1615

ಸಮಸ್ಯೆಗಳು ಸಮಸ್ಯೆಗಳಲ್ಲ

ಎಂ.ಕಾಂ ನ ಮೂರನೇ ಸೆಮಿಸ್ಟರ್ ನಲ್ಲಿ ಚಾಯಿಸ್ ಬೇಸಡ್ ಪೇಪರ್ ಆಯ್ಕೆ ಮಾಡುವ ಅವಕಾಶ ಸಿಕ್ಕಿತ್ತು.
ನಾನು ಮಂಗಳೂರಿನ ಪ್ರತಿಷ್ಟಿತ ಕಾಲೇಜ್ ನಲ್ಲಿ ಒಂದಾದ ಎಸ್.ಡಿ.ಎಂ ಕಾಲೇಜ್ ನಲ್ಲಿ ಎಂ.ಬಿ.ಎ .ಪದವಿಯ ಒಂದು ಸಬ್ಜೆಕ್ಟ್ ಅನ್ನು ಆಯ್ಕೆ ಮಾಡಿದ್ದೆ.

ಪ್ರತಿ ಶನಿವಾರ ಬೆಳಗ್ಗೆ ಬೇಗ ಎದ್ದು ,ಕಾರ್ಕಳದಿಂದ 6.45 ರ ಬಸ್ಸನ್ನು ಹತ್ತಿ, 8.30 ಹೊತ್ತಿಗೆ ತರಗತಿಗೆ ಹಾಜರಾಗುತ್ತಿದ್ದೆ. ನನಗೆಂದಿಗೂ ಅದು ಹೊರೆ ಎಂದು ಮನಸಿಗು ಸಹ ಬಂದಿರಲಿಲ್ಲಾ, ಅದಕ್ಕೆರಡು ಬಲವಾದ ಕಾರಣಗಳಿದ್ದವು ನಾನೆಂದು ಯಾವ ಕಾಲೇಜ್ ನಲ್ಲೂ ಕಾಣದ ಹಸನ್ಮುಖಿ ಅಧ್ಯಾಪಕರ ಬಳಗ ಒಂದು ಕಡೆಯಾದರೆ,ಇನ್ನೊಂದೆಡೆ ಪ್ರತಿಯೊಬ್ಬರಿಗು ಪ್ರೇರೆಪಿಸುವಂತ ಒಂದು ಶಕ್ತಿ ಆ ನಮ್ಮ ತರಗತಿಯಲ್ಲಿ ಅಂದು ಪ್ರತ್ಯೇಕ್ಷವಾಗಿತ್ತು ಆ ಶಕ್ತಿಯೇ ‘ಸುಜಯ್’.

ಸುಜಯ್ ಆತನ ನಿಜವಾಗಿಯು ಕೇವಲ ಮಾನವನಲ್ಲ ದೇವ ಮಾನವ,ಆತನ ಹೆಸರೇ ಹೇಳುವಂತೆ ಸಾವನ್ನು ಜಯಿಸಿದವ. ನಾವು ಕಾಣುವ ಬದುಕಿನ ಅಂತ್ಯವನ್ನು ತಲುಪಿ ಮತ್ತೆ ಮರಳಿದವನಾತ,
ಆತನಿಗೆ ಸರಿಯಾಗಿ ನಡೆಯಲಾಗುದಿಲ್ಲಾ, ನೋಟ್ಸು ಬರೆಯಲಾಗುದಿಲ್ಲಾ, ಆದರು ಮುಖದಲ್ಲಿ ಲವಲವಿಕೆ ಚೈತನ್ಯ
ಚೂರು ಕಮ್ಮಿಯಿಲ್ಲಾ,ಎಲ್ಲರನ್ನು ನಗುಮುಖದಿ ಸ್ವಾಗತಿಸುವಂತಹ ಆತನ ಗುಣ ನಿಜವಾಗಿಯು ಶ್ಲಾಘನೀಯ.

ಆತನ ಮುಖವೊಮ್ಮೆ ಕಂಡರೆ ಸಾಕು ನನ್ನಲ್ಲೂ ಏನೋ ಗೆದ್ದು ಬಂದತೆ ಭಾವನೆ ಮೂಡುತ್ತಿತ್ತು. ಅಂದು ನಮ್ಮ ತರಗತಿಗೆ ಬಂದ ಆತನ ಪರಿಚಿತ ಅಧ್ಯಾಪಕರೊಬ್ಬರು ಅವನ ಕರಾಳ ದಿನದ ಕತೆಯ ನಮ್ಮ ಮುಂದೆ ಪ್ರಸ್ತಾಪಿಸಿದಾಗ,ಎಲ್ಲರ ಕಣ್ಣಲ್ಲೂ ಕಣ್ಣೀರು ಮರಿ ಹಾಕಿತ್ತು,ಕರವಸ್ತ್ರ ಸಂಪೂರ್ಣ ಒದ್ದೆಯಾಗಿ ಕರಗಿತ್ತು. ಪಿ.ಯು.ಸಿ ಪರಿಕ್ಷೆಯ ಬಳಿಕ ಸುಜಯ್ ಹಾಗು ಆತನ 3 ಸ್ನೇಹಿತರು ಅಲ್ಲೇ ಪಕ್ಕದಲ್ಲೇ ಇರುವ ಯಾವುದೋ ಒಂದು ಸ್ಥಳಕ್ಕೆ ಪ್ರವಾಸ ಕೈಗೊಂಡಿದ್ದರು,ಅದಾಗಲೇ ಹೊಸದಾಗಿ ಖರೀದಿಸಿದ ಸ್ನೇಹಿತನ ಕಾರಿನಲ್ಲಿ ತಮ್ಮ ಪ್ರಯಾಣವನ್ನು ಆರಂಭಿಸಿದ್ದರು, ಸ್ನೇಹಿತನ ಹುಡುಗಾಟದ ಮಿತಿ ಮೀರಿದ ವೇಗಕ್ಕೆ,ಕಾರು ನಿಯಂತ್ರಣ ತಪ್ಪಿ ಮುಂದೆ ಬರುತ್ತಿದ್ದ ಲಾರಿಗೆ ಗುದ್ದಿತು,ಅಪಘಾತದ ತೀವ್ರತೆ ಎಷ್ಟಿತ್ತು ಅಂದ್ರೆ, ಕಾರಿನಲ್ಲಿದ್ದ 3 ಸವಾರರು ಸ್ಥಳದಲ್ಲೇ ಪ್ರಾಣ ಬಿಟ್ಟರೆ,ಸುಜಯ ಮಾತ್ರ ಅರೆ ಜೀವದಲ್ಲಿ ಆಸ್ಪತ್ರೆ ಪಾಲಾಗಿದ್ದ.ಅವನಿಗೆ ಸುಮಾರು ಒಂದು ತಿಂಗಳುಗಳ ಕಾಲ ಮತಿಯಿರಲಿಲ್ಲಾ,
ಕೋಮ ದಲ್ಲಿ ಆತ ಸಾವು ಬದುಕಿನ ಕೈಗೆ ಚೆಂಡಟ ಆಡಲು ತನ್ನ ಉಸಿರನ್ನು ನೀಡಿದ್ದ,

ಭಗವಂತ ಕ್ರಪೆಯಿಂದಲೇ ಒಂದು ತಿಂಗಳ ಬಳಿಕ ಆತನಿಗೆ ಮತಿ ಬಂತು. ಮತಿ ಬಂದದ್ದು ಬಂತು,ಆದರೆ ಆತನಿಗೆ ಈ ಜಗತ್ತೆ ಹೊಸದಾಗಿ ಕಾಣ ತೊಡಗಿತು, ಆತನಿಗೆ ಹಿಂದಿನದ್ದು ಯಾವ ಘಟನೆಯು ನೆನಪಿರಲಿಲ್ಲಾ, ವ್ಯಕ್ತಿಗಳ ಪರಿಚಯವಿರಲಿಲ್ಲಾ, ವಿಪರ್ಯಾಸ ಅಂದ್ರೆ ಹೆತ್ತ ತಾಯಿಯನ್ನು ಕೂಡ ನೀವ್ಯಾರು? ಎನ್ನುವಂತೆ
ಪ್ರಶ್ನಿಸ ತೊಡಗಿದ್ದ,ಹೆತ್ತ ತಾಯಿಯ ಮನಸಿಗೆ ಎಷ್ಟು ನೋವಾಗಿರಬಹುದು ನೀವೆ ತಿಳಿದುಕೊಳ್ಳಿ.

ಆದರು ಛಲ ಬಿಡದ ತಾಯಿ ಆತನ ಬೆನ್ಗಾವಲಾಗಿ ನಿಂತರು ಕೇವಲ 6 ತಿಂಗಳಲ್ಲಿ ಆತನಿಗೆ ಹಳೆಯ ನೆನಪುಗಳು ಮರುಕಳಿಸಿತು. ಆತ ಡಿಗ್ರಿಯಲ್ಲಿ ಬಿ.ಕಾಂ ತೆಗೆದುಕೊಂಡ ಮೊದ ಮೊದಲ ಪರೀಕ್ಷೆಯಲ್ಲಿ ಫೇಲ್ ಆಗುತ್ತ ಹೋದ, ಆದರೆ ಆತ ತನ್ನೊಳಗಿನ ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲಾ. ಕೊನೆಗೂ ಬಿ.ಕಾಂ ನಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಪಾಸ ಮಾಡುವ ಮೂಲಕ ತನ್ನ ಸಾಮರ್ಥ್ಯ ಏನು ಎಂಬುದನ್ನು ಎಲ್ಲರಿಗು ತೋರಿಸಿದ. ಈಗಲೂ ತುಂಬಾ ಚುರುಕಾಗಿ ಎಲ್ಲರೊಂದಿಗು ಆತ ಬೆರೆಯುತ್ತಾನೆ,ಜೀವನವನ್ನು ತನ್ನದೇ ರೀತಿಯಲ್ಲಿ ನಗು ನಗು ಜೀವಿಸುತ್ತಿದ್ದಾನೆ,

ನನಗಾಗ ಅನಿಸಿತು ಸಮಸ್ಯೆಗಳು ಸಾಮನ್ಯವಾಗಿ ಸಮಸ್ಯೆಯೆ ಅಲ್ಲಾ, ನಾವು ಅದನ್ನು ಪರಿಗಣಿಸದೇ ಹೋದರೆ .
ಏನೇ ಆಗಲಿ ನನಗೆ ಆತನೇ ಈಗಲೂ ಸ್ಪೂರ್ತಿ. ಆತನ ನಗು ಮುಖ ಒಂದೇ ಎಂದಿಗೂ ನನ್ನೊಳಗೆ ಆರದ ಜ್ಯೋತಿ.

Contributed by : ಪರಮ್ ಭಾರದ್ವಾಜ್ 

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..