1528

Instagram ಸರ್ವರ್ crash ಆಗಲು ಈ ಮಹಿಳಾ ಸಾಫ್ಟ್ವೇರ್ ಇಂಜಿನಿಯರ್ ಮಾಡಿದ ಎಡವಟ್ಟುಗಳೇ ಕಾರಣ

ಬೆಂಗಳೂರು : ಇಂದು ಬೆಳಿಗ್ಗೆ ಎಂದಿನಂತೆ ಬೆಂಗಳೂರಿನ ಮಂದಿ ಬೆಳಿಗ್ಗೆ ಬೆಳಿಗ್ಗೆ ಜಿಮ್ ಗೆ ಹೋದ ಫೋಟೋ , ಹೋಟೆಲ್ ಅಲ್ಲಿ ಆರ್ಡರ್ ಮಾಡಿದ ಬಿಸಿಬೇಳೆ ಬಾತ್ ಫೋಟೋ , ಫಿಲಂ ಆಕ್ಟರ್ ಜೊತೆ ಮೂವಿ ನೋಡೋಕೆ ಹೋದಾಗ ತೆಗೆಸಿಕೊಂಡ ಫೋಟೋ , ವಿದ್ಯಾರ್ಥಿ ಭವನದ ಎಣ್ಣೆಪೂರಿತ ಮಸಾಲೆದೋಸೆ ಫೋಟೋಗಳನ್ನು ಜಗತ್ತಿನ ಪ್ರಸಿದ್ಧ ಫೋಟೋ ಶೇರಿಂಗ್ app instagram ಅಲ್ಲಿ ಅಪ್ಲೋಡ್ ಮಾಡಲು ಸಾಧ್ಯವಾಗದೆ ವಿಲ ವಿಲ ಒದ್ದಾಡುತ್ತಿರುವ ದೃಶ್ಯ ಬೆಂಗಳೂರಿನ ಬೀದಿ ಬೀದಿಗಳಲ್ಲೂ ಕಾಣಸಿಗುತಿತ್ತು ..

ಕಾರಣ ಏನೆಂದು ನಮ್ಮ ವರದಿಗಾರ ವಿಚಾರಿಸಿದಾಗ ಅವರಿಗೆ ಇನ್ಸ್ಟಾಗ್ರಾಮ್ ಅಲ್ಲಿ ಫೋಟೋ ಅಪ್ಲೋಡ್ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುವುದು . ನಮ್ಮ ವರದಿಗಾರ ಇನ್ಸ್ಟಾಗ್ರಾಮ್ ಕಂಪನಿಯ ಭಾರತೀಯ ಕಚೇರಿಯನ್ನು ಸಂಪರ್ಕಿಸಿದಾಗ ತಿಳಿದು ಬಂಡ ವಿಷಯ ಏನೆಂದರೆ “ಬೆಂಗಳೂರಿನ ಒಬ್ಬ techie ಮಾಡಿದ ಅನಾಹುತವೇ ಇದಕ್ಕೆಲ್ಲ ಕಾರಣ ”

ಬೆಂಗಳೂರಿನ ಪ್ರತಿಷ್ಠಿತ ಸಾಫ್ಟ್ವೇರ್ ಕಂಪನಿಯಲ್ಲಿ ಉದ್ಯೋಗಿಯಾಗಿರುವ ರಚನಾ (ಹೆಸರು ಬದಲಿಸಲಾಗಿದೆ ) ಎಂಬುವವರು ಬೆಳಿಗ್ಗೆ ಭೀಮನ ಅಮಾವಾಸ್ಯೆ ದಿನ ಫುಲ್ ಮೇಕ್ಅಪ್ ಮಾಡಿಕೊಂಡು ಹೊಸ ಸೀರೆ ಉಟ್ಟುಕೊಂಡು 150 selfie ಫೋಟೋಸ್ ತೆಗೆದುಕೊಂಡು ಅದರಲ್ಲಿ ಬೆಸ್ಟ್ one ಫೋಟೋ ಗೆ ಪಿಕ್ edit app ಬಳಸಿ ಫಿಲ್ಟರ್ ಹಾಕಿ ಆ ಫೋಟೋವನ್ನು 150 hashtag ನೊಂದಿಗೆ ಇನ್ಸ್ಟಾಗ್ರಾಮ್ ಗೆ ಅಪ್ಲೋಡ್ ಮಾಡಿದಾಗ ಆ ಫೋಟೋ ಜೊತೆಗಿರುವ ಫಿಲ್ಟರ್ , ಓವರ್ action , ಹಾಗು 150 ಹ್ಯಾಷ್ ಟ್ಯಾಗ್ ಲೋಡ್ ತಡೆಯಲು ಆಗದೆ ಬೆಂಗಳೂರಿಗೆ ಅಂತಾನೆ ಇನ್ಸ್ಟಾಗ್ರಾಮ್ ಅವರು ಬಳಸಿರುವ dedicated ಸರ್ವರ್ crash ಆಗಿ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ ..

ಇನ್ನು ಮುಂದೆ ಯಾವುದೇ ಫೋಟೋ ಅಪ್ಲೋಡ್ ಮಾಡುವಾಗ ಜಾಸ್ತಿ ಫಿಲ್ಟರ್ ಹಾಕಾಬಾರದು ಹಾಗು ಮೂರಕ್ಕಿಂತ ಜಾಸ್ತಿ ಹ್ಯಾಷ್ ಟ್ಯಾಗ್ ಹಾಕಬಾರದು ಎಂಬ ಷರತ್ತಿನೊಂದಿಗೆ ಈ ಸಾಫ್ಟ್ವೇರ್ ಇಂಜಿನಿಯರ್ ಅವರ ಅಕೌಂಟ್ ಅನ್ನು ಇನ್ಸ್ಟಾಗ್ರಾಮ್ ಮರಳಿ activate ಮಾಡಿದೆ ..

Note:ಈ ಪೋಸ್ಟ್ ಕೇವಲ ಮನೋರಂಜನೆಗಾಗಿ .. ತಮಾಷೆಯಾಗಿ ಈ ಪೋಸ್ಟ್ ಅನ್ನು ಎಂಜಾಯ್ ಮಾಡಿ

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..