2994

KGF ಚಿತ್ರಕ್ಕೆ FDFS ಟಿಕೆಟ್ ಸಿಗದೇ ಹತಾಶನಾಗಿ Stay order ತಂದ ಹಾಲುಗಲ್ಲದ ಯುವಕ

FAKE NEWS:ಈ ಆರ್ಟಿಕಲ್ ತಮಾಷೆಗಾಗಿ 😛

ನಾಳೆ ಯಶ್ ಅಭಿನಯದ KGF ಚಿತ್ರ ಬಿಡುಗಡೆ ಆಗುತಿದ್ದು ದೇಶಾದಾದ್ಯಂತ ಚಿತ್ರ ನೋಡಲು ಜನರು ತಯಾರಿ ನಡೆಸುತ್ತಿದ್ದು ಹೆಚ್ಚಿನವರಿಗೆ ಟಿಕೆಟ್ ಸಿಗದೇ ಹತಾಶರಾಗಿ ಅವರಿವರಲ್ಲಿ ಟಿಕೆಟ್ ಇದ್ಯಾ ? ಟಿಕೆಟ್ ಇದ್ಯಾ ಅಂತ ಬೇಡ್ತಾ ಇರೋ ಸನ್ನಿವೇಶ ಎಲ್ಲೆಂದರಲ್ಲಿ ಕಾಣುತ್ತಿದೆ .

ವಿಷಯ ಏನಂದರೆ ಬೆಂಗಳೂರಿನ ಕತ್ರಿಗುಪ್ಪೆಯ ನಿವಾಸಿಯಾದ 25 ವರ್ಷದ ಹಾಲುಗಲ್ಲದ ಯುವಕ ಸಂತೋಷ್ ರಾಮಪ್ಪ ತನ್ನ ಸ್ನೇಹಿತರು ಫೇಸ್ಬುಕ್ ಅಲ್ಲಿ KGF ಮೂವಿ ಟಿಕೆಟ್ ನ ಪೋಸ್ಟ್ ಮಾಡಿ ಮಾಡಿ ಪೋಸ್ ಕೊಡ್ತಾ ಇರೋದನ್ನು ನೋಡಲಾಗದೆ ತಾನೂ FDFS ಟಿಕೆಟ್ ತಗೊಂಡು ಫಿಲಂ ನೋಡೇ ನೋಡ್ತೀನಿ ಅಂತ ಪಣ ತೊಟ್ಟಿದ್ದ . ಎಷ್ಟೇ ಕಷ್ಟ ಪಟ್ಟರೂ ಗಾಂಧಿ ಕ್ಲಾಸ್ ಗೂ ಟಿಕೆಟ್ ಸಿಗದೇ ಇದ್ದ ಕಾರಣಕ್ಕೆ ಹತಾಶನಾಗಿ ಚಿತ್ರದ ಪ್ರದರ್ಶನ ನಿಲ್ಲಿಸಲು ಕೋರ್ಟ್ ಇಂದ ಸ್ಟೇ ಆರ್ಡರ್ ತರಿಸಿ ತನ್ನ ಸ್ನೇಹಿತರ ಮೇಲೆ ಸೇಡು ತೀರಿಸಿಕೊಳ್ಳಲು ಸಿದ್ದನಾಗಿದ್ದ .

ಈ ವಿಷಯ ತಿಳಿದು ಚಿತ್ರದ ನಿರ್ಮಾಪಕರ ಮನೆಯ ತೋಟದ ಮಾಲಿ influence ಮಾಡಿ ಕೊನೆಗೂ ಈ ಹಾಲುಗಲ್ಲದ ಹುಡುಗನಿಗೆ ಸಿನಿಮಾ ನೋಡಲು ಟಿಕೆಟ್ ಕೊಡಿಸಿ ನಾಳೆ ಚಿತ್ರ ಪ್ರದರ್ಶನ ಆಗುವ ಹಾಗೆ ನೋಡಿಕೊಂಡಿದ್ದಾರೆ ..

ಟಿಕೆಟ್ ಸಿಕ್ಕಿದ ಖುಷಿಯಲ್ಲಿ ಹಾಲುಗಲ್ಲದ ಯುವಕ ಈಗಾಗಲೇ ಸಿದ್ದೇಶ್ವರ ಥಿಯೇಟರ್ ಗೇಟ್ ಬಳಿ ಚಾಪೆ ಹಾಕ್ಕೊಂಡು ಕಂಬಳಿ ಹೊದ್ಕೊಂಡು ಅರೆ ನಿದ್ದೆಯಲ್ಲಿ ಕಾಲ ಕಳೆಯುತ್ತಿದ್ದಾನೆ ಎಂದು ನಮ್ಮ ವರದಿಗಾರರು ತಿಳಿಸಿದ್ದಾರೆ .

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..