1658

ಯಕ್ಷಗಾನದ ಮೇರುನಟ ಚಿಟ್ಟಾಣಿ ರಾಮಚಂದ್ರ ಹೆಗಡೆ

ಕೇವಲ ಉತ್ತರ ಕನ್ನಡ ಹಾಗು ದಕ್ಷಿಣ ಕನ್ನಡ ಜಿಲ್ಲೆಗಳಿಗಷ್ಟೇ ಸೀಮಿತವಾಗಿದ್ದ ಯಕ್ಷಗಾನ ಕಲೆ ಇಂದು ಸಂಪರ್ಕ ಮಾಧ್ಯಮಗಳ ಬಲದಿಂದ ನಮ್ಮ ಇಡೀ ರಾಜ್ಯ, ದೇಶ ಮಟ್ಟದಲ್ಲಿ ಸೀಮೋಲ್ಲಂಘನವನ್ನು ಪೂರೈಸಿ ಅಗತ್ತಿನ ಅತೀ ವಿಶಿಷ್ಟ ಹಾಗು ಪ್ರಬುದ್ಧ ಕಲೆಯೆಂದು ಪ್ರಖ್ಯಾತಿ ಪಡೆದುಕೊಂಡಿದೆ.ಯಕ್ಷಗಾನ ಸಾರಸ್ವತ ಲೋಖದಲ್ಲಿ ತೆಂಕು ಹಾಗು ಬಡಗು ಎಂಬ ಎರಡು ಪ್ರಮುಖ ವಿಭಾಗಗಳನ್ನು ನೋಡಬಹುದು .ಅದರಲ್ಲಿ ಬಡಗು ತಿಟ್ಟು ಯಕ್ಷಗಾನ ಎಂದಾಕ್ಷಣ ಕಲಾಭಿಮಾನಿಗಳಲ್ಲಿ ಕಲ್ಪನೆಗೆ ಗೋಚರವಾಗುವ ಹೆಸರುವಾಸಿ ಕಲಾವಿದರುಗಳಲ್ಲಿ ಸರ್ವ ಶ್ರೀ ಚಿಟ್ಟಾಣಿ ರಾಮಚಂದ್ರ ಹೆಗ್ದೆಯವರೂ ಒಬ್ಬರು .ತಮ್ಮ ಅತ್ಯಂತ ವಿನಯಪೂರ್ವ ನಡವಳಿಕೆಗಳಿಂದ ಅಭಿಮಾನಿಗಳಿಗೆ ಹತ್ತಿರವಾಗಿ ಆ ಯಕ್ಷಾರಾಧನೆಯನ್ನು ಪ್ರಾಮಾಣಿಕವಾಗಿ ಯಶಸ್ಸು ಕಾಣುವಲ್ಲಿ ಅವಿರತ ಪ್ರಯತ್ನ ನಡೆಸಿದ ಕೆಲವೇ ಕೆಲವು ಕಲಾವಿದರುಗಳಲ್ಲಿ ಇವರನ್ನು ಕಾಣಬಹುದು

ಎಂಬತ್ತು ಯುವಸಂತಗಳನ್ನು ಪೂರೈಸಿರುವ ಈ ಹಿರಿಯ ಚೇತನ ಎಷು ಜನಪ್ರೀಯರೆಂದರೆ ತಂದೆ ತಾಯಿ ಇಟ್ಟ ರಾಮಚಂದ್ರ ಎನ್ನುವ ಹೆಸರಿಗಿಂತ ತಮ್ಮ ಹುಟ್ಟೂರು ಚಿಟ್ಟಾಣಿ ಹೆಸರಿನಿಂದಲೇ ಚಿರಪರಿಚಿತರು .ಶ್ರೀ ರಾಮ ಚಂದಿರ ಅತೀ ಸುಂದರ ..ಯಕ್ಷಗಾನ ವೇಷಧಾರಿಗೆ ಬೇಕಾಗಿರುವ ಸುಲಕ್ಷಣಾ ಮೈಮಾಟ ದೇವರು ಕರುಣಿಸಿದ ವರಧಾನ .. ಹಿತಮಿತವಾದ ಸಂಧರ್ಭಯೋಜಿತ ಮಾತುಗಾರಿಕೆ ಇವರ ಕುಶಲಗಾರಿಕೆ . ಬಡಗು ತಿಟ್ಟಿನ ಮುಮ್ಮೇಳದ ಜೀವಾಳ . ಅಭಿನಯ ಪ್ರಧಾನ ಕುಣಿತ ..ಈ ವಿಚಾರದಲ್ಲಿ ಚಿಟ್ಟಾಣಿಯವರು ಕಲಾಸಾಮ್ರಾಟರೆ ಸರಿ .ಲಯಬದ್ಧ ಅಭಿನಯ ಶುದ್ಧ , ವಿಕಾರರಹಿತ ಭಾವಕಾರ ಮೈದೆಳೆದು ಕಲಾ ಸರಸ್ವತಿ ಯು ವರವಾಗಿ ಮೇಳೈಸಿ ಕಲೆಗೆ ಜೀವ ತುಂಬುವ ಸಂಜೀವಿನಿ ಎಂದು ಕರೆದರೆ ತಪ್ಪಾಗಾಲಾರದು

ಇವರ ಕಾಲ ಶ್ರೀಮಂತಿಯ ಎದುರು ಉಳಿದ ಭೌತಿಕ ಗಳಿಕೆಯೂ ಮಹತ್ವ ಕಳೆದು ಕೊಳ್ಳುತ್ತದೆ . ಇವರ ಕಾಲ ಮುಕುಟಕ್ಕೆ ಒಲಿದು ಬಂದಿರುವ ಪ್ರಶಸ್ತಿ , ಪುರಸ್ಕಾರಗಳ ಗರಿಗಳೆಷ್ಟು ಎನ್ನುವುದು ಅವರ್ಣನೀಯ . ಪದ್ಮಶ್ರೀ ಪುರಸ್ಕತರೂ , ರಾಜ್ಯ ಪ್ರಶಸ್ತಿ ವಿಜೇತರೂ ಆಗಿರುವ ಮಹನೀಯರು , ಕೆರೆಮನೆ ಮಹಾಬಲ ಹೆಗಡೆ ಪ್ರಶಸ್ತಿ , ಕಾಳಿಂಗ ನಾವುಡ ಪ್ರಶಸ್ತಿ ಹೀಗೆ ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನಿಸಲ್ಪಟ್ಟಿದ್ದು ಯಕ್ಷದೇವತೆಯ ಶಕ್ತಿಯನ್ನು ವೃದ್ಧಿಸಿ ತಮ್ಮ ಸಾಮರ್ಥ್ಯದ ಬೆಳಕು ಬೆಳಗಿ ಪ್ರತಿಭೆಗೊಂಡು ಅವಕಾಶ ಮಾಡಿ ಕಲಾಸೇವೆ ಮಾಡಿದರು .

ಇವರು ನಟಿಸಿರುವ ಪಾತ್ರಗಳು ಇಂದಿಗೂ ಜೀವಂತ . ಕಥೆಯಲ್ಲಿ ಬರುವ ನಾಯಕ ಪಾತ್ರಗಳನ್ನೇ ಜನ ಇಷ್ಟ ಪಡುತ್ತಾರೆ . ಆದರೆ ಒಬ್ಬ ಖಳ ನಾಯಕನ ಪಾತ್ರವೂ ಅಷ್ಟೇ ಪ್ರಮುಖವಾದದ್ದು ಎನ್ನುವುದನ್ನು ತೋರಿಸಿ ಜನರನ್ನು ಮಂತ್ರಮುಗ್ಧವಾಗಿಸಿದ ಕೀರ್ತಿ ಚಿಟ್ಟಾಣಿಯವರಿಗೆ ಸಲ್ಲುತ್ತದೆ . ಗಧಾಯುದ್ಧದ ಕೌರವ , ಕೀಚಕ , ಮಾಗಧ ದುಷ್ಟ ಬುದ್ಧಿ ಕಾರ್ತವೀರ್ಯ ಹೀಗೆ ಹತ್ತು ಹಲವಾರು ಪಾತ್ರ ಚಿತ್ರಣವನ್ನು ಯಾವಾಗಲೂ ಅಭಿಮಾನಿಗಳು ತಮ್ಮ ಕಣ್ಣಂಚುಗಳಲ್ಲಿ ಬಿಂಬಿಸುವ ಹಾಗೆ ಮೋಡಿ ಮಾಡಿದ ಜಾದೂಗಾರ . ಶ್ರೀ ರಾಮಚಂದಿರರು ಸುಮಾರು ಎಪ್ಪತ್ತನೇ ದಶಕದಿಂದ ಯಕ್ಷಗಾನ ಕಲಾರಾಧನೆಯನ್ನು ಮಾಡುತ್ತಾ ಪಾತ್ರಗಳಿಗೆ ಜೀವ ತುಂಬಿ ಪ್ರೇಕ್ಷಕರಿಗೆ ರಸದೌತಣವನ್ನು ಉಣಬಡಿಸುತ್ತಿರುವ ನಮ್ಮ ನಿಮ್ಮೆಲ್ಲರ ಮೇರು ನಟ ಶ್ರೀ ರಾಮಚಂದ್ರ ಹೆಗಡೆ ಚಿಟ್ಟಾಣಿ

ಇನ್ನೂ ಹೆಚ್ಚಿನ ರೀತಿಯಲ್ಲಿ ಕಲಾಸೇವೆ ಮಾಡುವಂತೆ ದೇವರು ಅವರಿಗೆ ಆಯುರ್ ಅರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸೋಣ

ಯಕ್ಷಗಾನಮ್ ಗೆಲ್ಗೆ ..ಯಕ್ಷಗಾನಮ್ ಬಾಳ್ಗೆ

ಲೇಖಕರು : ಈಶ್ವರ ಚಂದ್ರ ಸುಬ್ರಾಯ ಹೆಗಡೆ ಕಟ್ಟಿಕೇರಿ , ಹೊನ್ನಾವರ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..