ಹೋದ್ವಿ.. ಟೆರೇಸ್ ಗೆ..
ಅವನು : “ನೀವು first time ಆ? ”
ನಾನು : ( confused ) ಆ ಏನು ??
ಅವನು : ಅಂದ್ರೆ, ಈ ತರಹ interview ಫಸ್ಟ್ ಟೈಮ್ ಆ ?
ನಾನು: (ಓಹ್.. okay ! )ಹೌದು.. ಫಸ್ಟ್ ಟೈಮ್.. ನಿಮ್ಮದು ?
ಅವನು: ನಂದು first ಟೈಮ್ ಅಲ್ಲ..
ನಾನು: ( ಆಹಾ ಕಳ್ಳ.. ಎಷ್ಟನೇದು ಅಂತ ಹೇಳಿಲ್ಲ..ನೋಡು..!! ) okay ..
ಅವನು vtu ಪ್ರಶ್ನೆಪತ್ರಿಕೆ ಥರ options ಉ ಕೊಡದೆ.. ಒಂದಾದ ಮೇಲೆ ಒಂದರಂತೆ ಪ್ರಶ್ನೆ ಕೇಳ್ತಾ ಹೋದ.. ನಾನು sincere student ಥರ ಉತ್ತರ ಕೊಡ್ತಾ ಹೋದೆ.. ನೀವ್ ಏನ್ expect ಮಾಡ್ತೀರಾ ಹುಡುಗನಿಂದ..? ನಿಮ್ hobbies ಏನು.. dreams ಏನು.. ಕೆಲಸ ಹೇಗೆ ಇದೆ.. etc etc .. ಹುಡುಗ not much of a listener ಅನ್ಸ್ತು..
ಸರಿ ಬಿಡು.. ನಾವ್ ಏನ್ ಕಡಿಮೆ ಗುರು.. ನಾನೂ ಒಂದೆರಡು ಪ್ರಶ್ನೆ ಕೇಳೋಣ ಅಂತ .. ಒಂದ್ ರಾಮ ಬಾಣ ಬಿಟ್ಟೆ.. ಹುಡುಗ ಹೇಗೆ ಅಂತ ತಿಳಿಯೋಕೆ ಅವನು ಓದೋ books , ನೋಡೋ movies .. ಮತ್ತೆ travel ಮಾಡೋ places ಸಾಕು .. ಒಂದು idea ಬರತ್ತೆ ಹುಡುಗನ ಬಗ್ಗೆ ಅನ್ಕೊಂಡು..
ನಾನು: ನೀವು recent ಆಗಿ theatre ಅಲ್ಲಿ ನೋಡಿದ್ ಮೂವಿ ಯಾವ್ದು?
ಅವನು: ( ನನ್ನ ಪ್ರಶ್ನೆಗೆ ತಬ್ಬಿಬ್ಬಾಗಿ.. ನಂತರ ಸ್ವಲ್ಪ ಚೇತರಿಸಿಕೊಂಡು… ) ನಾನು ಅಷ್ಟು ಜನ ಇರೋ ಕಡೆ ಹೋಗಲ್ಲ.. last ನೋಡಿದ್ದು ಆಪ್ತರಕ್ಷಕ.. ಅದೂ ನನ್ childhood ಫ್ರೆಂಡ್ ಇದಾನೆ ಒಬ್ಬ .. ಈಗ ಹೈದೆರಾಬಾದ್ ಅಲ್ಲಿ ಕೆಲಸ.. ಅವನು ಬೆಂಗಳೂರಿಗೆ ಬಂದಾಗ ನನ್ನ ಕರ್ಕೊಂಡ್ ಹೋಗಿದ್ದ..
ನಾನು : ( ಯಪ್ಪಾ… ಗುರೂ.. ದೊಡ್ ನಮಸ್ಕಾರ..! ) ( ನನ್ನ ಬಿಲ್ಲಿಗೆ ಮತ್ತೊಂದು ಬಾಣವನ್ನು ಹೂಡೋ ಸಮಯ.. ) ಪುಸ್ತಕ ಓದೋ ಅಭ್ಯಾಸ ಇದ್ಯಾ?
ಅವನು: ಹಹೆ ಹಹೆ.. ಅಯ್ಯೋ.. ಇಲ್ಲಪ್ಪ.. news paper ಆಗಾಗ ಓದೋ ಅಭ್ಯಾಸ ಇದೆ ಅಷ್ಟೇ.. !
ನಾನು 🙁 OMG ! ನನ್ನ ಕೊನೆಯ ಪ್ರಶ್ನೆ.. ) travelling ಅಂದ್ರೆ ಇಷ್ಟ ನ? ಮನೇಲಿ ಹೇಗೆ timepass ಮಾಡ್ತೀರಾ ಕೆಲಸದಿಂದ ಬಂದಮೇಲೆ?
ಅವನು: ನಾನು ಅಮ್ಮ ನ ಬಿಟ್ಟು ಅಷ್ಟು ಎಲ್ಲೂ ಹೋಗಲ್ಲ actually .. ಫ್ಯಾಮಿಲಿ trip ಹೋಗ್ತಿರ್ತೀವಿ.. ಮೂರೂ ತಿಂಗಳ ಹಿಂದೆ ಚಾಮುಂಡಿ ಬೆಟ್ಟಕ್ಕೆ ಹೋಗಿದ್ವಿ.. ! ಕೆಲಸದಿಂದ ಬಂದ್ಮೇಲೆ ಹೇಗೆ ಟೈಂಪಾಸ್ ಆಗತ್ತೋ ಗೊತ್ತೇ ಆಗಲ್ಲ.. !!
ನಾನು: ( ಮುಗೀತು.. ಎಲ್ಲ ಮುಗಿತು..ಆದಷ್ಟು ಬೇಗ ಕೆಳಗೆ ಹೋಗಬೇಕು.. ) ಓಹ್.. ಚಾಮುಂಡಿ ಬೆಟ್ಟ ಸೂಪರ್.. !
ಅವನು: ( ಸ್ವಲ್ಪ ಸಂಕೋಚ ಪಡುತ್ತಾ..) ನೀವು ನಿಮ್ ಮನೇಲಿ ಕೂರ್ತೀರ ?
ನಾನು : ( what is he even talking about ??) ಅಂದ್ರೆ?
ಅವನು : ಸಾರೀ.. ತಪ್ಪು ತಿಳಿಬೇಡಿ.. ನಮ್ಮ ಮನೆ ಕಡೆ ಮುಟ್ಟಾದ್ರೆ ಮೂರೂ ದಿನ ಕೂರ್ತಾರೆ.. ನಿಮ್ಮನೇಲಿ ಆ ತರಹ ಏನಾದ್ರು ಸಂಪ್ರದಾಯ ಇದ್ಯಾ ?
ನಾನು : ( am i discussing about my periods with a stranger ??) ಇಲ್ಲ.. ಹಾಗೆಲ್ಲ ನಮ್ ಮನೇಲಿ ಯಾರೂ ಮಾಡಲ್ಲ.. ನಮ್ ಅಜ್ಜಿ ಕಾಲದ್ಲಲೂ ಹಾಗೆ ಮಾಡ್ತಾ ಇರಲಿಲ್ಲವಂತೆ..
ಅವನು : ( ignoring my irritation ..) ನಮ್ ಮನೆಗೆ ಸೊಸೆ ಆಗಿ ಬಂದ್ರೆ ಅದ್ಯೇಲ್ಲ ಮಾಡಬೇಕು… ನಮ್ ಅಮ್ಮ ಕೂಡ ಮಾಡ್ತಾರೆ .. ಅಜ್ಜಿ ಕೂಡ ಮಾಡ್ತಾ ಇದ್ರು..
ನಾನು: ( no .. never .. ಈ ಮನೆಗೆ ನಾನು ಬಂದ್ರೆ.. ಮುಗೀತು ನನ್ನ ಕಥೆ ..) ಓಹ್.. ಹೌದ.. okay .. !
ಅವನು : ನಿಮಗೆ ಇನ್ನೇನಾದ್ರೂ ಕೇಳೋದು ಇದ್ಯಾ ?
ನಾನು : ( ಅಯ್ಯಯ್ಯೋ.. ಏನೂ ಇಲ್ಲ ಗುರೂ.. first ಮನೆಗೆ ಓಡಿ ಹೋಗ್ಬೇಕು.. ಅಷ್ಟೇ .. ) ಇಲ್ಲ.. ಕೆಳಗೆ ಹೋಗೋಣ್ವಾ ? ಎಲ್ಲ ಕಾಯ್ತಾ ಇರ್ತಾರೆ..
ಅವನು : ನಂಗೆ ನೀವು ಇಷ್ಟ ಆಗಿದೀರಾ .. ನಿಮಗೆ?
ನಾನು : ( ಕರ್ಮಾ ಗುರೂ..!! ) ನಮ್ ಅಪ್ಪ ಅಮ್ಮನ ಕೇಳ್ಬೇಕು..
ಕೊನೆಗೆ.. ಹೇಗೋ ಅವರ ಮನೆ ಇಂದ ಹೊರಟ್ವಿ.. ನನ್ ಕಥೆ ಕೇಳಿ ನಮ್ ಅಪ್ಪ ಅಮ್ಮ ತಮ್ಮ ಎಲ್ಲಾ ಬಿದ್ದು ಬಿದ್ದು ನಗ್ತಾ ಇದ್ರು.. ಮನೆಗೆ ಹೋದಮೇಲೆ relatives ಗೂ ಫೋನ್ ಮಾಡಿ ಕಥೆ ಹೇಳಿ ನಕ್ರು .. ಇನ್ನೇನ್ ಮಾಡ್ಲಿ.. ನಾನೂ ಎಲ್ಲರ ಜೊತೆ ಸೇರಿ ನಕ್ದೆ.. ನನ್ನ ತಮ್ಮ ಇನ್ನೂ ನನಗೆ ” ಆಪ್ತರಕ್ಷಕ ” ಅಂತ ರೇಗಿಸ್ತಾನೆ.. how funny is this marriage thing ? ಅಲ್ವಾ? ಅದರಲ್ಲೂ arrange marriage ಇನ್ನೂ ಒಂದ್ ಕೈ ಜಾಸ್ತಿ..!!
ನೀವೂ ಕೂಡ ಈತರ situation ಅಲ್ಲಿ ಇದ್ರಾ ಯಾವಾಗಾದ್ರೂ ?? ಇದ್ರೆ ಯಾವಾಗ? ಹೇಗೆ? ಏನಾಯ್ತು ಹೇಳಿ.. !! and arrange marriage ಆಗ್ತಾ ಇರೋ ಯುವ ಪ್ರಜೆಗಳೇ.. ಏನ್ ಮಾತಾಡ್ಬೇಕು ಹುಡುಗಿ ಜೊತೆ.. ಏನು ಮಾತಾಡಬೇಕು ಹುಡುಗನ ಜೊತೆ ಅಂತ confusion ಆ? comment ಮಾಡಿ ನಿಮ್ಮ experience .. ಗೊಂದಲಗಳು.. ಪ್ರಶ್ನೆಗಳು.. ಎಲ್ಲದಕ್ಕು ಸೇರಿ ಉತ್ತರ ಹುಡುಕೋಣ..
ನಮ್ ಅಪ್ಪ ಅಮ್ಮ ಮುಂದಿನ ವಾರ ಇನ್ನೊಂದು ವರನನ್ನು ನೋಡೋ ಸಂಭ್ರಮದಲ್ಲಿ ಇದ್ದಾರೆ.. ನಾನು ಕೂಡ ನಿಮ್ಮೆಲ್ಲರಿಗೆ ಆ ಕಥೆ ಹೇಳೋಕೆ ಕಾಯ್ತಾ ಇದೇನಿ.. soooo .. see you all very sooon … !! ( cant wait to read all your experiences and comments !!! ) tataaaa..