2030

Happy birthday Amma

ಹೌದು ಅಮ್ಮಾ, ಕಳೆದ 20 ವರುಷದಿಂದ ನಾನು ಅಜ್ಜಿ ಮನೆಯ ಅಂಗಳದಲ್ಲಿ ಕಾಲ ದೂಡಿರುವೆ. ಇದ್ದ ಬದ್ದವರಿಗೆ ಕರೆ ಮಾಡಲು ನನ್ನ ಬಳಿ ಕಾಸಿದೆ ,ಸಮಯವಿದೆ,ನಿನ್ನ ಬಳಿ ಮಾತನಾಡಲು ಸಮಯವಿಲ್ಲಾ ಎಂದು ತಪ್ಪು ತಿಳಿಯಬೇಡ. ಸಣ್ಣ ಸಣ್ಣ ವಿಷಯಕ್ಕೆ ನಿನ್ನ ಮೇಲೆ ರೇಗಾಡಿರುವೆ ಯಾವುದನ್ನು ಮನಸಿಗೆ ತೆಗೆದುಕೊಳ್ಳಬೇಡ. ಹುಣ್ಣಿಮೆಯ ಚಂದ್ರ ಭೂಮಿಗೆ ಬಂದರು,ನಿನಗೆ ಮಾತ್ರ  ಬೆಳದಿಂಗಳ ಸವಿಯಲು ಅವಕಾಶವೇ ಮಾಡಿಲ್ಲ ಎಂಬುದು ಅರಿವಾಗಿದೆ.

ನೀನು ಬಾಲ್ಯದಿಂದಲೇ ಬಡತನದ ಬೇಗೆಯಲಿ ಬೆಂದವಳು ಎಂದು ನನಗೊತ್ತು. ಗಂಡನ ಮನೆಯು ಸಹ ನಿನಗೆ ಬಿಟ್ಟಿಯಾಗಿ ಬೆಳಕು ನೀಡಿಲ್ಲ ಎಂಬುದರ ಅರಿವು ನನಗುಂಟು. ಮಕ್ಕಳ್ಳಿಲ್ಲದಿದ್ದಾಗ ಬಂಜೆ ಎಂಬ ಪಟ್ಟ ಹೊತ್ತು ಕಾಲ ಕಳೆದೆ. ನಿನ್ನೊಳಗಿನ ಕನಸುಗಳ ಕೊಂದು  ಕಣ್ಣೀರಿನಲ್ಲೇ ಕನಸುಗಳ ತೊಳೆದೆ.

ನಾ ಹುಟ್ಟಿದ ಮೇಲೂ ನಿನ್ನ ಬದುಕಲ್ಲಿ  ಬದಲಾವಣೆಯಾಗಲಿಲ್ಲಾ ಜವಾಬ್ದಾರಿ ಇನ್ನೂ ಅತಿಯಾಯಿತು. ಅಪ್ಪನಿಗೆ ಸರಿಯಾಗಿ ಕೆಲಸವಿರಲಿಲ್ಲಾ,ದುಡಿದ ಹಣ ಒಂದ್ ಹೊತ್ತು ಊಟಕ್ಕೆ ಮಾತ್ರ ಬರುತ್ತಿತ್ತು. ಅದೇ ಸಮಯಕ್ಕೆ
ಎದೆ ಹಾಲಿನ ಸಮಸ್ಯೆ ಎದುರಾಯಿತು, ನನ್ನ ಹೊಟ್ಟೆ ತುಂಬಿಸಲು, ಹಸಿ ಬಾಣಂತಿ ಎಂಬುದನ್ನು ನೋಡದೇ ಮಂಗಳೂರು ಪೇಟೆಯಲ್ಲಿ ಬತ್ತಿ ಮಾರಲು ಹೊರಟದ್ದು ನನಗೊತ್ತಿದೆ ಅಮ್ಮಾ.

ಇದಾವುದನ್ನು ಒಂದು ದಿನವೂ ನೀನು ನನ್ನ ಬಳಿ ಹಂಚಿಕೊಂಡಿಲ್ಲಾ. ನಿನ್ನ ಕಷ್ಟವನ್ನು ನನ್ನೆದುರು ತೋರಿಸಿಲ್ಲಾ.
ನಾ ಹಠ ಹಿಡಿದಾಗ ನನಗೆ ಬೇಕಾದದ್ದನೆಲ್ಲಾ ತೆಗೆದುಕೊಟ್ಟಿರುವೆ, ಬಡತನದ ಬಿಸಿ ನನಗೆ ತಾಗದ ಹಾಗೆ ಬೆಳೆಸಿರುವೆ. ನೀನು ನಿಜವಾಗಿಯು ತಾಯಂದಿರಿಗೆ ತಾಯಿ, ನಿನ್ನ ಹೊಟ್ಟೆಯಲ್ಲಿ ನಾ ಹುಟ್ಟಿರುವೆ ಎನ್ನಲು ಹೆಮ್ಮೆ ಪಡುತ್ತೇನೆ.

ಮುಂದಿನ ಜನುಮದ ಬಗ್ಗೆ ನನಗೆ ನಂಬಿಕೆಯಿಲ್ಲಾ, ಆದರೆ ಈ ಜನುಮದಲ್ಲಿ ನಿನಗೆ ಒಂದು ದಿನವು ಕಣ್ಣೀರ ಹಾಕಿಸದೇ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುವ ನಂಬಿಕೆ ನನಗೆ ದುಪ್ಪಟ್ಟಿದೆ. ಅಮ್ಮ ನಾಳೆ ನೀನು 49 ರ ಸಂವತ್ಸರಕ್ಕೆ ಕಾಲಿಡುತ್ತಿರುವೆ.
ನನಗನಿಸಿದನ್ನು ನಿನ್ನೆದುರು ಹೇಳಬೇಕಂದನಿಸಿತು,ಹಾಗೇಯೆ ನಿನಗೆ ಮೊದಲ ಶುಭ ಹಾರೈಕೆ ನನ್ನದಾಗಿರಬೇಕು ಎಂದು ಇದನೆಲ್ಲಾ ಬರೆದಿರುವೆ ಅಮ್ಮಾ, ಕೊನೆಯದಾಗಿ , ನಾ ಮಗುವಾಗಿದ್ದಾಗ ನೀ ಮಾಡಿರೋ ಆ ಅನಂತ ತ್ಯಾಗದ ಒಂದು ಪಟ್ಟನ್ನು ನಿನ್ನ ವ್ರದ್ದಾಪ್ಯದಲ್ಲಿ ಜೊತೆಗಿದ್ದು ತೀರಿಸುವೆ ಅಮ್ಮಾ.ಜೊತೆಗಿದ್ದು ತೀರಿಸುವೆ .

I love amma

Contributed by : ಪರಮ್ ಭಾರದ್ವಾಜ್ 

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..