1550

near ಇರೋಲ್ಲ ನನ್ನ ಮಗ , ಯಾಕಂದ್ರೆ ಅವ ಇಂಜಿ’ನಿಯರ್’..!

ತನ್ನ ಪಿತ್ರಾರ್ಜಿತ ಸ್ವತ್ತುಗಳನ್ನು ಮಾರುವ ಸಲುವಾಗಿ ಪೇಟೆಯಿಂದ ಊರಿಗೆ ಬಂದಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಮಹಾಶಯರೋರ್ವರು ರಾಮಭಟ್ಟರ ಅಂಗಡಿಯಲ್ಲಿ ಚಹಾ ಸವಿಯುತ್ತಾ ಕುಳಿತಿದ್ದರು. ಅಷ್ಟರಲ್ಲಿಯೇ ಅಲ್ಲಿಗೆ ಬಂದ ಊರಿನ ದೇವಸ್ಥಾನದ ಅರ್ಚಕರು ಗ್ರಾಮಕ್ಕೆ ಸುಪ್ರಸಿದ್ದ ಜ್ಯೋತಿಷಿಯೊಬ್ಬರು ಆಗಮಿಸಿದ ಸುದ್ದಿಯನ್ನು ರಾಮಭಟ್ಟರ ವಾಲ್ ನಲ್ಲಿ ಪೋಸ್ಟ್ ಮಾಡಿದರು. ಆ ಸುದ್ದಿಯು ಅದಾಗಲೇ ಅಲ್ಲೇ ಕುಳಿತಿದ್ದ ಇಂಜಿನಿಯರ್ ಮಹಾಶಯರಿಗೂ ಶೇರ್ ಆಗಿಬಿಟ್ಟಿತು. ಅವರಿಗೋ ಆ ಜ್ಯೋತಿಷಿಗಳನ್ನೊಮ್ಮೆ ವಿಸಿಟ್ ಮಾಡುವ ಮನಸ್ಸಾಯಿತು. ಸಂಜೆಯಾಗುತ್ತಲೇ ಅವರನ್ನು ಕಾಣಲು ಅವರಿರುವಲ್ಲಿ ನಡೆದರು. ಅವರಲ್ಲಿ ತನ್ನ ಹಸ್ತ ನೋಡಿ ತಾನು ಯಾವಾಗ ಯಾವ ಸ್ಥಳದಲ್ಲಿ ಸಾಯುತ್ತೇನೆ ಎಂಬುವುದರ ಬಗ್ಗೆ ಭವಿಷ್ಯ ನುಡಿಯುವಂತೆ ಕೋರಿಕೊಂಡರು.

ಅವರ ಹಸ್ತವನ್ನು ಕೂಲಂಕುಶವಾಗಿ ಗಮನಿಸಿದ ಜ್ಯೋತಿಷಿಗಳು ‘ ನೀವು ನಿಮ್ಮ ತಂದೆ ಬದುಕಿರುವಷ್ಟು ಕಾಲ ಮಾತ್ರ ಬದುಕಿರುತ್ತೀರಿ..! ಹಾಗೂ ಅವರು ಸಾಯುವ ಪರಿಸ್ಠಿತಿಯಲ್ಲೇ ನೀವು ಸಾಯುತ್ತೀರಿ!’ ಎಂದು ನುಡಿದರು. ಇದನ್ನು ಕೇಳಿ ಚಕಿತರಾದ ಇಂಜಿನಿಯರ್ ಮಹಾಶಯರು ಜ್ಯೋತಿಷಿಗಳಿಗೆ ವಂದಿಸಿ ಕೂಡಲೇ ಅವಸರ ಅವಸರವಾಗಿ ಓಡಿಹೋಗಿ ವೃದ್ಧಾಶ್ರಮದಲ್ಲಿದ್ದ ತನ್ನ ತಂದೆಯನ್ನು ಮನೆಗೆ ಕರೆದೊಯ್ದು ಚೆನ್ನಾಗಿ ನೋಡಿಕೊಳ್ಳಲಾರಂಭಿಸಿದರು.ಇದು ಕೇವಲ ಇಂಜಿನಿಯರ್ ಗೆ ಮಾತ್ರ ಅನ್ವಯಿಸೊಲ್ಲ .. ತಂದೆ ತಾಯಿಗಳನ್ನು ಸರಿಯಾಗಿ ನೋಡಿಕೊಳ್ಳದ ಎಲ್ಲ ಜನರಿಗೂ ಅನ್ವಯಿಸುತ್ತದೆ .. ಇಂಜಿನಿಯರ್ ಅನ್ನೋ ಪ್ರೊಫೆಶನ್ ಅನ್ನು ರೆಫರೆನ್ಸ್ ಆಗಿ ತೆಗೆದುಕೊಳ್ಳಲಾಗಿದೆ

ಏಕೆಂದು ತಿಳಿದಿಲ್ಲ..!! ಕಾಲಕಳೆದಂತೆ ಮನುಷ್ಯರಲ್ಲಿ ಮಾನವೀಯ ಮೌಲ್ಯಗಳು ಅವಸಾನ ಹೊಂದುತ್ತಿವೆ ಎಂದೆನಿಸುತ್ತಿದೆ. ಆಧುನಿಕತೆಯೆಂಬ ಮಾದಕ ದ್ರವ್ಯವು ಮಾನವ ಸಮಾಜಕ್ಕೇ ಅಮಲೇರಿಸಿಬಿಟ್ಟಿದೆ. ಕ್ರಮೇಣ ಹೆಚ್ಚುತ್ತಿರುವ ವೃದ್ಧಾಶ್ರಮಗಳ ಸಂಖ್ಯೆಯೇ ಅದಕ್ಕೆ ಸಾಕ್ಷಿ. ವಿಪರ್ಯಾಸವೆಂದರೆ ಆ ವೃದ್ಧಾಶ್ರಮಗಳಲ್ಲಿ ಮಕ್ಕಳ ದಿಕ್ಕು ದೆಸೆಯಿಲ್ಲದವರಿಗಿಂತಲೂ ಮಕ್ಕಳ ದೆಸೆಯಿಂದ ಅತ್ತ ದಿಕ್ಕು ಹಿಡಿದವರೇ ಹೆಚ್ಚು..! ತಂದೆ ತಾಯಂದಿರನ್ನು ತಮ್ಮ ಸ್ವಾರ್ಥಕ್ಕೆ ವೃದ್ಧಾಶ್ರಮಕ್ಕೆ ನೂಕಿ ಅವರನ್ನು ‘ಆಧುನಿಕತೆಯ ಸಂತ್ರಸ್ಥ’ ಜೀವಿಗಳಾಗುವಂತೆ ಮಾಡಿದ ಆ ಮಕ್ಕಳ ಅವಿವೇಕ್ಕೊಂದು ಧಿಕ್ಕಾರವಿರಲಿ..

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..