4413

“ಅಪ್ಪ” ಆ ಶಬ್ದದಲ್ಲಿಯೇ ಅದೇನೋ ಅಪರಿಮಿತ ಶಕ್ತಿ

“ಅಪ್ಪ” ಆ ಶಬ್ದದಲ್ಲಿಯೇ ಅದೇನೋ ಅಪರಿಮಿತ ಶಕ್ತಿ ಅಡಗಿದೆ.ಭಯ ಮತ್ತು ಪ್ರೀತಿ ಎನ್ನುವ ಎರಡೂ ಒಂದು ಪದ ಕೇಳಿದ ತಕ್ಷಣ ಬರುತ್ತದೆ ಅಂದರೆ ಅದು ” ಅಪ್ಪ” ಅನ್ನುವ ಪದವನ್ನು ಮಾತ್ರ.ಆತ ಕೂಡ ಒಬ್ಬ ಅಪ್ಪ ನಿಗೆ ಮಗನಾಗಿ ಹಲವಾರು ರೀತಿಯಲ್ಲಿ ಒಂದಷ್ಟು ಅನುಭವಗಳನ್ನು ಪಡೆದಿರುತ್ತಾನೆ.ತನ್ನಪ್ಪ ತನಗೆ ಆ ರೀತಿಯ ಅನುಭವವನ್ನು ನೀಡುವಾಗ ಎಷ್ಟೊ ಸಲ ಅತಿರೇಕ ಅನ್ನಿಸಿದರೂ ,ತಾನೂ ಒಬ್ಬ ಅಪ್ಪನಾದಾಗ ಅತಿರೇಕವಾಗಿದೆಲ್ಲಾ ಅಗತ್ಯ ಅನ್ನಿಸುತ್ತದೆ.ಅಪ್ಪನಾದವನು ತನ್ನ ಮಗು ಕಣ್ಣೆದುರೆ ಜಾರಿ ಬಿದ್ದರೂ ಮೇಲೆತ್ತಲು ಹೋಗುವುದಿಲ್ಲ,ಏಕೆಂದರೆ ಮುಂದಿನ ಏಳಿಗೆಯ ಅವಕಾಶಕ್ಕಾಗಿ.ಅತ್ತಾಗ ಕಣ್ಣೊರೆಸುವ ಪ್ರಯತ್ನವನ್ನು ಮಾಡುವುದಿಲ್ಲ.ಅವನ ಅಥವ ಅವಳ ನಗುವನ್ನು ಸ್ವತಃ ಅರಸಿಕೊಂಡು ಹೋಗಲಿ ಎಂದು.ನೋವಲ್ಲಿದ್ದಾಗ ಸಂತೈಸುವ ಮಾತಿಲ್ಲಾ.ಅವರ ಸಂತೋಷವನ್ನು ಅವರೇ ಹುಡುಕಬೇಕೆಂದು.ಹಾಗಂತ ಎಲ್ಲಾ ಅಪ್ಪಂದಿರು ಒಂದೇ ರೀತಿ ಇರುವುದಿಲ್ಲ.ಕೆಲವರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ, ಇನ್ನು ಕೆಲವರು ಮನಸ್ಸಿನಲ್ಲೇ ಇಟ್ಟುಕೊಂಡಿರುತ್ತಾರೆ.ಕೆಲವರು ಯಾವಗ್ಲೂ ತಮ್ಮ ಮಕ್ಕಳಿಗೆ ಗದರಿಸುತ್ತಾ ಇರ್ತಾರೆ ಅಂದರೆ ಅವರಿಗೆ ಅವರ ಮಕ್ಕಳ ಮೇಲೆ ನಂಬಿಕೆ ಇಲ್ಲದೆ ಇರುವುದಲ್ಲಾ, ಬದಲಿಗೆ ಎಲ್ಲೂ ತಪ್ಪು ಮಾಡಿದಾಗ ಪ್ರೀತಿಯಿಂದಲೇ ತಿದ್ದೊಕೆ ಹೊದ್ರೆ ಮಕ್ಕಳಿಗೆ ಮಾಡಿರೊ ತಪ್ಪಿನ ಅರಿವಾಗದೇ ಇರಬಹುದು ಎಂದು. ಅಪ್ಪ ಹೇಗೆ ಇರಲಿ,ಅವನು ಕುಡುಕ ಆಗಿರಲಿ, ಬೇಜಾವಬ್ದಾರಿ ಮನುಷ್ಯ ಆಗಿರಲಿ,ಸೋಮಾರಿ ಆಗಿರಲಿ, ಜಿಪುಣ ಆಗಿರಲಿ ಎನೇ ಆಗಿದ್ರೂ ಕೂಡಾ ಎಲ್ಲೋ ಒಂದು ಕಡೆ ಅದರಿಂದಾಗಿ ತನ್ನ ಮಕ್ಕಳಿಗೆ ನೊವಾಗುತ್ತೆ ಅನ್ನೋದು ತನ್ನ ತಲೆಗೆ ಬಂದಾಗ,ಎಲ್ಲದ್ರಿಂದಲೂ ಹೊರಗೆ ಬರೋ ಪ್ರಯತ್ನ ಮಾಡುತ್ತಾನೆ.ಆದರೆ ಅಂತಹ ಅಪ್ಪಂದಿರಿಗೆ ಅದು ತಲೆಗೆ ಬರೋದೆ ಸ್ವಲ್ಪ ನಿಧಾನ.ಇನ್ನೂ ಅಪ್ಪ ಇಲ್ಲದೆ ಇರೊರದ್ದು ಇನ್ನೊಂತರ ನೋವು..ಕೆಲವರು ಹುಟ್ಟಿದಾಗಿಂದ ಅಪ್ಪ‌ನ್ನಾ ನೋಡಿನೆ ಇರಲ್ಲಾ. ಇನ್ನೂ ಕೆಲವರು ಅಪ್ಪ ಅಂದರೆ ಇವರು ಅಂತ ಗುರುತಿಸೋ ವಯಸ್ಸಿನಲ್ಲಿ ಅವರನ್ನ ಕಳೆದುಕೋಂಡಿರುತ್ತಾರೆ. ಚಿಕ್ಕವರಿದ್ದಾಗ ಜೊತೆಗಿರುತ್ತಾರೆ,ಆದರೆ ಯಾವುದೇ ಸವಿನೆನಪುಗಳು ಇರುವುದಿಲ್ಲ.ಎಕೆಂದರೆ ಆಗ ಮಕ್ಕಳಿಗೆ ತಿಳುವಳಿಕೆ ಕಮ್ಮಿ,ಅಮ್ಮನ ಮಡಿಲಿಂದ ಹೊರಗೆ ಬರಲ್ಲ.ಇನ್ನು ಮಕ್ಕಳು ದೊಡ್ದವರಾದ ಮೇಲೆ ಅಪ್ಪನ ಜೊತೆ ಒಂದಷ್ಟು ನೆನಪುಗಳನ್ನು ಹುಟ್ಟು ಹಾಕಬೇಕು ಅನ್ನೋ ಅಷ್ಟರಲ್ಲಿ ಅವರೇ ಇರಲ್ಲ.ಹೀಗೆ ನಮ್ಮ ಜೀವನ ಎಂಬ ನಾಟಕದಲ್ಲಿ ಅಪ್ಪಾ ಅನ್ನೊ ಪಾತ್ರ ಎಷ್ಟು ಮುಖ್ಯ ಅನ್ನೋದು ಅಪನ್ಪ ಆಶ್ರಯ ಇಲ್ಲದೆ ಇರುವವರಿಗೆ ಸರಿಯಾಗಿ ಗೊತ್ತಿರುತ್ತದೆ.ಅಪ್ಪ ಇನ್ನೂ ಹೇಗೆ ಹೇಗೆ ಪಾತ್ರ ವಹಿಸುತ್ತಾನೆ ಎನ್ನುವುದು ಅಪ್ಪನ ಆಶ್ರಯದಲ್ಲಿ ಇರುವವರಿಗೆ ಮಾತ್ರ ಗೊತ್ತಿರುತ್ತದೆ.ಅಮ್ಮ ತನ್ನ ಹೊಟ್ಟೆ ಕಟ್ಟಿ ಮಕ್ಕಳನ್ನ ಸಾಕಿದ್ರೆ, ಅಪ್ಪ ತನ್ನ ಜೀವ್ನವನ್ನೆ ಬಗಲಿಗೆ ಕಟ್ಟಿಕೊಂಡು ತನ್ನ ಪುಟ್ಟ ಸಂಸಾರವನ್ನ ಸಾಗಿಸಲು ಹೆಣಗಾಡ್ತಾನೆ‌‌.ಹಗಲು ರಾತ್ರಿ ಲೆಕ್ಕಿಸದೆ ದುಡಿಯೊ ಅವನಿಗೆ ಎಷ್ಟೇ ಕಷ್ಟ ಆದ್ರೂ ,ಆ ಮನಸ್ಸಿಗೆ, ಶರೀರಕ್ಕೆ ನೋವಾದ್ರು ಎಲ್ಲೋ ಅಪರೂಪಕ್ಕೆ ಬಂದ್ ಮಾತಾಡ್ಸೊ ಆ ಕಣ್ಣೀರು ಕೂಡ ಆ ಬೆವರಲ್ಲೆ ಅವನಿಗೆ ಗೊತ್ತಿಲ್ಲದ ಹಾಗೆ ಜಾರಿಕೊಂಡು ಹೋಗುತ್ತದೆ.ತನ್ನ ಮಕ್ಕಳು, ಹೆಂಡ್ತಿ , ಮುಖ ನೋಡಿ ಸಂತೋಷವನ್ನು ನೋಡೊ ಆ ಜೀವಕ್ಕೆ ಅವರುಗಳೇ ಪ್ರಪಂಚ ಆಗಿರುತ್ತಾರೆ. ತನ್ನ ಕೈಯಲ್ಲಿ ಇದು ಆಗಲ್ಲ ಅಂತ ಗೊತ್ತಿದ್ದರೂ ಸಂಸಾರ ಅನ್ನೊ ಬಂಡಿನ ಎಳ್ಕೋಂಡ್ ಹೋಗೋಕೂ ಆಗದೆ ,ಅಲ್ಲೇ ನಿಲ್ಲಿಸಲು ಆಗದೆ ಹಾಗೆ ಸಾಗುತ್ತಾ ಇರುತ್ತಾನೆ‌.ಬಹುಶಃ ಪ್ರಯಾಣದ ವೇಗ ಸ್ವಲ್ಪ ಕಮ್ಮಿ ಆಗಬಹುದು.
ತನ್ನ ಮಗುವಿನ ಮೊದಲ ಅಳುವಿನಿಂದ ಅದನ್ನ ಎತ್ತಿ ಆಡಿಸಿ ಅದರ ಎಲ್ಲಾ ಬಾಲ್ಯ ಚಟುವಟಿಕೆಗಳನಲ್ಲಿ ಆತ ಸದಾಕಾಲ ಜೊತೆಯಾಗಿರುತ್ತಾನೆ‌.ತೊಡೆ ಮೇಲೆ ಕೂರಿಸಿಕೊಂಡು ಮುದ್ದಾಡಲು ಶುರುವಾಗಿದ್ದು ನಂತರ ಕೈ ಹಿಡಿದು ನಡೆಸಿ ,ಅವರ ಚಾಕ್ಲೆಟ್,ಆಟದ ಸಾಮಾನು ಎಂಬ ಬಯಕೆಗಳನ್ನು ಈಡೇರಿಸುತ್ತಾ ಅದರ ಜೊತೆಗೆ ಭವಿಷ್ಯದ ಬಗ್ಗೆ ಸ್ವಲ್ಪ ಜಾಸ್ತಿಯೇ ಆಲೋಚಿಸಿ ತನ್ನ ಮಕ್ಕಳಿಗೆ ಒಳ್ಳೆಯ ವಿಧ್ಯಾಭ್ಯಾಸ ಕೊಡಿಸುವ ಸಲುವಾಗಿ ಬಹು ಕಠಿಣ ದಾರಿ ತುಳಿಯುತ್ತಾ,ಎಲ್ಲಿ ತ‌ನ್ನ ಮಕ್ಕಳು ನಿಧಾನವಾಗಿ ತನ್ನ ಮೇಲೆ ಅವಲಂಬಿತರಾಗುವುದು ಕಮ್ಮಿ ಆಗುತ್ತಿದೆ, ಎಂದು ತಿಳಿದಾಗ ಸ್ವಲ್ಪ ಆಲೋಚಿಸಿ ಅವರಿಗೆ ಅವಲಂಬಿತರಾಗಲು ಬೇರೊಬ್ಬರ ಅವಶ್ಯಕತೆ ಇದೆ ಎಂದು ,ಅದಕ್ಕೆ “ಮದುವೆ “ಎಂಬ ನೆಪವೊಡ್ದಿ ಇನ್ನೊಂದು ಜೀವನದ ಆರಂಭಕ್ಕೆ ರಿಬ್ಬನ್ ಕತ್ತರಿಸುವುದರೆಡೆಗೆ ಬಂದು ನಿಲ್ಲುತ್ತದೆ.ಮಕ್ಕಳ ಹೊಸ ಜೀವನಕ್ಕೆ ಇವನೇ ಅಡಿಪಾಯ ಹಾಕಿದ್ದರು, ಎಲ್ಲೊ ಒಂದು ಕಡೆ ಆತನಿಗೆ ತನ್ನ ಜೀವನ ಖಾಲಿ ಆಗುತ್ತಿದೆ ಎಂಬ ಭಾವನೆ ಶುರುವಾಗುತ್ತದೆ. ಹೀಗೆ ಆತ ತನ್ನನು ಅವಲಂಬಿಸಿಕೊಂಡಿದ್ದ ಮಕ್ಕಳಿಗೆ ತಾನು ಅವಲಂಬಿತನಾಗಲು ಪ್ರಾರಂಭಿಸುತ್ತಾ ಹೋಗುತ್ತಾನೆ. ಬಹುಶ ಅದಾಗಲೆಆತನ “ಅಪ್ಪ” ಅನ್ನುವ ಹುದ್ದೆಗೆ ಸಾರ್ಥಕತೆ ಬಂದು ನಿಧಾನವಾಗಿ ಅಜ್ಜ ಆಗಲು ಸಿದ್ದನಾಗುತ್ತಾನೆ.ಆದರೆ ನಮ್ಮ ಪಾಲಿಗೆ ಅಪ್ಪ ಎಂದಿಗೂ ಅಪ್ಪನಾಗಿಯೇ ಇರುತ್ತಾನೆ.

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..