6238

ಗುಡ್ಡಟ್ಟು ಶ್ರೀ ವಿನಾಯಕ ದೇವಸ್ಥಾನದ ಬಗ್ಗೆ ಡಾಕ್ಯುಮೆಂಟರಿ ವಿಡಿಯೋ

ಗುಡ್ಡಟ್ಟು ವಿನಾಯಕ ದಿವ್ಯ ದೇಗುಲ ಒಂದು ರೀತಿಯಲ್ಲಿ ವಿಶಿಷ್ಟವಾಗಿದ್ದು ಅತ್ಯಂತ ಸುಂದರ ರೀತಿಯಲ್ಲಿ ದೇವಸ್ಥಾನದ ಬಗ್ಗೆಗೋವರ್ಧನ ಆಚಾರ್ಯ ಅವರು ವರ್ಣನೆ ಮಾಡಿದ್ದಾರೆ. ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿರುವ ಇವರು ತಮ್ಮ ಬಿಡುವಿನ ವೇಳೆಯಲ್ಲಿ ಊರಿನ ಕೆಲವು ಪುರಾತನ, ಕಾರ್ಣಿಕ ದೇವಾಯಗಳ ಬಗ್ಗೆ ವಿಡಿಯೋ ಮಾಡಿ ಮಾಹಿತಿ ಕೊಡ್ತಾರೆ. ಭಜನೆ , ಯಕ್ಷಗಾನ ಇವರ ಇನ್ನೊಂದು ಉತ್ತಮ ಕಲೆ. ಮೂಲತಃ ಕಲಾವಿದರ ಕುಟುಂಬದವರಾದ ಇವರಿಗೆ ತಂದೆ, ದೊಡ್ಡಪ್ಪನೇ ಗುರುಗಳು.
ಈ ಗುಡ್ಡಟ್ಟು ದೇವಸ್ಥಾನ ಕುಂದಾಪುರದಿಂದ ೨೦ ಕಿಲೋಮೀಟರು ದೂರದಲ್ಲಿದೆ. ಕುಂದಾಪುರ-ಶಿವಮೊಗ್ಗ ಮಾರ್ಗದ ಯಡಾಡಿ ಎಂಬಲ್ಲಿ ಈ ದೇವಸ್ಥಾನವಿದ್ದು ಇಲ್ಲಿರುವ ಬಂಡೆಯೆ ಈ ದೇವಸ್ಥಾನದ ಒಂದು ವಿಶಿಷ್ಟ . ಗುಹೆಯ ಒಳಗೆ ನೆಲೆಸಿರುವ ವಿನಾಯಕನ ಉದ್ಭವ ವಿಗ್ರಹ ಸುತ್ತಮುತ್ತಲಿನ ಜನರ ಆರಾಧ್ಯ ದೇವ. ಇಲ್ಲಿಗೆ ದಿನನಿತ್ಯ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ಕ್ರಪೆಗೆ ಪಾತ್ರರಾಗುತ್ತಾರೆ . ದೂರದೂರಿಂದ ಪ್ರವಾಸಿಗರು ಇಲ್ಲಿಗೆ ಬರುವುದು ಈ ದೇವಸ್ಥಾನದ ಪ್ರಸಿದ್ಧಿಯ ಸಂಕೇತ.ಇನ್ನಷ್ಟು ಮಾಹಿತಿ ಅವರ ವಿಡಿಯೋದಲ್ಲಿದೆ ನೋಡಿ, ಒಂದ್ಸಲ ದೇವಸ್ಥಾನಕ್ಕೆ ಹೋಗಿಬನ್ನಿ .
ಗೋವರ್ಧನ ಆಚಾರ್ಯರ ಈ ಪ್ರಯತ್ನಕ್ಕೆ ನಮ್ಮ ಈ ಲೋಕಲ್ ಕೇಬಲ್ ನ ತಂಡದಿಂದ ಶುಭ ಹಾರೈಸುತ್ತಾ ಇನ್ನು ಅನೇಕ ದೇವಸ್ಥಾನಗಳ ಮಾಹಿತಿಯ ವಿಡಿಯೋ ತುಣುಕುಗಳನ್ನು ಅಪೇಕ್ಷಿಸುತ್ತೇವೆ.

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..