4811

8PM: Another party song in kannada for party animals

ಭಟ್ರುಗೆ song ಬರಿಯೊ‌ ಚಟ,ನಮ್ಮುಹುಡಗನಿಗೆ ಭಟ್ರ ಕೈನಲ್ಲಿ ಸಾಂಗ್ ರಿಲೀಸ್ ಮಾಡ್ಸೊ ಹಠ

ನಾನು,ನನ್ ಫ್ರೇಂಡ್ಸ್ ಅವ್ನ ಫ್ರೆಂಡ್ಸ್ ,ಅವನವನ್ ಫ್ರೆಂಡ್ಸ್ ಒಟ್ನಲ್ಲಿ ಎಲ್ಲರೂ ಕುಡಿತಿವಿ.ಕೆಲವ್ರು ಡೈಲಿ,ಕೆಲವ್ರು ವಿಕ್ಲಿ,ಇನ್ನಕೆಲವ್ರು ಮಂತ್ಲಿ ಕುಡಿತಾರೆ,ಸುಖಕ್ಕೆ,ದುಃಖಕ್ಕೆ,ಸುಖ ದುಃಖದ ನಡುವಿನ ಬೇಜಾರಿಗೆ ಜನ ಕುಡಿತಾರೆ.
ಏನೆ ಆಗ್ಲೆ‌ ಕುಡಿತದಲ್ಲಿ ನಿಯಂತ್ರಣ ಇದ್ದಷ್ಟು ಒಳ್ಳೆದು,ಕುಡಿದೆನೆ ಇದ್ರೆ ಇನ್ನು ಒಳ್ಳೆದು.ಇವಾಗ್ಯಾಕ್ ಎಣ್ಣೆ ಬಗ್ಗೆ ಇಷ್ಟೊಂದು ಚರ್ಚೆ ಅಂತಿರ,
ಈ ಡೈಲಿ ಕುಡಿಯವ್ರಗೆ,ವೀಕ್ಲಿ ಕುಡಿಯವ್ರಗೆ,ಮಂತ್ಲಿ ಕುಡಿಯವ್ರಗೆ ಕುಡಿತ ಚಟ ಆಗ್ಬಿಟ್ಟಿರ್ತದೆ.ಈ ಚಟ ಅನ್ನೊದ್ ಯಾರ್ಗಿಲ್ಲ ಹೇಳಿ.
ಯೋಗರಾಜ್ ಭಟ್ರಿಗೆ ಹಾಡ್ಗಳ್ ಬರಿಯೊ ಚಟ,ರಾಮ್ ಗೋಪಾಲ್ ವರ್ಮನಿಗೆ ಬಿಸಿ,ಬಿಸಿ .ಹಸಿ ಹಸಿ ವಿಷಯಗಳನ್ನ ಸಿನಿಮಾ ಮಾಡೊ ಚಟ.ಹಂಗೆ ನಮ್ಮ ದುರ್ಗದ ಹುಡುಗ ವಿನಾಯಕನಿಗೆ ‌ಕಿರು ಚಿತ್ರ, ಜಾಹೀರಾತು, ಹಾಡುಗಳ ನಿರ್ದೇಶನ , ಸಿನಿಮಾ ನಿರ್ದೇಶನ ಮಾಡೊ ಚಟ,ಈ ಎಲ್ಲ ಚಟಗಳ ಒಟ್ಟು ಮೊತ್ತವೆ , ಯಶೋಮಾರ್ಗ ಡಾಕುಮೆಂಟರಿ,kA-16 ಮ್ಯೂಸಿಕ್ ಆಲ್ಬಂ,ಸ್ವಲ್ಪ ಬದಲಾಗಿ ,ರೆಸ್ಟ್ ಪಾಸಿಬಲ್,ಮಿಸ್ಟರ್ ಬೀಜ ಕಿರುಚಿತ್ರಗಳು ಮತ್ತೆ ಈಗ ಯೋಗರಾಜ್ ಭಟ್ರ ಕೈ ಯಿಂದ ರಿಲೀಸ್ ಆದ 8pm ಸಾಂಗ್.
ಸಾಧನೆ ಮಾಡ್ತೀನಿ ಅಂತ ಹೊರಟವನಿಗೆ ಬರಿ ಚಟ ಮಾತ್ರ ಇದ್ರೆ ಸಾಕ ! ಸ್ವಲ್ಪ ಹಠನೂ ಇರ್ಬೇಕು.
ಹಂಗಂದ್ರೆ ಹಠ ಇದ್ರೆ ಗುರಿಮುಟ್ಬಿತಿವಿ ಅಂತಲ್ಲ ,ಚಟ ಹಠದ ಜೊತೆಗೆ ಪ್ರಿಪರೇಷನ್ ಕೂಡ ಇರಬೇಕು ,ಸ್ವಲ್ಪ ಕೆಲಸದ ಅನುಭವ ಕೂಡ ಇರ್ಬೇಕು.
ಇರೊ ಸ್ವಲ್ಪ ಸಮಯದಲ್ಲೆ ಸಿನಿಮಾ ಅನುಭವ ಮತ್ತು ಕಾರ್ಯದಕ್ಷತೆ ಇರೊ ವಿನಾಯಕ್ ಮತ್ತು ಕ್ಯಾಮರಾ ಮ್ಯಾನ್ ತೇಜಸ್ ಗೌಡ, ಕ್ಯೂಬ್ ಹರೀಶ್ ಹಿನ್ನೆಲೆ ಸಂಗೀತ ಮತ್ತು ಹಾಡುಗಾರ ಅಭಿಷೇಕ್ ,ನೃತ್ಯ ಸಂಯೋಜಕ ಲಿಂಗೇಶ್ ,
ಜಾವಿದ್ ಡಿ.ಜೆ ,ಹೇಮಂತ್ ,ಸುಷ್ಮಗೌಡ ಹಾಗು ಉಳಿದ ತಂಡದ ಸದಸ್ಯರು ಸೇರಿ ಮಾಡಿದ ಒಳ್ಳೆ ಪಾರ್ಟಿ ಸಾಂಗ್ 8pm ಅನ್ನೊ‌ ಚಿಕ್ಕ ಸಾಧನೆ.ನೋಡಿ ಆನಂದಿಸಿ, ಶೇರ್ ಮಾಡಿ.

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..