- By Local Kebal Team
- Sunday, April 23rd, 2017
ಜಪಾನಿನ ಮಹಿಳೆಯರು ತುಂಬಾ ತೆಳ್ಳಗೆ ಇರುತ್ತಾರೆ ..ಅಲ್ಲಿನ ದೇಹ ಪ್ರಕ್ರತಿಯೂ ಒಂದು ಕಾರಣ ಇರಬಹುದು ..ಆದರೆ ಅದಕ್ಕಿಂತ ಮುಖ್ಯವಾಗಿ ಕಾರಣವಾಗಿರುವುದು ಅವರ ಬೆಳಗ್ಗಿನ ಕ್ರೀಯಾಕರ್ಮ .. ಓಕೆ .. ಸಿಂಪಲ್ ಆಗಿ ಹೇಳೋದಾದ್ರೆ ಅವರು ಬೆಳಿಗ್ಗೆ ಎಡ್ಡಾ ತಕ್ಷಣ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುತ್ತಾರೆ
ನಾವು ನೀರನ್ನು ಯಾಕೆ ಕುಡಿಯಬೇಕು ?
ನಮ್ಮ ದೇಹವು 70 % ನೀರಿನಿಂದ ನಿರ್ಮಿತವಾಗಿದೆ … ಈ ನೀರು ಬಿಸಿಲಿನ ಭೇಗೆಗೆ ಅಥವಾ ಕೆಲಸ ಮಾಡುವುದರಿಂದ ಬೆವರಿನ ಮೂಲಕ ಅಥವಾ ಬೇರೆ ಜೈವಿಕ ಕ್ರೀಯೆಯಿಂದ ಆವಿಯಾಗುತ್ತದೆ ಅಥವಾ ಕಲುಷಿತವಾಗುತ್ತದೆ .. ಇದನ್ನು ಫ್ರೆಶ್ ಆಗಿ ಇಡಲು ನೀರು ಕುಡಿಯಲೇ ಬೇಕು .ಮನುಷ್ಯನ ದೇಹವು ಸರಿಯಾಗಿ ಕೆಲಸ ಮಾಡಲು ಇಂತಿಷ್ಟು ಪ್ರಮಾಣದ ನೀರು ಬೇಕೇ ಬೇಕು . ಇಲ್ಲ ಅಂದರೆ ಒಂದೊಂದೇ ರೋಗಗಳು ಶುರು ಆಗುತ್ತವೆ
ನೀರನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳು
1.ದೇಹದಲ್ಲಿರೋ ವಿಷಕಾರಿ ಅಂಶಗಳನ್ನು ತೆಗೆದು ಹಾಕುತ್ತದೆ
ರಾತ್ರಿ ಸಮಯದಲ್ಲಿ ನಮ್ಮ ದೇಹವು ತನ್ನನ್ನು ತಾನು ಜೀವಕೋಶಗಳ ಕ್ರೀಯೆಗಳಿಂದ ರಿಪೇರಿ ಮಾಡಿಕೊಳ್ಳುತ್ತದೆ ಹಾಗೆಯೇ ವಿಷಕಾರಿ ಅಂಶಗಳನ್ನು ಬಿಡುಗಡೆ ಮಾಡಿಟ್ಟುಕೊಳ್ಳುತ್ತದೆ .. ನಿಮ್ಮ ಗಾಡಿಯ ಎಂಜಿನ್ ಸರ್ವಿಸ್ ಮಾಡಿಸಿದಾಗ ಕೊಳಕು ಹೊರಬರುತ್ತದೆ ..ಅದನ್ನು ಕ್ಲೀನ್ ಮಾಡ್ಲೇಬೇಕು ಅಲ್ವಾ .. ಅದೇ ರೀತಿ ನಮ್ಮ ದೇಹದಲ್ಲಿರೋ ವಿಷಕಾರಿ ಅಂಶಗಳನ್ನು ನೀರು ಹೋಗಲಾಡಿಸುತ್ತದೆ
2.ಪಚನ ಕ್ರೀಯೆ ಹಾಗು ಜೀರ್ಣಕ್ರೀಯೆಗೆ ಸಹಲ ಮಾಡಬಲ್ಲುದು
ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಜೀರ್ಣಕ್ರೀಯೆ ಸಲೀಸಾಗಿ ನಡೆಯುತ್ತದೆ
3.ದೇಹದ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ
ನೀವು ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಗೆ ನೀರು ಕುಡಿಯುದರಿಂದ ದೇಹದಲ್ಲಿರೋ ವಿಷಕಾರಿ ಅಂಶಗಳು ಹೊರಗೆ ಹೋಗುತ್ತದೆ .. ಇದರಿಂದ ಜೀರ್ಣಕ್ರೀಯೆ ಉತ್ತಮವಾಗುತ್ತದೆ .. ಇದರಿಂದ ನಿಮ್ಮ ದೇಹವು ಹಗುರ ಎನಿಸುವುದು ಹಾಗೆ ನಿಮಗೆ ಅಷ್ಟೊಂದು ಹಸಿವು ಅನ್ನಿಸುವುದಿಲ್ಲ ..ಇದರಿಂದ ನಿಮಗೆ ಸಿಕ್ಸಿಕ್ಕಿದೆಲ್ಲ ತಿನ್ಬೇಕು ಅನ್ನಿಸುವುದಿಲ್ಲ .. ಇದರಿಂದ ದೇಹದ ತೂಕ ಹೆಚ್ಚುವುದಿಲ್ಲ
4.ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ
ದೇಹದಲ್ಲಿ ನಿರ್ಜಲೀಕರಣ (dehydration ) ಆಗುವುದರಿಂದ ಚರ್ಮವು ಸುಕ್ಕು ಗಟ್ಟುತ್ತದೆ .ಹಾಗೆಯೇ ಕಾಂತಿಯನ್ನು ಕಳೆದುಕೊಳ್ಳುತ್ತದೆ ..ಸಂಶೋಧನೆ ಪ್ರಕಾರ ದಿನಕ್ಕೆ ಸರಾಸರಿ 500 ml ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುದರಿಂದ ಕ್ರ್ಮದ ಎಲ್ಲ ಭಾಗಳಲ್ಲೂ ರಕ್ತ ಸಂಚಾರವಾಗಿ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ
5.ಕಿಡ್ನಿಯಲ್ಲಿ ಕಲ್ಲು ಆಗುವುದನ್ನು ತಡೆಯುತ್ತದೆ
ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುದರಿಂದ ಕಿಡ್ನಿ ಸ್ಟೋನ್ ಗೆ ಕಾರಣವಾಗುವ acid ಕರಗುತ್ತದೆ .