605

ಮನಃಶಾಸ್ತ್ರಜ್ಞರ ಪ್ರಕಾರ ಬೆಂಗಳೂರಿಗರಿಗೆ ಈ ವಿಷಯಗಳು ಭಾರಿ ಖುಷಿ ಕೊಡುತ್ತಂತೆ

ಮನಶಾಸ್ತ್ರಜ್ಞರೂ ಹೇಳಿಲ್ಲ ,ಯಾರೂ ಹೇಳಿಲ್ಲ ..ಕಾವೇರಿ ನೀರು ಕುಡಿದ ಪ್ರತಿ ಬೆಂಗಳೂರಿನ ನಿವಾಸಿಗೂ ಕೂಡ ಇದು ಅನ್ವಯ 😀

1. ಲಾಂಗ್ ವೀಕೆಂಡ್ ಅಂತ ಬೆಂಗ್ಳೂರಲ್ಲಿ ಹೊಟ್ಟೆಪಾಡಿಗಾಗಿ ತುಂಬ್ಕೊಂಡಿರೋ ಪರ ಊರಿನ ಜನರು ತಮ್ಮ ತಮ್ಮ ಊರಿಗೆ ಹೋದಾಗ ಸಿಗ್ನಲ್ ಫ್ರೀ , ಟ್ರಾಫಿಕ್ ಫ್ರೀ ರೋಡ್ ನೋಡಿದಾಗ

2. V V ಪುರಂ ಸ್ಟ್ರೀಟ್ ಫುಡ್ ಹೆಸರು ನೆನಪಾದಾಗ ಒಂಥರಾ ಖುಷಿಯಾಗಿ ಕೆಲವರು ಓಡಿ ಹೋಗಿ ಏನಾದ್ರು ಬಾಯಿಗೆ ಹಾಕ್ಕೊಂಡು ಬರ್ತಾರೆ

3.ಕಡ್ಲೇಕಾಯಿ ಪರೀಷೆ ಒಂಥರಾ ಬೆಂಗಳೂರಿಗರಿಗೆ ಹಳೆ ಬೆಂಗಳೂರಿನ ಸೊಗಡನ್ನು ಮತ್ತೆ ನೆನಪಿಸುವಂತಹ ವಿಷಯ .

4.ಮಾಂಸಹಾರ ಪ್ರೀಯರಿಗೆ ಅಲ್ಲಿ ಇಲ್ಲಿ ಕಾಣ ಸಿಗುವ ದೊನ್ನೆ ಬಿರಿಯಾನಿ ಹೋಟೆಲ್ ಗಳನ್ನೂ ನೋಡಿದ ತಕ್ಷಣ ಒಂಥರಾ ಮನಸ್ಸಿಗೆ ಖುಷಿ ಕೊಡುತ್ತೆ

5.ಸಸ್ಯಾಹಾರಿ ಬೆಂಗಳೂರಿಗರಿಗೆ ಮಸಾಲಾ ದೋಸೆ ಬಾಯಲ್ಲಿ ನೀರ್ ತರ್ಸಿ ಖುಷಿ ಕೊಡುತ್ತೆ

6.ಬೆಂಗ್ಳೂರಲ್ಲಿ ಸಮುದ್ರ ಇಲ್ಲ .. ಅದಕ್ಕೆ ಇವರು ಕರಾವಳಿ ಕರ್ನಾಟಕಕ್ಕೆ ಟ್ರಿಪ್ ಗೆ ಹೋದಾಗ ನ ಭೂತೆ: ನ ಭವಿಷ್ಯತಿ: ಅನ್ನೋ ಥರ ಖುಷಿ ಪಡ್ತಾರೆ

7.ಟಿವಿ ಲಿ ಮುಂಗಾರು ಮಳೆ ಫಿಲಂ ನೋಡ್ಕೊಂಡು ಮಳೇಲಿ ನೆನಿಬೇಕು ಅಂತ ಆಸೆ ಪಡ್ತಾರೆ ..ಮಲೆನಾಡಿಗೋ , ಕರಾವಳಿಗೂ ಹೋದಾಗ ಸ್ವಲ್ಪ ಫಿಲ್ಮ್ಯ್ ಸ್ಟೈಲ್ ಅಲ್ಲಿ ಮಳೆಯಲಿ ನೆನೆಯುತ್ತಾರೆ .. ಆದರೆ ಬೆಂಗಳೂರಲ್ಲಿ ಮಳೆ ಬಂದಾಗ “ಬಿಬಿಎಂಪಿ ಅವರು ಅದ್ ಚೆನ್ನಾಗ್ maintain ಮಾಡಿಲ್ಲ ..ಇದ್ ಚೆನ್ನಾಗ್ ಮೈನ್ಟೈನ್ ಮಾಡಿಲ್ಲ ” ಅಂತ ಬಿಬಿಎಂಪಿ ಅಧಿಕಾರಿಗಳ ಮನೆ ಮಂದಿಯನ್ನೆಲ್ಲ ಇವರ ಬೈಗುಳಕ್ಕೆ ತಗೊಂಡು ಬಂದು ಖುಷಿ ಪಡ್ತಾರೆ .

ಅದೂ ನಿಜ ಅನ್ನಿ .. pipeline ಗೆ ರೋಡ್ ಆಗಿತ್ತಾರೆ ..ಅರ್ಧಂಬರ್ಧ ಮುಚ್ಚುತ್ತಾರೆ ..ಮಳೆ ಬಂದಾಗ ಬೆಂಗಳೂರು ಹಾಳ್ ಆಯ್ತಲ್ಲ ಅಂತ ಬದುಕೊಳ್ಳದೆ ಇರೋಕೆ ಆಗೋಲ್ಲ ಅಲ್ವಾ 😛

8.ಬಿಬಿಎಂಪಿ ಅವ್ರು ಹೊಸ ಲೇಔಟ್ ಗೆ ಕಾವೇರಿ ವಾಟರ್ ನ ಕನೆಕ್ಷನ್ ಕೊಟ್ಟಾಗ ಯಪ್ಪಾ ದೇವ್ರೇ..thank you ಅಂತ ತುಪ್ಪದ ದೀಪ ಹಚ್ಚಿ ಖುಷಿ ಪಡ್ತಾರೆ .

9.ಜೀವಮಾನ ಇಡೀ ಕಷ್ಟ ಪಟ್ಟು ದುಡಿದು ವಯಸ್ ಆದ ಸಮಯದಲ್ಲಿ ಒಂದ್ ಚಿಕ್ಕ ಜಾಗ ತಗೊಂಡು ಮನೆ ಕಟ್ಟಿದಾಗ ಸ್ವರ್ಗಕ್ಕೆ ಮೂರೇಗೇಣು ಅನ್ನೋ ಥರ ಖುಷಿ .. ಯಾಕೆಂದರೆ ಇಲ್ಲಿ ಭೂಮಿ ಬೆಲೆ ಕೇಳಿದ್ರೆ ನೀವು ಬೆಂಗಳೂರು ಬಿಟ್ಟು ನಿಮ್ ಊರ್ ಕಡೆ ಹೋಗ್ತೀರಿ .. ಊರಲ್ಲಿ 25 ಲಕ್ಷಕ್ಕೆ ಒಂದು 3 ಬೆಡ್ರೂಮ್ , ದೊಡ್ಡ ಹಾಲ್, ಕಿಚನ್ , ಡೈನಿಂಗ್ ಹಾಲ್ , ಎರಡು ಬಾತ್ ರೂಮ್ ಜೊತೆ ಮನೆಯಲ್ಲಿ ಅಂಗಳ ಕೂಡ ಇರೋ ಹಾಗೆ ಮನೆ ಮಾಡಬಹುದು . ಇಲ್ಲಿ ಆ 25 ಲಕ್ಷಕ್ಕೆ ಏನೂ ಬರೋಲ್ಲ ..ಮಿನಿಮಂ ಒಂದು ಕೋಟಿ ರುಪಾಯೀ ಬೇಕೇ ಬೇಕು

10.ಹೋಗಿನವ್ರು ದಾರಿ ಗೊತ್ತಿಲ್ಲದೇ ದಾರಿ ಬಗ್ಗೆ ವಿಚಾರಿಸಿದಾಗ ಅವರಿಗೆ ಗೊತ್ತಿರೋ ಭಾಷೆಯಲ್ಲೇ ಅವರಿಗೆ ಸಹಾಯ ಮಾಡುವ ಬೆಂಗಳೂರಿಗರು ಒಳಗೊಳಗೇ ಒಂಥರಾ ಪುಣ್ಯ ಪಡೆದುಕೊಂಡ ಹಾಗೆ ಖುಷಿ ಪಡ್ತಾರೆ.Literally!!..”ಸಾಹುಕಾರ” ಫೀಲಿಂಗ್ 

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..