1881

ಕೊನೆ ಸೀಟಲ್ಲೊಂದು ದಿನ…ಆ ಒಂದು ಗಳಿಗೆ…!!!

ಎಂದಿನಂತೆ ಅವತ್ತು ಕೂಡ,ಸಮಯ ಬೆಳಿಗ್ಗೆ ೮.೪೦…ಮೊದಲೇ ಸೋಮಾರಿ ನಾನು,,, ಏಳುವಾಗಲೆ ೭.೪೦ ಆಗಿತ್ತು..ಇದ್ದ ಅರೆಬರೆ ಸಮಯದಲ್ಲಿ ಅರೆಬರೆ ತಯಾರಿಯೊಂದಿಗೆ ವಲ್ಲದ ಮನಸ್ಸಿನೊಂದಿಗೆ ಆಫೀಸ ಕಡೆ ಪಯಣ…
ಇನ್ನೆನು ಬಸ್ಸು ಬರಲು ೫ ನಿಮಿಷ ಬಾಕಿ…. ತರಾತುರಿಯಲ್ಲಿ ಬಸ್ಸ ಸ್ಟಾಪಗೆ ತಲುಪಿದೆ…luckly god grace ನಾನು ಬಸ್ಸು ಎರಡು ತಲುಪಿದ ಸಮಯ ಒಂದೇ ಆಗಿತ್ತು…. ದುರಾಧ್ರಷ್ಟಕ್ಕೆ ಹೊರನೋಟಕ್ಕೆ ಬಸ್ಸು ಪೂರ್ತಿ….. next ಬಸ್ಸ್ ಅಂದ್ರೆ ತಡ ಆಗುವ ಸಂಭವ…ಆಫೀಸಲ್ಲಿ urgent ಕೆಲಸ ಬೇರೆ…. ಆಗಿದ ಆಗ್ಲಿ,ನಿಂತು ಹೊದ್ರು ಪರವಾಗಿಲ್ಲ ಅಂತ ಎದುಸಿರು ಬಿಡುತ್ತ ಬಸ್ಸ್ ಏರಿದೆ….. ಇಡಿ ಬಸ್ಸ್ಗಗೆ ಒಮ್ಮೆ ಕಣ್ಣಾಯಿಸಿದೆ.. ಯಾವುದಾದುರು ಸೀಟು ಖಾಲಿ ಇದೆಯಾ ಅಂತ…ಪುಣ್ಯ ಉದ್ದನೆಯ ಕೊನೆಯ ಸೀಟಿನಲ್ಲಿ ಒಂದೆ ಒಂದು ಕೊನೆಯ ಸೀಟು ಖಾಲಿ ಇತ್ತು….. ಹೆಚ್ಹಿದ ಎದೆಬಡಿತದೊಂದಿಗೆ ನಿಧಾನವಾಗಿ ಚಲಿಸುತ್ತಿರುವ ಬಸ್ಸನಲ್ಲಿ ಖಾಲಿ ಸೀಟಿನತ್ತ ನನ್ನ ಹೆಜ್ಜೆ….

ಸ್ವಲ್ಪ ಸಾವರಿಸಿಕೊಂಡು ಸಮಾಧಾನದಿಂದ ಕೂತು ನನ್ನೊಳಗೆ ನನ್ನನ್ನೆ ಸುಧಾರಿಸುತಿದ್ದೆ… ಇನ್ನೆನು ಎದೆಬಡಿತ ಸರಿದಾಟಿಗೆ ಬರುತ್ತಿದೆ ಅನ್ನಿಸುತಿತ್ತು…. ಎಂದಿನಂತೆ ದೇಹ ಮೆಲ್ಲಗೆ ನಿದ್ದೆಯಾತ್ತ ವಾಲುತಿತ್ತು…. ಇನ್ನೆನು ನಿದ್ರಾಲೋಕಕ್ಕೆ ಜಾರಿದೆ ಅನ್ನುವಾಗಲೆ ಎಲ್ಲಿಂದಲೋ ಮಳೆ ಹನಿ ಬಿದ್ದ ಅನುಭವ…. ಕನಸಲ್ಲ,ವಾಸ್ತವ ಅಂತ ತಿಳಿಯೋಕೆ ಜಾಸ್ತಿ ಸಮಯ ಬೇಕಾಗಿರಲಿಲ್ಲಾ……ಎದ್ದು ನೋಡಿದರೆ ಸೀದಾ ಎದುರುಗಡೆ ನೀಳ ಕೇಶದ ಮುದ್ದು ಮೊಗದ ಹುಡುಗಿ ಹಾಗೆ ಸುಮ್ಮನೆ ತನ್ನ ಒದ್ದೆ ಕೂದಲನ್ನ ಸರಿಪಡಿಸಿಕೊಳ್ಳುತ್ತಿದಳು… mostly ಅವಳು ಕೂಡ ನನ್ನಂತೆ ಸೋಮಾರಿ ಅನ್ಸುತೆ…..             Infact ಅವಳನ್ನ ತುಂಬಾ ದಿನದಿಂದ ಗಮನಿಸುತ್ತಿದೆ.. ಒಮ್ಮೆ ದಿನಪತ್ರಿಕೆಗೆ ಮುಖ ಮಾಡಿ ಕೂತರೆ ಮತ್ತೆ ಬೇರೆಕಡೆ ನೊಡುವ ಜಯಾಮಾನ ಅವಳದಲ್ಲ…. ಆಫೀಸ ತಲುಪುವ ಮುಂಚೆ ಸೀಟಿನಿಂದ ಎದ್ದು ಮುಂದೆ ಹೋಗಿ ಬಾಗಿಲ ಬಳಿ ನಿಲ್ಲುವ ಅಬ್ಯಾಸ… ಕಷ್ಟಪಟ್ಟು ಒಂದೆರೆಡು ಬಾರಿ ಅವಳಾ ಮುಖದರ್ಶನ ಪಡೆದಿದ್ದೆ…

ಆದರೆ ಅಷ್ಟೊಂದು ದಿನದಲ್ಲಿ ಯಾವೊಂದು ದಿನವು ಸಣ್ಣದೊಂದು ಭಾವನೆಯನ್ನು ಹುಟ್ಟುಹಾಕಿರಲಿಲ್ಲಾ…BUT ಇವತ್ತಿನ ಆ ಒಂದು ಗಳಿಗೆ ,ಅರಿವಿಲ್ಲದೆ ಭಾವನೆಗಳು ಗರಿಗೆದರಿ ಕುಣಿಲಾರಂಭಿಸುತು ಅನ್ನುವಂತೆ.. ನನ್ನೊಳಗಿನ ನಾನು ಅವಳೊಂದಿಗೆ ನನ್ನೊಳಗೆ ಕಳೆದು ಹೋದಂತೆ….. ತರಾತುರಿಯಾ ತೊಳಲಾಟದ ಮಧ್ಯೆ ಒಮ್ಮೆ ದಿಟ್ಟಿಸಿ ನೋಡಿದೆ…. ಒದ್ದೆ ಕೂದಲಿನಲ್ಲಿ same to same ಧರೆಗಿಳಿದ ದೇವತೆಯಂತೆ ಕಾಣುತಿದ್ದಳು… ಯೋಚಿಸುವ ಮೊದಲೆ ಮನಸ್ಸು ಅವಳೊಂದಿಗೆ ನನ್ನದೆ ಮೋಹಕ ಜಗತ್ತಿಗೆ ಮೊರೆ ಹೋಗಿತ್ತು…

ಎಂದಿನಿಂದಲೊ ಗಮನಿಸುತ್ತಿದೆ,ಆದರೆ ಆ ಒಂದು ಗಳಿಗೆ ನೆನಪ ಮಳಿಗೆಯಲ್ಲಿ ಮೊದಲ ಅಂತಸ್ತನ್ನೆ ಅಕ್ರಮಿಸಿತ್ತು… ಸಮಯದ ಪ್ರಭಾವವು,ಅವಳ ಆ ಮುದ್ದು ಮೊಗದೊಂದಿಗಿನ ಒದ್ದೆ ಕೂದಲ ಆ ಒಂದು ಹನಿ ಪರಿಣಾಮವು… ಆ ಒಂದು ಗಳಿಗೆ ನನ್ನ ಮನದಾಳದಲ್ಲಿ ಮುಚ್ಚಲಾರದ ಗುಳಿಯನ್ನೆ ನಿರ್ಮಿಸಿತ್ತು

by ಶಿವರಾಜ್ ಶೆಟ್ಟಿ

ನೀವೂ ಕೂಡ ನಿಮ್ಮ ಬರಹಗಳನ್ನು ನಮಗೆ ಕಳಿಸಬಹುದು . ನಿಮ್ಮ ಬರಹಗಳನ್ನು localkebal@gmail.com ಕಳಿಸಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..