5874

ನನ್ನ ನಾಳೆಯವಳಿಗಾಗಿ ನಿನ್ನೆ ಬರೆದ ಪತ್ರ

pramod-authorPramod ಮರವಂತೆ

ಓ…ಇವುಳೇ….

ಹಾಗಾಗಬಾರದಿತ್ತು….ಹಾಗೆಯೇ ಆಯಿತು..ಹೀಗಾಗಬಾರದಿತ್ತು..ಹೀಗೆಯೇ ಆಯಿತು.ಒಟ್ಟಾರೆ ಹೇಗೋ ಆಯಿತು.ಇದು ನಾಲ್ಕನೇ ಬಾರಿ.ಅಲ್ಲ..ಅಲ್ಲ..ಐದನೇ ಬಾರಿ ನಾನು ಪೆನ್ನು ಹಾಳೆ ಹಿಡಿದು ಕೂರುತ್ತಿರುವುದು.dust bin ಅಲ್ಲಿ ಮುದುಡಿ ಬಿದ್ದಿರುವ ಬಿಳಿಯ ಹಾಳೆಗಳೂ ನನಗೆ ಕ್ಯಾಕರಿಸಿ ಉಗಿದಂತೆ ಭಾಸವಾಗುತ್ತಿದೆ.ಒಂದೊಮ್ಮೆ ಖಾಲಿ ಹಾಳೆ ಕನ್ನಡಿಯಾಗಿದ್ದರೆ ನನ್ನ ಮುಖ ನೋಡಿ ನೋಡಿ ನನಗೇ ಬೇಜಾರಾಗಿ ಹೋಗುತ್ತಿತ್ತೋ ಏನೊ? ಇದು ಹೀಗೆಯೇ ಅಂತೆ ನಮಗೆ ಯಾರೋ ಹೇಳಿದ್ದರು.ಇತ್ತೀಚೆಗೆ ನನಗೂ ಹೌದು ಅನಿಸುತ್ತಿದೆ.ಎಷ್ಟೋ ಬಾರಿ ನಿನ್ನನ್ನು ನೋಡಲೇ ಬಾರದಿತ್ತೆನೋ ಅನಿಸಿದ್ದೂ ಉಂಟು.ಹೌದು ನನಗೂ ಆದದಂತೂ ನಿಜ ,ನನ್ನ ತನವನ್ನೇ ಮೂಲೆಗೊತ್ತಿದ ಹಾಳುಗೇಡಿ ಪ್ರೀತಿ.ನಿನಗಿಂತ ಹೆಚ್ಚು ಕಾಡುವುದು ನಿನ್ನ ನೆನಪು.ನಿನ್ನ ಉಡುಗೆಯ ಮೇಲಿರುವ ಹೂವಿನ ಚಿತ್ತಾರಗಳೂ ನಕ್ಕಂತೆ ನಿನ್ನ ನೀಳ ಜಡೆ “ನನ್ನ ಹಿಂದೆ ಬರಬೇಡ” ಎಂದು ತುಂಟನಗೆ ಬೀರಿದಂತೆ,ನಿನ್ನ ಮೂಗುತಿ ಬೆಳಕಿರುವಾಗ ಬಿಟ್ಟ ಟಾರ್ಚ್ನಂತೆ ನಿನ್ನ ಹುಬ್ಬು ಕಪ್ಪು ಕಾಮನ ಬಿಲ್ಲಿನಂತೆ,ಹೀಗೆ ಏನೇನೋ ಆಗುತ್ತಿದೆ.ನನ್ನ ಏಕಾಂತವೆಲ್ಲಾ ನಿನ್ನ ಹುಚ್ಚು ಪ್ರೇಮ ದಪರ್ವ.ನಾ ಮಾಡುವ ಕೆಲಸವೆಲ್ಲಾ ಬೇಜವಬ್ದಾರಿತನದ ಭಾಸಿಂಗ,ನನ್ನ ಬರವಣಿಗೆ ಚಿಕ್ಕ ಮಕ್ಕಳ ಕಾಗೆ ಕಾಲುಗುಬ್ಬಿ ಕಾಲುಗೀಚಾಟ.ಇಷ್ಟೆಲ್ಲಾ ಕಿಡಿಗೇಡಿತನದ ಜನ್ಮ ಸ್ಥಾನವೇ ಎದೆಯ ಎಡಬದಿಯಲ್ಲಿರುವ ಮುಷ್ಟಿ ಗಾತ್ರದ. ಹೃದಯ.ಈ ಎಲ್ಲಾ ಹುಚ್ಚುತನದ ರೂವಾರಿಯೇ ನೀನು, ಸ್ವಲ್ಪನಾನು.ಯಾವ ಹೆಣ್ಣನ್ಮು ಕಂಡಾಗಲೂ ಉಗುರು ಕಚ್ಚಿಕೊಂಡವನಲ್ಲ, ಸಂಕೋಚದಿಂದ pant ಜೇಬಿನಲ್ಲಿ ಕೈ ಹಾಕಿಕೊಂಡು ಆಚೆ ಈಚೆ ನಡೆದಾಡಿದವನಲ್ಲ.ಸರಿ ಇದ್ಷ in-shirt ಅನ್ನು ಸುಖಾಸುಮ್ಮನೆ ಸರಿಪಡಿಸಿಕೊಂಡವನಲ್ಲ.ನೀ ಎದುರಿಗೆ ಬಂದ ಕೂಡಲೇ ನನ್ನ ಜೀವಸತ್ವಗಳೆಲ್ಲಾ ಬೆಂಗಳೂರಿನ ಕಡಲೆಕಾಯಿ ಜಾತ್ರೆಯಲ್ಲಿ ಕೀಂ…ಪೀಂ..ಎನ್ನುವ. ಪೀಪಳ್ಳಿಯಂತಾಗುತ್ತವೆ.ನಿನ್ನ ಕುಡಿನೋಟ ಆ ಗೌಜಿನಲ್ಲಿ ಸಿಗುವ ಸಿಹಿ ಮೌನ.ಯಾರೊಂದಿಗೂ ಮಾತನಾಡಿದಂತೆ ನಟಿಸುತ್ತ ನೀನು ಆಗಾಗ ನನ್ನ ನೋಡುವುದು,ನಾನು ನಿನ್ನನ್ನು ನೋಡಿದರೂ ನೋಡದವನಂತೆ ಏನೆನೋ ಮಾತನಾಡಿ ನನ್ನ ಸ್ನೇಹವೃತ್ತದವರ ಬಾಯಿಯಿಂದ. ಬೈಯಿಸಿಕೊಳ್ಳುವುದು,ಇದಕ್ಕಿಂತ ಪರಮ ಮಜ ಇನ್ನೊಂದುಂಟೇ? ನಿನ್ನನ್ನು ಪ್ರತಿದಿನ ಕಂಡಾಗಲೂ ಏನೋ ಹೊಸತರ.ಹಳೇ ಬೀಸಣಿಕೆಯಲ್ಲಿನ ಹೊಸಗಾಳಿ ಮುಖಕ್ಕೆ ಬಡಿದಂತೆ ಹಳೆಯ ಹರಿದ ನೋಟಿನಲ್ಲಿ ಹೊಸದೇನನ್ನೋ ಕೊಂಡು ಬಂದಂತೆ.ಮೂರು ನಾಲ್ಕು ವರುಷ ತಲೆಕೂದಲು ಕಿತ್ತ ಮೆಗಾ
ಧಾರಾವಾಹಿಯೊಂದು ಕೊನೆಗೂ ಮುಗಿಧಂತೆ, ಹೇಳತೀರದ ಸಂತಸ.ಅದೇ ನಿನ್ನನ್ನು ಕಾಣದೇ ಹೋದರೆ,ಎಲ್ಲವೂ ನಿರ್ಲಿಪ್ತ.ಯಾರು ಕಚಗುಳಿ ಇಟ್ಟರೂ ನಗುವೇ ಬರದಂತಾಗುತ್ತದೆ.ಲೋಕಕೆಲ್ಲಾ ನೀನು ಹೇಗೊ ಗೊತ್ತಿಲ್ಲ.ನನಗಂತೂ ನೀನು ಅಪ್ರತಿಮ ಸುಂದರಿ.ನಿನ್ನ ಕಣ್ಣುಗಳ ಆರಾಧಕ ನಾನು.ಅಪರೂಪಕ್ಕೆ ನಿನ್ನ ಮೊಗದ ಮೇಲೆ ಜೀವ ತಾಳುವ ಮೊಡವೆಗಳ ಯರ್ರಾಬಿರ್ರಿ ಅಭಿಮಾನಿ ನಾನು.ನಿನ್ನ ಮುಂಗುರುಳು ಕೆನ್ನೆಯೊಂದಿಗೆ ಅಟವಾಡುವುದನು ಕಣ್ತುಂಬಿಕೊಳ್ಳುವುದೇ ಯಥೇಚ್ಚ ಸಂತೋಷದ ಕ್ಷಣ.ನನ್ನ ಏಕಾಂತಕ್ಕೆ ಮೆರಗು ತರುವ ರೊಮ್ಯಾಂಟಿಕ್ಹಾ ಡುಗಳಿಗೆಲ್ಲಾ ನೀನೇ ನಾಯಕಿ
ನಾನೇ ನಾಯಕ.ಈ ಕಲ್ಪನೆ ಎನ್ನುವ ಕಿಡಿಗೇಡಿತನ ನಮ್ಮನ್ನು ಅದೆಷ್ಟು ಕುಣಿಸುತ್ತದೆ ಗೊತ್ತಾ? ಒಮ್ಮೊಮ್ಮೆ ಒಬ್ಬನೇ ನಕ್ಕು ನಾಲ್ಕು ಜನರಿಂದ ಬೇಜಾರಾಗುವವರೆಗೂ ಬೈಸಿಕೊಳ್ಳುತ್ತೇನೆ.ತುಂಬಾ ಯೋಚಿಸಿದರೆ ನನಗೆ ಇದೆಲ್ಲಾ ಬೇಕಿತ್ತಾ ಅನಿಸುತ್ತದೆ.ಮರುಕ್ಷಣವೇ ಬೇಕಿತ್ತು ಅಂದುಕೊಳ್ಳುತ್ತೇನೆ.ನಿನ್ನ ಮೇಲೆ ಒಲವಾಗುವ ಮುಂಚೆ ನಾ ಹೇಗಿದ್ದೆ?ಹೇಗೋ ಇದ್ದೆ,ನನ್ನ ಪಾಡಿಗೆ ನಾನು.ನಾನಾಯಿತು ನನ್ನ ಮೊಬೈಲ್- laptop ಅಯಿತು.ರಾತ್ರಿಯೆಲ್ಲಾ ಜಾಗರಣೆ ಮಾಡುತ್ತಿದ್ದೆ.ಕ್ಲಾಸಿನಲ್ಲಿ ಬಂದು ನನ್ನ ಪಾಡಿಗೆ ನಾನು ಮಲಗುತ್ತಿದ್ದೆ.ಕ್ರಿಕೇಟ್ ಅಡುತ್ತಿದ್ದೆ.ವಿಪರೀತ ಟೀ ಕುಡಿಯುತ್ತಿದ್ದೆ.ನೆನಪಾದಾಗಲೆಲ್ಲಾ ಸ್ನಾನ ಮಾಡುತ್ತಿದ್ದೆ.ಹೀಗೆ ಏನೇನೋ ಮಾಡುತ್ತಿದ್ದೆ.ಆದರೆ ಕವನಗಳ ಬರೆಯುವ ಹುಚ್ಚಿರಲಿಲ್ಲ.ಈಗಲಂತೂ ಅದೇ ಕಾಯಕ.ನಿ ಎದುರು ಇದ್ದಾಗಲೂ ಕವನ.ಇಲ್ಲದಿದ್ದಾಗಲೂ ಕವನ.ಅವುಗಳನ್ನೆಲ್ಲಾ ನಿನ್ನೆದುರು ತಂದಿಡುವ ಅತೀವ ಬಯಕೆ, ಮೇಷ್ಟ್ರ ಎದುರು homework ತಂದಿಡುವ ವಿಧೇಯ ವಿದ್ಯಾರ್ಥಿಯಂತೆ.ಯಾವುದಕ್ಕೂ ನೀನು ಹುಂ ಅನ್ನುವುದೊಂದೇ ಬಾಕಿ.ಇತ್ತೀಚಿನ ವಿದ್ಯಮಾನಗಳ ಗಮನಿಸಿದ ಮೇಲೆ ನಿನಗೂ ನಾನು ನಿನ್ನ ಪ್ರೀತಿಸುತ್ತಿರುವ ವಿಚಾರ ಗೊತ್ತಾಗಿದೆ ಎನ್ನುವುದು ನನ್ನ ಭಾವನೆ.ನಿನ್ನ ಎದುರಿಗೆ ಬಂದು ಆದದ್ದನ್ನೆಲ್ಲಾ ಒದರಬೇಕು ಅಂದುಕೊಳ್ಳುತ್ತೇನೆ.ಆದರೆ ಯಾಕೊ ಮೈಯೆಲ್ಲಾ ನಡುಗಿ ಏಸಿ ರೂಮಿನಲ್ಲೂ ಬೆವರು ಧಾರಾಕಾರವಾಗಿ ಹರಿಯುತ್ತದೆ.ಒಂದೆರಡು ಬಾರಿ ಸುಮ್ಮನೆ ಕೂದಲು ಸರಿಪಡಿಸಿಕೊಳ್ಳುತ್ತೇನೆ.ಇಲ್ಲದ ಗಡ್ಡವನ್ನು ಕೆರೆದುಕೊಳ್ಳುತ್ತೇನೆ.ಸುಮ್ಮನೆ ಮಲಗಿರುವ ಮೊಬೈಲನ್ನು ಎತ್ತಿ ಅನ್ಲಾಕ್ಮಾಡಿ ನೊಡುತ್ತೇನೆ.ಹೀಗೆ ಏನೇನೋ ಮಾಡುತ್ತೇನೆಯೇ ಹೊರತು,ನಿನ್ನ ಕಣ್ಣೆದುರು ಬಂದು ನೀ ನಂದ್ರೆ ನನಗೆ ಇಷ್ಟ.” ನನ್ನ ಮಕ್ಕಳ ಅಂಡು ತೊಳೆಯುವ ಸುಂದರಿ ನೀನಾಗುತ್ತಿಯಾ ?” ಎಂದು ಕೇಳಲು ಭಯ.ಅದಕ್ಜೆ ಈ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಂಡಿದ್ದೇನೆ.ಇದನ್ನು ಬರೆಯಲು ಹೆಚ್ಚು ಕಡಿಮೆ ಮೂರು ದಿನವಾಗಿದೆ.ಏನನ್ನೋ ಬರೆಯುವುದು,ಗೀಚುವುದು,ಎದ್ದು ಹೊರನಡೆಯುವುದು,ಹೀಗೆ.ನಿನ್ನ ಕಂಡಾಂಗಿನಿಂದಲೂ ಟಿವಿಯಲ್ಲಿ ಬರುವ ಎಲ್ಲಾ ನಾಯಕಿಯರೂ makeup ಹಾಕದೆ ಬಂದವರಂತೆ ಕಾಣುತ್ತಿದ್ದಾರೆ.ಟಿವಿಯ ತುಂಬಾ ನೀನೇ ಕಾಣುತ್ತಿದ್ದರೂ ಅದ್ಯಾಕೊ channel ಬದಲಾಯಿಸುತ್ತ ಹೋಗುತ್ತೇನೆ.ಕರೆಂಟ್ಹೋಗಿ ಟೀವಿ ಕಣ್ಮುಚ್ಚುವವರೆಗೂ.ಸರಿಯಾಗಿ ಊಟ ಮಾಡದೇ ಹಲವು ದಿನಗಳಾಗಿವೆ.shaving ಮಾಡದೆ ಬೆಳಗಿನ ಜಾವ ಟಿವಿಯಲ್ಲಿ ಬರುವ ಶ್ರೀಶ್ರೀಶ್ರೀ ಯಾವುದೋ ಸ್ವಾಮೀಜಿಯನ್ನು ಹೋಲುತ್ತಿದ್ದೇನೆ.ಮನೆಯ ಹತ್ತಿರ ಸೆಲೂನ್ನ ಕೊರತೆಯಲ್ಲ.”shaving ಮಾಡಿಸಿಕೊ ” ಎಂದು ಗಡ್ಡ ಮುಟ್ಟಿ ಹೇಳುವ ಗೆಳತಿಯ ಕೊರತೆಯಿದೆ.ನಿನ್ನ ಹುಚ್ಚು ಅತಿಯಾದಾಗ ನಿನ್ನ ಮರೆಯುವ ವಿಫಲ ಪ್ರಯತ್ನಗಳು ಸಾಕಷ್ಟು ನಡೆದಿವೆ.ನಿನ್ನ ನೋಡುವ ಆ ಕ್ಷಣದ ನಿರೀಕ್ಷೆ ಹಾಗು ಆ ಕ್ಷಣದ ಮೆಲುಕು ಇದೇ ನನ್ನ ದೈನಂದಿನ ಜೀವನ. ನನಗೆ ಅಷ್ಟಾಗಿ ರೊಮ್ಯಾಂಟಿಕ್ ಆಗಿ ಬರೆಯಲು ಬರುವುದಿಲ್ಲ.ಯಾಕೆಂದರೆ ಪ್ರೇಮಪತ್ರಕ್ಕೆ ಇದು ನನ್ನ ಪಾದಾರ್ಪಣೆಯಷ್ಟೆ.ಏನೋ ಬಾಯಿಗೆ ಬಂದದನ್ನ ಪೆನ್ನಿಗೆ ಹೇಳಿದೆ.ಅದು ಹಾಳೆಯ ಕಿವಿಗೂದಿದೆ.ನನ್ನ ಪತ್ರ ಇಷ್ಟವಾಗುವುದೋ ಇಲ್ಲವೊ ಗೊತ್ತಿಲ್ಲ. ನಾನು ಇಷ್ಟವಾಗಬಹುದು ಎನ್ನುವ ಕಿರುನಂಬಿಕೆಯಲ್ಲಿ ನಿನ್ನ ಉತ್ತರದ ನಿರೀಕ್ಷೆಯಿದೆ.ಟೈಮು ಬೇಕಾದಷ್ಟಿದೆ.ಯೋಚಿಸು.ತುಂಬಾ ಯೋಚಿಸು.ಸಾಧ್ಯಾವಾದರೆ ನನ್ನ ಹುಚ್ಚುತನವನ್ನ ಪ್ರೀತಿಸು.
ಇಂತಿ ನಿನ್ನ……

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..