5108

ನಿಮ್ಮಲ್ಲಿ ಇರುವ 500 ಹಾಗು 1000 ರೂಪಾಯಿ ನೋಟುಗಳನ್ನು ಬದಲಾಯಿಸಿಕೊಳ್ಳಲು ತಿಳಿದಿರಬೇಕಾದ ಅಂಶಗಳು

ಭಾರತದ ಅರ್ಥವ್ಯವಸ್ಥೆಯಲ್ಲಿ ಒಂದು ಗಮನಾರ್ಹ ಹೆಜ್ಜೆ ಇಡಲಾಗಿದೆ. ಎಲ್ಲಾ 500,1000 ನೋಟುಗಳು ಚಲಾವಣೆಯನ್ನು ನಿಲ್ಲಿಸಲಾಗಿದೆ. ಇದರ ಅವಶ್ಯಕತೆ ಏನಿತ್ತು ಎಂಬುದು ಎಲ್ಲರ ಪ್ರಶ್ನೆ ಒಂದು ಅಂಕಿ ಅಂಶದ ಪ್ರಕಾರ ಎರಡು ಲಕ್ಷ ಕೋಟಿ ರೂಪಾಯಿಯಷ್ಟು ಕೋಟಾ ನೋಟುಗಳು ನಮ್ಮ ದೇಶದಲ್ಲಿ ಹರಿದಾಡುತ್ತಿದೆ. ಈ ನೋಟುಗಳು ಸಾಮಾನ್ಯರಿಗೆ ಗುರುತಿಸುವುದು ಕಷ್ಟ. ಇದನ್ನು ತಯಾರಿಸುವವ ಅದನ್ನು ಬ್ಯಾಂಕಿಗೆ ತರದೆ ಇನ್ನಿತರ ವ್ಯವಹಾರದಲ್ಲಿ ತೊಡಗಿಸುತ್ತಾನೆ. ಈಗ ಎಲ್ಲ 500,1000 ನೋಟುಗಳು ಬ್ಯಾಂಕಿಗೆ ಬರದೇ ಪರ್ಯಾಯ ಮಾರ್ಗಗಳೇ ಇಲ್ಲ. ಅದಲ್ಲದೆ ಬೃಷ್ಟರು ಕೂಡಿಟ್ಟ ಕಪ್ಪು ಹಣವೂ ಕೂಡಾ ಲೆಕ್ಕಕ್ಕೆ ಸಿಗದಷ್ಟಿದೆ. ಇದೆಲ್ಲವೂ ದೇಶವಿರೋಧಿ ಚಟುವಟಿಕೆ ಮತ್ತು ಭಯೋತ್ಪಾದನೆಗೆ ಖರ್ಚಾಗುವುದಲ್ಲದೇ ಇದರಿಂದ ದೇಶದ ಆರ್ಥಿಕ ವ್ಯವಸ್ಥೆ ಆಂತರಿಕವಾಗಿ ಶಿಥಿಲವಾಗುತ್ತದೆ. ರೋಗಿಯ ರೋಗದ ಬಳಲುವಿಕೆಯ ಮುಂದೆ ಇಂಜೆಕ್ಷನ್ ನೋವು ಆಗಲಿ ಮಾತ್ರೆಯ ಕಹಿಯಾಗಲಿ ನಗಣ್ಯ. ದೇಶ ದಶಕಗಳಿಂದ ಬಳಲುತ್ತಿರುವ ಒಂದು ಸಾಂಕ್ರಾಮಿಕ ಭಯಂಕರ ರೋಗದಿಂದ ಮುಕ್ತವಾಗಲು ಎರಡು ದಿನದ ವ್ಯವಹಾರಿಕೆ ಅಡಚಣೆಯ ನೋವನ್ನು ಸಹಿಸಿಕೊಳ್ಳಿ. ಒಳ್ಳೆಯ ದಿನಗಳು ಬರಲಿವೆ. ದೇಶದ ಬಡ ಮತ್ತು ಮಧ್ಯಮ ವರ್ಗಕ್ಕೆ ಒಳ್ಳೆಯ ಬದುಕಿನ ಮುನ್ನುಡಿ ಬರೆದಾಗಿದೆ.ನಿಮ್ಮ ವ್ಯವಹಾರಿಕ ಅಡಚಣೆಗಳಿಗೆ ಪರಿಹಾರಗಳು ಇಲ್ಲಿವೆ.

ನಿಮ್ಮ ಮನಸ್ಸಿನಲ್ಲಿ ಮೂಡುವ ಪ್ರಶ್ನೆಗಳು ಮತ್ತು ಅದಕ್ಕೆ ಉತ್ತರಗಳು ಈ ಕೆಳಗಿನಂತಿವೆ.

೧.ನೋಟು ಬದಲಿಸುವ ವಿಧಾನವೇನು?
* ನಿಮ್ಮ ಹತ್ತಿರದ ಯಾವುದೇ ಬ್ಯಾಂಕುಗಳು ಪೋಸ್ಟ ಆಫೀಸ್’ಗಳಿಗೆ ಹೋದರೆ ಅಲ್ಲೊಂದು ಪಾರ್ಮ್ ಕೊಡುತ್ತಾರೆ. ನೀವು ಕಡ್ಡಾಯವಾಗಿ ಯಾವುದಾದರೂ ಗುರುತಿನ ಚೀಟಿಯನ್ನು ಹೊಂದಿರಲೇಬೇಕು .(ಉದಾ:- ಆಧಾರ್ ಕಾರ್ಡ್, ವೋಟರ್ ಐಡಿ, ಪಾಸ್’ಪೋರ್ಟ್, ಡ್ರೈವಿಂಗ್ ಲೈಸನ್ಸ್, ಪ್ಯಾನ್ ಕಾರ್ಡ್ ಇತ್ಯಾದಿ)
ಪಾರ್ಮ್’ನಲ್ಲಿ ನಿಮ್ಮ ಹೆಸರು ನೀವು ಲಗತ್ತಿಸುವ ಗುರುತಿನ ಚೀಟಿಯ ನಂಬರ್ ಸಹಿ ಮತ್ತು ಯಾವ ನೋಟುಗಳು ಎಷ್ಟು ಸಂಖ್ಯೆಯಲ್ಲಿವೇ ಎಂಬುದನ್ನು ಬರೆಯಬೇಕು . ಒಬ್ಬ ವ್ಯಕ್ತಿಯು ತನ್ನ ಒಂದು ಗುರುತಿನ ಚೀಟಿಯಿಂದ 4000 ಮಾತ್ರ ಬದಲಿಸಬಹುದು.

೨. ನಾನು 1000 ,500 ನೋಟುಗಳ ಕೊಟ್ಟರೆ ಮರಳಿ ಎಷ್ಟು ಪಡೆಯಲು ಸಾಧ್ಯ ?
* ನೀವು ಕೊಟ್ಟ ಸಂಪೂರ್ಣ ಮೊತ್ತ ಹಿಂತಿರುಗಿಸಲಾಗುವುದು ಅದರಲ್ಲಿ ಯಾವುದೇ ಕಡಿತವಿಲ್ಲ.

೩. ಹೆಚ್ಚೆಂದರೆ ಎಷ್ಟು ಹಣವನ್ನು ನಾನು ಬದಲಿಸಿಕೊಳ್ಳಬಹುದು?
* 4000

೪.ನನಗೆ ನನ್ನ ಅಕೌಂಟಿನಲ್ಲಿರುವ ಹಣ ಪಡೆಯಲು ಸಾಧ್ಯವೇ?
*ಹೌದು ನೀವು ನಿಮ್ಮ ಹಣ ಪಡೆಯಲು ಸಾಧ್ಯ ದಿನಕ್ಕೆ 10,000 ಮತ್ತು ವಾರಕ್ಕೆ 20,000 ಮಾತ್ರ (ನವ್ಹೆಂಬರ್ 24 ರವರೆಗೆ ಈ ಮಿತಿಯಿದೆ ನಂತರದ ದಿನಗಳಲ್ಲಿ ಇದು ಹೆಚ್ಚಾಗುವ ಸಾಧ್ಯತೆಗಳಿವೆ)

೫.4000ದ ಮೇಲೆ ನನ್ನ ಅವಶ್ಯಕತೆ ಇದ್ದರೆ ಪರ್ಯಾಯ ಯೋಜನೆಯಿದೆಯೇ?
* ಇದೆ. ನೀವು ಅಕೌಂಟ್ ಇರುವಲ್ಲಿಗೆ ಹೋಗಿ ನಿಮ್ಮಲ್ಲಿರುವ ನೋಟುಗಳನ್ನು ಅಕೌಂಟಿಗೆ ಹಾಕಿ ಅದರಿಂದ 10,000 ಮಿತಿಯವರೆಗೆ ಹಣವನ್ನು ವಿತ್’ಡ್ರಾವಲ್ ಸ್ಲಿಪ್ ಮತ್ತು ಚೆಕ್ ಮೂಲಕ ಪಡೆಯಬಹುದು.(ನವ್ಹೆಂಬರ್ 24ರವರೆಗೆ ಈ ಮಿತಿಯಿದೆ ನಂತರದ ದಿನಗಳಲ್ಲಿ ಇದು ಹೆಚ್ಚಾಗುವ ಸಾಧ್ಯತೆಗಳಿವೆ)
೫. 10000 ಕ್ಕೂ ಹೆಚ್ಚಿನ ದುಡ್ಡು ನನಗೆ ಅವಶ್ಯಕತೆ ಇದ್ದರೆ ಏನು ಮಾಡಬೇಕು?
* ಅದಕ್ಕೆ ನೀವು ಕ್ರೆಡಿಟ್ ,ಡೆಬಿಟ್ ಕಾರ್ಡ್, ಆರ್.ಟಿ.ಜಿ.ಎಸ್, ನೆಪ್ಟ್, ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಅಂತಹ ಮಾರ್ಗಗಳನ್ನು ಬಳಸಬಹುದು ಅದಕ್ಕೆ ಯಾವುದೇ ನಿರ್ಬಂಧವಿಲ್ಲ.

೬. ಎ.ಟಿ.ಎಮ್ ಮತ್ತು ಕ್ಯಾಶ್ ಡಿಪೊಸಿಟ್ ಮಶೀನ್’ಗಳಲ್ಲಿ ದುಡ್ಡು ಹಾಕಬಹುದೇ?
*ಹಾಕಬಹುದು.

೭. ಎ.ಟಿ.ಎಮ್ ನಿಂದ ದುಡ್ಡು ಪಡೆಯಬಹುದೇ?
* ಸದ್ಯಕ್ಕೆ ಸಾಧ್ಯವಿಲ್ಲ. ಬ್ಯಾಂಕಿನ ಎಲ್ಲಾ ಎ.ಟಿ.ಎಮ್ ಸಂಬಂಧಿ ಕಾರ್ಯಚಟುವಟಿಕೆಗಳು ಮುಗಿದ ನಂತರ ಎ.ಟಿ.ಎಮ್ ಕಾರ್ಯರೂಪಕ್ಕೆ ಬರುತ್ತವೆ.ಅದಾದ ನಂತರ ನವ್ಹೆಂಬರ್ 18 ರವರೆಗೆ
ಒಂದು ಕಾರ್ಡಿಗೆ 2000 ಒಂದು ದಿನದ ಮಿತಿಯಲ್ಲಿ ತೆಗೆಯಬಹುದು. ನವ್ಹೆಂಬರ್ 19 ರ ನಂತರ ಅದರ ಮಿತಿಯನ್ನು 4000ಕ್ಕೆ ಏರಿಸುವ ಸಾಧ್ಯತೆಗಳಿವೆ.

೮. ನನ್ನ ಸಂಬಂಧಿಕರು ಸ್ನೇಹಿತರ ಅಕೌಂಟಿಗೆ ದುಡ್ಡು ಹಾಕಬಹುದೇ?
* ಹಾಕಬಹುದು ಆದರೆ ಅವರಿಂದ ಸಹಿಮಾಡಲ್ಪಟ್ಟ ಪತ್ರವನ್ನು ಲಗತ್ತಿಸಬೇಕು. ಕಂಪನಿಗಳದ್ದಾಗಿದ್ದರೆ ಸೀಲ್ ಮತ್ತು ಪ್ರೊಪ್ರೇಟರ್ ಅವರ ಸಹಿ ಇರಲೇಬೇಕು.

೯. ಎಲ್ಲಿಯವರೆಗೂ ನಾನು ನನ್ನ ನೋಟುಗಳನ್ನು ಬದಲಿಸಬಹುದು?
* ಡಿಸೆಂಬರ್ 30 ರವರೆಗೆ ಬದಲಿಸಬಹುದು.

೧೦. ನಾನು ಸದ್ಯದಲ್ಲಿ ಭಾರತದಲ್ಲಿಲ್ಲ ನಾನು ನನ್ನ ಹಣವನ್ನು ಬದಲಿಸುವುದು ಹೇಗೆ?
* ಒಂದು ಪತ್ರದಲ್ಲಿ ವಿವರಗಳನ್ನು ಬರೆದು ಸಹಿಹಾಕುವ ಮೂಲಕ
ಭಾರತವಾಸಿಯಾದ ನಿಮ್ಮ ಬಂಧುಗಳಿಗೆ ನಿಮ್ಮ ಹಣವನ್ನು ವರ್ಗಾಯಿಸುವ ಹಕ್ಕನ್ನು ಹಸ್ತಾಂತರಿಸಬಹುದು.

೧೨. ತುರ್ತು ಪರಿಸ್ಥಿತಿಗಲ್ಲಿ ನಾನು ಎಲ್ಲಿ ನನ್ನ ನೋಟನ್ನು ಚಲಾಯಿಸಬಹುದು?
* 72 ಗಂಟೆಗಳ ಕಾಲ ಎಲ್ಲಾ ಸರ್ಕಾರಿ ಆಸ್ಪತ್ರೆ, ಸರ್ಕಾರಿ ಬಸ್ಸು, ರೈಲು, ಮತ್ತು ವಿಮಾನ ಟಿಕೆಟ್ ಖರೀದಿಗೆ ಬಳಸಬಹುದು.

ವಿಶೇಷ ಸೂಚನೆ : ನಿಮ್ಮ ಅಕೌಂಟ್ ಇದ್ದರೆ ಅದಕ್ಕೆ ನಿಮ್ಮ ಹಣವನ್ನು ಹಾಕಿ ವಿತ್’ಡ್ರಾವಲ್ ಸ್ಲಿಪ್ ಮೂಲಕ ಪಡೆಯುವುದು. ನೋಟನ್ನು ಬದಲಿಸುವುದಕ್ಕಿಂತ ಉತ್ತಮ. ನೋಟ್ ಬದಲಿಸುವ ಮಿತಿ 4000 ಅಕೌಂಟ್ ಇಂದ ದುಡ್ಡು ತೆಗೆಯುವ ಮಿತಿ 10,000

ಹೆಚ್ಚಿನ ಮಾಹಿತಿಗಾಗಿ www.rbi.org.in ಗೆ ಭೇಟಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..