751

ಕನ್ನಡ ಚಲನಚಿತ್ರಗಳಿಗೆ “ಪರ್ಯಾಯ ಹೆಸರು” ಸಲಹೆಗಳು

  • By Arun Kumar PT
  • Monday, January 1st, 2018
  • Things You Should Know

1. ಏಕಾಂಗಿ (ಅಪ್ಪ, I love you pa)
ವಿವರಣೆ: ನಾವು ನಮ್ಮ ಅಪ್ಪ ಅಮ್ಮ ಮತ್ತು ನಮ್ಮ ಸುತ್ತಲ ಜನರನ್ನು ನೋಡಿ ಮಾತು, ನಡೆ, ಅಭ್ಯಾಸಗಳನ್ನು ರೂಢಿಸಿಕೊಳ್ಳುತ್ತೇವೆ. ಏಕಾಂಗಿ ಚಿತ್ರದ ಮಗ ರವಿಚಂದ್ರನ್ ಅಪ್ಪ ರವಿಚಂದ್ರನ್ ನಿಂದ ಸಂಪೂರ್ಣ influence ಆದವನ ಕಥೆ, ಆದ್ದರಿಂದ ಚೌಕ ಚಿತ್ರದ ಈ ಹಾಡು ಸೂಟ್ ಆಗುತ್ತೆ ಅಂತ ನಮಗೆ ಅನಿಸುತ್ತೆ.

2. ಮಿಲನ (ಎರಡನೇ ಸಲ)
ಲವ್ ಮಾಡ್ತೀವಿ, life happens, ಲವ್ ಮಾಡಿದೋರನ್ನೇ ಮದುವೆ ಆಗೋಕೆ ಆಗಲ್ಲ, welcome to 21st century! ಅಪ್ಪ ಅಮ್ಮನ ಒತ್ತಾಯಕ್ಕೆ ಇನ್ನೊಂದು ಮದುವೆ ಆಗಲೇ ಬೇಕಾಗಬಹುದು. ಅಂತಹ ಸಮಯದಲ್ಲಿ ನಮ್ಮಲ್ಲಿ ಮೂಡಬಹುದಾದ ಪ್ರಶ್ನೆ: Can love happen twice? ಎರಡನೇ ಸಲ ಪ್ರೀತಿ ಉಂಟಾಗಬಹುದಾ?

3. ‎ಉಪೇಂದ್ರ (ಉಪ್ಪಿ 2) (Because, ಉಲ್ಟಾ ಹೇಳಿದರೂ ಕಥೆ ಕೆಡಿಸದೆ ಪ್ರಸ್ತುತ ಪಡಿಸುವ ಬುದ್ಧಿವಂತ ಉಪ್ಪಿ. ಬರೀ ಉಪೇಂದ್ರ ಚಿತ್ರ ನೋಡಿ ಮಾಮೂಲಾಗಿ ತಲೆ ಕೆಟ್ಟಿರುತ್ತೆ, ಇನ್ನೂ ಸೀಕ್ವೆಲ್ ನಂತರ ಪ್ರೀಕ್ವೆಲ್ ನೋಡಿದ್ದರೆ ನಮ್ ಕಥೆ ಏನಾಗಿರಬೇಡ, ಲೆಕ್ಕ ಹಾಕಿ!

4. ಬಹದ್ದೂರ್ (ಅದ್ದೂರಿ 2) ಮತ್ತು ಭರ್ಜರಿ (ಬಹದ್ದೂರ್ 2)
ಅದ್ದೂರಿ, ಬಹದ್ದೂರ್ ಮತ್ತು ಭರ್ಜರಿ ಧ್ರುವ ಸರ್ಜಾ ಅವರನ್ನು ಯುವ ಹೃದಯಗಳ ಸಾಮ್ರಾಟ್ ಮಾಡುವಲ್ಲಿ ಯಶಸ್ವಿಯಾಗಿವೆ. ಆದರೆ ಮೂರು ಪೆಗ್ ಏರಿಸಿ ನೋಡಿದರೆ ಯಾವ ಚಿತ್ರ ಯಾವುದು ಎಂದು ಗೊತ್ತಾಗದಷ್ಟು confuse ಆಗುವ ಒಂದೇ ಬಗೆಯ making ಮೂರೂ ಚಿತ್ರಗಳಲ್ಲಿ ಇವೆ ಎಂಬ ಮಾತನ್ನು ತಳ್ಳಿ ಹಾಕಲಾಗದು, hence the names!

5. ಗಡಿಬಿಡಿ ಗಂಡ (ಯಾರಿಗೂ ಹೇಳ್ಬೇಡಿ)
ರವಿ ಮಾಮ ಇಬ್ಬರು ಹೆಂಡಿರ ನಡುವೆ ಲಾಕ್ ಆಗುವ ಮೂರು ನಾಲ್ಕು ಚಿತ್ರಗಳು ಬಂದಿವೆ ಅನಿಸುತ್ತೆ, but ಎಲ್ಲದರಲ್ಲಿ ಬೆಸ್ಟ್ ಅಂದರೆ ಇದು. ರವಿಮಾಮ ರೊಮ್ಯಾನ್ಸ್, ಜಗ್ಗೇಶ್ ಕಾಮಿಡಿ ಟೈಮಿಂಗ್ ಮತ್ತು ಹಂಸಲೇಖ ಸಂಗೀತ ಚಿತ್ರದ ಪ್ಲಸ್ ಪಾಯಿಂಟ್. ಅನಂತಣ್ಣ ಅವರ ಚಿತ್ರದ ಹೆಸರು ಈ ಚಿತ್ರಕ್ಕೆ ಇಟ್ಟಿದ್ದರೆ ಅಂಥ ಏನೂ ‘ಎಡವಟ್ಟು’ ಆಗಲ್ಲ ಅಂತ ನಮ್ಮ ಅಂದಾಜು.

6. ಕೆಂಡಸಂಪಿಗೆ (ಕಳ್ಳ ಪೊಲೀಸ್)
ನೀವು ಪಕ್ಕಾ ‘ಗಾಂಧಿ ನಗರ’ದ ನಿವಾಸಿಗಳಾಗಿದ್ದರೆ ಕಲ್ಪನಾ 2 ಚಿತ್ರದ ನಿರ್ಮಾಪಕ ರಾಜೇಂದ್ರ ಅವರು ಜಮಾನದಲ್ಲಿ ಕಳ್ಳ ಪೊಲೀಸ್ ಹೆಸರಿನ ಸಿನಿಮಾ ಮಾಡಿದ್ದು ನೆನಪಾಗಬಹುದು. Well, ಸೂರಿ ಅವರ ಕ್ರೈಮ್ ಥ್ರಿಲ್ಲರ್ ಲವ್ ಸ್ಟೋರಿಗೆ ಕೆಂಡ ಸಂಪಿಗೆ ಹೆಸರು ಹೇಳಿ ಮಾಡಿಸಿದಂತೆ ಇದೆಯಾದರೂ ಪೊಲೀಸ್ ಲೋಕದೊಳಗಿನ ಕರಾಳ ಮುಖವನ್ನು ತೆರೆದಿಡುವ ಈ ಪ್ರಯತ್ನಕ್ಕೆ ಈ ಹೆಸರು ಸೂಕ್ತ, ಅಮ್ಮಾಟೆ? (Am I right?)

7. ಕೋಟಿಗೊಬ್ಬ 2 (ವಿಷ್ಣುವರ್ಧನ 2)
Personally, ಕೋಟಿಗೊಬ್ಬ 2 ನನಗೆ ಅತೀವವಾಗಿ ಮೆಚ್ಚುಗೆಯಾದ ಚಿತ್ರ. ಆದರೆ let’s face it, ಕೋಟಿಗೊಬ್ಬ 2 ಚಿತ್ರಕ್ಕೂ, ಕೋಟಿಗೊಬ್ಬ ಚಿತ್ರಕ್ಕೂ practically ಏನೂ ಕನೆಕ್ಷನ್ ಇಲ್ಲ. ಆದರೆ ಸುಮ್ಮನೆ ಯೋಚನೆ ಮಾಡಿದರೆ, ಕಥೆ ಮತ್ತು ಥೀಮ್ ನ ವಿಷಯದಲ್ಲಿ ಈ ಚಿತ್ರವನ್ನು ವಿಷ್ಣುವರ್ಧನ ಚಿತ್ರದ ಮುಂದುವರಿದ ಭಾಗವಾಗಿ ತೋರಿಸಿದ್ದರೆ ಇನ್ನೂ appropriate ಅನಿಸುತ್ತಿತ್ತು ಎಂಬುದರಲ್ಲಿ ಕೋಟಿ ಪ್ಲಸ್ ಎರಡು ಮಾತಿಲ್ಲ!

8. ಅರಮನೆ (ಸ್ಮೈಲ್ ಪ್ಲೀಸ್)
ಗಣೇಶ್ ಅಭಿನಯದ ನಾಗಶೇಖರ್ ನಿರ್ದೇಶನದ ಈ ಚಿತ್ರದಲ್ಲಿ ಫೋಟೋಗ್ರಾಫರ್ ಒಬ್ಬ ತನ್ನ ಪ್ರೀತಿಯನ್ನು ಬದಿಗಿಟ್ಟು ಬೇರೆಯಾದ ಕುಟುಂಬವನ್ನು ಒಂದು ಮಾಡುವ ಭಾವನಾತ್ಮಕ ಕಥೆಯನ್ನು ನೋಡಬಹುದು. ಅರಮನೆ ಶೀರ್ಷಿಕೆ ಈ ಚಿತ್ರಕ್ಕೆ sync ಆದರೂ ನಗುವನ್ನೇ ಪಸರಿಸುವ ಚಿತ್ರದ ನಾಯಕನ ಗುಣ ಮತ್ತು ವೃತ್ತಿಯನ್ನು ‘ಸ್ಮೈಲ್ ಪ್ಲೀಸ್’ ಶೀರ್ಷಿಕೆ ಅತ್ಯುತ್ತಮವಾಗಿ ವರ್ಣಿಸುವುದರಲ್ಲಿ‌ ಅನುಮಾನವಿಲ್ಲ.

9. ಮುಗುಳುನಗೆ (ಮುಂಗಾರು ಮಳೆ 2)
ಮುಂಗಾರು ಮಳೆ 2 ಚಿತ್ರವನ್ನು ಭಟ್ಟರೇ ನಿರ್ದೇಶಿಸಬೇಕಿತ್ತು, ಆದರೆ ಆ ಶೀರ್ಷಿಕೆಯಿಂದ ಉಂಟಾಗಬಹುದಾದ hype ಇಂದ nervous ಆಗಿ ಆ ಚಿತ್ರವನ್ನು ಭಟ್ಟರು ಮಾಡಲಿಲ್ಲ ಎಂಬ ಮಾತು ಗಾಂಧಿನಗರದ ಬಲ್ಲವರು ಹೇಳಿದರು. If you look closely, ಮುಂಗಾರು ಮಳೆ ಚಿತ್ರದಲ್ಲಿ ಪ್ರೀತಮ್ ನಂದಿನಿಯನ್ನು ಲವ್ ಮಾಡ್ತಾನೆ, ಆದರೆ ಅವರ ಮನೆಯವರನ್ನು ಒಪ್ಪಿಸಿ ಮದುವೆಯಾಗಲು ವಿಫಲನಾಗಿ ಅದೊಂದು ಟ್ರ್ಯಾಜಿಕ್ ಎಂಡಿಂಗ್ ಆಯಿತು. ಅದು ಆ ಕಾಲಕ್ಕೆ ನಮ್ಮ ಕಾಲದವರ ಮನ ಕಲುಕಿದ ಚಿತ್ರವಾಯಿತು. ಕಟ್ ಮಾಡಿದರೆ, 10 ವರ್ಷಗಳ ನಂತರ, ಕಾಲ ಬದಲಾಗಿದೆ, ಪ್ರೀತಮ್…, ಅಲ್ಲ ಸಾರಿ, ನೋಡುವ ಪ್ರೇಕ್ಷಕ ವೃಂದವೂ ಬದಲಾಗಿದೆ. ಪ್ರೀತಮ್ 2.0 ಅಂದರೆ ಪುಲಕೇಶಿ ಮೊದಲ ಹುಡುಗಿಯನ್ನು ಮನಸಾರೆ ಪ್ರೀತಿಸಿದರೂ ಆ ಪ್ರೀತಿ ಸುಖಾಂತ್ಯವಾಗದೇ ಇದ್ದಾಗ updated ಯುವ ಸಮೂಹದ ಹಾಗೆ ಹಳೇ ನೆನಪುಗಳನ್ನು ಹಿಂದೆ ಬಿಟ್ಟು ಮುಂದೆ ಸಾಗುತ್ತಾನೆ. Aap convince ho gaye, yaa main air batau? (Jab We Met)

10. ಗೋಧಿ ಬಣ್ಣ ಸಾಧಾರಣ ಮೈಕಟ್ಟು (ಕವಲುದಾರಿ)
Honestly, ಇದೊಂಥರ ಪುಟ ತುಂಬಿಸುವ ಉತ್ತರ, both yes and no. ಗೋಬಸಾಮೈ ಚಿತ್ರದಲ್ಲಿ ಅನಂತಣ್ಣ ಮಿಸ್ ಆಗ್ತಾರೆ. ಯಾರಾದರೂ ಕಾಣೆಯಾದಾಗ ಅವರ ದೈಹಿಕ ವಿವರಣೆಯನ್ನು ವಿವರಿಸಿ ಬರುವ ಟಿವಿ / ಪೋಸ್ಟರ್ ಜಾಹೀರಾತುಗಳಲ್ಲಿ ಬಳಕೆಯಾಗುವ phrase ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಈ ಚಿತ್ರಕ್ಕೆ ಅತ್ಯಂತ ಸೂಕ್ತವಾಗಿ ಹೊಂದುವ ಶೀರ್ಷಿಕೆ. ಆದರೆ ಇದೇ ಚಿತ್ರದ ನಿರ್ದೇಶಕ ಹೇಮಂತ್ ರಾವ್ ಅವರ ಮುಂದಿನ ಚಿತ್ರದ ಹೆಸರು ಕವಲುದಾರಿ ಹೆಸರೂ ಕೂಡ ಈ ಚಿತ್ರದ ಸ್ವಾದ ಕೆಡಿಸುತ್ತಿರಲಿಲ್ಲ ಎನಿಸುತ್ತದೆ. Just think about it, ಅನಂತಣ್ಣ ಕಳೆದು ಹೋಗುತ್ತಾರೆ, ಅವರು ತಮ್ಮ past ಎಂಬ ಕವಲುದಾರಿಯಲ್ಲಿ ಕಳೆದು ಹೋಗಿದ್ದಾರೆ. ರಕ್ಷಿತ್ ಶೆಟ್ಟಿಗೆ ಕೆಲಸದ ಬ್ಯುಸಿ ಸಮಯದಲ್ಲಿ ತಮ್ಮ ವ್ಯಕ್ತಿತ್ವವನ್ನು ಕಳೆದುಕೊಂಡಿದ್ದಾರೆ, ಹಾಗೆ ವಸಿಷ್ಠ ಸಿಂಹ ಕೂಡ, ಕೆಟ್ಟ ಕೆಲಸದಲ್ಲಿದ್ದರೂ ಒಳ್ಳೆಯ ಜೀವನಕ್ಕೆ ತಲುಪುವ ಮನಸ್ಸು ಮಾಡಿದ್ದಾರೆ, but ಆ ಪಯಣ ಅಷ್ಟು ಸುಲಭವಲ್ಲ, ಅದು ಕತ್ತಲೆ ತುಂಬಿದ ಕವಲುದಾರಿ.

That’s all folks! ಇನ್ನೊಂದು ಅಂಕಣದೊಂದಿಗೆ ಮತ್ತೆ ನಿಮ್ಮ ಮುಂದೆ ನಿಲ್ಲುವೆ, ಅಲ್ಲಿಯವರೆಗೂ ನಮಸ್ಕಾರ, ಇಂತಿ ನಿಮ್ಮ ಪ್ರೀತಿಯ – pt.

ಚೆನ್ನಾಗಿದ್ದೀಯಾ? ಅಂತ ಕೇಳಲೇ ಇಲ್ಲ, ಏ ಹೋಗಿ ಪ!! :p

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..