583

ಈ 5 ಸನ್ನಿವೇಶಗಳನ್ನು TOP Engineering ಕಾಲೇಜಲ್ಲಿ ಓದಿರೋರು ಅನುಭವಿಸಿಯೇ ಇರ್ತಾರೆ

ಈ ಆರ್ಟಿಕಲ್ ಕೇವಲ ತಮಾಷೆಗಾಗಿ .. ತಮಾಷೆಯಾಗಿ ಓದಿ ..ಖುಷಿ ಪಡಿ

1.TOP Engineering college  ಅಲ್ಲಿ ಕಂಪ್ಯೂಟರ್ ಸೈನ್ಸ್ / ಇನ್ಫಾರ್ಮಶನ್ ಸೈನ್ಸ್ ಅಲ್ಲಿ ಸೀಟ್ ಸಿಗ್ಲೇಬೇಕು ಅಂತ 10 ನೇ ಕ್ಲಾಸ್ ಪಬ್ಲಿಕ್ ಎಕ್ಸಾಮ್ ಆದ ನಂತರ ಯರ್ರಾಬಿರ್ರಿ ಓದೋಕೆ / ಎಂಟ್ರನ್ಸ್ ಎಕ್ಸಾಮ್ ಟ್ಯೂಷನ್ ಅಲ್ಲಿ ಟ್ರೇನಿಂಗ ತಗೋಳ್ಳೋಕೆ ಶುರು ಮಾಡಿರ್ತಾರೆ

2.ID ಕಾರ್ಡ್ ಹಾಕ್ಕೊಳ್ಳದೆ ಇದ್ದರೆ watchman ಸಹ ಮುಖ ಮೂತಿ ನೋಡದೆ ಹೊರಗೆ ದಬ್ಬಿ ಬಿಡ್ತಾನೆ

3.ID ಕಾರ್ಡ್ ವರ್ಷಪೂರ್ತಿ ಹಾಕ್ಕೊಂಡು ಯಾವ್ ರೇಂಜ್ ಗೆ ಇವ್ರು addict ಆಗಿರ್ತಾರೆ ಅಂದ್ರೆ ಭಾನುವಾರ ಮೆಜೆಸ್ಟಿಕ್ ಗೆ ಹೋಗೊವಾಗ್ಲೂ , ಸಂಬಂಧಿಕರ ಮದ್ವೆಗೆ ಹೋಗೊವಾಗ್ಲೂ ID ಕಾರ್ಡ್ ಹಾಕ್ಕೊಂಡ್ ಹೋಗ್ತಿರ್ತಾರೆ

4.ಬೇರೆ ಕಾಲೇಜು ಸ್ಟೂಡೆಂಟ್ಸ್ ಗಿಂತ ನಾವು ಗ್ರೇಟ್ ಅಂತ ಒಳಗೊಳಗೇ ಬಿಗುಮಾನ ಇಟ್ಕೊಂಡಿರ್ತಾರೆ ,ಇನ್ ಕೆಲವರು ಡೈರೆಕ್ಟ್ ಆಗಿ ತೋರಿಸ್ಕೊಳ್ಳುತ್ತಾರೆ

5.ಅಷ್ಟ್ ಕಷ್ಟ ಪಟ್ಟು ಟಾಪ್ ರಾಂಕ್ ತಗೊಂಡು TOP Engineering college   ಗೆ ಸೇರಿದ್ರೂ Placement ಟೈಮ್ ಅಲ್ಲಿ ಕಡಿಮೆ ರಾಂಕ್ ತಗೊಂಡು ಅದೇ ಟಾಪ್ ರಾಂಕ್ ಕಾಲೇಜಿನ ಸೈಡ್ ಬಿಸಿನೆಸ್ ಆಗಿರೋ  ಇನ್ನೊಂದ್ ಇಂಜಿನಿಯರಿಂಗ್ ಕಾಲೇಜಲ್ಲಿ   ಸೇರ್ಕೊಂಡಿರೋರ್ ಜೊತೆ ಕಾಂಪಿಟಿಷನ್ ಕೊಡೋವಾಗ “ಯಾವ್ ಶೋಕಿಗೆ ಅಂತ PUC ಅಲ್ಲಿ ಅಷ್ಟ್ ಕಷ್ಟ ಪಡ್ಬೇಕಾಗಿತ್ತು ? ಮುಚ್ಕೊಂಡ್ ಆರಾಮ ಆಗಿ ಇದ್ದು ಬರೋ rank ಅಲ್ಲೇ ಆ ಚಿಕ್ ಕಾಲೇಜಲ್ಲಿ ಸೇರ್ಕೊಂಡು ಆರಾಮಾಗಿ TOP Engineering ಅವರ ಜೊತೆ ಕೆಲಸ ಹುಡ್ಕೋಬಹುದಾಗಿತ್ತು ”

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..