3873

ಯುವ ಚಾಕೃತಿ ಪ್ರತಿಭೆ ಸಚಿನ್ ಸಾಂಘೆ

ಚಾಕೃತಿ.. ಚಾಕ್ ಪೀಸ್ ಮತ್ತು ಪೆನ್ಸಿಲ್ಗಳನ್ನು ಬಳಸಿ ಕಲಾಕ್ರತಿಗಳನ್ನು ರಚಿಸುವ ಒಂದು ಅದ್ಭುತ ಕಲೆ. ನೂರಾರು ವರ್ಷಗಳ ಇತಿಹಾಸ ಇರುವ ಈ ಕಲೆಯು ಒಲಿದಿದ್ದು ಕೆಲವೇ ಕೆಲವರಿಗೆ. ಅವರಲ್ಲಿ ಒಬ್ಬರು ಯುವ ಕಲಾವಿದ ಸಚಿನ್ ಸಾಂಘೆ. ಬೆಂಗಳೂರಿನ ಪ್ರತಿಷ್ಟಿತ ಕಂಪನಿಗಳಲ್ಲಿ ಒಂದಾದ ಸಿಸ್ಕೋ ಸಿಸ್ಟಮ್ಸ್ ನಲ್ಲಿ ಕಳೆದ ೫ ವರ್ಷಗಳಿಂದ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ತಮ್ಮ ಹವ್ಯಾಸವಾಗಿ ಬೆಳೆಸಿಕೊಂಡಿದ್ದು ಚಾಕೃತಿ. ಯಾವುದೇ ತರಭೇತಿ ಪಡೆಯದ ಇವರು, ಕಳೆದ ೧೩ ವರ್ಷಗಳಿಂದ ಈ ಕಲೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ತಮ್ಮದೇ ಆದ ಶೈಲಿಯಲ್ಲಿ ಕಲಾಕ್ರತಿಗಳನ್ನು ರಚಿಸುವ ಇವರು, ಪ್ರತಿ ಕ್ರತಿಗೆ ಸರಿ ಸುಮಾರು ೬ ರಿಂದ ೮ ಘಂಟೆಗಳ ಸಮಯ ವ್ಯಯಿಸುತ್ತಾರೆ. ಇನ್ನೂ ವಿಶಿಷ್ಟ ಕಲಾಕ್ರತಿಗಳು ಇವರ ಇಡೀ ದಿನ ಪಡೆಯುತ್ತವೆ.

dissection needle ಮತ್ತು ಇತರೆ ಮೊನಚಾದ ವಸ್ತುಗಳನ್ನು ಬಳಸುವ ಇವರ ಕೈಯಿಂದ ಇದಾಗಲೇ ಅತ್ಯದ್ಬುತವಾದ ಕಲಾಕ್ರತಿಗಳು ಮೂಡಿ ಬಂದಿವೆ.   ಚಾಕ್ ಪೀಸ್ ನಲ್ಲಿ ೨೪ ಜೈನ  ತೀರ್ಥಂಕರರು, ಗಾಂಧೀಜಿ, ಮದರ್ ತೆರೇಸಾ, ಸರ್ ಎಂ. ವಿಶ್ವೇಶ್ವರಯ್ಯ, ಸ್ವಾಮಿ ವಿವೇಕಾನಂದ, ಸಚಿನ್ ತೆಂಡೂಲ್ಕರ್, ಮೈಕಲ್ ಜ್ಯಾಕ್ಸನ್, Dr ರಾಜಕುಮಾರ್, ಕನ್ನಡ ಜ್ಞಾನಪೀಠ ಪ್ರಶಸ್ತಿ ಪುರಸ್ಕತರು, ಅಮಿತಾಭ್ ಬಚ್ಚನ್, ರಜನಿಕಾಂತ್ ಮುಂತಾದ ಕಲಾಕ್ರತಿಗಳು ಮೂಡಿ ಬಂದರೆ, ಇನ್ನೂ ಪೆನ್ಸಿಲ್ ಗ್ರ್ಯಾಫೈಟ್ ನಲ್ಲಿ ಮಹಾವೀರ ತೀರ್ಥಂಕರ, ಗಣೇಶ, ಭಾರತೀಯ ರಾಷ್ಟ್ರೀಯ ಲಾಂಛನ, ಕ್ರಿಕೆಟ್ ವರ್ಲ್ಡ್ ಕಪ್ , ಗೊಮ್ಮಟೇಶ್ವರ, ಟ್ವಿನ್ babies ಮುಂತಾದ ಅದ್ಭುತ ಆಕ್ರತಿಗಳು ನೋಡುಗರ ಮನಸ್ಸಿಗೆ ಮುದ ನೀಡುತ್ತದೆ.

ajmahal chennamma dandi fathersday kalam vivekanana wc yoga

ಇನ್ನೂ ಹಂಪಿಯ ಕಲ್ಲಿನ ರಥ, ತಾಜ್ ಮಹಲ್, ದಂಡಿ ಯಾತ್ರೆ, ಸೂರ್ಯ ನಮಸ್ಕಾರದ ೧೨ ಆಯಾಮಗಳ ಕಲಾಕ್ರತಿಗಳು ನೋಡುಗರನ್ನು ಮಂತ್ರ ಮುಗ್ದರನ್ನಾಗಿ ಮಾಡುವಲ್ಲಿ ಅನುಮಾನವಿಲ್ಲ. Obit live ಪ್ರದರ್ಶನ ಮುಂಬೈ, ತಾಲ್ಲೂಕು ಸಾಹಿತ್ಯ ಸಮ್ಮೇಳನ ಗೌರಿಬಿದನೂರು, vedh ಕಾನ್ಫರೆನ್ಸ್ ಪುಣೆ, rolling frames ಕಿರು ಚಿತ್ರ ಪ್ರದರ್ಶನ, IIT ಬಾಂಬೆಯ MOOD INDIGO ಪ್ರದರ್ಶನ ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಗೌರಿಬಿದನೂರಲ್ಲಿ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಸನ್ಮಾನಿತರಾದ ಇವರ ಸಾಧನೆಗೆ ಸ್ವತಹ ಮುಖ್ಯಮಂತ್ರಿಗಳೇ ಮಾರು ಹೋಗಿದ್ದಾರೆ. ಇನ್ನೂ ಕನ್ನಡ ಚಿತ್ರ ರಂಗದ ಹಲವಾರು ಕಲಾವಿದರು ಹಾಗು ನಿರ್ದೇಶಕರುಗಳು ಇವರ ಅಭಿಮಾನಿಗಳು.

ಇವರ ಇನ್ನೂ ಹೆಚ್ಚಿನ ಕಲಾಕ್ರತಿಗಳನ್ನು ಇಲ್ಲಿ ನೋಡಬಹುದು.

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..